ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಚೇತರಿಸಿಕೊಂಡ ಎಲ್ಲರಲ್ಲೂ ಜೀವರಕ್ಷಕ ಇರುವುದಿಲ್ಲ: ಸಮೀಕ್ಷೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಕೋವಿಡ್‌ನಿಂದ ಚೇತರಿಸಿಕೊಂಡ ಎಲ್ಲರಲ್ಲಿಯೂ ಜೀವರಕ್ಷಕ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎನ್ನುವ ನಂಬಿಕೆ ಬೆಳೆದಿದೆ. ಆದರೆ ಇದು ಸತ್ಯವಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

Recommended Video

IPL ತ್ಯಾಗ ಮಾಡಿದ್ದು ಏಕೆ ಅನ್ನೋದನ್ನ ಒಪ್ಪಿಕೊಂಡ ಸುರೇಶ್ ರೈನಾ | Oneindia Kannada

ಕೋವಿಡ್ ಪಾಸಿಟಿವ್ ಕಂಡುಬಂದು ಚೇತರಿಸಿಕೊಂಡಿದ್ದ 208 ಮಂದಿಯ ಪೈಕಿ 97 ಮಂದಿಯ ರಕ್ತದಲ್ಲಿ ಆಂಟಿಬಾಡಿ ಕಂಡುಬಂದಿಲ್ಲ ಎಂದು ಜುಲೈ ತಿಂಗಳ ಸೆರೋ ಸಮೀಕ್ಷೆ ವೇಳೆ ಕಂಡುಕೊಂಡಿರುವುದಾಗಿ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ತಿಳಿಸಿದೆ. ವೈರಸ್‌ನಿಂದ ಸೃಷ್ಟಿಯಾದ ಪ್ರತಿರಕ್ಷಕ ಪ್ರತಿಕ್ರಿಯೆಗಳು ಪ್ರಕೃತಿಯಲ್ಲಿ ಅಸ್ಥಿರವಾಗಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದೆ.

ಕೊರೊನಾ ನಿಯಂತ್ರಣವಿಲ್ಲದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊರೊನಾ ನಿಯಂತ್ರಣವಿಲ್ಲದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಎನ್‌ಸಿಡಿಸಿ, ದೆಹಲಿಯಲ್ಲಿನ ಜನರಲ್ಲಿನ ಪ್ರತಿರಕ್ಷಕ ಪ್ರತಿಸ್ಪಂದನೆಯು ಅಲ್ಪ ಜೀವಿತಾವಧಿಯದ್ದಾಗಿದೆ. ಏಕೆಂದರೆ ನೋಯ್ಡಾ, ಗುರುಗಾಂವ್ ಮತ್ತು ಘಾಜಿಯಾಬಾದ್ ಮುಂತಾದ ಪ್ರದೇಶಗಳಿಂದ ಅಪಾರ ಪ್ರಮಾಣದ ಜನಸಂಖ್ಯೆ ನಗರಕ್ಕೆ ಹರಿದುಬರುತ್ತದೆ ಎಂದು ತನ್ನ ಸೆರೋ ಸಮೀಕ್ಷೆಯಲ್ಲಿ ತಿಳಿಸಿದೆ. ಮುಂದೆ ಓದಿ.

ಸೆರೊ ಸಮೀಕ್ಷೆ ಎಂದರೇನು? ಭಾರತದಲ್ಲಿ ಏಕೆ ಕೈಗೊಳ್ಳಲಾಗಿದೆ?ಸೆರೊ ಸಮೀಕ್ಷೆ ಎಂದರೇನು? ಭಾರತದಲ್ಲಿ ಏಕೆ ಕೈಗೊಳ್ಳಲಾಗಿದೆ?

ನಡೆಯದ ಸಮೀಕ್ಷೆಗಳು

ನಡೆಯದ ಸಮೀಕ್ಷೆಗಳು

ಎಲ್ಲ ಪ್ರಮುಖ ಎನ್‌ಸಿಆರ್ ನಗರಗಳು ಮತ್ತು ಪಟ್ಟಣಗಳಲ್ಲಿ ಸೆರೋ ಸಮೀಕ್ಷೆಗಳು ಇದುವರೆಗೂ ನಡೆದಿಲ್ಲ ಎಂದು ಸಹ ಎನ್‌ಸಿಡಿಸಿ ತಿಳಿಸಿದೆ. ಜುಲೈ 21ರಂದು ಸಿದ್ಧಪಡಿಸಿದ ವರದಿಯನ್ನು ದೆಹಲಿಯಲ್ಲಿ ನಡೆಯುತ್ತಿರುವ ಪ್ರಸ್ತುತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.

ಶೇ 22.83 ಸೆರೋ ಪಾಸಿಟಿವಿಟಿ

ಶೇ 22.83 ಸೆರೋ ಪಾಸಿಟಿವಿಟಿ

ಈ ಹಿಂದೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದ್ದ ಜನರಲ್ಲಿ ಆಂಟಿಬಾಡಿಗಳ ಅಸ್ತಿತ್ವದ ಬಗ್ಗೆ ಸಮೀಕ್ಷೆ ಅಧ್ಯಯನ ನಡೆದಿದೆ. ಜುಲೈನಲ್ಲಿ ನಡೆಸಿದ ಸಮೀಕ್ಷೆಯು 21,387 ಜನರನ್ನು ಒಳಗೊಂಡಿದ್ದು, ಇದರಲ್ಲಿ ಸೆರೊ-ಪಾಸಿಟಿವಿಟಿ ಪ್ರಮಾಣ ಶೇ 22.83ರಷ್ಟಿದೆ.

