• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಪರ ಅಲೆ ಇರುವ ಚುನಾವಣೆ ಇದು : ರಾಜೀವ್ ಚಂದ್ರಶೇಖರ್

|

ಲೋಕಸಭೆ ಚುನಾವಣೆಯ ಒಂದನೇ ಹಂತ ಮುಗಿದು ಎರಡನೇ ಹಂತದ ಮತದಾನಕ್ಕೆ ಅಣಿಯಾಗಿದೆ. ಇದೇ ಎರಡನೇ ಹಂತದಲ್ಲಿ ಕರ್ನಾಟಕ ಕೂಡ, ಐದು ವರ್ಷಕ್ಕೊಮ್ಮೆ ಬರುವ ಈ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗಿಯಾಗುತ್ತಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಉಳಿದ 14 ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ರಾಜ್ಯದ ಜನರು ಕೂಡ ಸೂಕ್ತವಾದ ಅಭ್ಯರ್ಥಿಯನ್ನು ಮಾತ್ರವಲ್ಲ ದೇಶಕ್ಕೆ ಉತ್ತಮ ನಾಯಕನನ್ನು ಆರಿಸಲು ಉತ್ಸುಕರಾಗಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು

ಅನುಮಾನವೇ ಇಲ್ಲ. ಈ ಚುನಾವಣೆ ನಡೆಯುತ್ತಿರುವುದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ. ನಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕಾಗಿರುವುದು ಮಾತ್ರವಲ್ಲ, ದೇಶ ಕೂಡ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಿದ್ದರೆ ಉತ್ತಮ ಪ್ರಧಾನಿಯ ಆಯ್ಕೆಯೂ ಆಗಬೇಕಿದೆ.

ಈ ಸಂದರ್ಭದಲ್ಲಿ ಸಂಸತ್ ಸದಸ್ಯರು ಮತ್ತು ಕರ್ನಾಟಕ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕರಾಗಿರುವ ರಾಜೀವ್ ಚಂದ್ರಶೇಖರ್ ಅವರು ಒನ್ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದು, ಬಿಜೆಪಿಯ ಪ್ರಣಾಳಿಕೆ, ಮೈತ್ರಿಕೂಟ, ಧಾರ್ಮಿಕ ಹೋರಾಟ, ರಫೇಲ್ ಡೀಲ್ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ಲೋಕಸಭೆ ಚುನಾವಣೆಯಲ್ಲಿ ಕೂಡ ನರೇಂದ್ರ ಮೋದಿ ಪರ ಅಲೆ ಅತ್ಯಂತ ಬಲವಾಗಿದೆ. ಈ ಚುನಾವಣೆಯಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಭೇರಿ ಬಾರಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ. ಅದರ ಸಾರಾಂಶ ಇಲ್ಲಿದೆ.

'ಭರವಸೆ ಪೂರೈಸದ ಕಾಂಗ್ರೆಸ್ ಪ್ರಣಾಳಿಕೆ ಏಕೆ ಬಿಡುಗಡೆ ಮಾಡುತ್ತದೆ?'

ಪ್ರಶ್ನೆ : ನ್ಯಾಯ್ ಯೋಜನೆಯೂ ಬದಲಾವಣೆ ತರಲಿದೆ ಎಂದು ನೀವು ಭಾವಿಸುತ್ತೀರಾ?

