ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್ ಪಾಲಿಸಿ ಜಾರಿಗೆ; ಏನಿದು ಹೊಸ ನೀತಿ?

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17, ಶನಿವಾರದಂದು ಇದೆ. ಕಳೆದ 20 ವರ್ಷಗಳಿಂದ ನಿರಂತರವಾಗಿ ಸಿಎಂ ಮತ್ತು ಪಿಎಂ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರಿಗೆ ಅಂದು 73ನೇ ಜನ್ಮದಿನದ ಸಂಭ್ರಮ. ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿಗೆ ಚಾಲನೆ ಕೊಡುತ್ತಿದ್ದಾರೆ.

ಲಾಜಿಸ್ಟಿಕ್ಸ್ ಎಂದರೆ ಸಾಗಣೆ ಮತ್ತು ಸರಬರಾಜು ವ್ಯವಸ್ಥೆ. ದೇಶಾದ್ಯಂತ ಯಾವುದೇ ಸರಕನ್ನಾದರೂ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಅನುಕೂಲ ಮಾಡಿಕೊಡಲಾಗುವಂತೆ ಲಾಜಿಸ್ಟಿಕ್ಸ್ ನೀತಿ ರೂಪಿಸಲಾಗಿದೆ.

ಹಣದುಬ್ಬರಕ್ಕೆ ಅಮೆರಿಕದ ಸಿರಿವಂತರು ತತ್ತರ; 2ನೇ ಸ್ಥಾನದತ್ತ ಅದಾನಿಹಣದುಬ್ಬರಕ್ಕೆ ಅಮೆರಿಕದ ಸಿರಿವಂತರು ತತ್ತರ; 2ನೇ ಸ್ಥಾನದತ್ತ ಅದಾನಿ

2020ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮೊದಲ ಬಾರಿಗೆ ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ ಬಗ್ಗೆ ಮಾತನಾಡಿದ್ದರು. ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ ಈ ನೀತಿ ಬಗ್ಗೆ ಮಾತನಾಡಿದ್ದು, ಪ್ರೋಸಸ್ ರೀಎಂಜಿನಿಯರಿಂಗ್, ಡಿಜಿಟೈಸೇಶನ್ ಮತ್ತು ಬಹು-ವಿಧದ ಸಾರಿಗೆಯಂತಹ ಕ್ಷೇತ್ರಗಳತ್ತ ಗಮನ ಹರಿಸಲಾಗುತ್ತದೆ ಎಂದಿದ್ದಾರೆ.

ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ ಏನದು, ಯಾಕೆ ಆ ನೀತಿ ಅಗತ್ಯತೆ ಇದೆ ಇತ್ಯಾದಿ ವಿವರ ಇಲ್ಲಿದೆ.

ಏನಿದು ಲಾಜಿಸ್ಟಿಕ್ಸ್ ನೀತಿ?

ಏನಿದು ಲಾಜಿಸ್ಟಿಕ್ಸ್ ನೀತಿ?

ಆಗಲೇ ತಿಳಿಸಿದಂತೆ ಲಾಜಿಸ್ಟಿಕ್ಸ್ ಎಂದರೆ ಸರಕು ಸಾಗಣೆ ಮತ್ತು ಸರಬರಾಜು ವ್ಯವಸ್ಥೆಯಾಗಿದೆ. ಭಾರತದಲ್ಲಿ ಈ ಸರಬರಾಜು ವ್ಯವಸ್ಥೆ ಸರಳವಾಗಿಲ್ಲ, ಹೀಗಾಗಿ ಒಂದು ಉತ್ಪನ್ನ ತನ್ನ ಉದ್ದೇಶಿತ ಸ್ಥಳ ತಲುಪಲು ಬಹಳ ವೆಚ್ಚವಾಗುತ್ತದೆ. ಒಂದು ಅಂದಾಜು ಪ್ರಕಾರ ಭಾರತದಲ್ಲಿ ಶೇ. 13-14ರಷ್ಟು ಜಿಡಿಪಿ ಹಣ ಲಾಜಿಸ್ಟಿಕ್ಸ್‌ಗೆಯೇ ವ್ಯಯವಾಗಿ ಹೋಗುತ್ತದಂತೆ. ಅದೇ ಜರ್ಮನಿ ಮತ್ತು ಜಪಾನ್‌ನಂತ ದೇಶಗಳಲ್ಲಿ ಉತ್ತಮ ಲಾಜಿಸ್ಟಿಕ್ಸ್ ವ್ಯವಸ್ಥೆ ಇದೆ. ಅಲ್ಲಿ ಲಾಜಿಸ್ಟಿಕ್ಸ್‌ಗಾಗಿ ವೆಚ್ಚವಾಗುವುದು ಜಿಡಿಪಿಯ ಶೇ. 8-9 ಮಾತ್ರ.

