ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಈ ಯುವಕನ ಮಾಡರ್ನ್ ಫ್ಯಾಷನ್ ಶೋ ನೋಡಿ ನಗಾಡಿದ ನೆಟ್ಟಿಗರು

|
Google Oneindia Kannada News

ನೆಟ್ ಪುಟ್ ಡ್ರೆಸ್, ಬಾಸ್ಕೆಟ್ ಡ್ರೆಸ್ ಹೀಗೆ ನಾನಾ ಫ್ಯಾಷನ್ ಶೋಗಳನ್ನು ನಾವು ನೋಡಿದ್ದೇವೆ. ಆದರೆ ಯುವಕನೊಬ್ಬ ಬಿಡುಗಡೆ ಮಾಡಿರುವ ಫ್ಯಾಷನ್ ಶೋ ವಿಡಿಯೋ ನೋಡಿ ಯುವಕರು ಹೊಟ್ಟೆ ಹುಣ್ಣಾಗಿಸುವಷ್ಟು ನಗಾಡಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಈವರೆಗೆ ಫ್ಯಾಷನ್ ಶೋಗಳು ನಡೆದಿವೆ. ಇದರಲ್ಲಿ ಅನೇಕ ವಿಭಿನ್ನ ಉಡುಗೆಗಳನ್ನು ತೊಟ್ಟು ಸ್ಪರ್ಧಿಗಳು ಬಹುಮಾನಗಳನ್ನು ಪಡೆಯುತ್ತಾರೆ. ಇದರಲ್ಲಿ ಹೆಚ್ಚಾಗಿ ರಾಜಕಾರಣಿಗಳ ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರು, ಚಲನಚಿತ್ರ ತಾರೆಯರು ಮತ್ತು ಕ್ರಿಕೆಟಿಗರು ಭಾಗವಹಿಸಿ ವಿಭಿನ್ನ ಶೈಲಿಯ ವೇಷ ಧರಿಸಿ ಬಹುಮಾನಗಳನ್ನು ಪಡೆಯುತ್ತಾರೆ. ಕಾಲ ಬದಲಾದಂತೆ ಬಟ್ಟೆಯೂ ಬದಲಾಗುತ್ತದೆ.

ಚಾಪೆಯನ್ನು ಸೀರೆಯಂತೆ ಉಟ್ಟ ಭೂಪ: ವಿಡಿಯೋ ವೈರಲ್ಚಾಪೆಯನ್ನು ಸೀರೆಯಂತೆ ಉಟ್ಟ ಭೂಪ: ವಿಡಿಯೋ ವೈರಲ್

ಆ ಸಮಯದಲ್ಲಿ ಸ್ಪರ್ಧಿಗಳು ಸೀರೆ, ಸಲ್ವಾರ್, ಪ್ಯಾಂಟ್, ಶರ್ಟ್, ಜೀನ್ಸ್, ಸ್ಕರ್ಟ್ ಮತ್ತು ಶಾರ್ಟ್ ಸ್ಕರ್ಟ್‌ಗಳೊಂದಿಗೆ ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಾರೆ. ಆದರೆ ಪೈಪೋಟಿ ಹೆಚ್ಚಾದಂತೆ ಬಟ್ಟೆಯತ್ತ ಗಮನ ಹರಿಸುತ್ತಾರೆ. ಇದರಲ್ಲಿ ಬಾಸ್ಕೆಟ್ ಸ್ಟೈಲ್ ಡ್ರೆಸ್, ಮೆಶ್ ಡ್ರೆಸ್, ಫುಲ್ ಡ್ರೆಸ್ ಡಿಸೈನ್ ಕಟಿಂಗ್ ಹೀಗೆ ಹಲವು ವೈವಿಧ್ಯಗಳಿವೆ.

ವಿಭಿನ್ನ ಶೈಲಿಯ ಉಡುಗೆ

ವಿಭಿನ್ನ ಶೈಲಿಯ ಉಡುಗೆ

ಫ್ಯಾಷನ್ ಶೋ ಅಂದ್ರೆ ಕೇವಲ ಬಟ್ಟೆಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದಿಲ್ಲ. ಇಲ್ಲಿ ಒಯ್ಯರದ ನಡಿಗೆ ಕೂಡ ಬಹಳ ಮುಖ್ಯ. ಈ ಬಟ್ಟೆಗಳನ್ನು ಧರಿಸಿ ಮೆರವಣಿಗೆಯ ಶೈಲಿಯಲ್ಲಿ ಬರುವವರು ತೀರ್ಪುಗಾರರ ಗಮನವನ್ನು ಸೆಳೆಯುತ್ತಾರೆ. ಅದೇ ರೀತಿ ಪುರುಷರು ಕೂಡ ವಿಭಿನ್ನ ಶೈಲಿಯ ಉಡುಗೆ ನಡಿಗೆಯಿಂದ ತೀರ್ಪುಗಾರರ ಗಮನ ಸೆಳೆಯುತ್ತಾರೆ.

