• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

N Biren Singh Profile: ಮಾಜಿ ಯೋಧ, ಫುಟ್ಬಾಲರ್, ಪತ್ರಕರ್ತ, ಸಿಎಂ ಬಿರೇನ್ ಸಿಂಗ್

|
Google Oneindia Kannada News

ಮಣಿಪುರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೀಕ್ಷಕರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಅವರು ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಬಿರೇನ್ ಸಿಂಗ್ ರನ್ನು ಆಯ್ಕೆ ಮಾಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ತೊಂಗಂ ಬಿಸ್ವಜಿತ್ ಸಿಂಗ್ ಹೆಸರು ಕೇಳಿ ಬಂದಿತು. ಈಗ ಹಾಲಿ ಸ್ಪೀಕರ್ ಯುಮ್ನಮ್ ಖೇಮ್‌ಚಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ನೊಗ್ತೋಂಬಮ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ

ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.

ಬಿರೇನ್ ಸಿಂಗ್ ಸಂಕ್ಷಿಪ್ತ ವ್ಯಕ್ತಿಚಿತ್ರ:

ನೊಗ್ತೋಂಬಮ್ ಬಿರೇನ್ ಸಿಂಗ್ ಅವರು 1961ರ ಜನವರಿ 1ರಂದು ಜನಿಸಿದ್ದಾರೆ. ಮಣಿಪುರ ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಫುಟ್ಬಾಲ್ ಆಟಗಾರರಾಗಿ ಜನಪ್ರಿಯತೆ ಗಳಿಸಿದ್ದರು. ನಂತರ ಗಡಿ ಭದ್ರತಾ ಪಡೆ(ಬಿಎಸ್ಎಫ್) ಗೆ ಆಯ್ಕೆಯಾಗಿ ಗಡಿ ಕಾಯ್ದಿದ್ದಾರೆ. ಫುಟ್ಬಾಲ್ ಆಟಗಾರರಾಗಿ ಸ್ಥಳೀಯ ಪಂದ್ಯಾವಳಿಗಳಲ್ಲದೆ ಡುರಾಂಡ್ ಕಪ್ ಪಂದ್ಯಾವಳಿಯಲ್ಲೂ ಭಾಗಿಯಾಗಿದ್ದರು.

 Breaking: ಎನ್ ಬಿರೇನ್ ಸಿಂಗ್ ಮತ್ತೊಮ್ಮೆ ಮಣಿಪುರದ ಸಿಎಂ ಆಗಿ ಆಯ್ಕೆ Breaking: ಎನ್ ಬಿರೇನ್ ಸಿಂಗ್ ಮತ್ತೊಮ್ಮೆ ಮಣಿಪುರದ ಸಿಎಂ ಆಗಿ ಆಯ್ಕೆ

1992ರಲ್ಲಿ ಪತ್ರಿಕೋದ್ಯಮಕ್ಕೆ ಧುಮುಕಿದ ಬಿರೇನ್ ಸಿಂಗ್ ಅವರು ನಹರೊಲ್ಗಿ ತೌಡಂಗ್ ಎಂಬ ಹೆಸರಿನ ಸ್ಥಳೀಯ ಪತ್ರಿಕೆಯನ್ನು ಸ್ಥಾಪಿಸಿದರು. ನಂತರ 2001ರ ತನಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.

N Biren Singh Profile: Footballer, BSF Jawan & Journalist, Two term Manipur CM

2002ರಲ್ಲಿ ಡೆಮೊಕ್ರಾಟಿಕ್ ರೆವಲ್ಯೂಷನರಿ ಪೀಪಲ್ಸ್ ಪಾರ್ಟಿಗೆ ಸೇರಿಕೊಂಡರು. ಹಿಂಗಾಂಗ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದರು. 2007ರಲ್ಲಿ ಮತ್ತೊಮ್ಮೆ ಜಯ ದಾಖಲಿಸಿದ್ದಲ್ಲದೆ, 2012ರ ತನಕ ಸಚಿವ ಸಂಪುಟ ಸದಸ್ಯರಾಗಿದ್ದರು.

ಗುಪ್ತಚರ ಖಾತೆ ಸಚಿವ, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2007ರಲ್ಲಿ ಕೆಲ ಕಾಲ ಕಾಂಗ್ರೆಸ್ (INC) ಸೇರಿದ್ದರು. ನೀರಾವರಿ ಹಾಗೂ ಪ್ರವಾಹ ನಿಯಂತ್ರಣ, ಯುವಜನ, ಪಡಿತರ ವಿತರಣೆ ಖಾತೆ ಸಚಿವರಾಗಿದ್ದರು.

201ರಲ್ಲಿ ಮೂರನೆ ಬಾರಿಗೆ ಹಿಂಗಾಂಗ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2016ರಲ್ಲಿ ಅಂದಿನ ಮುಖ್ಯಮಂತ್ರಿ ಒಕ್ರಾಮ್ ಐಬೋಬಿ ಸಿಂಗ್ ವಿರುದ್ಧ ಬಂಡಾಯವೆದ್ದು, ಮಣಿಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದರು.

2016ರ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. 2017ರ ಚುನಾವಣೆಯಲ್ಲಿ ಹಿಂಗಾಂಗ್ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. 2017ರಲ್ಲಿ ಬಿಜೆಪಿ 21, ಕಾಂಗ್ರೆಸ್ 28, ನಾಗಾ ಪೀಪಲ್ಸ್ ಫ್ರಂಟ್ (04)ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ(04)ಯೊಂದಿಗೆ ಬಿಜೆಪಿಯ ಮೈತ್ರಿಯನ್ನು ಸಾಧಿಸಿ ಅಧಿಕಾರ ಗಳಿಸಿತು. ಮಾರ್ಚ್ 15, 2017ರಂದು ಸಿಎಂ ಆಗಿ ಬಿರೇನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು.

ಈ ಬಾರಿ 2022ರ ವಿಧಾನಸಭೆ ಫಲಿತಾಂಶ 60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನ, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ಎನ್ ಪಿ ಪಿ 7, ಎನ್ ಪಿಎಫ್ 5, ಕುಕಿ ಪೀಪಲ್ಸ್ ಮೈತ್ರಿಕೂಟ 2 ಸ್ಥಾನ ಗೆದ್ದುಕೊಂಡಿವೆ. ಬಿಜೆಪಿ ಶೇ 37.83, ಕಾಂಗ್ರೆಸ್ 16.83%, ಜೆಡಿಯು 10.77%, ಎನ್ ಪಿ ಇ ಪಿ 17.29%, ಎನ್ ಪಿ ಎಫ್ 8.09 %, ಇತರೆ 7.53 % ಬಂದಿದೆ. ಬಿಜೆಪಿ ಜೆಡಿಯು ಅಧಿಕೃತವಾಗಿ ಬೆಂಬಲ ಪತ್ರ ನೀಡಿದೆ.

English summary
N Biren Singh Profile: Biren Singh is multifaced personality he was Footballer, BSF Jawan & Journalist, now elected as Manipur CM for the second term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X