ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ಚಂದ್ರನ ಧೂಳು ಮತ್ತು ಜಿರಳೆಗಳನ್ನು ನಮಗೆ ಮರಳಿ ಕೊಡಿ': ನಾಸಾ ಹೀಗೆ ಹೇಳಿದ್ದೇಕೆ

|
Google Oneindia Kannada News

1969 ರ ಅಪೊಲೊ 11 ಮಿಷನ್ ಸಮಯದಲ್ಲಿ ಸಂಗ್ರಹಿಸಿದ ಚಂದ್ರನ ಧೂಳು ಮತ್ತು ಧೂಳುಗಳನ್ನು ತಿಂದು ಸತ್ತ ಜಿರಳೆಗಳನ್ನು ಆರ್ ಆರ್ (RR) ಎನ್ನುವ ಹರಾಜು ಕಂಪನಿ ಮಾರಾಟ ಮಾಡಲು ನಿರ್ಧರಿಸಿತ್ತು. ಈ ವಸ್ತುಗಳ ಮೇಳೆ ನಾಸಾ (NASA) ಹಕ್ಕು ಹೊಂದಿದ್ದು, ವಾಪಸ್ ಮಾಡುವಂತೆ ಹೇಳಿದೆ.

ನಾಸಾ (NASA) ತನಗೆ ಸೇರಿದ ಚಂದ್ರನ ಧೂಳು ಮತ್ತು ಜಿರಳೆಗಳನ್ನು ವಾಪಸ್ ಬೇಕೆಂದು ಹೇಳಿದೆ ಮತ್ತು ಖಾಸಗಿ ಸಂಗ್ರಹಕಾರರಿಗೆ ಚಂದ್ರನ ಧೂಳಿನ ಯಾವುದೇ ಮಾದರಿಗಳ ಮಾರಾಟವನ್ನು ನಿಲ್ಲಿಸಲು ಆರ್ ಆರ್ (RR) ಹರಾಜು ಸಂಸ್ಥೆಗೆ ಹೇಳಿದೆ.

1969 ರ ಅಪೊಲೊ 11 ಮಿಷನ್ ಸಮಯದಲ್ಲಿ ಸಂಗ್ರಹಿಸಿದ ಚಂದ್ರನ ಧೂಳನ್ನು ಜಿರಳೆಗಳಿಗೆ ಆಹಾರವಾಗಿ ನೀಡಲಾಗಿತ್ತು. ಚಂದ್ರನ ದೂಳು ಭೂಮಿಯ ಮೇಲಿನ ಜೀವಕ್ಕೆ ಅಪಾಯವನ್ನುಂಟು ಮಾಡುವ ಯಾವುದೇ ಭೂಮ್ಯತೀತ ರೋಗಕಾರಕವನ್ನು ಹೊಂದಿದೆಯೇ ಎಂದು ಕಂಡುಹಿಡಿಯುವ ಪ್ರಯೋಗದ ಭಾಗವಾಗಿ ಇದನ್ನು ಮಾಡಲಾಗಿತ್ತು.

ಸ್ಟ್ರಾಬೆರಿ ಮೂನ್: ಜೂನ್ 14 ರಂದು ಸೂಪರ್‌ಮೂನ್ ಯಾವಾಗ? ಎಲ್ಲಿ ವೀಕ್ಷಿಸಬೇಕು?ಸ್ಟ್ರಾಬೆರಿ ಮೂನ್: ಜೂನ್ 14 ರಂದು ಸೂಪರ್‌ಮೂನ್ ಯಾವಾಗ? ಎಲ್ಲಿ ವೀಕ್ಷಿಸಬೇಕು?

