• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ ‘ಸೂರ್ಯ’!

|
Google Oneindia Kannada News

ಜನ ತಮ್ಮನ್ನು ತಾವು ಹೊಗಳಿಕೊಳ್ಳಲು 'ಸೂರ್ಯನಿಗೆ ಟಾರ್ಚಾ' ಅಂತಾ ಡೈಲಾಗ್ ಹೊಡೆಯುತ್ತಾರೆ. ಆದ್ರೆ ನಾಸಾ ಆ ಡೈಲಾಗ್‌ಗೂ ಸವಾಲು ಹಾಕುವಂತೆ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಿತ್ತು.

2020ರಲ್ಲಿ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಬಾಹ್ಯಾಕಾಶಕ್ಕೆ ಹಾರಿ, ಸೂರ್ಯನ ತಲುಪಿತ್ತು. ಈ ಉಪಗ್ರಹ ಅದೆಷ್ಟು ಶಕ್ತಿಶಾಲಿ ಎಂದರೆ, ಸೂರ್ಯನ ಕೆಂಡದಂತಹ ಜ್ವಾಲೆಗಳನ್ನೂ ಸಹಿಸಿಕೊಳ್ಳುತ್ತದೆ. ಇದೀಗ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಸೂರ್ಯನ ಮೇಲೆ ಏಳುತ್ತಿರುವ ಭೀಕರ ಜ್ವಾಲೆಗಳ ಫೋಟೋ ಮತ್ತು ವಿಡಿಯೋ ರವಾನಿಸಿದೆ.

ಸೂರ್ಯ ಭೂಮಿಗೆ ಬೆಳಕು ನೀಡುವ ದೈವ ಎನ್ನುತ್ತಾರೆ ಮಾನವರು. ಆದರೆ ಇದೇ ಸೂರ್ಯನ ಬೆಳಕು ಸ್ವಲ್ಪ ಹೆಚ್ಚಾದರೂ ನಾವೆಲ್ಲಾ ಸುಟ್ಟು ಬೂದಿಯಾಗಿ ಹೋಗುತ್ತೇವೆ. ಇದಕ್ಕೆ ಕಾರಣ ಸೂರ್ಯನ ಜ್ವಾಲೆಗಳು ಅಲಿಯಾಸ್ ಸೌರ ಜ್ವಾಲೆಗಳು. ಸೌರ ಜ್ವಾಲೆಗಳು ಭೂಮಿಯ ಮೇಲೆ ಮಿನಾಶವನ್ನೇ ಸೃಷ್ಟಿಸಬಲ್ಲವು.

ಹೀಗಾಗಿ ನಾಸಾ ಸೌರ ಜ್ವಾಲೆಗಳ ಅಧ್ಯಯನ ನಡೆಸುತ್ತಿದ್ದು, 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಸೂರ್ಯನಿಂದ 8 ಕೋಟಿ ಕಿಲೋ ಮೀಟರ್ ದೂರದಲ್ಲಿ ತಿರುಗಾಡುತ್ತಾ ವಿಡಿಯೋ ಮಾಡಿದೆ.

ಸೂರ್ಯನಿಂದ ಭೂಮಿಗೆ ಆಪತ್ತು..?

ಸೂರ್ಯನಿಂದ ಭೂಮಿಗೆ ಆಪತ್ತು..?

ಸೂರ್ಯ ಎಲ್ಲಾ ನಕ್ಷತ್ರಗಳಂತೆ ಒಂದು ತಾರೆ, ಅದರಲ್ಲೂ ಭೂಮಿಗೆ ಅತಿ ಸಮೀಪದ ತಾರೆ. ಆದರೆ ಸೂರ್ಯ ತನ್ನ ಬೈಜಿಕ ಕ್ರಿಯೆಗಳ ಪರಿಣಾಮ ವರ್ತನೆ ಬದಲಾಯಿಸುತ್ತಾನೆ. ಸೂರ್ಯನ ಶಾಖದಲ್ಲಿ ಒಂದಿಷ್ಟು ಎಡವಟ್ಟು ಸಂಭವಿಸಿದರೂ ಭೂಮಿ ಸೇರಿದಂತೆ ಸೌರ ಮಂಡಲದ ಇನ್ನಿತರ ಗ್ರಹಗಳಿಗೆ ಆಪತ್ತು ಪಕ್ಕಾ. ಹೀಗೆ ಸಾವಿರಾರು ವರ್ಷಗಳ ಹಿಂದೆ ಸೂರ್ಯ ದೇವ ಮುನಿದ ಕಾರಣ ಭೂಮಿ ಮೇಲಿದ್ದ ಜೀವಿಗಳೇ ನಾಶವಾಗಿವೆ. ಈಗ ಕೂಡ ಇಂತಹ ವಿಚಿತ್ರಗಳು ನಡೆಯುತ್ತಿವೆ, ಮುಂದಿನ ದಿನಗಳಲ್ಲಿ ಸೌರ ಜ್ವಾಲೆಗಳು ಉಗ್ರ ಸ್ವರೂಪ ತಾಳುವ ಲಕ್ಷಣ ಗೋಚರಿಸುತ್ತಿದೆ. ಭೂಮಿಗೆ ಖಂಡಿತ ಸೌರ ಜ್ವಾಲೆಗಳಿಂದ ಆಪತ್ತು ಎದರಾಗಲಿದೆ ಅಂತಾರೆ ವಿಜ್ಞಾನಿಗಳು.

