ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಅಳಿವು ಅಂಚಿನಲ್ಲಿರುವ ಪ್ರಬೇಧಗಳ ದಿನಾಚರಣೆ

|
Google Oneindia Kannada News

ರಾಷ್ಟ್ರೀಯ ಅಳಿವಂಚಿನಲ್ಲಿರುವ ಪ್ರಬ್ರೇಧಗಳ ದಿನ. ಪ್ರತಿ ವರ್ಷ ಮೇ ಮೂರನೇ ಶುಕ್ರವಾರ ಈ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಅಳಿವು ಅಂಚಿನಲ್ಲಿರುವ ಪ್ರಬೇಧಗಳನ್ನು ಸಂರಕ್ಷಣೆ ಮಾಡಿ ಕಾಪಾಡುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಳಿವು ಅಂಚಿನಲ್ಲಿರುವ ಅಪರೂಪದ ಜೀವ ಪ್ರಬೇಧಗಳ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.

ರಾಷ್ಟ್ರೀಯ ಅಳಿವು ಅಂಚಿನಲ್ಲಿರುವ ಪ್ರಬೇಧಗಳ ದಿನ

ರಾಷ್ಟ್ರೀಯ ಅಳಿವು ಅಂಚಿನಲ್ಲಿರುವ ಪ್ರಬೇಧಗಳ ದಿನ

ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಾಣಿ, ಪಕ್ಷಿ, ಮರ ಗಿಡಗಳ ಪಾತ್ರ ಬಹು ಮುಖ್ಯವಾದುದು. ಆದರೆ ಇದ್ದಕ್ಕಿದ್ದಂತೆ ವಿಶ್ವದಲ್ಲಿ ಅನೇಕ ಜೀವ ಪ್ರಬೇಧಗಳೇ ಅಳಿವು ಅಂಚಿಗೆ ತಲುಪಿವೆ. ಇದು ಪರಿಸರ ಅಸಮತೋಲನ ಬಗ್ಗೆ ಎಚ್ಚರಿಕೆ ಗಂಟೆ ಅಂತಲೇ ಪರಿಸರ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗಾಗಿ ಅಳಿವು ಅಂಚಿನಲ್ಲಿರುವ ಜೀವ ಪ್ರಬೇಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವರನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಇದನ್ನು ಜೀವಂತವಾಗಿ ಮುಂದುವರೆಸುವ ಸಲುವಾಗಿಯೇ ವಿಶ್ವ ಮಟ್ಟದಲ್ಲಿ ರಾಷ್ಟ್ರೀಯ ಅಳಿವು ಅಂಚಿನಲ್ಲಿರುವ ಪ್ರಬೇಧಗಳ ದಿನಾಚರಣೆ ಅಚರಿಸಲಾಗುತ್ತದೆ.

 ಕರ್ನಾಟಕ ಅಳಿವು ಅಂಚಿನಲ್ಲಿರುವ ಪ್ರಬೇಧಗಳು

ಕರ್ನಾಟಕ ಅಳಿವು ಅಂಚಿನಲ್ಲಿರುವ ಪ್ರಬೇಧಗಳು

ಕರ್ನಾಟಕ ಅರಣ್ಯ ಇಲಾಖೆ ರಾಜ್ಯದಲ್ಲಿ 183 ಸಸ್ಯ ಪ್ರಬೇಧಗಳು ಹಾಗೂ 40 ಪ್ರಾಣಿಗಳು, ಅದರಲ್ಲಿ 81 ವೈದ್ಯಕೀಯ ಗುಣವುಳ್ಳ ಸಸ್ಯಗಳು ಅಳಿವು ಅಂಚಿನಲ್ಲಿವೆ ಎಂದು ಪ್ರಕಟಿಸಿದೆ. ಕೃಷ್ಣಮೃಗ, ಕೋಲಾರ ಕೆಂಪು ಮೂತಿಯ ಬ್ಯಾಟ್, ಬೆಂಗಾಲ್ ಟೈಗರ್, ಆನೆಗಳು, ಕಾಡುನಾಯಿ ಮತ್ತಿತರ ಪ್ರಾಣಿಗಳು ಸೇರಿವೆ. ಅಳಿವು ಅಂಚಿನಲ್ಲಿರುವ ಈ ಜೀವ ಪ್ರಬೇಧಗಳ ಕಾಪಾಡುವ ಜತೆಗೆ ಹೆಚ್ಚಿಸಬೇಕು. ಆಗ ಮಾತ್ರ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕರ್ನಾಟಕದಲ್ಲಿ ಅಳಿವು ಅಂಚಿನಲ್ಲಿರುವ ಅಪರೂಪದ ಜೀವ ಪ್ರಬೇಧಗಳ ಕಿರುಪರಿಚಯ ಇಲ್ಲಿದೆ ನೋಡಿ.

