• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಫ್ತಾಲಿ ಬೆನೆಟ್ ಕೈಗೆ ಇಸ್ರೇಲ್ ಚುಕ್ಕಾಣಿ: ಇಸ್ರೇಲ್ ನೂತನ ಪ್ರಧಾನಿಯ ಕುತೂಹಲಕಾರಿ ಮಾಹಿತಿ

|
Google Oneindia Kannada News

ಟೆಲ್ ಅವೀವ್, ಜೂನ್ 14: 12 ವರ್ಷಗಳ ಸುದೀರ್ಘ ಅಧಿಕಾರಾವಧಿಯಿಂದ ಬೆಂಜಮಿನ್ ನೆತನ್ಯಾಹು ಕೆಳಗಿಳಿದಿದ್ದಾರೆ. ಸಮ್ಮಿಶ್ರ ಬಲದೊಂದಿಗೆ ಇಸ್ರೇಲ್ ಪ್ರಧಾನಿಯಾಗಿ ನಪ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈ ಮೂಲಕ ಪುಟ್ಟ ದೇಶವಾದರೂ ಜಗತ್ತಿನಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಇಸ್ರೇಲ್‌ನಲ್ಲಿ ಪ್ರಮುಖ ರಾಜಕೀಯ ಬದಲಾವಣೆಯಾಗಿದೆ.

ಅತ್ಯಂತ ಕಡಿಮೆ ಬಹುಮತದೊಂದಿಗೆ ಸರ್ಕಾರ ರಚನೆಯಾಗಿದೆ. ಇಸ್ರೇಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ, ಸ್ವತಂತ್ರ ಅರಬ್ ಪಕ್ಷಗಳು ಬಲಪಂಥೀಯ ಸಿದ್ಧಾಂತವನ್ನು ಹೊಂದಿರುವ ಬೆನೆಟ್ ಅವರಿಗೆ ಬೆಂಗಲವನ್ನು ವ್ಯಕ್ತಪಡಿಸಿ ಸರ್ಕಾರ ರಚನೆಗೆ ಅವಕಾಶ ಮಾಡಿದೆ. ಅಧಿಕಾರ ಹಂಚಿಕೆಯ ಪ್ರಕಾರ 2023ರ ಸೆಪ್ಟೆಂಬರ್ ತಿಂಗಳವರೆಗೆ ನಫ್ತಾಲಿ ಬೆನೆಟ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ನಂತರದ ಎರಡು ವರ್ಷಗಳ ಅಧಿಕಾರಾವಧಿಯನ್ನು ಯೆಶ್ ಅಟಿಡ್‌ಗೆ ಬಿಟ್ಟುಕೊಡಬೇಕಿದೆ.

ಇಸ್ರೇಲ್: ನೇತನ್ಯಾಹು ಅಧಿಕಾರ ಅಂತ್ಯ, ನಫ್ತಾಲಿ ನೂತನ ಪ್ರಧಾನಿಇಸ್ರೇಲ್: ನೇತನ್ಯಾಹು ಅಧಿಕಾರ ಅಂತ್ಯ, ನಫ್ತಾಲಿ ನೂತನ ಪ್ರಧಾನಿ

ಹಾಗಾದರೆ ಇಸ್ರೇಲ್‌ನಲ್ಲಿ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನೆಟ್ ಯಾರು? ಅವರ ಹಿನ್ನೆಲೆಯೇನು? ಮುಂದೆ ಓದಿ...

