ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪ್ರವಾಸೋದ್ಯಮ ದಿನ 2022: ದಿನಾಂಕ, ಇತಿಹಾಸ, ಮಹತ್ವ

|
Google Oneindia Kannada News

ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಭಾರತ ಸರ್ಕಾರವು ಜನವರಿ 25ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತದೆ. ಪ್ರವಾಸೋದ್ಯಮದ ಮಹತ್ವ ಮತ್ತು ಅದರ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಕುರಿತು ಜಾಗತಿಕ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುವುದನ್ನು ರೂಢಿಸಿಕೊಳ್ಳಲಾಗಿದೆ. ಈ ಪ್ರವಾಸೋದ್ಯಮ ಎಂಬುದು ಬೇರೆ ಬೇರೆ ಸಂಸ್ಕೃತಿ, ಭಾಷೆ, ಧರ್ಮಗಳ ಜನರನ್ನು ಒಟ್ಟುಗೂಡಿಸುವ ಒಂದು ವೇದಿಕೆಯೂ ಹೌದು. ಇದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನೂ ಬೆಳೆಸುತ್ತದೆ. ಆದ್ದರಿಂದಲೇ ಪ್ರವಾಸೋದ್ಯಮವನ್ನು ಜಗತ್ತಿನ ಅದ್ಭುತವಾದ ಶಾಂತಿ ಅಭಿಯಾನ ಎಂದೇ ಹೇಳಲಾಗುತ್ತದೆ.

ಪ್ರವಾಸೋದ್ಯಮ ಎಂದರೇನು?

ಪ್ರವಾಸ ಎಲ್ಲರಿಗೂ ಪ್ರಿಯ. ಪ್ರತಿಯೊಬ್ಬರು ಕೂಡಾ ಪ್ರವಾಸ ಹೋಗುವ ಮೂಲಕ ತಮ್ಮ ದಣಿವನ್ನು ಮರೆತು ರಿಲ್ಯಾಕ್ಸ್‌ ಮಾಡಿಕೊಳ್ಳಲು ಬಯಸುತ್ತಾರೆ. ಜನರು ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಮುಖಿಯಾಗುತ್ತಿರುವ ಕಾರಣ ಈಗ ಪ್ರವಾಸೋದ್ಯಮ ಹಿಂದೆಂದಿಗಿಂತಲೂ ಹೆಚ್ಚು ಬೃಹತ್‌ ಆಗಿ ಬೆಳೆಯುತ್ತಿದೆ. ಅದು ದೇಶವೊಂದರ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರವಾಸೋದ್ಯಮವನ್ನೇ ನಂಬಿ ಅದರಲ್ಲೇ ಆದಾಯ ಕಂಡುಕೊಳ್ಳುತ್ತಿರುವ ದೇಶಗಳು ನಮ್ಮಲ್ಲಿ ಹಲವಾರು ಇವೆ.

ಭಾರತದ ಪ್ರವಾಸೋದ್ಯಮವೂ ಈ ದಿಸೆಯಲ್ಲಿ ಸಾಕಷ್ಟು ಮುಂದುವರೆದಿದೆ. ನಮ್ಮ ದೇಶದಲ್ಲೂ ಪ್ರವಾಸ ಎಂಬುದು ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದೆ. ನಮ್ಮ ದೇಶವನ್ನು ಪ್ರಮುಖ ಪ್ರವಾಸೋದ್ಯಮ ರಾಷ್ಟ್ರವನ್ನಾಗಿಸುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಪ್ರಯತ್ನದ ಒಂದು ಭಾಗವೇ ರಾಷ್ಟ್ರೀಯ ಪ್ರವಾಸೋದ್ಯಮ ದಿನ. ಭಾರತದಲ್ಲಿ ಪ್ರತಿವರ್ಷ ಜನವರಿ 25 ಅನ್ನು ಇಂಡಿಯಾ ಟೂರಿಸಂ ಡೇ ಎಂದು ಆಚರಿಸಲಾಗುತ್ತದೆ.