ರಾಜೀವ್ ಚಂದ್ರಶೇಖರ್ : ನ್ಯಾಯ್ ನಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಸತ್ಯ ಏನೆಂದರೆ ಕಳೆದ 65 ವರ್ಷಗಳಲ್ಲಿ ಬಡತನವನ್ನು ನಿಭಾಯಿಸುವಲ್ಲಿ ಕಾಂಗ್ರೆಸ್ ದಾರುಣವಾಗಿ ವಿಫಲವಾಗಿದೆ ಎಂಬುದನ್ನು ಇದು ಮತದಾರರಿಗೆ ನೆನಪಿಸುತ್ತದೆ. ಸ್ವತಃ ತಾನು ಜೀವನದಲ್ಲಿ ಎಂದಿಗೂ ಕೆಲಸ ಮಾಡದ ಕಾಂಗ್ರೆಸ್ ನಾಯಕ ಪ್ರತಿ ನಾಗರಿಕರ ಖಾತೆಗೆ 15 ಲಕ್ಷಗಳ ಜಮೆ ಮಾಡಲಾಗುತ್ತದೆ ಎಂಬ ಕಪಟ ಹೇಳಿಕೆಯಿಂದ ನ್ಯಾಯ್ ಸ್ಪೂರ್ತಿ ಪಡೆದಿದೆ ನಿನ್ನೆ ಸ್ವತಃ ಒಪ್ಪಿಕೊಂಡಿದ್ದಾರೆ. 2009ರಿಂದ 2014ರವರೆಗೂ ದೇಶ ಆರ್ಥಿಕತೆಯು ಕಾಂಗ್ರೆಸ್ ನ ದುಂಡು ವೆಚ್ಚದ ಮೂಲಕ ಹೇಗೆ ನಾಶಗೊಂಡಿತು ಮತ್ತು ಮಧ್ಯಮ ವರ್ಗ ಮತ್ತು ಬಡವರಿಗೆ ಎಷ್ಟು ಸಂಕಷ್ಟ ಒದಗಿತು ಎಂಬ ಅನುಭವ ದೇಶಕ್ಕಿದೆ.

ಪ್ರಶ್ನೆ : ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಮತ್ತು ಆರ್ಥಿಕತೆಗೆ ಸಾಕಷ್ಟು ಮಹತ್ವ ನೀಡಿದೆಯೇ?

ರಾಜೀವ್ ಚಂದ್ರಶೇಖರ್ : ಹೌದು. ಬಡವರು ಮತ್ತು ರೈತರು ತಮ್ಮ ಜೀವನದಲ್ಲಿ ಶಾಶ್ವತವಾಗಿ ಮತ್ತು ಸುಸ್ಥಿರವಾಗಿ ಬದಲಾವಣೆ ತಂದುಕೊಳ್ಳುತ್ತಿದ್ದು ಇದು ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ.

ಸ್ಮಾರ್ಟ್‌ಸಿಟಿ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ರಾಜೀವ್ ತಿರುಗೇಟು

ಪ್ರಶ್ನೆ : ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಮೈತ್ರಿ ಬಿಜೆಪಿಗೆ ಅಡ್ಡಿ ಉಂಟು ಮಾಡುವುದೇ?

ರಾಜೀವ್ ಚಂದ್ರಶೇಖರ್ : ಎರಡು ಋಣಾತ್ಮಕ ಸಂಗತಿಗಳು ಸೇರಿ ಒಂದು ಸಕಾರಾತ್ಮಕ ಅಂಶವಾಗುವುದಿಲ್ಲ. ಈ ಎರಡೂ ಪಕ್ಷಗಳು 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೋಚನೀಯವಾಗಿ ಜನರಿಂದ ತಿರಸ್ಕರಿಸಲ್ಪಟ್ಟಿದ್ದವು. ಲೂಟಿ ಮಾಡುವುದು ಮತ್ತು ಅಧಿಕಾರಕ್ಕೆ ಜೋತು ಬೀಳುವುದು ಎಂಬ ಈ ಪಕ್ಷಗಳ ಸಮಾನ ಆಶಯದಿಂದ ಮಾತ್ರ ಅವುಗಳು ಜೊತೆಗಿವೆ. ಜನರನ್ನು ಶೋಷಿಸಲು ವಂಶ ಪಾರಂಪರ್ಯದ ಸಮಾನ ಡಿಎನ್ಎ ಅನ್ನು ಕಾಂಗ್ರೆಸ್ - ಜೆಡಿಎಸ್ ಹಂಚಿಕೊಂಡಿದೆ.

ಪ್ರಶ್ನೆ : ಬೆಂಗಳೂರಿನ ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಬದಲಿಗೆ ಬಿಜೆಪಿಯು ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬೇಕಿತ್ತೇ?

