ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ಮಣ್ಣು ತರಲಿದೆ ನಾಸಾ ರೋವರ್!

By ಅನಿಕೇತ್
|
Google Oneindia Kannada News

ಮಂಗಳ ಗ್ರಹದ ಹಿಂದೆ ಬಿದ್ದಿರುವ ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿಯೊಂದನ್ನು ನಾಸಾ ನೀಡಿದೆ. ಮೊದಲ ಬಾರಿಗೆ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಇರುವ ನಾಸಾ ಇದೀಗ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ಈ ಬಾರಿ ಮಂಗಳನ ಮಣ್ಣನ್ನು ಭೂಮಿಗೆ ತರಲು ತುದಿಗಾಲಲ್ಲಿ ನಿಂತಿದೆ.

ನಾಸಾ ಕೈಗೊಂಡಿರುವ ಈ ಯೋಜನೆಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಸಾಥ್ ನೀಡಿದೆ. ಹೀಗೆ ಎರಡೂ ಬಲಾಢ್ಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಮಂಗಳ ಗ್ರಹದ ಅಂಗಳಕ್ಕೆ ನುಗ್ಗಲು ತಯಾರಿ ನಡೆಸಿವೆ.

ಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರ

ಕೆಂಪು ಗ್ರಹದ ನೆಲದ ಮೇಲೆ ಮೊದಲಿಗೆ ಲ್ಯಾಂಡ್ ಆಗಲಿರುವ ನಾಸಾ ನೌಕೆಗೆ 'ಇಎಸ್‌ಎ' ರೋವರ್ ಸಾಥ್ ನೀಡಲಿದೆ. ಅಂದ ಹಾಗೆ ತೀವ್ರ ಕುತೂಹಲ ಕೆರಳಿಸಿರುವ ಮಂಗಳನ 'ಜೆಝೀರೋ' ಕುಳಿ ಮೇಲೆ ನಾಸಾ ರೋವರ್ ಲ್ಯಾಂಡ್ ಆಗಲಿದೆ. ಜುಲೈ 30ರಂದು ಲಾಂಚ್ ಆಗಲಿರುವ ಸ್ಪೆಷಲ್ ರೋವರ್ 'ಪೆರ್‌ಸೆವೆರನ್ಸ್' 2021ರ ಫೆಬ್ರವರಿ ಹೊತ್ತಿಗೆ ಮಂಗಳ ಗ್ರಹದ ಮೇಲೆ ಇಳಿಯಲಿದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ಸುಮಾರು 20 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನಗಳನ್ನು ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. ‘ಪೆರ್‌ಸೆವೆರನ್ಸ್' ಎಂದು ಈ ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯದ ಮಟ್ಟಿಗೆ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವನ್ನೆಲ್ಲಾ ಬಳಸಿ ರೋವರ್‌ ತಯಾರಿಸಿದೆ ಅಮೆರಿಕದ ನಾಸಾ. ಈ ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಡ್ರಿಲ್ಲರ್ ಸಹಾಯದಿಂದ ‘ಪೆರ್‌ಸೆವೆರನ್ಸ್' ರೋವರ್ ಮಂಗಳ ಗ್ರಹದ ಬಂಡೆ ಹಾಗೂ ಮಣ್ಣನ್ನು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಹಾಗೂ ಕಲ್ಲನ್ನು ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಆ ಕಂಟೇನರ್‌ಗಳನ್ನ ಅಲ್ಲಿಯೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

2026ಕ್ಕೆ ಮತ್ತೊಂದು ರೋವರ್..!

2026ಕ್ಕೆ ಮತ್ತೊಂದು ರೋವರ್..!

ನಾಸಾ ಸಂಸ್ಥೆಯ ‘ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ ‘ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ ‘ಪೆರ್‌ಸೆವೆರನ್ಸ್' ಬಿಟ್ಟು ಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನು ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನು ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.

ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ

ರಾಕೆಟ್ ಲಾಂಚ್ ಮಾಡಲಿದೆ ರೋವರ್..!’

ರಾಕೆಟ್ ಲಾಂಚ್ ಮಾಡಲಿದೆ ರೋವರ್..!’

ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

12 ವರ್ಷ ಕಾಯಬೇಕು..!

12 ವರ್ಷ ಕಾಯಬೇಕು..!

ಇಷ್ಟೆಲ್ಲಾ ಸರ್ಕಸ್ ಮಾಡಿ ಮಂಗಳನ ಮಣ್ಣನ್ನು ಭೂಮಿಗೆ ತಂದ ನಂತರ ನಾಸಾ ಹಾಗೂ ಇಎಸ್‌ಎ ಒಟ್ಟಾಗಿ ಸಂಶೋಧನೆ ನಡೆಸಲಿವೆ. ಭೂಮಿಯಲ್ಲಿ 2032ರ ಹೊತ್ತಿಗೆ ಲಭ್ಯವಿರುವ ಅತ್ಯುತ್ತಮ ಲ್ಯಾಬ್ ಸಾಧನಗಳನ್ನು ಬಳಸಿ ಮಂಗಳನ ಮಣ್ಣಿನ ಸಂಶೋಧನೆ ನಡೆಸಲಾಗುವುದು. ಈ ಸಂಶೋಧನೆಗಾಗಿ ಹೊಸ ಸಾಧನ ಕಂಡುಹಿಡಿಯುವ ಪ್ಲ್ಯಾನ್ ಇದೆ. ಇದಿಷ್ಟನ್ನೂ ನೋಡಲು 12 ವರ್ಷ ಕಾಯಲೇಬೇಕು. ಮಂಗಳನ ಮಣ್ಣಿನ ಅಧ್ಯಯನದ ನಂತರ ವರದಿಗಾಗಿ ವಿಜ್ಞಾನಿಗಳು ಮತ್ತಷ್ಟು ವರ್ಷ ಕಾಯಬೇಕಿದೆ. ಒಟ್ಟಾರೆ ಹೇಳುವುದಾದರೆ ಈ ಯೋಜನೆ ಒಂದು ತಪಸ್ಸು. ಈ ತಪಸ್ಸಿನಲ್ಲಿ ನಾಸಾ ಹಾಗೂ ಇಎಸ್‌ಎ ಯಶಸ್ಸು ಕಾಣಲಿ ಎಂದು ಹಾರೈಸೋಣ.

English summary
NASA and European Space Agencies are on the way to bring Martian Soil into the Earth. May be we can receive the Mars Soil before 2032.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X