• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕೊರೊನಾ’ ನಡುವೆ ದಿನಕ್ಕೆ 25 ಗಂಟೆ ಕೆಲಸ..! ಭಾರತೀಯರು ಇಲ್ಲದೆ ‘ನಾಸಾ’ಗೆ ಬಲವಿಲ್ಲ..!

|
Google Oneindia Kannada News

ಅಬ್ಬಬ್ಬಾ ಈ ಕೊರೊನಾ ಕಂಟಕದಿಂದ ಮುಕ್ತಿ ಸಿಕ್ಕರೆ ಸಾಕಪ್ಪ ಅಂತಾ ಇಡೀ ಜಗತ್ತು ಭಗವಂತನ ಬಳಿ ಕಳೆದ 1 ವರ್ಷದಿಂದಲೂ ಬೇಡಿಕೊಳ್ಳುತ್ತಿದೆ. ವ್ಯಾಕ್ಸಿನ್ ಬಂದರೂ ಕೊರೊನಾ 2 ಮತ್ತು 3ನೇ ಅಲೆಯ ಆತಂಕದಲ್ಲಿ ಜಗತ್ತಿನ ಬಹುತೇಕ ದೇಶಗಳು ನರಳುತ್ತಿವೆ. ಅಮೆರಿಕದಲ್ಲಿ 3ನೇ ಅಲೆ ಅಪ್ಪಳಿಸುವ ಭೀತಿ ಇದೆ. ಈ ಕಾರಣಕ್ಕೆ ಬಹುನಿರೀಕ್ಷಿತ ಮಂಗಳ ಗ್ರಹದ ಯೋಜನೆಗೂ ಭಾರಿ ಹಿನ್ನಡೆ ಉಂಟಾಗಿತ್ತು.
ಇದೀಗ ಹುಷಾರಾಗಿ ಮಂಗಳ ಗ್ರಹದ ಮೇಲೆ ರೋವರ್ ಇಳಿಸಿದ್ದರೂ ರೋವರ್ ನಿರ್ವಹಿಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಇದನ್ನೆಲ್ಲಾ ದಿಟ್ಟವಾಗಿ ನಿರ್ವಹಿಸುತ್ತಾ, ನಾಸಾ ಸಂಸ್ಥೆಯ ಮಹತ್ವಕಾಂಕ್ಷೆ ಯೋಜನೆಗೆ ಬೆನ್ನುಲುಬಾಗಿ ನಿಂತಿರುವುದು ಭಾರತೀಯರು ಎಂಬುದೇ ಹೆಮ್ಮೆ.

ಸುಮಾರು 21 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದು ಮಾನವ ಹೇಳಿದಂತೆ ಕೆಲಸ ಮಾಡುತ್ತಿರುವ 'ನಾಸಾ' ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್‌ನ ನಿರ್ವಹಣೆ ಹೊಣೆ ಹೊತ್ತಿರುವುದು ಭಾರತ ಮೂಲದ ವ್ಯಕ್ತಿ. 55 ವರ್ಷ ವಿಜ್ಞಾನಿ ಸಂಜೀವ್ ಗುಪ್ತಾ 'ಪೆರ್‌ಸೆವೆರನ್ಸ್' ರೋವರ್‌ಗೆ ಚಾಲಕನಂತೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಕಾರಣಕ್ಕೆ ನಾಸಾ ಕಚೇರಿಗೆ ತೆರಳಲು ಆಗದೇ ಇದ್ದರೂ, ಬಾಡಿಗೆ ಮನೆಯೊಂದರ ರೂಂನಿಂದ ಅಚ್ಚುಕಟ್ಟಾಗಿ ಕಾರ್ಯನಿರ್ವಸುತ್ತಿದ್ದಾರೆ.

ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.? ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?

ವಿಜ್ಞಾನಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ..!

ವಿಜ್ಞಾನಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ..!

