ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಎಪಿಕ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

|
Google Oneindia Kannada News

ರಾಷ್ಟ್ರೀಯ ಮತದಾರರ ದಿನದಂದು ಹೊಸ ಮತದಾರರಿಗೆ ಹೊಸ ಮತದಾರರಿಗೆ ಇ ಎಪಿಕ್ ಕಾರ್ಡ್(ಎಲೆಕ್ಟ್ರಾನಿಕ್ ಎಲೆಕ್ಟೋರಲ್ ಫೋಟೋ ಐಡೆಂಟಿಟಿ ಕಾರ್ಡ್) ಗಳನ್ನು ವಿತರಿಸುವ ಮೂಲಕ ಹೊಸ ದಿಕ್ಕಿನೆಡೆಗೆ ಚುನಾವಣಾ ಆಯೋಗ ಕಾಲಿರಿಸುತ್ತಿದೆ.

ಡಿಜಿಟಲ್ ಇಂಡಿಯಾ ಸಾಕಾರಗೊಳಿಸಲು ಇ ಎಪಿಕ್ ಕಾರ್ಡ್ ಬಳಕೆಗೆ ಚುನಾವಣಾ ಆಯೋಗ ಮುಂದಾಗಲಿದ್ದು, ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಇದು ಜಾರಿಗೆ ಬರಲಿದೆ.

ಪ್ರತಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ನಾಗರಿಕರು ಹಾಕುವ ಪ್ರತಿ ಮತವು ಅಮೂಲ್ಯವಾದದ್ದು,ಜನಪ್ರತಿನಿಧಿಯನ್ನು ಆರಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ನೆರವೇರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ಮತದಾರರ ದಿನದಂದು ಕಡ್ಡಾಯ ಮತದಾನವು ಪ್ರತಿ ಪ್ರಜೆಯ ಕರ್ತವ್ಯ ಎಂಬ ಸಂದೇಶವನ್ನು ಸಾರೋಣ ಎಂದು ಚುನಾವಣಾ ಆಯೋಗ ಮತದಾರರ ಜಾಗೃತಿ ಸಂದೇಶ ನೀಡಿದೆ.

* ಇ ಎಪಿಕ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?
-ಚುನಾವಣಾ ಆಯೋಗದ ವೆಬ್ ಸೈಟ್, ಮೊಬೈಲ್ ಅಪ್ಲಿಕೇಷನ್ ಅಥವಾ ಎನ್ ವಿ ಎಸ್ ಪಿ ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಡೌನ್ ಲೋಡ್ ಮಾಡಿಕೊಳ್ಳುವ ವಿಧಾನ ಹಾಗೂ FAQs ಮುಂದಿದೆ...

ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ತಾಣ?

ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ತಾಣ?

* ಡೌನ್ಲೋಡ್ ಮಾಡಿಕೊಳ್ಳಲು ಅಧಿಕೃತ ತಾಣಗಲು ಯಾವುವು?
-ಚುನಾವಣಾ ಆಯೋಗದ ವೆಬ್ ಸೈಟ್ : http://voterportal.eci.gov.in/
- NSVP: https://nvsp.in/
- ಮತದಾರರ ಸಹಾಯ ಮೊಬೈಲ್ ಆಪ್ಲಿಕೇಷನ್
ಗೂಗಲ್ ಪ್ಲೇಸ್ಟೋರ್ ಲಿಂಕ್ : https://play.google.com/store/apps/details?id=com.eci.citizen;
ಐಒಎಸ್: https://apps.apple.com/in/app/voter-helpline/id1456535004

ಇ ಎಪಿಕ್ ಪಡೆಯಲು ಯಾರೆಲ್ಲ ಅರ್ಹರು?

ಇ ಎಪಿಕ್ ಪಡೆಯಲು ಯಾರೆಲ್ಲ ಅರ್ಹರು?

- ಮಾನ್ಯತೆ ಪಡೆದ ಎಪಿಕ್ ಕಾರ್ಡ್ ಹೊಂದಿರುವ ಎಲ್ಲರೂ ಅರ್ಹರು. 2019ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮೊಬೈಲ್ ಸಂಖ್ಯೆ ಸಹಿತ ಫಾರಂ ಸಂಖ್ಯೆ-6 ಸಲ್ಲಿಸಿ ಹೊಸ ಮತದಾರರಾಗಿ ನೋಂದಣಿ ಮಾಡಿಕೊಂಡವರು(ಜನವರಿ 25ರಿಂದ ಜನವರಿ 31 ರವರೆಗೆ, ನಿಮ್ಮ ಅಧಿಕೃತ ನೋಂದಾಯಿತ ಮೊಬೈಲ್ ನಂಬರ್ ಬಳಸಿ, ಒಟಿಪಿ ದಾಖಲಿಸಿ ಇ ಎಪಿಕ್ ಡೌನ್ ಲೋಡ್ ಮಾಡಿಕೊಳ್ಳಬಹ್ದು. ಹಳೆ ಕಾರ್ಡುದಾರರು ಫೆಬ್ರವರಿ 1 ರಿಂದ ಎಸ್ಎಂಎಸ್ ಅಗತ್ಯವಿಲ್ಲದೆ ಇ ಎಪಿಕ್ ಪಡೆಯಬಹುದು.