ರಾಜೀವ್ ಚಂದ್ರಶೇಖರ್ : ಬಿಜೆಪಿ ಹಲವು ಶ್ರೇಷ್ಠ ನಾಯಕರನ್ನು ಹೊಂದಿದೆ - ಈಗಾಗಲೇ ನಾಯಕರಾಗಿ ರೂಪುಗೊಂಡಿರುವ ಮತ್ತು ಉದಯೋನ್ಮುಖ ನಾಯಕರು ಬಿಜೆಪಿಯಲ್ಲಿದ್ದಾರೆ. ಇದು ನಾಯಕರು ಮತ್ತು ಕಾರ್ಯಕರ್ತರಿಗೆ ಸಮಸ್ಯೆ ಅಲ್ಲ. ತೇಜಸ್ವಿನಿ ಅನಂತ್ ಕುಮಾರ್ ಅತ್ಯಂತ ಗೌರವಾನ್ವಿತ ಮತ್ತು ಹೆಚ್ಚು ಮೆಚ್ಚುಗೆ ಪಡೆದ ನಾಯಕರಾಗಿದ್ದಾರೆ. ತೇಜಸ್ವಿ ಯುವಕರಾಗಿದ್ದು, ಉದಯೋನ್ಮಕ ಕಾರ್ಯಕರ್ತರಾಗಿದ್ದಾರೆ. ತೇಜಸ್ವಿ ಅಭ್ಯರ್ಥಿ ಎಂದು ಪಕ್ಷ ನಿರ್ಧರಿಸಿದೆ ಮತ್ತು ಬಿಜೆಪಿಯ ಎಲ್ಲರೂ ಇದನ್ನು ಬೆಂಬಲಿಸಿದ್ದಾರೆ.

ಪ್ರಶ್ನೆ : ಕರ್ನಾಟಕದಲ್ಲಿ ಬಿಜೆಪಿಯನ್ನೂ ಇನ್ನೂ ಲಿಂಗಾಯತರು ಬೆಂಬಲಿಸುತ್ತಾ ಇದ್ದಾರಾ? ಕರ್ನಾಟಕದ ಬಿಜೆಪಿಯಲ್ಲಿ ಒಳ್ಳೆಯ ನಾಯಕರಿಲ್ಲ ಎಂದು ಜನರಲ್ಲಿ ಅಭಿಪ್ರಾಯವಿದೆ. ಮೋದಿಗಾಗಿ ನಾವು ಮತ ಚಲಾಯಿಸುತ್ತೇವೆ ಎಂದು ಕೆಲವರು ಹೇಳುತ್ತಾರೆ. ನಾವು ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ / ಜೆಡಿಎಸ್ ಗೆ ಮತ ಚಲಾಯಿಸುತ್ತೇವೆ ಎಂದು ಕೆಲವರು ಹೇಳುತ್ತಾರೆ. ಈ ಅಸಮಾಧಾನ ಏಕೆ?

ರಾಜೀವ್ ಚಂದ್ರಶೇಖರ್ : ಪ್ರತಿಯೊಬ್ಬ ಕನ್ನಡಿಗ - ಲಿಂಗಾಯತ, ಒಕ್ಕಲಿಗ, ಕುರುಬ, ಒಬಿಸಿ, ಎಸ್ಸಿ, ಎಸ್ಟಿ, ಬ್ರಾಹ್ಮಣ, ಉತ್ತರ ಭಾರತೀಯ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಭಾರತ ಮತ್ತು ಕರ್ನಾಟಕಕ್ಕೆ ಉಜ್ವಲ ಭವಿಷ್ಯ ಬೇಕು ಎಂದು ಕಾಳಜಿ ವಹಿಸುವ ವ್ಯಕ್ತಿ, ಆತನ ಕುಟುಂಬ ಮತ್ತು ಸಮುದಾಯ ಪ್ರಧಾನಿಯಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಂತಿದೆ. ಮುಂದಿನ ಐದು ವರ್ಷಗಳ ಕಾಲ ಭಾರತದ ಪ್ರಧಾನಿ ಯಾರು ಎಂದು ಈ ಚುನಾವಣೆ ನಿರ್ಧರಿಸುತ್ತದೆ. ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ / ಜೆಡಿ(ಎಸ್) ಸರ್ಕಾರದ ಸ್ಥಿತಿ ಚಿಂತಾಜನಕವಾಗಿದ್ದು ಈ ಸರ್ಕಾರ ಕೊನೆಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಮಾತ್ರ ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಹುದು.