ಕೋಲಾರ ಕೆಂಪು ಮೂತಿಯ ಬ್ಯಾಟ್

ಕೋಲಾರ ಕೆಂಪು ಮೂತಿಯ ಬ್ಯಾಟ್

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹನುಮನಹಳ್ಳಿಯ ಬೆಟ್ಟದಲ್ಲಿ ಅಪರೂಪದ ಜೀವ ಪ್ರಬೇಧವಿದೆ. ಕೋಲಾರ ಲೀಫ್ ನಾಸ್ ಬ್ಯಾಟ್ ಅಂತಲೇ ಜಗತ್ ಖ್ಯಾತಿ ಗಳಿಸಿವೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಅಪರೂಪದ ಪಕ್ಷಿಗಳು ಇವು. ಮೊದಲು ಕೋಲಾರದ ತೇರಹಳ್ಳಿ ಬೆಟ್ಟ ಹಾಗೂ ಹನುಮನಹಳ್ಳಿಯ ಬೆಟ್ಟದಲ್ಲಿದ್ದವು. ಏಕಾಏಕಿ ತೇರಹಳ್ಳಿ ಬೆಟ್ಟದಲ್ಲಿದ್ದವು ಕಣ್ಮರೆಯಾದವು. ಹನುಮನಹಳ್ಳಿ ಬೆಟ್ಟದ ಗುಹೆಯಲ್ಲಿ ಕಾಣುವ ಈ ಅಪರೂಪದ ಪಕ್ಷಿಗಳ ಬಗ್ಗೆ ಹೈದರಾಬಾದ್ ಉಸ್ಮಾನಿಯ ವಿವಿಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಜಗತ್ತಿನಲ್ಲೇ ಅಪರೂಪದ ಪ್ರಬೇಧ ಎಂದು ಘೋಷಣೆ ಮಾಡಿದ್ದು, ಇದೀಗ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಬೆಟ್ಟವನ್ನು ಕರ್ನಾಟಕ ಅರಣ್ಯ ಇಲಾಖೆ ರಕ್ಷಣೆ ಮಾಡಿದೆ. ಸುಮಾರು 30 ಎಕರೆ ಪ್ರದೇಶವನ್ನು ಸಂರಕ್ಷಣೆ ಮಾಡಿ ಕೋಲಾರ್ ಲೀಫ್ ನಾಸ್ ಬ್ಯಾಟ್‌ಗಳನ್ನು ರಕ್ಷಣೆ ಮಾಡಲಾಗುತ್ತಿದೆ. ತೀರಾ ಅಪರೂಪದ ಜೀವ ಪ್ರಬೇಧವಿದು. ವಿಶ್ವ ಪರಿಸರ ಸಂರಕ್ಷಣೆ ಸಂಸ್ಥೆಯ ಪ್ರಕಾರ ತೀರಾ ಅಳಿವು ಅಂಚಿನಲ್ಲಿರುವ ಪ್ರಬೇಧದ ಪಟ್ಟಿಗೆ ಸೇರ್ಪಡೆ ಮಾಡಿದೆ.

