• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಸ್ತಿ ಕನ್ಫ್ಯೂಸ್ ಆಗಬೇಡಿ, ಇದು ಆಲೂಗಡ್ಡೆಅಲ್ಲ! ಮಂಗಳ ಗ್ರಹದ ಚಂದ್ರ!

|
Google Oneindia Kannada News

ಮಾನವರ ಪಾಲಿಗೆ ಆಶಾಕಿರಣ, ಬಾಹ್ಯಾಕಾಶ ವಿಜ್ಞಾನಿಗಳ ಹಾಟ್ ಫೇವರಿಟ್ ಮಂಗಳ ಗ್ರಹದ ಬಗ್ಗೆ ನಾಸಾ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಆದ್ರೆ ಈ ಬಾರಿ 'ನಾಸಾ' ಹೇಳಿರುವ ವಿಚಾರ ಮಂಗಳನ 'ಚಂದ್ರ'ನಿಗೆ ಸಂಬಂಧಪಟ್ಟಿದ್ದು. ಹೌದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಅದ್ಭುತವಾದ ಫೋಟೋ ಒಂದನ್ನ ಶೇರ್ ಮಾಡಿದೆ.

ನೋಡಲು ಥೇಟ್ ಆಲೂಗಡ್ಡೆ ರೀತಿ ಕಾಣುವ ಈ ಫೋಟೋ ಮಂಗಳ ಗ್ರಹದ ಉಪಗ್ರಹಕ್ಕೆ ಸಂಬಂಧಪಟ್ಟಿದ್ದು. 'ಫೋಬೋ' ಎಂದು ಕರೆಯಲಾಗುವ ಮಂಗಳ ಗ್ರಹದ ಈ ಉಪಗ್ರಹ ಅತ್ಯಂತ ಸಮೀಪದಲ್ಲೇ ಇರುವಾಗ ನಾಸಾ ಫೋಟೋ ಕ್ಲಿಕ್ ಮಾಡಿದೆ. 'ನಾಸಾ' ಇನ್ಸ್‌ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಲಾಗಿದೆ.

ಮಂಗಳ ಗ್ರಹದ ಮುಗಿಲ ಮೇಲೆ ಬಣ್ಣ ಬಣ್ಣದ ಮೋಡಗಳ ಸಾಲು..!ಮಂಗಳ ಗ್ರಹದ ಮುಗಿಲ ಮೇಲೆ ಬಣ್ಣ ಬಣ್ಣದ ಮೋಡಗಳ ಸಾಲು..!

ನೋಡೋಕೆ ಮಂಗಳನ ಚಂದ್ರ 'ಫೋಬೋ' ಥೇಟ್ ಆಲೂಗಡ್ಡೆ ರೀತಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಸ್ಪೆಷಲ್ ಟೈಟಲ್ ಕೊಟ್ಟಿದ್ದಾರೆ ನಾಸಾ ವಿಜ್ಞಾನಿಗಳು. 'ನೀವು ಫೋಟೋ ನೋಡಿ ಆಲೂಗಡ್ಡೆ ಎಂದರೆ, ನಾವು ಮಂಗಳ ಗ್ರಹದ ಉಪಗ್ರಹ ಎನ್ನುತ್ತೇವೆ' ಎಂಬ ಟ್ಯಾಗ್‌ಲೈನ್ ಕೊಡಲಾಗಿದೆ.

ಮಂಗಳನ ‘ಚಂದ್ರ’ನಲ್ಲಿ ಜೀವಿಗಳು..?

ಮಂಗಳನ ‘ಚಂದ್ರ’ನಲ್ಲಿ ಜೀವಿಗಳು..?

ಇಂತಹ ಒಂದು ಊಹೆ ಇದ್ರೆ ಅದು ತಪ್ಪು, ಏಕೆಂದರೆ ಮಂಗಳನ ಉಪಗ್ರಹ ‘ಫೋಬೋ'ಗೆ ವಾತಾವರಣವೇ ಇಲ್ಲ. ಅದರಲ್ಲೂ 100 ವರ್ಷಕ್ಕೆ ಒಮ್ಮೆ ‘ಫೋಬೋ' 1.8 ಮೀಟರ್‌ನಷ್ಟು ಮಂಗಳ ಗ್ರಹಕ್ಕೆ ಹತ್ತಿರವಾಗುತ್ತಿದೆ. ಹೀಗೆ ಮುಂದುವರಿದರೆ ಸುಮಾರು 50 ಮಿಲಿಯನ್ ವರ್ಷಗಳ ಅಂತರದಲ್ಲಿ ‘ಫೋಬೋ' ಮಂಗಳನ ನೆಲಕ್ಕೇ ಅಪ್ಪಳಿಸುವ ಭೀತಿ ಇದೆ. ಪರಿಸ್ಥಿತಿ ಹೀಗಿರುವಾಗ ‘ಫೋಬೋ' ಮೇಲೆ ಜೀವಿಗಳ ಉಳಿವು ಅಥವಾ ಭವಿಷ್ಯದಲ್ಲಿ ಇಂತಹ ಒಂದು ಆಲೋಚನೆ ಸಾಧ್ಯವೇ ಇಲ್ಲ ಎನ್ನಬಹುದು. ಆದ್ರೂ ವಿಜ್ಞಾನಿಗಳು ಅತ್ತ ಒಂದು ಕಣ್ಣಿಟ್ಟಿದ್ದಾರೆ.

ಮಂಗಳ ಗ್ರಹದಲ್ಲಿ ‘ಜೀವಜಲ’

ಮಂಗಳ ಗ್ರಹದಲ್ಲಿ ‘ಜೀವಜಲ’

ಅಷ್ಟಕ್ಕೂ ಕೆಂಪು ಗ್ರಹ ಮಂಗಳನ ಮೇಲೆ ನೂರಾರು ಕೋಟಿ ವರ್ಷಗಳ ಹಿಂದೆ ನೀರು ಇತ್ತು ಎಂಬ ಸತ್ಯವನ್ನು ಇತ್ತೀಚೆಗೆ ವಿಜ್ಞಾನಿಗಳು ಕಂಡುಕೊಂಡಿದ್ದರು. ಆದರೆ ಆ ನೀರು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಮಂಗಳ ಗ್ರಹದ ಮೇಲೆ ಇದ್ದ ನೀರು ದಿಢೀರ್ ನಾಪತ್ತೆ ಆಗಲು ಅದರ ಗುರುತ್ವ ಬಲದಲ್ಲಿನ ಬದಲಾವಣೆ ಪ್ರಮುಖ ಕಾರಣ ಎನ್ನಲಾಗಿದೆ. ನಾಸಾ ಸಂಶೋಧನೆ ಹೇಳುವಂತೆ, ಮಂಗಳ ಗ್ರಹದಿಂದ ನೀರು ಆಕಾಶಕ್ಕೆ ಹಾರಿ ಹೋಗಿಲ್ಲ, ಅದೇ ಗ್ರಹದಲ್ಲಿ ಇದೆ. ಆದರೆ ಅದು ಮಂಗಳನ ನೆಲದಲ್ಲಿ ಹುದುಗಿದೆಯಂತೆ.

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ ‘ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ ‘ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

English summary
NASA released a rare photo on Instagram about Mars satellite Phobos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X