ಭಾರತದಲ್ಲೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದರೆ, ಅಥವಾ ಬಲಿಷ್ಠಗೊಳಿಸಿದರೆ ಸಾಕಷ್ಟು ಹಣದ ಉಳಿತಾಯ ಮಾಡಬಹುದು.

ಭಾರತದ ಲಾಜಿಸ್ಟಿಕ್ಸ್ ವಲಯ ಬರೋಬ್ಬರಿ 160 ಬಿಲಿಯನ್ ಡಾಲರ್‌ನಷ್ಟು (ಸುಮಾರು 12 ಲಕ್ಷ ಕೋಟಿ ರೂ) ಗಾತ್ರದ ಮಾರುಕಟ್ಟೆ ಹೊಂದಿದೆ. 20ಕ್ಕೂ ಹೆಚ್ಚು ಸರಕಾರಿ ಸಂಸ್ಥೆಗಳು, 40 ಸರಕಾರಿ ಪಾಲುದಾರ ಸಂಸ್ಥೆಗಳು (ಪಿಜಿಎ), 37 ರಫ್ತು ಉತ್ತೇಜಕ ಮಂಡಳಿಗಳು, 500 ಸರ್ಟಿಫಿಕೇಶನ್, 200 ಶಿಪಿಂಗ್ ಏಜೆನ್ಸಿಗಳು, 129 ಇನ್‌ಲ್ಯಾಂಡ್ ಕಂಟೇನರ್ ಡಿಪೋಗಳು, 166 ಕಂಟೇನರ್ ಸಾಗಣೆ ನಿಲ್ದಾಣಗಳು, 50 ಐಟಿ ಇಕೋಸಿಸ್ಟಂ, ಬ್ಯಾಂಕ್ ಮತ್ತು ಇನ್ಷೂರೆನ್ಸ್ ಏಜೆನ್ಸಿಗಳು ಭಾರತದ ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿವೆ.

Narendra Modi Birthday- ಪ್ರಧಾನಿ ಮೋದಿ ಊಟದ ಖರ್ಚು ಎಷ್ಟು, ರಜೆ ತೆಗೆದುಕೊಂಡಿಲ್ಲ ಯಾಕೆ?Narendra Modi Birthday- ಪ್ರಧಾನಿ ಮೋದಿ ಊಟದ ಖರ್ಚು ಎಷ್ಟು, ರಜೆ ತೆಗೆದುಕೊಂಡಿಲ್ಲ ಯಾಕೆ?

ಲಾಜಿಸ್ಟಿಕ್ಸ್ ನೀತಿಯ ಉದ್ದೇಶವೇನು?

ಲಾಜಿಸ್ಟಿಕ್ಸ್ ನೀತಿಯ ಉದ್ದೇಶವೇನು?

ವಿಶ್ವಬ್ಯಾಂಕ್ 2018ರಲ್ಲಿ ಲಾಜಿಸ್ಟಿಕ್ಸ್ ಸೂಚ್ಯಂಕವನ್ನು ಪ್ರಕಟಿಸಿತ್ತು.. ಅದರಲ್ಲಿ ಭಾರತ 44ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಮೊದಲಾದ ದೇಶಗಳಿಗಿಂತ ಭಾರತ ತುಸು ಹೆಚ್ಚೇ ಹಿಂದುಳಿದಿದೆ. ಅಮೆರಿಕ 14, ಚೀನಾ 26ನೇ ಸ್ಥಾನದಲ್ಲಿವೆ. ಇತರ ಸೌಕರ್ಯದಲ್ಲಿ ಬೇರೆ ಈ ದೇಶಗಳಿಗೆ ಹೋಲಿಸಿದರೆ ಭಾರತ ಹಿಂದುಳಿದಿರುವುದನ್ನು ಗಣನೆಗೆ ತೆಗೆದುಕೊಂಡರೆ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಭಾರತ 44ನೇ ಸ್ಥಾನದಲ್ಲಿರುವುದು ಅಚ್ಚರಿ ಅನಿಸುವುದಿಲ್ಲ.