ಪ್ರಶ್ನೆ : ಬಿಜೆಪಿ ಪ್ರಮುಖ ಘೋಷಣೆ ರಾಷ್ಟ್ರೀಯ ಭದ್ರತೆಯಾಗಿದೆ. ಇದು ಚುನಾವಣೆಯಲ್ಲಿ ಕೆಲಸ ಮಾಡುತ್ತದೆಯೇ?

ರಾಜೀವ್ ಚಂದ್ರಶೇಖರ್ : ಭಾರತದ ಅಭಿವೃದ್ಧಿ ಬಿಜೆಪಿಯ ಪ್ರಮುಖ ಆದ್ಯತೆಯಾಗಿದೆ. ಬಡವರು ಮತ್ತು ರೈತರಿಗೆ ಘನತೆ ಮತ್ತು ಸಮೃದ್ಧಿಯ ಜೀವನದ ಅವಕಾಶವನ್ನು ಖಾತ್ರಿ ಮಾಡುವುದು ಮತ್ತು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಪ್ರಬಲವಾದ ಸುರಕ್ಷಿತ ಭಾರತವಾಗಿದ್ದರೆ ಮತ್ತು ನಮ್ಮನ್ನು ಭಯಪಡಿಸಲು ಯತ್ನಿಸುವವರನ್ನು ಶಿಕ್ಷಿಸುವ ರಾಷ್ಟ್ರೀಯ ಭದ್ರತಾ ಸಿದ್ಧಾಂತವು ನಮ್ಮದಾಗಿದ್ದರೆ ಮಾತ್ರ ಸಮೃದ್ಧ ಮತ್ತು ಬಲಿಷ್ಠ ಭಾರತವಾಗಲು ಸಾಧ್ಯ. ನರೇಂದ್ರ ಮೋದಿ ಅವರು ಮಾತ್ರ ಇಂಥಹ ರಾಜಕೀಯ ನಾಯಕತ್ವವನ್ನು ನೀಡಿದ್ದಾರೆ.

ಪ್ರಶ್ನೆ : ಬಿಜೆಪಿ ಭಾರತೀಯ ಸೈನ್ಯವನ್ನು ರಾಜಕೀಯಗೊಳಿಸಿದೆ ಎಂಬ ಆರೋಪವನ್ನು ನೀವು ಒಪ್ಪಿಕೊಳ್ಳುತ್ತೀರಾ?

ರಾಜೀವ್ ಚಂದ್ರಶೇಖರ್ : ಭಾರತೀಯ ಸೇನೆಯು ರಾಜಕೀಯವನ್ನು ಮಾಡುವುದಿಲ್ಲ, ರಾಜಕೀಯಗೊಳಿಸಲು ಆಗುವುದಿಲ್ಲ. ಭಾರತೀಯ ಸೈನಿಕರು ಧೀರರಾಗಿದ್ದು ಅವರ ಹೃದಯವು ಎಲ್ಲ ಭಾರತೀಯರಿಗಾಗಿ ಮಿಡಿಯುತ್ತದೆ. ಅವರು ರಾಷ್ಟ್ರದ ಸೇವೆ ಸಲ್ಲಿಸುತ್ತಾರೆಯೇ ಹೊರತು ಯಾವುದೇ ಪಕ್ಷದ ಸೇವೆ ಮಾಡುವುದಿಲ್ಲ.

ಪ್ರಶ್ನೆ : ನೋಟಾ ದೊಡ್ಡ ಆತಂಕ ಎಂಬ ಅಭಿಪ್ರಾಯವಿದೆ. ಇದನ್ನು ನೀವು ಹೇಗೆ ನೋಡುತ್ತೀರಿ?

