ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾವಿದನ ಕಮಾಲ್! ಚಹಾದಲ್ಲಿ ಅರಳಿದ 'ಚಹಾವಾಲ' ಮೋದಿ

By ಒನ್ ಇಂಡಿಯಾ ನ್ಯುಸ್ ಡೆಸ್ಕ್
|
Google Oneindia Kannada News

ಮೈಸೂರು, ಜೂ11: ಜೂ.21ರಂದು ಮೈಸೂರಿನ ಅರಮನೆ ಮುಂಭಾಗ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೋದಿ ಮೈಸೂರಿಗೆ ಬರುತ್ತಿರುವುದು ಮೈಸೂರಿಗರ ಸಂತಸ ಹೆಚ್ಚಸಿದ್ದು, ಕಲಾವಿದರು ಬಗೆಬಗೆಯ ಕಲಾಕೃತಿಗಳನ್ನು ರಚಿಸಿ ನೆಚ್ಚಿನ ಪ್ರಧಾನಿ ಅವರಿಗೆ ಅರ್ಪಣೆ ಮಾಡುತ್ತಿದ್ದಾರೆ. ಅಂತೆಯೇ ಮೈಸೂರಿನ ಕಲಾವಿದ ಅನಿಲ್ ಭೋಗಶೆಟ್ಟಿ ಟೀ ಯಿಂದಲೇ ಬಿಳಿ ಕ್ಯಾನ್ ವಾಸ್ ಮೇಲೆ ಮೋದಿ ಅವರನ್ನು ಬಿಡಿಸಿ ಗಮನ ಸೆಳೆದಿದ್ದಾರೆ.

ಮೋದಿ ಅವರು ಚಿಕ್ಕ ವಯಸ್ಸಿನಲ್ಲಿ ಚಾಯ್ ಮಾರುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಈ ಹಿನ್ನೆಲೆಯಲ್ಲಿ ಅನಿಲ್ ಅವರು ಟೀನಲ್ಲೇ ಚಿತ್ರ ಬಿಡಿಸಿ ಮೋದಿ ಅವರಿಗೆ ಅರ್ಪಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ನಿವಾಸಿಯಾಗಿರುವ ಅನಿಲ್ ಭೋಗಶೆಟ್ಟಿ ಅವರು ಮೋದಿ ಅವರಿಗೆ ನೀಡುವ ಸಲುವಾಗಿಯೇ ಈ ಚಿತ್ರವನ್ನು ಬಿಡಿಸಿದ್ದಾರೆ. ಪ್ರಧಾನಿಯವರನ್ನು ಭೇಟಿ ಮಾಡಿ ಈ ಚಿತ್ರವನ್ನು ನೀಡುವ ಆಸೆ ಇಟ್ಟುಕೊಂಡಿದ್ದಾರೆ. ಅನಿಲ್ ಬಿಡಿಸಿರೋ ಪೇಂಟಿಂಗ್‌ನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಮೂಡಿ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ಚಿತ್ರಣ ಕೂಡ ಇದೆ. ಇದರ ಒಂದು ಬದಿಗೆ ಫ್ಲಾಸ್ಕ್ ಇರಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಗೋಚರಿಸುತ್ತದೆ.

ಮೋದಿ ಆಗಮಿಸುವ ಹಿನ್ನೆಲೆ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಥಳ ಪರಿಶೀಲನೆಮೋದಿ ಆಗಮಿಸುವ ಹಿನ್ನೆಲೆ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಥಳ ಪರಿಶೀಲನೆ