ಸದ್ಯ, ಭಾರತದ ಸರಬರಾಜು ವ್ಯವಸ್ಥೆ ರಸ್ತೆ ಸಾರಿಗೆ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭಾರತದಲ್ಲಿರುವ ಅಗಾಧ ರೈಲು ಮತ್ತು ಬಂದರು ಜಾಲಗಳನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ರಸ್ತೆ, ರೈಲು ಇತ್ಯಾದಿ ಸೌಕರ್ಯ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ವಕ್ಕರಿಸಿದ ಕೋವಿಡ್ ಸಾಂಕ್ರಾಮಿಕ ರೋಗ ನಮ್ಮ ಲಾಜಿಸ್ಟಿಕ್ಸ್ ಕ್ಷೇತ್ರವನ್ನು ಅಲುಗಾಡಿಸಿತು.

ಹೊಸ ನೀತಿಯಿಂದ ಲಾಭವೇನು?

ಹೊಸ ನೀತಿಯಿಂದ ಲಾಭವೇನು?

ವಾಣಿಜ್ಯ ಮತ್ತು ಔದ್ಯಮಿಕ ಸಚಿವ ಪಿಯೂಶ್ ಗೋಯಲ್ ಭಾರತದ ಹೊಸ ಲಾಜಿಸ್ಟಿಕ್ಸ್ ನೀತಿಯಿಂದ ಆಗಬಹುದಾದ ಲಾಭದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಪ್ರಕಾರ 2 ಕೋಟಿಗೂ ಹೆಚ್ಚು ಜನರಿಗೆ ಈ ಕ್ಷೇತ್ರ ಜೀವನ ಕಲ್ಪಿಸಿದೆ. ಹೊಸ ನೀತಿ ಜಾರಿಯಾದರೆ ಪರೋಕ್ಷ ವೆಚ್ಚದಲ್ಲಿ ಶೇ. 10ರಷ್ಟು ಕಡಿಮೆಯಾಗಿ ಆ ಮೂಲಕ ಈ ಕ್ಷೇತ್ರದಲ್ಲಿ ಸುಧಾರಣೆ ಆಗುತ್ತದೆ. ರಫ್ತು ವಲಯ ಶೇ. 5-8ರಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ.

ಹೊಸ ನೀತಿಯ 4 ಅಂಶಗಳು

ಹೊಸ ನೀತಿಯ 4 ಅಂಶಗಳು

ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17ರಂದು ಹೊಸ ಲಾಜಿಸ್ಟಿಕ್ಸ್ ಪಾಲಿಸಿ ಅಡಿಯಲ್ಲಿ ನಾಲ್ಕು ಪ್ರಮುಖ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

1) ಐಡಿಎಸ್: ಡಿಜಿಟಲ್ ಸಿಸ್ಟಂನ ಸಂಯೋಜಿತ ವ್ಯವಸ್ಥೆ ಇದು. ರಸ್ತೆ, ರೈಲು, ಕಸ್ಟಮ್ಸ್, ವೈಮಾನಿಕ, ವಿದೇಶ ವ್ಯಾಪಾರ, ವಾಣಿಜ್ಯ ಸಚಿವಾಲಯ ಸೇರಿದಂತೆ ಏಳು ಬೇರೆ ಬೇರೆ ಇಲಾಖೆಗಳ 30 ಭಿನ್ನ ವ್ಯವಸ್ಥೆಗಳನ್ನು ಏಕೀಕೃತಗೊಳಿಸಲಾಗುತ್ತದೆ. ಅಂದರೆ ಒಂದೇ ಜಾಲದ ಅಡಿಗೆ ತರಲಾಗುತ್ತದೆ. ಈ ಎಳು ಇಲಾಖೆಗಳು ತಮ್ಮದೇ ಸ್ವಂತ ಡಿಜಿಟಲ್ ಡಾಟಾ ಹೊಂದಿರಲಿದ್ದು, ಐಡಿಎಸ್ ಅಡಿಯಲ್ಲಿ ಅವುಗಳ ಸಂಯೋಜನೆ ಆಗಲಿದೆ. ಈ ಐಡಿಎಸ್ ಸಮರ್ಪಕವಾಗಿ ಜಾರಿಯಾದರೆ ಕಡಿಮೆ ದೂರಕ್ಕೆ ಸರಕು ಸಾಗಣೆ ವ್ಯವಸ್ಥೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.