ನೆಫ್ತಾಲಿ ಬೆಳೆದ ಹಾದಿ

ನೆಫ್ತಾಲಿ ಬೆಳೆದ ಹಾದಿ

49 ವರ್ಷದ ನೆಫ್ತಾಲಿ ಬೆನೆಟ್ ಅವರ ಹೆತ್ತವರು ಅಮೆರಿಕಾ ಮೂಲದವರಾಗಿದ್ದು ಯಹೂದಿಗಳಾಗಿದ್ದಾರೆ. ರಾಜಕಾರಣಕ್ಕೂ ಮುನ್ನ ಉದ್ಯಮಿಯಾಗಿ ಅತ್ಯಂತ ಯಶಸ್ಸು ಸಾಧಿಸಿದ ಬೆನೆಟ್ ಬಳಿಕ ರಾಜಕಾರಣದತ್ತ ಮುಖಮಾಡಿದರು. ಎಲೈಟ್ ಸೈರೇಟ್ ಮಟ್ಕಲ್ ಕಮಾಂಡೋ ಘಟಕದಲ್ಲಿ ಸೇವೆ ಸಲ್ಲಿಸಿದ ನಂತರ, ಬೆನೆಟ್ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಲೆಗೆ ಹೋದರು. 1999 ರಲ್ಲಿ ಸೈಟಾ ಎಂಬ 'ಆ್ಯಂಟಿ-ಫ್ರಾಡ್' ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿದರು. ನಂತರ 2005ರಲ್ಲಿ ಈ ಕಂಪನಿಯನ್ನು ಯುಎಸ್ ಮೂಲದ ಆರ್‌ಎಸ್ಎ ಸೆಕ್ಯುರಿಟಿಗೆ 145 ಮಿಲಿಯನ್‌ ಡಾಲರ್‌ಗೆ ಮಾರಾಟ ಮಾಡಿದರು. ಹೀಗೆ ಯಶಸ್ಸಿ ಉದ್ಯಮಿಯಾಗಿ ಬೆಳೆದ ಬೆನೆಟ್‌ ನಂತರ ಇಸ್ರೇಲ್‌ನಲ್ಲಿ ರಾಷ್ಟ್ರೀಯವಾದಿ ರಾಜಕಾರಣಿಯಾಗಿ ಗುರುತಿಸಿಕೊಳ್ಳಲು ಆರಂಭಿಸಿದರು. ನೆಫ್ತಾಲಿ ಅವರನ್ನು ಕಟು ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗುತ್ತದೆ. ಕಳೆದ ಫೆಬ್ರವರಿಯಲ್ಲಿ ಟೈಮ್ಸ್ ಆಫ್ ಇಸ್ರೇಲ್‌ಗೆ ಪ್ರತಿಕ್ರಿಯೆ ನೀಡಿದ್ದ ನೆಫ್ತಾಲಿ ತಮ್ಮನ್ನು ಬೆಂಜಮಿನ್ ನೆತನ್ಯಾಹು ಅವರಿಗಿಂತಲೂ ತೀವ್ರ ಬಲಪಂಥೀಯ ಎಂದು ಹೇಳಿಕೊಂಡಿದ್ದರು. ಆದರೆ ರಾಜಕಾರಣದಲ್ಲಿ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ತಾನು ದ್ವೇಷ ಅಥವಾ ಧ್ರುವೀಕರಣವನ್ನು ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ನೆತನ್ಯಾಹು ಜೊತೆಗೆ ಕಾರ್ಯನಿರ್ವಹಿಸಿದ್ದರು ಬೆನೆಟ್

ನೆತನ್ಯಾಹು ಜೊತೆಗೆ ಕಾರ್ಯನಿರ್ವಹಿಸಿದ್ದರು ಬೆನೆಟ್

ಇಸ್ರೇಲ್‌ನ ನಿರ್ಗಮಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಬೆನೆಟ್ ಇಬ್ಬರೂ ಬಲಪಂಥೀಯರಾಗಿದ್ದು ಈ ಹಿಂದೆ ಒಂದೇ ಪಕ್ಷದಲ್ಲಿದ್ದರು. ಬೆಂಜಮಿನ್ ನೆತನ್ಯಾಹು ಪ್ರತಿನಿಧಿಸುವ ಲಿಕುಡ್ ಪಕ್ಷದಲ್ಲಿದ್ದ ಬೆನೆಟ್ 2006ರಿಂದ 2008ರ ಅವಧಿಯಲ್ಲಿ ನೆತನ್ಯಾಹುಗೆ ಹಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಬಳಿಕ ನೆತನ್ಯಾಹು ಜೊತೆಗಿನ ಸಂಬಂಧ ಹಳಸಿದ ಕಾರಣ ಲಿಕುಡ್ ಪಕ್ಷವನ್ನು ತೊರೆದ ನಫ್ತಾಲಿ ಬೆನೆಟ್ ನಂತರ ಯಾಮಿನ್ ಪಕ್ಷವನ್ನು ಸೇರ್ಪಡೆಯಾದರು. 2013ರಲ್ಲಿ ಪಾರ್ಲಿಮೆಂಟ್‌ಗೆ ಪ್ರತಿನಿಧಿಯಾಗಿ ಪ್ರವೇಶಿಸಿದರು.