ಅದು ಸಣ್ಣದಾದ ಒಂದು ಮನೆ, ಕೆಳಗೆ ಅಂಗಡಿಗಳ ಸಾಲು. ಆ ಮನೆಯೊಂದರ ಬೆಡ್‌ರೂಂನಿಂದ ಸುಮಾರು 20 ಸಾವಿರ ಕೋಟಿ ವೆಚ್ಚದ ‘ಪೆರ್‌ಸೆವೆರನ್ಸ್' ರೋವರ್ ಕೆಲಸ ಮಾಡುತ್ತಿದೆ ಎಂದರೆ ಅಚ್ಚರಿ ಆಗಬಹುದು. ನಾಸಾ ಕೇಂದ್ರ ಕಚೇರಿ ಬಗ್ಗೆ ನಿಮಗೆ ಗೊತ್ತೇ ಇದೆ. ಅಲ್ಲಿನ ಇಂಟರ್ನೆಟ್ ಸ್ಪೀಡ್, ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಕೇಳಿರುತ್ತೀರಿ. ಇದೇ ರೀತಿ ಕ್ಯಾಲಿಫೋರ್ನಿಯ ರಾಜ್ಯದ ನಾಸಾ ಕಚೇರಿಯಲ್ಲಿ ರೋವರ್‌ಗಳ ನಿರ್ವಹಣೆಗಾಗಿ ದೊಡ್ಡದೊಂದು ಲ್ಯಾಬ್ ಇದೆ. ಇದೇ ಕಂಪ್ಯೂಟರ್ ಲ್ಯಾಬ್‌ನಲ್ಲಿ ನೂರಾರು ವಿಜ್ಞಾನಿಗಳು ಕೆಲಸ ಮಾಡಲು ವ್ಯವಸ್ಥೆ ಇದೆ. ಇಲ್ಲಿಂದಲೇ ‘ಪೆರ್‌ಸೆವೆರನ್ಸ್' ರೋವರ್‌ನ ನಿರ್ವಹಣೆ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಾಸಾ ವಿಜ್ಞಾನಿಗಳು ಕಚೇರಿಗೆ ತೆರಳಲು ಆಗದೆ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಪ್ರತಿದಿನ 25 ಗಂಟೆ ಕೆಲಸ..!

ಪ್ರತಿದಿನ 25 ಗಂಟೆ ಕೆಲಸ..!

ಅರೆ, ದಿನಕ್ಕೆ 24 ಗಂಟೆಗಳು ಮಾತ್ರ ಇರೋದು, ಇನ್ನೊಂದು ಗಂಟೆ ಸಮಯ ಎಲ್ಲಿಂದ ಬರುತ್ತೆ ಎನ್ನಬೇಡಿ. ಏಕೆಂದರೆ ಮಂಗಳ ಗ್ರಹದಲ್ಲಿ 1 ದಿನ ಕಳೆಯಲು ಭೂಮಿಯ ಲೆಕ್ಕಾಚಾರದಲ್ಲಿ 25 ಗಂಟೆಗಳು ಬೇಕಾಗುತ್ತದೆ. ಏಕೆಂದರೆ ಮಂಗಳ ಗ್ರಹ ಭೂಮಿಗಿಂತ ನಿಧಾನವಾಗಿ ಸುತ್ತುತ್ತದೆ. ಈ ಲೆಕ್ಕಾಚಾರದಲ್ಲಿ 24 ಗಂಟೆ 40 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ‘ಪೆರ್‌ಸೆವೆರನ್ಸ್' ನಿರ್ವಹಿಸುತ್ತಿರುವ ನಾಸಾ ವಿಜ್ಞಾನಿಗಳು ದಿನಕ್ಕೆ 25 ಗಂಟೆಗಳ ಲೆಕ್ಕದಲ್ಲಿ ಶಿಫ್ಟ್ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಭಾರತ ಮೂಲದ ನಾಸಾ ವಿಜ್ಞಾನಿ ಸಂಜೀವ್ ಗುಪ್ತ ಕೂಡ ಲಂಡನ್‌ನ ಪುಟ್ಟ ಮನೆಯಿಂದ ರೋವರ್ ನಿರ್ವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!

6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ ‘ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. ‘ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ ‘ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ಮಂಗಳ ಗ್ರಹದ ಮೇಲೆ ರಾತ್ರಿ ಆಕಾಶ, 360 ಡಿಗ್ರಿಯಲ್ಲಿ ತಿರುಗಿಸುವ ಅವಕಾಶ..!ಮಂಗಳ ಗ್ರಹದ ಮೇಲೆ ರಾತ್ರಿ ಆಕಾಶ, 360 ಡಿಗ್ರಿಯಲ್ಲಿ ತಿರುಗಿಸುವ ಅವಕಾಶ..!

2026ಕ್ಕೆ ಮತ್ತೊಂದು ರೋವರ್..!

2026ಕ್ಕೆ ಮತ್ತೊಂದು ರೋವರ್..!

ನಾಸಾ ಸಂಸ್ಥೆಯ ‘ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ ‘ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ ‘ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.

ರಾಕೆಟ್ ಲಾಂಚ್ ಮಾಡಲಿದೆ ರೋವರ್

ರಾಕೆಟ್ ಲಾಂಚ್ ಮಾಡಲಿದೆ ರೋವರ್

ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

English summary
Effect of Coronavirus pandemic in America, NASA scientists handling the Perseverance Rover from a small rented house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X