• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ, ಚೀನಾ ಜೊತೆಗೆ ಮಹತ್ವದ ಮಾಹಿತಿ ಹಂಚಿಕೊಂಡ ‘ನಾಸಾ’

|
Google Oneindia Kannada News

ನಾಸಾ ತನ್ನ ಮಹತ್ವಕಾಂಕ್ಷಿ ಮಂಗಳಯಾನ ಯೋಜನೆ ಮಾಹಿತಿಯನ್ನ ಭಾರತ, ಚೀನಾ, ಯುಎಇ ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆ ಹಂಚಿಕೊಂಡಿದೆ. ಈ ಹಿಂದೆಯೇ ತಾನು ತನ್ನ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ನಾಸಾ ತಿಳಿಸಿತ್ತು. ಇದೀಗ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ವಿನಿಮಯ ಮಾಡಿಕೊಂಡಿದೆ.

ಅಷ್ಟಕ್ಕೂ ಬೇರೆ ಬೇರೆ ದೇಶಗಳು ಕೂಡ ಹೀಗೆ ಹಲವು ನೌಕೆಗಳನ್ನು ಉಡಾವಣೆ ಮಾಡಿವೆ. ಹೀಗೆ ಮಂಗಳಯಾನ ಯೋಜನೆ ಭಾಗವಾಗಿ ತಾನು ಉಡಾಯಿಸಿರುವ ಗಗನನೌಕೆ ಹಾಗೂ ಬೇರೆ ರಾಷ್ಟ್ರಗಳ ಗಗನನೌಕೆಗಳ ನಡುವೆ ಘರ್ಷಣೆ ಸಂಭವಿಸಬಾರದು ಎಂಬ ಉದ್ದೇಶದಿಂದ ನಾಸಾ ಈ ಮಾಹಿತಿ ವಿನಿಮಯ ಮಾಡಿಕೊಂಡಿದೆ ಎನ್ನಲಾಗಿದೆ.

ಮಂಗಳ ಗ್ರಹದ ಮೇಲೆ ನೀರಿತ್ತು, ಆದರೆ ಎಲ್ಲೋಯ್ತು? ಉತ್ತರ ನೀಡಿದ ವಿಜ್ಞಾನಿಗಳು!ಮಂಗಳ ಗ್ರಹದ ಮೇಲೆ ನೀರಿತ್ತು, ಆದರೆ ಎಲ್ಲೋಯ್ತು? ಉತ್ತರ ನೀಡಿದ ವಿಜ್ಞಾನಿಗಳು!

ಅಂದಹಾಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ಮಂಗಳಯಾನ ಯೋಜನೆ ಅಡಿ ಉಡಾವಣೆ ಮಾಡಿದ್ದ ಗಗನನೌಕೆ 2014ರಲ್ಲಿ 'ಮಂಗಳ'ನ ಕಕ್ಷೆ ಪ್ರವೇಶಿಸಿ ಇದೀಗ ಆ ಗ್ರಹದ ಸುತ್ತಲೂ ಪರಿಭ್ರಮಿಸುತ್ತಿದೆ. ಮತ್ತೊಂದ್ಕಡೆ ಯುಎಇ ಉಡಾವಣೆ ಮಾಡಿದ್ದ 'ಹೋಪ್‌', ಚೀನಾದ 'ಟಿಯಾನ್ವೆನ್-1' ಗಗನನೌಕೆಗಳು ಕೂಡ ಮಂಗಳನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಾ ಅಂಗಾರಕನ ಅಧ್ಯಯನ ನಡೆಸುತ್ತಿವೆ.

ಒಂದೇ ತಿಂಗಳಲ್ಲಿ 3 ಯೋಜನೆ..!

ಒಂದೇ ತಿಂಗಳಲ್ಲಿ 3 ಯೋಜನೆ..!