ಜೂನ್ 15 ರಂದು ಬೋಸ್ಟನ್ ಮೂಲದ ಹರಾಜುದಾರರಿಗೆ ಬರೆದ ಪತ್ರದಲ್ಲಿ ವಸ್ತುವು ಇನ್ನೂ ಫೆಡರಲ್ ಸರ್ಕಾರದ ಆಸ್ತಿಯಾಗಿದೆ ಎಂದು ನಾಸಾ ಹೇಳಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಹರಾಜು ಮಾಡಲು ಅನುಮತಿ ಇಲ್ಲ

ಹರಾಜು ಮಾಡಲು ಅನುಮತಿ ಇಲ್ಲ

"ಈ ವಸ್ತುಗಳ ಸಂಗ್ರಹಣೆಯಲ್ಲಿ ಸೂಚಿಸಿದಂತೆ ಎಲ್ಲಾ ಅಪೊಲೊ ಮಾದರಿಗಳು ನಾಸಾಗೆ ಸೇರಿವೆ ಮತ್ತು ಯಾವುದೇ ವ್ಯಕ್ತಿ, ವಿಶ್ವವಿದ್ಯಾನಿಲಯ ಅಥವಾ ಇತರ ಘಟಕಗಳಿಗೆ ವಿಶ್ಲೇಷಣೆ, ವಿನಾಶ, ಅಥವಾ ಯಾವುದೇ ಉದ್ದೇಶಕ್ಕಾಗಿ, ವಿಶೇಷವಾಗಿ ಮಾರಾಟ ಅಥವಾ ವೈಯಕ್ತಿಕ ಬಳಕೆಗಾಗಿ ಅವುಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗಿಲ್ಲ," ಎಂದು ಬಾಹ್ಯಾಕಾಶ ಸಂಸ್ಥೆ ಬರೆದಿದೆ.

"ಹರಾಜು ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವ ಮೂಲಕ ನೀವು ಇನ್ನು ಮುಂದೆ ಅಪೊಲೊ 11 ಚಂದ್ರನ ಮಣ್ಣಿನ ಪ್ರಯೋಗವನ್ನು (ಜಿರಳೆಗಳು, ಸ್ಲೈಡ್‌ಗಳು ಮತ್ತು ಪರೀಕ್ಷೆಯ ಮಾದರಿ) ಹೊಂದಿರುವ ಯಾವುದೇ ಮತ್ತು ಎಲ್ಲಾ ವಸ್ತುಗಳ ಮಾರಾಟ ಮಾಡದಂತೆ ನಾವು ವಿನಂತಿಸುತ್ತಿದ್ದೇವೆ," ಎಂದು ಹೇಳಿದೆ.

ಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿ

ಹರಾಜಿನಿಂದ ಕೋಟಿಗಟ್ಟಲೆ ಹಣ ಬರುವ ನಿರೀಕ್ಷೆ

ಹರಾಜಿನಿಂದ ಕೋಟಿಗಟ್ಟಲೆ ಹಣ ಬರುವ ನಿರೀಕ್ಷೆ

ಸುಮಾರು 40 ಮಿಲಿಗ್ರಾಂ ಚಂದ್ರನ ಧೂಳು ಮತ್ತು ಮೂರು ಜಿರಳೆ ಮೃತದೇಹಗಳನ್ನು ಒಳಗೊಂಡಿರುವ ಒಂದು ಸೀಸೆಯು ಹರಾಜಿನಲ್ಲಿ ಕನಿಷ್ಠ 400,000 ಡಾಲರ್ (3.1 ಕೋಟಿ ಭಾರತೀಯ ರುಪಾಯಿ) ಪಡೆಯುವ ನಿರೀಕ್ಷೆಯಿತ್ತು. ಆದರೆ ನಾಸಾ ಪತ್ರದ ಬಳಿಕ ಹರಾಜು ಪ್ರಕ್ರಿಯೆಯಿಂದ ಇದನ್ನು ಹೊರಗಿಡಲಾಗಿದೆ ಎಂದು ಆರ್ ಆರ್ ಹರಾಜು ಸಂಸ್ಥೆ ತಿಳಿಸಿದೆ.