ಯಹೂದಿ ರಾಷ್ಟ್ರದ ಪ್ರಬಲ ಧ್ವನಿ

ಯಹೂದಿ ರಾಷ್ಟ್ರದ ಪ್ರಬಲ ಧ್ವನಿ

ಅವರು ಯಹೂದಿ ರಾಷ್ಟ್ರದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. 1967ರ ಯುದ್ಧದಲ್ಲಿ ಇಸ್ರೇಲ್ ಆಕ್ರಮಿಸಿಕೊಂಡಿರುವ ಇಸ್ರೇಲ್-ಸಿರಿಯಾ ಗಡಿಯ ಸಮೀಪವಿರುವ ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜೆರುಸಲೆಮ್ ಮತ್ತು ಗೋಲನ್ ಹೈಟ್ಸ್ ಪ್ರದೇಶಗಳಲ್ಲಿ ಯಹೂದಿಗಳು ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಹೊಂದಿರುವುದಾಗಿ ವಾದಿಸುತ್ತಲೇ ಬಂದಿದ್ದಾರೆ.

ಪ್ಯಾಲೆಸ್ತೀನ್ ಸ್ವಾತಂತ್ರ್ಯಕ್ಕೆ ಪ್ರಬಲ ವಿರೋಧಿ

ಪ್ಯಾಲೆಸ್ತೀನ್ ಸ್ವಾತಂತ್ರ್ಯಕ್ಕೆ ಪ್ರಬಲ ವಿರೋಧಿ

ನಫ್ತಾಲಿ ಬೆನೆಟ್ ಅಧಿಕಾರಕ್ಕೇರಿರುವುದು ಪ್ಯಾಲೇಸ್ತೀನ್ ಪಾಲಿಗೆ ಮತ್ತಷ್ಟು ಕಠಿಣ ದಿನಗಳಿಗೆ ಕಾರಣವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಪ್ಯಾಲೆಸ್ತೀನ್ ವಿಚಾರವಾಗಿ ನಿರ್ಗಮಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗಿಂತಲೂ ಕಠಿಣವಾಗಿ ಯೋಚಿಸುವ ನಫ್ತಾಲಿ ಬೆನೆಟ್ ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯಕ್ಕೂ ಬಲವಾಗಿ ವಿರೋಧವನ್ನು ಹೊಂದಿದ್ದಾರೆ. ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿರುವ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ಯಹೂದಿಗಳ ಆಕ್ರಮಣವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಇನ್ನು ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಂಡಿಲ್ಲ ಯಾಕೆಂದರೆ ಪ್ಯಾಲೆಸ್ತೀನ್ ಎಂಬ ರಾಷ್ಟ್ರವೇ ಇಲ್ಲಿಲ್ಲ ಎಂಬ ನಿಲುವನ್ನು ನಫ್ತಾಲಿ ಬೆನೆಟ್ ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷದ ವಿಚಾರವಾಗಿ ಹೊಸ ಸರ್ಕಾರದ ಆಗಮನದಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸುವುದು ಅಸಾಧ್ಯ.

English summary
The Knesset approved Naftali Bennett as Israel's new Prime Minister late on Sunday evening India time. Who is he, and where does he stand in terms of political ideology?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X