ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಫಲಿತಾಂಶ: ಶೇಕಡಾವಾರು, ಶ್ರೇಯಾಂಕ ಮತ್ತು ಅಂಕದ ಲೆಕ್ಕಾಚಾರ ಹೇಗೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಎನ್‌ಇಇಟಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಅಧಿಕೃತ ವೆಬ್‌ಸೈಟ್‌ಗಳಾದ nta.ac.in ಅಥವಾ ntaneet.nic.inನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಸಂಜೆ ನಾಲ್ಕು ಗಂಟೆಗೆ ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿದೆ. ನೀಟ್ ಶೇಕಡಾವಾರು ಫಲಿತಾಂಶ, ಮಾರ್ಕ್ಸ್ ಮತ್ತು ಶ್ರೇಣಿಗಳನ್ನು ಪರಿಶೀಲಿಸಿವುದು ಹೇಗೆ ಎಂಬ ವಿವರ ಇಲ್ಲಿದೆ.

ಕೋವಿಡ್ 19ಕ್ಕೆ ಸಂಬಂಧಿಸಿದ ಕಾರಣಗಳಿಂದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 14ರಂದು ಎರಡನೆಯ ಹಂತದ ನೀಟ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಸೆಪ್ಟೆಂಬರ್ 13ರಂದು ನಡೆದ ಮೊದಲ ಹಂತದ ನೀಟ್ ಪರೀಕ್ಷೆ ಹಾಗೂ ಅಕ್ಟೋಬರ್ 14ರಂದು ನಡೆದ ಎರಡನೆಯ ಹಂತದ ಪರೀಕ್ಷೆಯ ಫಲಿತಾಂಶಗಳನ್ನು ಒಟ್ಟಾಗಿ ಅಕ್ಟೋಬರ್ 16ರಂದು ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಹೇಳಿತ್ತು.

ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಲ್ಲಿ ನೋಡ್ಬಹುದು?ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಲ್ಲಿ ನೋಡ್ಬಹುದು?

ನೀಟ್ ಪರೀಕ್ಷೆ ಫಲಿತಾಂಶ ಬಿಡುಗಡೆಗೂ ಮುನ್ನ ಎನ್‌ಟಿಎ ನೀಟ್ 2020ಯ ಅಂತಿಮ ಮುಖ್ಯ ಉತ್ತರಗಳನ್ನು ಕೂಡ ಬಿಡುಗಡೆ ಮಾಡಿದೆ.

ಸಿಎಂ, ವೈದ್ಯಕೀಯ ಸಚಿವರ ನೆರವಿನಿಂದ 'ನೀಟ್' ಆಯ್ತು ಪರೀಕ್ಷೆಸಿಎಂ, ವೈದ್ಯಕೀಯ ಸಚಿವರ ನೆರವಿನಿಂದ 'ನೀಟ್' ಆಯ್ತು ಪರೀಕ್ಷೆ

ನೀಟ್ ಪರೀಕ್ಷೆ ಫಲಿತಾಂಶದ ಜತೆಗೆ ಅಂಕಗಳ ಆಧಾರದಲ್ಲಿ ನೀಟ್ 2020ಯ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 50ರಷ್ಟು ಶೇಕಡಾವಾರು ಅಂಕಗಳನ್ನು ಪಡೆದುಕೊಳ್ಳಬೇಕಿದ್ದರೆ, ಮೀಸಲಾತಿ ಇರುವ ಅರ್ಹತೆ ಪಡೆಯಲು ಕನಿಷ್ಠ ಶೇ 40ರ ಶೇಕಡಾವಾರು ಅಂಕಗಳನ್ನು ಪಡೆದುಕೊಳ್ಳಬೇಕು. ಮುಂದೆ ಓದಿ.

ನೀಟ್ ಅಂಕ ಅಥವಾ ಸ್ಕೋರ್ ಲೆಕ್ಕಾಚಾರ ಹೇಗೆ?