ಸಿಂಗಳೀಕ

ಸಿಂಗಳೀಕ

ಕೋತಿ ಜಾತಿಗೆ ಸೇರಿದ ಸಿಂಗಳೀಕ ಕೂಡ ಅಳಿವು ಅಂಚಿನಲ್ಲಿರುವ ಪ್ರಬೇಧದ ಪಟ್ಟಿಗೆ ಸೇರ್ಪಡೆಯಾಗಿವೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಮಾತ್ರ ಕಾಣುವ ಈ ಸಿಂಗಳಿಕ, ಮುಖ ಸಿಂಹದ ಮಾದರಿ ಬಿಳಿ ಕೂದಲು ಬೆಳೆದಿರುತ್ತದೆ. ಕೋತಿಯನ್ನೇ ಹೋಲುವ ಕಪ್ಪಾಗಿರುವ ಇವು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಿರಸಿ ಹೊನ್ನಾವರದಲ್ಲಿ 32 ಸಿಂಗಳೀಕ ಗುಂಪುಗಳಿವೆ ಎಂದು ಅರಣ್ಯ ಇಲಾಖೆ ಪ್ರಕಟಿಸಿತ್ತು. ದಕ್ಷಿಣ ಭಾರತದಲ್ಲಿ ಇತ್ತೀಚಿಗಿನ ಸಮೀಕ್ಷೆ ಪ್ರಕಾರ 3 ಸಾವಿರ ದಿಂದ 4 ಸಾವಿರ ಸಂಖ್ಯೆಯಿದೆ ಎನ್ನಲಾಗಿದೆ. ಇವು ಕೂಡ ಅಳಿವು ಅಂಚಿನಲ್ಲಿವ ಪ್ರಬೇಧದ ಪಟ್ಟಿಯಲ್ಲಿವೆ.

ಕೊಟ್ಟಿಗೆಹಾರ ಕುಣಿದಾಡುವ ಕಪ್ಪೆ

ಕೊಟ್ಟಿಗೆಹಾರ ಕುಣಿದಾಡುವ ಕಪ್ಪೆ

ಪಶ್ಚಿಮಘಟ್ಟದಲ್ಲಿ ಕಾಣುವ ಅಪರೂಪದ ಕಪ್ಪೆ ಪ್ರಬೇಧಗಳಲ್ಲಿ ಕೊಟ್ಟಿಗೆಹಾರ ಡ್ಯಾನ್ಸಿಂಗ್ ಪ್ರಾಗ್ ಕೂಡ ಒಂದು. ಪಶ್ಚಿಮ ಘಟ್ಟದಲ್ಲಿ ಅಪರೂಪವಾಗಿರುವ ಈ ಜೀವ ಪ್ರಬೇಧದ ಬಗ್ಗೆ ಬೆಳಕು ಚೆಲ್ಲಿದ್ದು ಪ್ರಾಣಿಶಾಸ್ತ್ರಜ್ಞ ಸಿ.ಆರ್. ನಾರಾಯಣರಾವ್. ಚಿಕ್ಕಮಗಳೂರಿನಲ್ಲಿರುವ ಕೊಟ್ಟಿಗೆಹಾರ ಕುಣಿಯವ ಕಪ್ಪೆ ಜೀವ ಪ್ರಬೇಧದ ಬಗ್ಗೆ ಅಧ್ಯಯನ ನಡೆಸಿದ್ದರು. ತೀರಾ ಅಪರೂಪವಾಗಿರುವ ಕೊಟ್ಟಿಗೆಹಾರ ಕುಣಿಯವ ಕಪ್ಪೆಗಳ ಅಲ್ಲಿ ಕೊಟ್ಟಿಗೆಹರ ಬಿಟ್ಟರೆ ಬೇರೆ ಎಲ್ಲೂ ಕಾಣುವುದಿಲ್ಲ. ಇದೀಗ ತೀರಾ ಅಳಿವು ಅಂಚಿನಲ್ಲಿವೆ.

