ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ವೈದ್ಯರ ದಿನ 2022: ಈ ದಿನದ ದಿನಾಂಕ, ಇತಿಹಾಸ, ಥೀಮ್ ತಿಳಿಯಿರಿ

|
Google Oneindia Kannada News

ದೇವರ ಬಳಿಕ ಒಬ್ಬ ರೋಗಿಯನ್ನು ಗುಣಮುಖರನ್ನಾಗಿ ಮಾಡುವ ಶಕ್ತಿ ಹೊಂದಿರುವ ಏಕೈಕ ವ್ಯಕ್ತಿ ಅಂದರೆ ಅದು ವೈದ್ಯ. ದೇವರು ತಾನು ಎಲ್ಲಾ ಕಡೆ ಇರಲು ಸಾಧ್ಯವಾಗದೇ ಇದ್ದಾಗ ವೈದ್ಯರನ್ನು ನೀಡಿದ ಎಂದು ಹೇಳಲಾಗುತ್ತದೆ. ಇದು ಎಲ್ಲಾ ಕಾಲಕ್ಕೆ ಅಕ್ಷರಶಃ ನಿಜವಾಗಿ ಮಾತು. ಅಲ್ಲದೇ ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ನಿರ್ವಹಣೆಯಲ್ಲಿ ವೈದ್ಯರ ಪಾತ್ರ ಸಣ್ಣದಲ್ಲ. ಈ ವಿಚಾರದಲ್ಲಿ ವೈದ್ಯರಿಗೆ ಎಷ್ಟು ಗೌರವ ಸಲ್ಲಿಸಿದರೂ ಅದು ಕಡಿಮೆಯೇ. ಜೀವದ ಹಂಗು ತೊರೆದು ಪ್ರತಿಯೊಬ್ಬ ರೋಗಿಯ ರಕ್ಷಣೆಗಾಗಿ ವೈದ್ಯರು ಹಗಲಿರಳು ಶ್ರಮಿಸಿದ್ದಾರೆ. ಕುಟುಂಬವನ್ನು ತೊರೆದಿದ್ದಾರೆ. ಅನ್ನ ನೀರು ಬಿಟ್ಟು ಹೋರಾಡಿದ್ದಾರೆ. ಅವರ ಈ ಶ್ರಮಕ್ಕೆ ಬೆಲೆ ಕಟ್ಟಲಾಗದು. ಇಂದಿಗೂ ಪ್ರತಿದಿನ ಜಗತ್ತಿನಾದ್ಯಂತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೀಡಿದ ಕೊಡುಗೆ ಮತ್ತು ತ್ಯಾಗ ಮರೆಯಲಾಗದು. ಈ ಉದಾತ್ತ ವೃತ್ತಿಯ ಗೌರವಾರ್ಥವಾಗಿ, ಪ್ರಪಂಚದಾದ್ಯಂತ ವೈದ್ಯರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ.

ವೈದ್ಯರ ದಿನ 2022 ಯಾವಾಗ?

ಭಾರತದಲ್ಲಿ ಜುಲೈ 1 ರಂದು 'ರಾಷ್ಟ್ರೀಯ ವೈದ್ಯರ ದಿನ'ವನ್ನು ಆಚರಿಸಲಾಗುತ್ತದೆ. ಇದನ್ನು ವಾರ್ಷಿಕವಾಗಿ ಭಾರತೀಯ ವೈದ್ಯಕೀಯ ಸಂಘ (IMA) ಆಯೋಜಿಸುತ್ತದೆ. ಈ ವರ್ಷ ಮತ್ತೊಮ್ಮೆ ಆ ಎಲ್ಲಾ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ಸಮರ್ಪಿತವಾಗಿದೆ. 2022 ರ ರಾಷ್ಟ್ರೀಯ ವೈದ್ಯರ ದಿನದ ಥೀಮ್ 'ಮುಂಚೂಣಿಯಲ್ಲಿರುವ ವೈದ್ಯರು'.

ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ 2022:

ಈ ದಿನವನ್ನು ಮೊದಲು 1991 ರಲ್ಲಿ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿ.ಸಿ. ರಾಯ್ ಅವರನ್ನು ಗೌರವಿಸಲು ಮಾನವೀಯತೆಯ ಸೇವೆಗೆ ಅವರ ಕೊಡುಗೆಯನ್ನು ಗುರುತಿಸಲು ಆಚರಿಸಲಾಯಿತು. ಡಾ ರಾಯ್ ಅವರು ತಮ್ಮ ವೈದ್ಯಕೀಯ ವೃತ್ತಿಜೀವನದಲ್ಲಿ ವೈದ್ಯಕೀಯ ಭ್ರಾತೃತ್ವಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ ಅನುಕರಣೀಯ ಮತ್ತು ಪ್ರಖ್ಯಾತ ವೈದ್ಯರಾಗಿದ್ದರು. ಅವರು ಜುಲೈ 1, 1882 ರಂದು ಜನಿಸಿದರು ಮತ್ತು 1962 ರಲ್ಲಿ ಇದೇ ದಿನಾಂಕದಂದು ನಿಧನರಾದರು.

National Doctors’ Day 2022: Know Date, History, Theme and Significance in Kannada

ಫೆಬ್ರವರಿ 4, 1961 ರಂದು ಅವರಿಗೆ ಭಾರತ ರತ್ನ ಗೌರವವನ್ನು ನೀಡಲಾಯಿತು. ಜಾದವ್‌ಪುರ ಟಿ.ಬಿ.ಯಂತಹ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಅವರು ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ. ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ್, ಕಮಲಾ ನೆಹರು ಸ್ಮಾರಕ ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ (ಕಾಲೇಜು), ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಮಹಿಳೆಯರು ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾ ಸದನ್ ಸ್ಥಾಪಿಸಿದ್ದಾರೆ. ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅವರ ಸಮಕಾಲೀನರಿಗಿಂತ ಹೆಚ್ಚು ಯಶಸ್ವಿ ಮತ್ತು ಸಮರ್ಪಿತರಾಗಿದ್ದರು. ಜೊತೆಗೆ ಅವರು ಭಾರತದ ಉಪಖಂಡದ ಮೊದಲ ವೈದ್ಯಕೀಯ ಸಲಹೆಗಾರ ಎಂದು ಕೂಡ ಉಲ್ಲೇಖಿಸಲ್ಪಟ್ಟರು.

National Doctors’ Day 2022: Know Date, History, Theme and Significance in Kannada

ಈ ದಿನದ ಮಹತ್ವ:

ನಮ್ಮ ಯೋಗಕ್ಷೇಮಕ್ಕಾಗಿ ಹಗಲಿರುಳು ದಣಿವರಿಯಿಲ್ಲದೆ ಕೆಲಸ ಮಾಡುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಈ ದಿನವನ್ನು ಆಚರಿಸುತ್ತೇವೆ. ಕೊರೊನಾ ಪರಿಸ್ಥಿತಿಯಲ್ಲಿ, ನಮ್ಮ ಜೀವಗಳನ್ನು ಉಳಿಸಿದ್ದಕ್ಕಾಗಿ 24X7 ಕೆಲಸ ಈ ಮಹತ್ಕಾರ್ಯಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಇದೊಂದು ಅವಕಾಶ. ತಮ್ಮ ಕುಟುಂಬವನ್ನು ಮರೆತು ಅವರು ರಾಷ್ಟ್ರ ಸೇವೆಯನ್ನು ಆರಿಸಿಕೊಂಡರು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಿಕ್ಕಟ್ಟಿನ ಘಳಿಗೆಯಲ್ಲಿ ಕಟ್ಟುನಿಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಅವರ ಚೇತನ ಮತ್ತು ಸಮರ್ಪಣೆಗೆ ಅಭಿನಂದನೆಗಳು.

English summary
National Doctors’ Day 2022 Date in India: Know Theme, History and Significance of the Day Celebrated in Honour of Dr Bidhan Chandra Roy Birthday in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X