 ಒಂದೂವರೆ ಅಡಿ ಎತ್ತರದ ಶಿಲ್ಪಕಲಾಕೃತಿ

ಒಂದೂವರೆ ಅಡಿ ಎತ್ತರದ ಶಿಲ್ಪಕಲಾಕೃತಿ

ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಕುಂಬಾರಗೇರಿ ಶಿಲ್ಪ ಕಲಾವಿದರಾದ ಡಿ.ರೇವಣ್ಣ ಅವರು ಅವರಿಗೆ ಸ್ವಾಗತ ಬಯಸುವ ಶಿಲ್ಪಕಲೆ ರಚಿಸಿದ್ದಾರೆ. ಕ್ಲೈಯಿಂದ ಇದನ್ನು ಮಾಡಿದ್ದಾರೆ. 4 ದಿನದಲ್ಲೇ ರಚನೆ ಕೆಲಸ ಮುಗಿಸಿದ್ದಾರೆ. ಒಂದೂವರೆ ಅಡಿ ಎತ್ತರ ಇದೆ. ಮೋದಿ ಧ್ಯಾನ ಮಾಡುತ್ತಿರುವ ಭಂಗಿಯನ್ನು ಒಳಗೊಂಡಿದೆ. ರೇವಣ್ಣ ಡಿ. ಕಾವಾ ವಿದ್ಯಾರ್ಥಿ ಕೂಡ ಹೌದು.''ನಮ್ಮ ಹೆಮ್ಮೆಯ ಮೈಸೂರಿಗೆ ಮೋದಿ ಅವರು ಬರುತ್ತಿರುವುದೇ ಸಂಭ್ರಮದ ವಿಚಾರ. ಹೀಗಾಗಿ ಅವರಿಗೆ ಸ್ವಾಗತ ಕೋರುವ ಉದ್ದೇಶದಿಂದ ಈ ಶಿಲ್ಪಕಲಾಕೃತಿ ಮಾಡಿರುವೆ. ಪ್ರಧಾನಿಯವರನ್ನು ಭೇಟಿ ಮಾಡಿ ಈ ಚಿತ್ರವನ್ನು ನೀಡುವ ಆಸೆ ಇಟ್ಟುಕೊಂಡಿದ್ದಾರೆ. ಇದನ್ನು ಶೀಘ್ರದಲ್ಲೇ ನಮ್ಮ ತಮ್ಮ ಶಾಪ್ ನಲ್ಲಿ ಪ್ರದರ್ಶನಕ್ಕೆ ಇಡುವೆ,'' ಎಂದು ರೇವಣ್ಣ ತಿಳಿಸಿದ್ದಾರೆ.

 ಮೋದಿ ಆಗಮನ ಹಿನ್ನೆಲೆ: ಸ್ಥಳ ಪರಿಶೀಲಿಸಿದ ಆಯುಷ್

ಮೋದಿ ಆಗಮನ ಹಿನ್ನೆಲೆ: ಸ್ಥಳ ಪರಿಶೀಲಿಸಿದ ಆಯುಷ್

ಈ ವರ್ಷ ಮೈಸೂರಿನಲ್ಲಿ ಆಚರಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಮೋದಿಯವರು ಆಗಮಿಸುತ್ತಿದ್ದು, ಇದು ತುಂಬಾ ಸಂತೋಷದ ವಿಷಯವಾಗಿದೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಆಯುಷ್ ಮಂತ್ರಾಲಯದ ನಿರ್ದೇಶಕರಾದ ವಿಕ್ರಂ ಸಿಂಗ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೈಸೂರು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಯೋಗಕ್ಕೆ ಮೈಸೂರು ಸಾಕಷ್ಟು ಕೊಡುಗೆ ನೀಡಿದೆ. ಸಾಕಷ್ಟು ಯೋಗ ತಜ್ಣರು ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಿ ಪ್ರಜೆಗಳು ಮೈಸೂರಿಗೆ ಆಗಮಿಸಿ ಯೋಗ ಕಲಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪ್ರಧಾನಿಯವರು ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿದ್ದು ಇದು ಮೈಸೂರಿನ ಗರಿಮೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