ಭಾರತೀಯ ರಣ ಹದ್ದುಗಳು

ಭಾರತೀಯ ರಣ ಹದ್ದುಗಳು

ರಾಮನಗರ ಸಮೀಪದ ರಾಮದೇವರ ಬೆಟ್ಟದಲ್ಲಿ ಕಾಣುವ ಭಾರತೀಯ ರಣಹದ್ದುಗಳು ಕೂಡ ಅಪರೂಪದ ಪಕ್ಷಿ ಪ್ರಬೇಧದ ಗುಂಪಿಗೆ ಸೇರಿವೆ. ನೋಡಲು ತುಂಬಾ ಸುಂದರವಾಗಿರುವ ಈ ರಣ ಹದ್ದುಗಳು ಪಾಕಿಸ್ತಾನ ಹಾಗೂ ನೇಪಾಳ ಗಡಿ ಭಾಗದಲ್ಲಿ ಹೊರತು ಪಡಿಸಿ ಬೇರೆಲ್ಲೂ ಸಿಗುವುದಿಲ್ಲ. ರಾಮದೇವರ ಬೆಟ್ಟದಲ್ಲಿ ಕಾಣುವ ಈ ಭಾರತೀಯ ರಣ ಹದ್ದುಗಳ ಪ್ರಬೇಧ ರಕ್ಷಣೆ ಮಾಡಲಿಕ್ಕೆ ರಾಜ್ಯ ಸರ್ಕಾರ ರಣಹದ್ದುಗಳ ಅಭಯಾರಣ್ಯ ಎಂದು ಘೋಷಣೆ ಮಾಡಿದೆ. ಹೆಬ್ಬಾಳದ ರುದ್ರಭೂಮಿಯಲ್ಲಿ ಕಾಣುತ್ತಿದ್ದ ಈ ಹದ್ದುಗಳ ಸಂತತಿ ಅಲ್ಲಿ ಇದೀಗ ಅಪರೂಪವಾಗಿದೆ. ತೀರಾ ಅಪಾಯದ ಅಂಚಿನಲ್ಲಿರುವ ಪಕ್ಷಿ ಪ್ರಬೇಧ ಎಂದು ವಿಶ್ವ ಪರಿಸರ ಸಂರಕ್ಷಣಾ ಸಂಸ್ಥೆ ಘೋಷಣೆ ಮಾಡಿದೆ. ರಾಮದೇವರ ಬೆಟ್ಟದ ಸಮೀಪ ರಿಯಲ್ ಎಸ್ಟೇಟ್ ವಹಿವಾಟು, ಪರಿಸರ ಮಾಲಿನ್ಯದಿಂದ ಭಾರತೀಯ ರಣ ಹದ್ದುಗಳು ಅಪಾಯದಲ್ಲಿ ಸಿಲುಕಿವೆ.

ಇಂದಿರನ ಗುಂಡಿಯಾ ಕಪ್ಪೆ

ಇಂದಿರನ ಗುಂಡಿಯಾ ಕಪ್ಪೆ

ಹಾಸನದ ಸಕಲೇಶ್ವರದ ಗುಂಡಿಯಾ ಬಳಿ ಇರುವ ಗುಂಡಿಯ ಕಪ್ಪೆಗಳು ಕೂಡ ಅಪರೂಪದ ಅಳಿವಂಚಿನಲ್ಲಿರುವ ಪ್ರೇಬೇಧಕ್ಕೆ ಸೇರಿವೆ. ಅಲ್ಲಿ ಬಿಟ್ಟರೆ ಬೇರೆ ಎಲ್ಲೂ ಕಾಣುವುದಿಲ್ಲ. ಇವು ಬಣ್ಣ ಬದಲಿಸುತ್ತವೆ. ಎದುರಾಳಿ ಗಳು ಜೀವಕ್ಕೆ ಅಪಾಯ ಒಡ್ಡಿದರೆ ಬಣ್ಣ ಬದಲಿಸಿ ರಕ್ಷಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ಕುರಿತ ಸಂಶೋಧನಾ ವಿವರಗಳು ಅಲಭ್ಯ. ನೆಲ, ನೀರು, ಹಸಿರು ಜಾಗದಲ್ಲಿ ಮಾತ್ರ ಇವು ಕಾಣಿಸಿಕೊಳ್ಳುತ್ತವೆ. ವಿಶೇಷ ಅಂದರೆ ಸಕಲೇಶಪುರದ ಕೆಂಪೊಳೆ ಕಪ್ಪೆ ಅಂತಲೇ ಸ್ಥಳೀಯವಾಗಿ ಖ್ಯಾತಿ ಪಡೆದಿದೆ.

English summary
National Endangered Species Day: information of fauna and birds that will disappear in Karnataka within a few years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X