ಎಪಿಕ್ ನಂಬರ್ ಕಳೆದು ಹೋಗಿದ್ರೆ ಇ ಎಪಿಕ್ ಪಡೆಯಬಹುದೆ?

ಎಪಿಕ್ ನಂಬರ್ ಕಳೆದು ಹೋಗಿದ್ರೆ ಇ ಎಪಿಕ್ ಪಡೆಯಬಹುದೆ?

-ನಿಮ್ಮ ಹೆಸರು, ನಂಬರ್ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಬಗ್ಗೆ ಪರಿಶೀಲಿಸಲು ಈ ಲಿಂಕ್ http://voterportal.eci.gov.in/ ಅಥವಾ http://electoralsearch.in/ ಲಿಂಕ್ ಬಳಸಿ ಸರ್ಚ್ ಮಾಡಿ. ನಿಮ್ಮ ಎಪಿಕ್ ಸಂಖ್ಯೆ ಗುರುತು ಹಾಕಿಕೊಳ್ಳಿ ನಂತರ ಇ ಎಪಿಕ್ ಡೌನ್ ಲೋಡ್ ಮಾಡಿ.

ಒಂದು ವೇಳೆ ಎಪಿಕ್ ನಂಬರ್ ಸಿಗದಿದ್ದರೆ ನಮೂನೆ 6 ಸಲ್ಲಿಸಿದ್ದಕ್ಕೆ ಸ್ವೀಕೃತಿ ನಂಬರ್ ಇದ್ದರೆ ಕೂಡಾ ಇ ಎಪಿಕ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಇ ಎಪಿಕ್ ಯಾವ ಫಾರ್ಮ್ಯಾಟ್ ಫೈಲ್ ಆಗಿದೆ?

ಇ ಎಪಿಕ್ ಯಾವ ಫಾರ್ಮ್ಯಾಟ್ ಫೈಲ್ ಆಗಿದೆ?

-ಇದು ಸುರಕ್ಷಿತ ಪಿಡಿಎಫ್ ಆಗಿ ಸೇವ್ ಆಗಲಿದ್ದು, ಒಂದು ಸಾಧನದಿಂದ ಮತ್ತೊಂದಕ್ಕೆ ಶೇರ್ ಮಾಡಬಹುದು. ಪ್ರಿಂಟ್ ಮಾಡಿಕೊಂಡು ಮತದಾನದ ವೇಳೆ ಐಡಿ ಪ್ರೂಫ್ ಆಗಿ ಕೂಡಾ ತೋರಿಸಬಹುದು. ಪಿಡಿಎಫ್ ರೂಪದಲ್ಲಿದ್ದರೂ ಮಾಹಿತಿಯನ್ನು ತಿರುಚಲು ಸಾಧ್ಯವಿಲ್ಲ. ಈ ಪಿಡಿಎಫ್ ಅನ್ನು ನಿಮ್ಮ ಡಿಜಿ ಲಾಕರ್ ಆಪ್ಲಿಕೇಷನ್ ನಲ್ಲಿ ಸೇವ್ ಮಾಡಿಕೊಂಡು, ಅಗತ್ಯ ಬಿದ್ದಾಗ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.

ಇ ಎಪಿಕ್ ಪಡೆಯಲು ಇರುವ ವಿಧಾನದ ಹಂತಗಳು:

ಇ ಎಪಿಕ್ ಪಡೆಯಲು ಇರುವ ವಿಧಾನದ ಹಂತಗಳು:

* ಮತದಾರರ ನೆರವಿಗಾಗಿ ಇರುವ ಆಯೋಗ ವೆಬ್ ತಾಣದಲ್ಲಿ ನೋಂದಾಯಿಸಿಕೊಳ್ಳಿ, ನಂತರ ಲಾಗಿನ್ ಆಗಿ
* ಮೆನುವಿನಲ್ಲಿ ಡೌನ್ ಲೋಡ್ ಇಎಪಿಕ್ ಕ್ಲಿಕ್ ಮಾಡಿ
* ಎಪಿಕ್ ನಂಬರ್ ಅಥವಾ ರಿಫೆರೆನ್ಸ್ ನಂಬರ್ ನಮೂದಿಸಿ
* ಒಟಿಪಿ ನಿಮ್ಮ ನೋಂದಾಯಿತ ಮೊಬೈಲಿಗೆ ಬರಲಿದ್ದು, ಅದನ್ನು ನಮೂದಿಸಿ
* ಡೌನ್ ಲೋಡ್ ಇ ಎಪಿಕ್ ಕ್ಲಿಕ್ ಮಾಡಿ
* ಮೊಬೈಲ್ ನೋಂದಾಯಿಸದಿದ್ದರೆ ಇ ಕೆವೈಸಿ ಪೂರ್ಣಗೊಳಿಸಿ ನಂತರ ಇದೇ ವಿಧಾನದಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಇದೇ ವಿಧಾನದಲ್ಲಿ ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಡೌನ್ ಲೋಡ್ ಮಾಡಿಕೊಳ್ಳಬಹುದು.

English summary
National Voter Day 2021: How to Download e-EPIC or PDF version of voter ID cards from Jan 25
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X