 National Tourism Day 2022: Date, Theme, History, Significance and Facts in Kannada

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಇತಿಹಾಸ:

ಈ ದಿನ ನಿಖರವಾಗಿ ಯಾವಾಗ ಬಂದಿತು ಎಂಬುದು ತಿಳಿದಿಲ್ಲ. ಆದಾಗ್ಯೂ 1948 ರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸಿ ಸಂಚಾರ ಸಮಿತಿಯನ್ನು ರಚಿಸಲಾಯಿತು. ಅದೇ ಮೊದಲ ಪ್ರಾದೇಶಿಕ ಕಚೇರಿಗಳನ್ನು ದೆಹಲಿ ಮತ್ತು ಮುಂಬೈನಲ್ಲಿ ಸ್ಥಾಪಿಸಲಾಯಿತು. ಮೂರು ವರ್ಷಗಳ ನಂತರ 1951 ರಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಹೆಚ್ಚಿನ ಕಚೇರಿಗಳನ್ನು ಸ್ಥಾಪಿಸಲಾಯಿತು. ಪ್ರವಾಸೋದ್ಯಮ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿ ನಿರ್ದಿಷ್ಟವಾಗಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇಲಾಖೆಯನ್ನು 1958 ರಲ್ಲಿ ಸ್ಥಾಪಿಸಲಾಯಿತು. ಇದು ಜಂಟಿ ಕಾರ್ಯದರ್ಶಿ ಶ್ರೇಣಿಯಲ್ಲಿ ಡೆಪ್ಯೂಟಿ ಜನರಲ್ ನೇತೃತ್ವದಲ್ಲಿದೆ.

 National Tourism Day 2022: Date, Theme, History, Significance and Facts in Kannada

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಮಹತ್ವ:

ದಿನದ ಪ್ರಾಮುಖ್ಯತೆ ಸರಳವಾಗಿದೆ. ಇದು ದೇಶದಲ್ಲಿ ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅದು ಭಾರತದ ಆರ್ಥಿಕ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ದೇಶದ ಪ್ರತಿಯೊಂದು ಪ್ರದೇಶವು ಶ್ರೀಮಂತ ಇತಿಹಾಸವನ್ನು ಹೊಂದಿದ್ದು ಅದನ್ನು ವಿವಿಧ ರೀತಿಯಲ್ಲಿ ಸ್ಮರಿಸಲಾಗುತ್ತದೆ. ಎಲ್ಲವನ್ನೂ ತಿಳಿಯಲು ಪ್ರವಾಸೋದ್ಯಮ ಉತ್ತಮ ಮಾರ್ಗವಾಗಿದೆ. ಇದರೊಂದಿಗೆ ದೇಶದಲ್ಲಿಯೂ ಅದರ ಕಾರ್ಯದ ಬಗ್ಗೆ ಜನರಿಗೆ ಶಿಕ್ಷಣ ನೀಡಲಾಗುತ್ತದೆ.

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಪ್ರಮುಖ ಸಂಗತಿಗಳು

ಪ್ರವಾಸೋದ್ಯಮ ಉದ್ಯಮವು 2018 ರಲ್ಲಿ 247.3 ಶತಕೋಟಿ ಡಾಲರ್‌ ಆದಾಯ ಪಡೆದುಕೊಂಡಿದೆ. 2019 ರ FICCI-YES ಬ್ಯಾಂಕ್ ವರದಿಯ ಪ್ರಕಾರ, ಇದು ದೇಶದ GDP ಯ 9.2 ಪ್ರತಿಶತಕ್ಕೆ ಕೊಡುಗೆ ನೀಡಿದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರತಿ ವರ್ಷ ದೇಶಕ್ಕೆ ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ರಾಷ್ಟ್ರೀಯ ಪ್ರವಾಸೋದ್ಯಮ ದಿನ 2022 ಥೀಮ್:

Recommended Video

Team India ಕಳೆದ ಸರಣಿಯ ಬೆಸ್ಟ್ ಕ್ಷಣಗಳು | Oneindia Kannada

ರಾಷ್ಟ್ರೀಯ ಪ್ರವಾಸೋದ್ಯಮ ದಿನದ 2022ರ ಥೀಮ್ "ಆಜಾದಿ ಕಾ ಅಮೃತ್ ಮಹೋತ್ಸವ" ಆಗಿದೆ. 2021 ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 'ದೇಖೋ ಅಪ್ನಾ ದೇಶ್' ಆಗಿತ್ತು. ಕೊರೊನಾ ಕಾರಣದಿಂದ ಜನ ಮನೆ ಬಿಟ್ಟು ಹೊರಬರಲಾಗುತ್ತಿಲ್ಲ. ಹೀಗಾಗಿ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ. ಜನ ಜೀವನ ಸಹಜ ಸ್ಥಿತಿಯತ್ತ ಮರುಳಲು ಪ್ರಯತ್ನಗಳು ನಡೆಯುತ್ತಿವೆ.

English summary
National Tourism Day is celebrated on January 25 every year across the country. Know Date, Theme, History, Significance and Facts in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X