ನಕ್ಷತ್ರದ ಜನನ ಹೇಗೆ..?

ನಕ್ಷತ್ರದ ಜನನ ಹೇಗೆ..?

ಬ್ರಹ್ಮಾಂಡದ ಉಗಮವಾಗಿ ಸುಮಾರು 1375 ಕೋಟಿ ವರ್ಷವಾಗಿದೆ. 1375 ಕೋಟಿ ವರ್ಷದಲ್ಲಿ ಬಿಲಿಯನ್ ಲೆಕ್ಕದಲ್ಲಿ ಗ್ಯಾಲಕ್ಷಿಗಳು ಜನ್ಮತಾಳಿವೆ. ಪ್ರತಿಯೊಂದು ಗ್ಯಾಲಕ್ಸಿಯಲ್ಲೂ ಮತ್ತೊಂದಿಷ್ಟು ಬಿಲಿಯನ್ ನಕ್ಷತ್ರಗಳು, ಗ್ರಹಗಳು ಕೂಡ ಹರಡಿವೆ. ಈ ಸಮೂಹದಲ್ಲಿ ಸೌರಮಂಡಲವೂ ಒಂದು. ಹೀಗೆ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ನಕ್ಷತ್ರಗಳ ಹುಟ್ಟು ಹಾಗೂ ಬೆಳವಣಿಗೆ ಕೋಟಿ ಕೋಟಿ ವರ್ಷಗಳ ಪ್ರಕ್ರಿಯೆ. ಅದು ದಿಢೀರ್ ಎಂದು ಸಂಭವಿಸುವುದಿಲ್ಲ. ದಟ್ಟ ಧೂಳಿನ ಮೋಡಗಳು ಗುರತ್ವದ ಬಲದಿಂದ ಒಂದುಗೂಡಿ, ನಂತರ ಮೋಡದ ಒಳಗೆ ಗುರತ್ವದ ಬಲದಿಂದ ಶಾಖ ಏರ್ಪಡುತ್ತದೆ. ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ.

ಬ್ರಹ್ಮಾಂಡವೇ ಉಡೀಸ್ ಆಗುತ್ತೆ..!

ಬ್ರಹ್ಮಾಂಡವೇ ಉಡೀಸ್ ಆಗುತ್ತೆ..!

ಬೈಜಿಕ ಸಮ್ಮಿಲ ಕ್ರಿಯೆಯನ್ನ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿ ಅನುಸರಿಸುತ್ತವೆ. ಆದ್ರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆ ಅವಲಂಬಿಸಿರುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಅವಲಂಬಿಸಿರುತ್ತದೆ.

ನಕ್ಷತ್ರವೇ ಮೊದಲು ಹುಟ್ಟುವುದು ಏಕೆ..?

ನಕ್ಷತ್ರವೇ ಮೊದಲು ಹುಟ್ಟುವುದು ಏಕೆ..?

ಒಂದು ಗುಂಪಿಗೆ ನಾಯಕ ಇದ್ದಂತೆ ಗ್ರಹಗಳಿಗೆ ನಕ್ಷತ್ರವೇ ನಾಯಕ. ಮೊದಲು ನಕ್ಷತ್ರವೇ ರೂಪುಗೊಳ್ಳುತ್ತದೆ. ನಂತರ ನಕ್ಷತ್ರದ ಗುರುತ್ವದ ಬಲದಿಂದ ಗ್ರಹಗಳು ರೂಪತಳೆಯುತ್ತವೆ. ಭೂಮಿ ಕೂಡ ಈ ರೀತಿ ಸೂರ್ಯನ ಸುತ್ತ ಸುತ್ತುತ್ತಾ ಜನ್ಮತಾಳಿತ್ತು. ಭೂಮಿ ಮಾತ್ರವಲ್ಲ ಸೌರಮಂಡಲದ ಇತರ ಗ್ರಹಗಳು ಸೂರ್ಯನ ನಂತರವೇ ರೂಪುಗೊಂಡಿದ್ದು. ಆದರೆ ವಿಜ್ಞಾನಿಗಳು ಇದೀಗ ಕಂಡುಹಿಡಿದಿರುವ ಗ್ರಹ ಅದರ ನಕ್ಷತ್ರಕ್ಕಿಂತಲೂ ಮೊದಲೇ ರೂಪುಗೊಂಡಿದೆ. ಇದು ವಿಜ್ಞಾನಿಗಳಿಗೆ ಆಶ್ಚರ್ಯದ ಜೊತೆ ಹೊಸ ಅಧ್ಯಯನ ಕೈಗೊಳ್ಳಲು ಸ್ಫೂರ್ತಿ ನೀಡಿದೆ.


English summary
NASA satellite recorded a video of massive solar winds from 77 million KM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X