ರಾಜೀವ್ ಚಂದ್ರಶೇಖರ್ : ಅದು ಆ ರೀತಿ ಇರಬಾರದು. ಮತದಾರರು ಕಳೆದ ಐದು ವರ್ಷಗಳಲ್ಲಿ ಸಾಧಿಸಿ ಪ್ರಗತಿ ಮುಂದಿನ 5 ವರ್ಷಗಳ ಕಾಲ ಮುಂದುವರಿಸಲು ಬೆಂಬಲ ನೀಡಬೇಕು ಅಥವಾ ಕಾಂಗ್ರೆಸ್ ನ ಭ್ರಷ್ಟ, ಕತ್ತಲೆಯ ದಿನಗಳಿಗೆ ಹಿಂತಿರುಗಬೇಕಾಗುತ್ತದೆ.

ಪ್ರಶ್ನೆ : ರಫೆಲ್ ನಲ್ಲಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಮಾಡಿದೆ. ಈ ಆರೋಪಗಳು ಕಾಂಗ್ರೆಸ್ ಗೆ ಲಾಭ ತರಲಿದೆಯೇ, ಬಿಜೆಪಿಗೆ ಘಾಸಿಯುಂಟು ಮಾಡಬಹುದೇ?

b ನಾನು ಆಗಲೇ ಹೇಳಿದಂತೆ, ರಫೆಲ್ ಎಂಬುದು ರಾಹುಲ್ ಅವರ ಇನ್ನೊಂದು ಲಜ್ಜೆಗೆಟ್ಟ ಸುಳ್ಳು.

ಪ್ರಶ್ನೆ : ಬಿಜೆಪಿಯು ಕೇರಳದಲ್ಲಿ ವೇಗ ಸಾಧಿಸಿದೆಯಾ? ಎಷ್ಟು ಸ್ಥಾನಗಳನ್ನು ಬಿಜೆಪಿ ಗಳಿಸಬಹುದು?

ರಾಜೀವ್ ಚಂದ್ರಶೇಖರ್ : ಹೌದು ಬಿಜೆಪಿ ಕೇರಳದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದೆ. ನಾನು 2016ರಲ್ಲಿ ಭವಿಷ್ಯ ನುಡಿದಂತೆ - ಕೇರಳದಲ್ಲಿ ಎಡಪಂಥೀಯ ವಿಚಾರಧಾರೆ ಕೊನೆಯ ದಿನಗಳನ್ನು ಎಣಿಸುತ್ತಿದ್ದು ಈ ಚುನಾವಣೆಯಲ್ಲಿ ಅವರು ಕೊಚ್ಚಿ ಹೋಗುವುದು ಖಚಿತ. ಈ ಚುನಾವಣೆಗಳ ನಂತರ ಸಿಪಿಎಂನ ರಾಷ್ಟ್ರೀಯ ಪಕ್ಷದ ಮಾನ್ಯತೆ ಕೊನೆಗೊಳ್ಳಬಹುದು. ಕೇರಳ ರಾಜಕೀಯ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ನಡುವಿನ ಹೋರಾಟವಾಗಲಿದೆ.

ಪ್ರಶ್ನೆ : ಮತದಾನ ದಿನದಂದು ಹೆಚ್ಚು ಹೆಚ್ಚು ನಗರ ಮತದಾರರನ್ನು ಮತದಾನ ಮಾಡಲು ಪ್ರೇರೇಪಿಸಲು ನೀವು ಯಾವ ಯೋಜನೆಗಳನ್ನು ಹೊಂದಿದ್ದೀರಿ, ಬೆಂಗಳೂರಿನಲ್ಲಿ ಮತದಾನ ಶೇಕಡಾವಾರು ಯಾವಾಗಲೂ ಕಡಿಮೆಯಾಗಿರುತ್ತದೆ?