ಚಂದ್ರನ ಧೂಳಿನಲ್ಲಿ ವಿಷಕಾರಿ ಅಂಶಗಳಿಲ್ಲ

ಚಂದ್ರನ ಧೂಳಿನಲ್ಲಿ ವಿಷಕಾರಿ ಅಂಶಗಳಿಲ್ಲ

ಅಧ್ಯಯನ ಮಾಡಲು ಮಿನ್ನೇಸೋಟ ವಿಶ್ವವಿದ್ಯಾನಿಯಲಕ್ಕೆ ನಾಸಾ ಚಂದ್ರನ ಧೂಳನ್ನು ನೀಡಿತ್ತು. ಚಂದ್ರನ ಧೂಳನ್ನು ತಿನ್ನಿಸಿದ ಜಿರಳೆಗಳನ್ನು ಮಿನ್ನೇಸೋಟ ವಿಶ್ವವಿದ್ಯಾನಿಲಯದಲ್ಲಿ ದಿವಂಗತ ಕೀಟಶಾಸ್ತ್ರಜ್ಞ ಮರಿಯನ್ ಬ್ರೂಕ್ಸ್ ಅಧ್ಯಯನ ಮಾಡಿದ್ದರು.

ಅಕ್ಟೋಬರ್ 1969 ರಲ್ಲಿ ಸ್ಥಳೀಯ ಪತ್ರಿಕೆಯೊಂದಿಗೆ ಮಾತನಾ ಹೇಳಿಕೆ ನೀಡಿದ್ದ ಬ್ರೂಕ್ಸ್ ಸಾಂಕ್ರಾಮಿಕ ರೋಗ ಹರಡುವ ಯಾವುದೇ ವೈರಾಣುಗಳ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದರು. ಚಂದ್ರನ ಬಂಡೆಯು ವಿಷಕಾರಿಯಲ್ಲ ಅಥವಾ ಅದರ ಸೇವನೆಯಿಂದ ಜಿರಳೆಗಳ ಮೇಲೆ ದುಷ್ಪರಿಣಾಮ ಉಂಟಾಗಿಲ್ಲ ಎಂದು ಹೇಳಿದ್ದರು.

ಬ್ರೂಕ್ಸ್ ಮನೆಯಲ್ಲಿ ಉಳಿದ ಧೂಳು ಮತ್ತು ಜಿರಳೆ

ಬ್ರೂಕ್ಸ್ ಮನೆಯಲ್ಲಿ ಉಳಿದ ಧೂಳು ಮತ್ತು ಜಿರಳೆ

ಪ್ರಯೋಗದ ಮುಕ್ತಾಯದ ನಂತರವೂ, ಚಂದ್ರನ ಧೂಳು ಮತ್ತು ಜಿರಳೆಗಳನ್ನು ವಿಶ್ವವಿದ್ಯಾಲಯವು ನಾಸಾಗೆ ಹಿಂತಿರುಗಿಸಿಲ್ಲ. ಬದಲಾಗಿ, ಬ್ರೂಕ್ಸ್ ಮನೆಯಲ್ಲಿ ಇವುಗಳನ್ನು ಇಟ್ಟುಕೊಳ್ಳಲಾಯಿತು. 2010 ರಲ್ಲಿ ಅವರ ಮಗಳು ಇವುಗಳನ್ನು ಆರ್ ಆರ್ ಹರಾಜು ಸಂಸ್ಥೆಗೆ ಮಾರಾಟ ಮಾಡಿದ್ದರು.

ಅವುಗಳನ್ನು ಈಗ ಹರಾಜಿಗಿಡಲು ಆರ್ ಆರ್ ಹರಾಜು ಸಂಸ್ಥೆ ನಿರ್ಧರಿಸಿತ್ತು. ನಾಸಾ ಬರೆದ ಪತ್ರದಿಂದ ಹರಾಜು ಪ್ರಕ್ರಿಯೆಗೆ ತಡೆ ಬಿದ್ದಿದೆ.

English summary
NASA wants their Moon dust and cockroaches back and has asked RR Auction to stop the sale of any samples of lunar dust to private collectors. Moondust was collected during the 1969 Apollo 11 Mission and cockroaches were subjected to the material.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X