ಮಂಗಳ ಗ್ರಹ ಈಗ ಅದೆಷ್ಟು ಫೇಮಸ್ ಎಂದರೆ, ಫೆಬ್ರವರಿ ಒಂದೇ ತಿಂಗಳಲ್ಲಿ ಮಂಗಳನಿಗೆ ಸಂಬಂಧಪಟ್ಟ ಒಟ್ಟು 3 ಯೋಜನೆಗಳು ಅಂತಿಮ ಹಂತ ತಲುಪಿದ್ದವು. ಈ ಪೈಕಿ ಯುಎಇ ನಿರ್ಮಿತ ಬಾಹ್ಯಾಕಾಶ ನೌಕೆ ‘ಹೋಪ್', ಚೀನಾದ ನೌಕೆ ‘ಟಿಯಾನ್ವೆನ್-1', ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಉಡಾಯಿಸಿದ್ದ ‘ಪೆರ್‌ಸೆವೆರನ್ಸ್' ತಮ್ಮ ಗುರಿ ತಲುಪಲು ಯಶಸ್ವಿಯಾಗಿದ್ದವು. ಇದೀಗ ಈ ಎಲ್ಲಾ ಬಾಹ್ಯಾಕಾಶ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯದಿಂದ ಮಹತ್ವದ ಸಂಶೋಧನೆಗೆ ನಾಂದಿ ಹಾಡಿದಂತಾಗಿದೆ. ಮಾನವನಿಗಾಗಿ ನಡೆಯುತ್ತಿರುವ ಈ ಅಧ್ಯಯನಗಳು ಭವಿಷ್ಯದ ಬಗ್ಗೆ ಭರವಸೆ ಸೃಷ್ಟಿಸಿವೆ.

ಮಂಗಳನ ಮಣ್ಣೇ ಟಾರ್ಗೆಟ್..!

ಮಂಗಳನ ಮಣ್ಣೇ ಟಾರ್ಗೆಟ್..!

ಭೂಮಿ ಬಿಟ್ಟು ಬೇರೆ ಎಲ್ಲೆಲ್ಲಿ ಜೀವಿಗಳು ಬದುಕಿವೆ ಎಂಬ ಪ್ರಶ್ನೆ ವಿಜ್ಞಾನ ಲೋಕವನ್ನು ಶತ ಶತಮಾನಗಳಿಂದ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಹಲವು ಪ್ರಶ್ನೆಗಳೇ ಎದುರಾಗಿವೇ ಹೊರತು, ಉತ್ತರ ಮಾತ್ರ ಸಿಕ್ಕಿಲ್ಲ. ಇಷ್ಟಾದರೂ ಮಾನವ ತನ್ನ ಬಾಹ್ಯಾಕಾಶ ಅನ್ವೇಷಣೆ ಕೈಬಿಡುತ್ತಿಲ್ಲ. ಮರಳಿ, ಮರಳಿ ಯತ್ನ ಮಾಡುತ್ತಿದ್ದಾನೆ. ಮುಖ್ಯವಾಗಿ ಭೂಮಿಗೆ ಹತ್ತಿರದಲ್ಲೇ ಇರುವ, ಭೂಮಿ ಜೊತೆಗೆ ಸಾಕಷ್ಟು ಹೋಲಿಕೆ ಇರುವ ಮಂಗಳ ಗ್ರಹ ಪ್ರತಿಯೊಂದು ದೇಶದ ಟಾರ್ಗೆಟ್. ಇದಕ್ಕಾಗಿ ಬಲಾಢ್ಯ ರಾಷ್ಟ್ರಗಳ ಜೇಬಿನಿಂದ ಲಕ್ಷ ಲಕ್ಷ ಕೋಟಿ ಖರ್ಚಾಗಿ ಹೋಗಿದೆ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಮಂಗಳ ಗ್ರಹದ ಮಣ್ಣು ಚಿನ್ನಕ್ಕಿಂತಲೂ ಮೌಲ್ಯಯುತವಾಗಿದೆ.

 200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, ‘ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. ‘ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ ‘ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

English summary
NASA exchanged their data of current ‘Mars’ mission with India, China, UAE and the European Space Agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X