97 ಮಂದಿಯಲ್ಲಿ ಸೆರೋ ನೆಗೆಟಿವ್

97 ಮಂದಿಯಲ್ಲಿ ಸೆರೋ ನೆಗೆಟಿವ್

ಆರ್‌ಟಿ-ಪಿಸಿಆರ್ ಮಾದರಿಯಲ್ಲಿ ಪರೀಕ್ಷೆಗೊಳಗಾಗಿ ಕೋವಿಡ್ ಪಾಸಿಟಿವ್ ಬಂದಿದ್ದಾಗಿ ತಿಳಿಸಿದ್ದ 208 ಮಂದಿಯಲ್ಲಿ 111 ಮಂದಿ ಮಾತ್ರ, ಅಂದರೆ ಶೇ 53.37ರಷ್ಟು ಜನರು ಸೆರೋಪಾಸಿಟಿವಿಟಿ ಕಂಡುಬಂದಿದೆ. 97 ಮಂದಿಯಲ್ಲಿ ಸೆರೋನೆಗೆಟಿವ್ ಕಂಡುಬಂದಿದೆ, ಅಂದರೆ ಅವರಲ್ಲಿ ಪ್ರತಿರಕ್ಷಣಾ ಸಾಮರ್ಥ್ಯ ಕಡಿಮೆ ಇದೆ.

60 ಲಕ್ಷ ಮಂದಿಗೆ ಮಾತ್ರ ಇಮ್ಯುನಿಟಿ

60 ಲಕ್ಷ ಮಂದಿಗೆ ಮಾತ್ರ ಇಮ್ಯುನಿಟಿ

ಎರಡನೆಯ ಸುತ್ತಿನ ಸೆರೋ ಸಮೀಕ್ಷೆಯನ್ನು ಆಗಸ್ಟ್‌ನಲ್ಲಿ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ನಡೆಸಿದೆ. 15,000 ಜನರನ್ನು ಇದು ಒಳಗೊಂಡಿದ್ದು, ಇದರಲ್ಲಿ ಶೇ 29ರಷ್ಟು ಮಂದಿಯಲ್ಲಿ ಆಂಟಿಬಾಡಿಗಳ ಸಂಖ್ಯೆ ಹೆಚ್ಚಿರುವುದು ಗೊತ್ತಾಗಿದೆ. ದೆಹಲಿ ನಗರದ ಎರಡು ಕೋಟಿ ಜನರ ಪೈಕಿ 60 ಲಕ್ಷ ಜನರಿಗೆ ಮಾತ್ರ ವೈರಸ್ ವಿರುದ್ಧದ ಇಮ್ಯುನಿಟಿ ಸಾಮರ್ಥ್ಯ ಚೆನ್ನಾಗಿದೆ.

ಬಿಪಿಎಲ್ ಕೆಟಗರಿ-ನಾನ್ ಬಿಪಿಎಲ್ ಕೆಟಗರಿ

ಬಿಪಿಎಲ್ ಕೆಟಗರಿ-ನಾನ್ ಬಿಪಿಎಲ್ ಕೆಟಗರಿ

ಬಡತನ ರೇಖೆಗಿಂತ ಕೆಳಗಿರುವ ಜನರಲ್ಲಿ, ಬಿಪಿಎಲ್ ವಿಭಾಗಕ್ಕೆ ಸೇರದವರಿಗಿಂತ ಸೆರೋ ಪಾಸಿಟಿವಿ ಪ್ರಮಾಣ ಅಧಿಕವಾಗಿದೆ. ಬಿಪಿಎಲ್ ಕೆಟಗರಿಯಲ್ಲಿ ಶೇ 24.40ರಷ್ಟಿದ್ದರೆ, ಬಿಪಿಎಲ್ ಕೆಟಗರಿಯಲ್ಲದವರಲ್ಲಿ ಶೇ 20.45ರಷ್ಟಿದೆ. ಅಷ್ಟೇ ಅಲ್ಲ, ಅತ್ಯಧಿಕ ಜನರು ಇರುವ ಪ್ರದೇಶಗಳಲ್ಲಿ (ಒಂದು ಕೊಠಡಿಯಲ್ಲಿ ಮೂವರಿಗಿಂತ ಅಧಿಕ ಜನರ ವಾಸ) ಶೇ 23.5ರಷ್ಟು ಸೆರೋ ಪಾಸಿಟಿವಿಟಿ ಇದ್ದರೆ ಮಿತಿ ಮೀರಿದ ಜನರು ಇಲ್ಲದ ಸ್ಥಳದಲ್ಲಿ ಶೇ 19.8ರಷ್ಟು ಮಾತ್ರವೇ ಸೆರೊ ಪಾಸಿಟಿವಿಟಿ ಇದೆ.

English summary
A survey findings of Sero found that all the persons who recovered from Covid may not have antibodies in the blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X