ಯುಲಿಪ್ (ಯುಎಲ್‌ಐಪಿ): ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್‌ಫೇಸ್ ಪ್ಲಾಟ್‌ಫಾರ್ಮ್. ಇದೂ ಕೂಡ ಐಡಿಎಸ್‌ನಂತೆ ಭಿನ್ನ ಭಿನ್ನ ವ್ಯವಸ್ಥೆಗಳ ಏಕೀಕೃತ ವ್ಯವಸ್ಥೆಯಾಗಿರಲಿದೆ.

ಈಸ್ ಆಫ್ ಲಾಜಿಸ್ಟಿಕ್ಸ್: ಸರಬರಾಜು ವ್ಯವಸ್ಥೆಯ ಸರಳೀಕರಣ ಇದು. ಅಂದರೆ ಈ ಕ್ಷೇತ್ರದ ನಿಯಮಗಳನ್ನು ಸರಳೀಕೃತಗೊಳಿಸಲಾಗುವುದು.

ಎಸ್‌ಐಜಿ: ಸಿಸ್ಟಂ ಇಂಪ್ರೂವ್ಮೆಂಟ್ ಗ್ರೂಪ್. ಲಾಜಿಸ್ಟಿಕ್ಸ್ ಸಂಬಂಧಿತ ಪ್ರಾಜೆಕ್ಟ್‌ಗಳನ್ನು ಈ ವ್ಯವಸ್ಥೆ ಅಡಿ ನಿಗಾ ಇಡಲಾಗುತ್ತದೆ. ಏನಾದರೂ ಸಮಸ್ಯೆ ಬಂದರೆ ಅದರ ನಿವಾರಣೆಯ ಹೊಣೆ ಈ ಗುಂಪಿಗೆ ಇರುತ್ತದೆ.

ಲಾಜಿಸ್ಟಿಕ್ಸ್ ಕಂಪನಿಗಳ ಷೇರು ವೃದ್ಧಿ

ಲಾಜಿಸ್ಟಿಕ್ಸ್ ಕಂಪನಿಗಳ ಷೇರು ವೃದ್ಧಿ

ಕೇಂದ್ರ ಸರಕಾರ ಜಾರಿಗೆ ತರಲಿರುವ ಹೊಸ ಲಾಜಿಸ್ಟಿಕ್ಸ್ ನೀತಿ ಈ ಕ್ಷೇತ್ರದ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸೂಚನೆ ದಟ್ಟವಾಗಿ ಸಿಕ್ಕಿದೆ. ಪ್ರಮುಖ ಲಾಜಿಸ್ಟಿಕ್ಸ್ ಕಂಪನಿಗಳಾದ ಟಿಸಿಐ ಎಕ್ಸ್‌ಪ್ರೆಸ್, ಗಟಿ, ಏಜಿಸ್ ಲಾಜಿಸ್ಟಿಕ್ಸ್, ಆಲ್‌ಕಾರ್ಗೋ, ಮಹೀಂದ್ರ ಲಾಜಿಸ್ಟಿಕ್ಸ್ ಮತ್ತು ಸ್ನೋಮ್ಯಾನ್ ಲಾಜಿಸ್ಟಿಕ್ಸ್‌ನ ಷೇರುಗಳ ಮೌಲ್ಯ ಹೆಚ್ಚಾಗಿದೆ.

ಅಂದರೆ ಹೊಸ ಲಾಜಿಸ್ಟಿಕ್ಸ್ ನೀತಿ ಬಗ್ಗೆ ಹೂಡಿಕೆದಾರರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದು, ವಿಶ್ವಾಸ ಹೊಂದಿರುವುದು ಕಾಣುತ್ತದೆ.

ಕೇಂದ್ರದ ಈ ಹೊಸ ನೀತಿಯಿಂದ ಕೌಶಲ್ಯ ಅಭಿವೃದ್ಧಿ ಜೊತೆಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯೂ ಇದೆ.

(ಒನ್ಇಂಡಿಯಾ ಸುದ್ದಿ)

English summary
Prime Minister Narendra Modi is launching new National logistics policy on September 17th, that is his birthday. The new policy is supposed to transform Indian logistics system to save big money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X