 ಯೋಗ ದಿನಾಚರಣೆ ಕಾರ್ಯಕ್ರಮ ನೇರ ಪ್ರಸಾರ

ಯೋಗ ದಿನಾಚರಣೆ ಕಾರ್ಯಕ್ರಮ ನೇರ ಪ್ರಸಾರ

ಮೈಸೂರಿನ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಭಾರತ ಸರ್ಕಾರ ಹಾಗೂ ಆಯುಷ್ ಮಂತ್ರಾಲಯದಿಂದ ಆಯೋಜಿಸಲಾಗುತ್ತಿದೆ. ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕ. ಯೋಗವನ್ನು ಸಾಮರಸ್ಯಕ್ಕಾಗಿ ಹಾಗೂ ಮನಃಶಾಂತಿಗಾಗಿ ಮಾಡಬೇಕು. ಮೈಸೂರಿನಲ್ಲಿ ಜೂನ್ 20 ಮತ್ತು 21 ರಂದು ಯೋಗ ವಸ್ತುಪ್ರದರ್ಶನವನ್ನು ಸಹ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಲಾಗುತ್ತದೆ. ಈ ವಸ್ತು ಪ್ರದರ್ಶನದಲ್ಲಿ ಡಿಜಿಟಲ್ ಎಕ್ಸಿಬಿಷನ್
ಹಾಗೂ ಸ್ಟಾಲ್ ಎಕ್ಸಿಬಿಷನ್ ಎಂದು ಎರಡು ಭಾಗಗಳಲ್ಲಿ ಇರುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ 75 ಸ್ಥಳಗಳಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಯೋಗ ದಿನಾಚರಣೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದರು. ಆಗತ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಸಭೆಯ ನಂತರ ಕೇಂದ್ರ ಆಯುಷ್ ಇಲಾಖೆಯ ಅಧಿಕಾರಿಗಳ ತಂಡವು ಅರಮನೆ ಆವರಣಕ್ಕೆ ಭೇಟಿ ನೀಡಿ ಆಗತ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿತು.

 ತೃತೀಯಲಿಂಗಿಗಳಿಗೂ ಅವಕಾಶ

ತೃತೀಯಲಿಂಗಿಗಳಿಗೂ ಅವಕಾಶ

ಜೂ.21ರಂದು ಮೈಸೂರಿನ ಅರಮನೆ ಮುಂಭಾಗ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮುಖ್ಯ ವೇದಿಕೆಯಲ್ಲಿ ನಾಲ್ಕರಿಂದ ಐದು ಜನರಿಗೆ ಮಾತ್ರ ಅವಕಾಶ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ, ಪ್ರಧಾನಿ ಕಾರ್ಯಾಲಯದಿಂದ ಒಂದಷ್ಟು ಮಾಹಿತಿ ಬಂದಿದೆ. ಒಂದೇ ಜಾಗದಲ್ಲಿ ಅಧಿಕೃತ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಜೂ.21 ರಂದು ಬೆ.6.30ಕ್ಕೆ ಅಂಬಾವಿಲಾಸ ಅರಮನೆಗೆ ಪ್ರಧಾನಿ ಆಗಮಿಸುತ್ತಾರೆ. ಸಿಎಂ, ರಾಜ್ಯಪಾಲರು, ಕೇಂದ್ರ ಆಯುಷ್ ಇಲಾಖೆ ಸಚಿವರು ಹಾಗೂ ಉಸ್ತುವಾರಿ ಸಚಿವರಿಗೆ ಮಾತ್ರ ವೇದಿಕೆಯಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ" ಎಂದರು.

'ಮಾನವೀಯತೆಗಾಗಿ ಯೋಗ' ಎಂಬ ಶೀರ್ಷಿಕೆಯಡಿಯಲ್ಲಿ 2022ರ ಅಂತಾರಾಷ್ಟ್ರೀಯ ಯೋಗ ದಿನ ನಡೆಯಲಿದ್ದು ಸಮಾಜದ ಎಲ್ಲಾ ವರ್ಗದವರೂ ಸಹ ಇದರಲ್ಲಿ ಭಾಗವಹಿಸಬೇಕು ಎಂಬುದು ಇಚ್ಚೆಯಾಗಿದೆ. ಅದರಂತೆಯೇ ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಭವನದಲ್ಲಿ ಯೋಗ ಫಡರೇಷನ್ ವತಿಯಿಂದ ತೃತೀಯ ಲಿಂಗಿಗಳು, ಆಶಾ ಕಾರ್ಯಕರ್ತರಿಗೆ, ವಿಶೇಷಚೇತನರಿಗೆ ಯೋಗ ತರಬೇತಿ ನೀಡಲಾಯಿತು. ಇವರೆಲ್ಲರೂ ನರೇಂದ್ರ ಮೋದಿ ಅವರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ತರಬೇತಿ ನೀಡಲಾಗುತ್ತಿದೆ.

English summary
Mysuru based artist Anil Bhogashetti has painted the face of Prime Minister Narenda Modi using drinking tea. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X