ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ನೂತನ ಚುನಾವಣಾ ಆಯುಕ್ತಅನೂಪ್ ಚಂದ್ರ ಪಾಂಡೆ

|
Google Oneindia Kannada News

ಅನೂಪ್ ಚಂದ್ರ ಪಾಂಡೆ ಭಾರತದ ನೂತನ ಚುನಾವಣಾ ಆಯುಕ್ತರಾಗಿ (ಇಸಿ) ಜೂನ್ 09, 2021ರಂದು ಅಧಿಕಾರ ವಹಿಸಿಕೊಂಡರು. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಭಾರತ ಚುನಾವಣಾ ಆಯೋಗಕ್ಕೆ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಜೊತೆಗೆ ಪಾಂಡೆ ಎರಡನೇ ಚುನಾವಣಾ ಆಯುಕ್ತರಾಗಿ ಸೇರಿದ್ದಾರೆ.

ಫೆಬ್ರವರಿ 15, 1959 ರಂದು ಜನಿಸಿದ ಅನೂಪ್ ಚಂದ್ರ ಪಾಂಡೆ 1984 ನೇ ತಂಡದ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದಾರೆ. ಸುಮಾರು 37 ವರ್ಷಗಳ ಭಾರತ ಸರ್ಕಾರದ ಸೇವೆಯ ಅವಧಿಯಲ್ಲಿ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮತ್ತು ಅವರ ಕೇಡರ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಚುನಾವಣಾ ಆಯೋಗದ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕಚುನಾವಣಾ ಆಯೋಗದ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕ

ಅನೂಪ್ ಚಂದ್ರ ಪಾಂಡೆ, ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಮಗಧ್ ವಿಶ್ವವಿದ್ಯಾಲಯದಿಂದ ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

New Election Commissioner Anup Chandra Pandey Profile

ಉತ್ತರ ಪ್ರದೇಶ ಕೇಡರ್ ಅಧಿಕಾರಿ:
ಪಾಂಡೆ ಆಗಸ್ಟ್ 2019ರಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಭಾರತದ ಚುನಾವಣಾ ಆಯೋಗಕ್ಕೆ ಸೇರುವ ಮೊದಲು, ಪಾಂಡೆ ಉತ್ತರ ಪ್ರದೇಶದ ಸದಸ್ಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇಲ್ವಿಚಾರಣಾ ಸಮಿತಿಯಾಗಿ ಸೇವೆ ಸಲ್ಲಿಸುತ್ತಿದರು.

ಮುಖ್ಯ ಕಾರ್ಯದರ್ಶಿಯಾಗಿ ಅವರ ಆಡಳಿತದಲ್ಲಿ, ರಾಜ್ಯವು ಪ್ರಯಾಗರಾಜ್‌ನಲ್ಲಿ ಕುಂಭಮೇಳವನ್ನು ಮತ್ತು 2019 ರಲ್ಲಿ ವಾರಣಾಸಿಯಲ್ಲಿ ಪ್ರವಾಸಿ ಭಾರತೀಯ ದಿವಸವನ್ನು ಯಶಸ್ವಿಯಾಗಿ ಆಯೋಜಿಸಿತು.

ಇದಕ್ಕೂ ಮೊದಲು ಅನೂಪ್ ಚಂದ್ರ ಅವರು ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿ ಸೇವೆ ಸಲ್ಲಿಸಿದರು ಮತ್ತು 2018 ರಲ್ಲಿ ಲಕ್ನೋದಲ್ಲಿ ಬೃಹತ್ ಹೂಡಿಕೆದಾರರ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದರು. ಸಿಂಗಲ್ ವಿಂಡೋ ನಿವೇಶ್ ಮಿತ್ರ ಪೋರ್ಟಲ್ ಸೇರಿದಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ನೀತಿ ಸುಧಾರಣೆಗಳನ್ನು ಅವರು ಪರಿಚಯಿಸಿದರು.

New Election Commissioner Anup Chandra Pandey Profile

ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಹಣಕಾಸು), ಪಾಂಡೆ ಮಾಡಿದ ಪ್ರಯತ್ನಗಳು ಉತ್ತರ ಪ್ರದೇಶದ ಕೃಷಿ ಸಾಲ ಮನ್ನಾ ಯೋಜನೆಯ ಯಶಸ್ವಿ ವಿನ್ಯಾಸ, ಯೋಜನೆ ಮತ್ತು ಅನುಷ್ಠಾನಕ್ಕೆ ಕಾರಣವಾಯಿತು.

ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆ:
ಕೇಂದ್ರ ಸರ್ಕಾರದಲ್ಲಿ ಪಾಂಡೆ ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿ 20 ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಂಥ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕರಾಗಿದ್ದರು.

ಪಾಂಡೆ ಬರವಣಿಗೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು "ಪ್ರಾಚೀನ ಭಾರತದಲ್ಲಿ ಆಡಳಿತ"ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದು ಪ್ರಾಚೀನ ಭಾರತೀಯ ನಾಗರಿಕ ಸೇವೆಯ ವಿಕಸನ, ಸ್ವರೂಪ, ವ್ಯಾಪ್ತಿ, ಕಾರ್ಯಗಳು ಮತ್ತು ಸಂಬಂಧಿತ ಅಂಶಗಳನ್ನು ಋಗ್ವೇದ ಕಾಲದಿಂದ ಕ್ರಿ.ಶ 650 ರವರೆಗೆ ಪರಿಶೋಧಿಸುತ್ತದೆ.

English summary
Profile: Anup Chandra Pandey today assumed charge as the new Election Commissioner (EC) of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X