ನೀಟ್ ಅಂಕ ಅಥವಾ ಸ್ಕೋರ್ ಲೆಕ್ಕಾಚಾರ ಹೇಗೆ?

ನೀಟ್ ಮುಖ್ಯ ಉತ್ತರಗಳ ಸಹಾಯದಿಂದ ನೀಟ್ ಅಂಕ ಅಥವಾ ನೀಟ್ ಸ್ಕೋರ್‌ಗಳನ್ನು ಅಭ್ಯರ್ಥಿಗಳು ಲೆಕ್ಕ ಹಾಕಬಹುದು. ನೀಟ್ ಉತ್ತರಗಳೊಂದಿಗೆ ನಿಮ್ಮ ಸ್ವಂತ ಉತ್ತರಗಳನ್ನು ಹೋಲಿಸಬೇಕು. ಇದರಿಂದ ನೀವು ನೀಡಿದ ಉತ್ತರ ಸರಿಯೇ ಎನ್ನುವುದು ತಿಳಿಯುತ್ತದೆ.

ಪ್ರತಿ ಸರಿಯಾದ ಅಂಕಗಳನ್ನು ಟಿಪ್ಪಣಿ ಮಾಡಿಕೊಳ್ಳಿ. ಸರಿ ಉತ್ತರಕ್ಕೆ ನಾಲ್ಕು ಅಂಕಗಳು ಸಿಗುತ್ತವೆ. ಪ್ರತಿ ತಪ್ಪು ಉತ್ತರ ಒಂದು ಅಂಕವನ್ನು ಕಡಿತಗೊಳಿಸುತ್ತದೆ. ಪ್ರಯತ್ನವನ್ನೇ ಮಾಡಿರದ ಪ್ರಶ್ನೆಗಳು ಹಾಗೂ ಬಹು ಉತ್ತರಗಳ ಆಯ್ಕೆಯನ್ನು ಗುರುತಿಸಿದ ಪ್ರಶ್ನೆಗಳಿಗೆ ಯಾವುದೇ ಅಂಕ ಲಭಿಸುವುದಿಲ್ಲ. ಒಟ್ಟು ನೀಟ್ ಅಂಕಗಳು= 180 ಎಂಸಿಕ್ಯೂ * 4= 720 ಅಂಕಗಳು. ನಿಮ್ಮ ನೀಟ್ ಸ್ಕೋರ್ = ಸರಿಯಾದ ಉತ್ತರಗಳ ಸಂಖ್ಯೆ * 4, ಒಟ್ಟು ತಪ್ಪು ಉತ್ತರಗಸಂಖ್ಯೆ *1.

ನೀಟ್ ಶ್ರೇಯಾಂಕದ ಲೆಕ್ಕಾಚಾರ

ನೀಟ್ ಶ್ರೇಯಾಂಕದ ಲೆಕ್ಕಾಚಾರ

ನೀಟ್ ಶ್ರೇಯಾಂಕವನ್ನು ಲೆಕ್ಕಾಚಾರ ಮಾಡಿ ಶ್ರೇಯಾಂಕ ಪಟ್ಟಿಯನ್ನು ಎನ್‌ಟಿಎ ಪ್ರಕಟಿಸಿದೆ. ಕಳೆದ ವರ್ಷದ ನೀಟ್ ಸ್ಕೋರ್‌ಗಳು ಮತ್ತು ನೀಟ್ ಶ್ರೇಯಾಂಕಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ಶ್ರೇಯಾಂಕವನ್ನು ಅಂದಾಜಿಸಬಹುದು. ಆದರೆ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಿಸದೆ ನಿಖರವಾದ ಶ್ರೇಯಾಂಕವನ್ನು ತಿಳಿಯಲು ಸಾಧ್ಯವಿಲ್ಲ.