ರಾಜೀವ್ ಚಂದ್ರಶೇಖರ್ : ಗ್ರಾಮೀಣ ಮತದಾರರಿಗಿಂತ ನಗರವಾಸಿಗಳು ಕಡಿಮೆ ಮತದಾನ ಮಾಡುತ್ತಿದ್ದಾರೆ ಎಂಬುದು ದುಃಖದ ವಿಷಯ. ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಪ್ರಮುಖ ಕಾರಣವೆನೆಂದರೆ, ಕಾಂಗ್ರೆಸ್ ಸರ್ಕಾರ ಮತ್ತು ಬಿಬಿಎಂಪಿ ಮತದಾರರ ಪಟ್ಟಿಯಲ್ಲಿ ಆಟ ಆಡುತ್ತಿದ್ದು ಅನೇಕ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುತ್ತದೆ ಅಥವಾ ರದ್ದಾಗಿರುತ್ತದೆ. ಈ ಬಾರಿ ನಾನು ಈ ಬಗ್ಗೆ ಗಮನಹರಿಸುತ್ತೇನೆ.

ಪ್ರಶ್ನೆ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿ ಹೃದಯ ಭಾಗದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ಹಿನ್ನಡೆ ಅಡ್ಡಿಯಾಗುವುದೇ?

ರಾಜೀವ್ ಚಂದ್ರಶೇಖರ್ : ನಾನು ಈಗಾಗಲೇ ಹೇಳಿದಂತೆ - ಈ ಮತದಾನವು ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸುವ ಚುನಾವಣೆ ಎಂಬುದು ಪ್ರತಿಯೊಬ್ಬ ಮತದಾರನಿಗೂ ಗೊತ್ತಿದೆ. ಭ್ರಷ್ಟಾಚಾರ ಮುಕ್ತ ಮತ್ತು ವಂಶಪಾರಂಪರ್ಯ ಮುಕ್ತ, ಸುರಕ್ಷಿತ, ಅಭಿವೃದ್ಧಿಯತ್ತ ಗಮನ ಕೇಂದ್ರಿಕರಿಸುವ ಆಡಳಿತಕ್ಕೆ ಯಾರು ಸೂಕ್ತ ಎಂದು ಬಹುತೇಕ ಎಲ್ಲ ಸಂಸದರಿಗೆ ಸ್ಪಷ್ಟವಾಗಿ ಅರಿವಿದೆ ಎಂದು ನಾನು ತಿಳಿದಿದ್ದೇನೆ.

ಪ್ರಶ್ನೆ : ಲೋಕಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ಬಿಜೆಪಿಯು ಮತ್ತೊಮ್ಮೆ ಉರುಳಿಸಲು ಪ್ರಯತ್ನಿಸುತ್ತಿದೆ ಎಂಬ ಬಲವಾದ ಭಾವನೆ ಇದೆ. ನೀವು ಯಡಿಯೂರಪ್ಪ ಅವರ ಪ್ರಯತ್ನಗಳ ಪರವಾಗಿದ್ದೀರಾ?

ರಾಜೀವ್ ಚಂದ್ರಶೇಖರ್ : ಈ ಸರ್ಕಾರವನ್ನು ಉರುಳಿಸುವ ಅಗತ್ಯವಿಲ್ಲ. ಇದು ತನ್ನದೇ ಆದ ವಿರೋಧಾಭಾಸ ಮತ್ತು ಭ್ರಷ್ಟಾಚಾರದ ತೂಕದ ಅಡಿಯಲ್ಲಿ ಕುಸಿಯುವ ಒಂದು ಕೃತಕ ಮನೆಯಾಗಿದೆ. ಇದು ಜನಪ್ರಿಯ ಜನಾದೇಶವಿಲ್ಲದ ಸರಕಾರವಾಗಿದ್ದು, ಕೆಲವು ಅವಕಾಶವಾದಿ ಅಂಕಗಣಿತದ ಮತ್ತು ಕುಮಾರಸ್ವಾಮಿ ಮತ್ತು ಅವರ ಕಾಂಗ್ರೆಸ್ ಬೆಂಬಲಿಗರ ಆಟದಿಂದಾಗಿ ರಚಿಸಲ್ಪಟ್ಟಿರುವ ಸರ್ಕಾರವಾಗಿದೆ.

English summary
Narendra Modi still strong in this Lok Sabha Election : Rajeev Chandrasekhar in an interview with Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more