ಹೊಸ ರೀತಿಯ ಫ್ಯಾಶನ್ ಶೋ

ಆದರೆ ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯುವಕನೊಬ್ಬ ಹೊಸ ರೀತಿಯ ಫ್ಯಾಶನ್ ಶೋವನ್ನು ಸೃಷ್ಟಿಸಿದ್ದಾನೆ. ಮೊದಲು ವಾಕಿಂಗ್ ಸ್ಟಿಕ್ ಧರಿಸಿ ಒಯ್ಯಾರದಿಂದ ನಡೆಯುತ್ತಾನೆ. ನಂತರ ದೊಡ್ಡ ಸ್ಕರ್ಟ್ ರೀತಿಯಲ್ಲಿ ತುಕ್ಕು ಹಿಡಿದ ಶೀಟ್ ಅನ್ನು ಮೈಗಂಟಿಸಿಕೊಂಡು ಬರುತ್ತಾನೆ. ಇದರೊಂದಿಗೆ ಯುವಕ ಕ್ಯಾಟ್ ವಾಕ್ ಮಾಡುತ್ತಾ ಸೊಂಟದ ಮೇಲೆ ಹುಡುಕಿಯನ್ನು ಕೂರಿಸಿಕೊಂಡು ಕಾಣಿಸಿಕೊಳ್ಳುತ್ತಾನೆ.

ಇದು ನಗಿಸುವ ಫ್ಯಾಷನ್ ಶೋ

ಇನ್ನೂ ಈ ಯುವಕ ಬಲೆಯಲ್ಲಿ ಸಿಕ್ಕಿಹಾಕಿಕೊಂಡಂತೆ ಕಲ್ಪನೆಗೂ ಮೀರಿದ ವಸ್ತುಗಳನ್ನು ಹಿಡಿದು ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾನೆ. ಯುವಕ ಬಳಕೆ ಮಾಡುವ ವಸ್ತುಗಳೆಲ್ಲವೂ ಗೃಹೋಪಯೋಗಿ ಉಪಕರಣಗಳಾಗಿದ್ದು ತುಂಬಾ ಭಾರವಾದ ವಸ್ತುಗಳಾಗಿವೆ. ಈ ಫ್ಯಾಷನ್ ಶೋ ನೋಡಿದರೆ ನಿಜಕ್ಕೂ ಹಾಸ್ಯಮಯವಾಗಿದ್ದು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹಲವರು ಮೆಚ್ಚುಗೆಗೆ ಪಾತ್ರರಾಗುತ್ತಿದ್ದರೆ, ಯಾರೋ ಒಬ್ಬರು ಇದೇನು ಫ್ಯಾಶನ್ ಶೋ ಅಲ್ಲವಾ, ಮನೆಯಲ್ಲಿ ಕಳ್ಳತನ ಮಾಡುತ್ತಿದ್ದಾರಾ ಎಂದು ಕೇಳುತ್ತಿರುವುದು ಮತ್ತಷ್ಟು ನಗು ತರಿಸಿದೆ.

ಫೋಟೋ ವೈರಲ್

ಫೋಟೋ ವೈರಲ್

ಇಂದು ಮನುಷ್ಯ ಬದಲಾದಂತೆಲ್ಲಾ ಉಡುಗೆಗಳೂ ಕೂಡ ಬದಲಾಗಿವೆ. ಆದರೆ ನಮ್ಮ ಸಾಂಪ್ರದಾಯಿಕ ಉಡುಗೆ ಸೀರೆ ಹೆಣ್ಣುಮಕ್ಕಳ ಅಂದವನ್ನು ಇಮ್ಮಡಿಗೊಳಿಸಿದಷ್ಟು ಯಾವ ಉಡುಪು ಕೂಡ ಮುನ್ನಲೆಗೆ ಬಂದಿಲ್ಲ. ಹೀಗಾಗಿ ಈ ಕಾಲದ ಜನ ಸೀರೆಯಲ್ಲಿ ನಾನಾ ತರಹದ ಉಡಿಗೆಗಳನ್ನಾಗಿ ಸೃಷ್ಟಿಸುತ್ತಾರೆ. ನಾನಾ ವಿಧವಾಗಿ ಸೀರೆ ಉಡುವುದನ್ನು ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಸೀರೆಯಂತೆ ಚಾಪೆಯನ್ನು ಸುತ್ತಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋಕ್ಕೆ ಕೆಲ ಜನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿ ಮುಖ ತಿರಿಗಿಸಿಕೊಂಡವರು ಒಂದೆಡೆಯಾದರೆ ನಗಾಡಿದವರೇ ಹೆಚ್ಚು. ಈವರೆಗೆ ಸಾವಿರಾರು ಜನ ವೀಕ್ಷಿಸಿದ್ದಾರೆ. 'ಎಂಚಿನ ಅವಸ್ಥೆ ಮಾರೆ' ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

English summary
We have seen many fashion shows like net put dress, basket dress and so on. But after seeing the fashion show video released by a young man, the youth laughed so much that their stomachs hurt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X