ನೀಟ್ ಶ್ರೇಯಾಂಕ ಪಟ್ಟಿಯನ್ನು ಸಿದ್ಧಪಡಿಸಲು ಎನ್‌ಟಿಎ ಎಲ್ಲ ಅಭ್ಯರ್ಥಿಗಳ ನೀಟ್ ಸ್ಕೋರ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ. ಒಂದೇ ರೀತಿಯ ನೀಟ್ ಸ್ಕೋರ್ ಅಥವಾ ನೀಟ್ ಅಂಕಗಳನ್ನು ಪಡೆದ ಅಭ್ಯರ್ಥಿಗಳ ಶ್ರೇಯಾಂಕ ಗುರುತಿಸಲು ಕೆಲವು ಟೈ ಬ್ರೇಕರ್ ಮಾದರಿಗಳನ್ನು ಬಳಸಲಾಗುತ್ತದೆ.

2019ರ ನೀಟ್ ಪ್ರಕಾರ ಬಳಸಿದ ಟೈ ಬ್ರೇಕರ್ ಮಾದರಿಗಳು

2019ರ ನೀಟ್ ಪ್ರಕಾರ ಬಳಸಿದ ಟೈ ಬ್ರೇಕರ್ ಮಾದರಿಗಳು

* ಜೀವಶಾಸ್ತ್ರದಲ್ಲಿ ಅಧಿಕ ಅಂಕಕ್ಕೆ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ಸಂಯೋಜನೆ) ಅಧಿಕ ನೀಟ್ ಶ್ರೇಯಾಂಕ ನೀಡಲಾಗುತ್ತದೆ.

* ರಸಾಯನ ಶಾಸ್ತ್ರದಲ್ಲಿ ಅಧಿಕ ಅಂಕಗಳು ನೀಟ್‌ನಲ್ಲಿ ಅಧಿಕ ಶ್ರೇಯಾಂಕ ಪಡೆಯಲಿದೆ.

* ಕಡಿಮೆ ತಪ್ಪು ಉತ್ತರಗಳನ್ನು ನೀಡಿದ ಅಭ್ಯರ್ಥಿಗಳಿಗೆ ಉನ್ನತ ಶ್ರೇಯಾಂಕ ನೀಡಲಾಗುತ್ತದೆ.

* ಹೆಚ್ಚು ವಯಸ್ಸಾದ ಅಭ್ಯರ್ಥಿಗಳಿಗೆ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗಿಂತ ಆದ್ಯತೆ ನೀಡಲಾಗುತ್ತದೆ. ಅವರಿಗೆ ಉನ್ನತ ಶ್ರೇಯಾಂಕ ನೀಡಲಾಗುತ್ತದೆ.

ನೀಟ್ ಶೇಕಡಾವಾರು ಲೆಕ್ಕಾಚಾರ ಹೇಗೆ?

ನೀಟ್ ಶೇಕಡಾವಾರು ಲೆಕ್ಕಾಚಾರ ಹೇಗೆ?

ನೀಟ್ ಶೇಕಡಾವಾರನ್ನು ಲೆಕ್ಕಾಚಾರ ಹಾಕಲು ಅಂಕಗಳು ಮತ್ತು ಶ್ರೇಯಾಂಕದ ಆಧಾರದ ಎರಡು ಮಾರ್ಗಗಳಿವೆ.

* ನೀವು ನಿಮ್ಮ ನೀಟ್ ಸ್ಕೋರ್ ಮತ್ತು ಪ್ರಸಕ್ತ ವರ್ಷದ ನೀಟ್ ಟಾಪರ್‌ನ ಸ್ಕೋರ್ ಮೂಲಕ ಶೇಕಡಾವಾರನ್ನು ಲೆಕ್ಕಾಚಾರ ಮಾಡಬಹುದು.

* ನಿಮ್ಮ ನೀಟ್ ಶೇಕಡಾವಾರನ್ನು ನಿಮ್ಮದೇ ನೀಟ್ ಶ್ರೇಯಾಂಕ ಮತ್ತು ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಆಧಾರದಲ್ಲಿ ಲೆಕ್ಕಾಚಾರ ಮಾಡಬಹುದು.

English summary
The NEET exam result 2020 declared today. Here is how to calculate NEET percentile, NEET marks, and NEET rank. Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X