• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿತ್ತಳೆ ಬಣ್ಣದ ಈ ನದಿ ನೀರಿನಲ್ಲಿ ವಾಸಿಸುವ ಜೀವಿಗಳಿಗಿಲ್ಲ ಆಯಸ್ಸು

|
Google Oneindia Kannada News

ಸ್ಲೋವಾಕಿಯಾ, ಮೇ 23: ಒಂದು ಕಡೆ ಜಾಗತಿಕ ತಾಪಮಾನದಿಂದ ಹವಾಮಾನ ವೇಗವಾಗಿ ಬದಲಾಗುತ್ತಿದ್ದರೆ, ಇನ್ನೊಂದು ಕಡೆ ಕಾರ್ಖಾನೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳು ಭೂಮಿ ಮತ್ತು ಜಲಮೂಲಗಳಿಗೆ ಹಾನಿ ಮಾಡುತ್ತಿವೆ. ಈ ಎಲ್ಲ ವಿಷಯಗಳ ಬಗ್ಗೆ ಪ್ರಕೃತಿ ನಿರಂತರವಾಗಿ ಮಾನವನನ್ನು ಎಚ್ಚರಿಸುತ್ತಿದೆ. ಆದರೆ ಸರ್ಕಾರಗಳ ಗಮನವು ಅದರ ಕಡೆಗೆ ಹೋಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೆ ಬರಲಿರುವ ಕಾಲ ಮನುಷ್ಯರಿಗೆ ಬಹಳ ಕಷ್ಟವಾಗುತ್ತದೆ.

ಈಗ ಸ್ಲೋವಾಕಿಯಾದಿಂದ (Slovakia) ಗಂಭೀರ ಪ್ರಕರಣವೊಂದು ಹೊರಹೊಮ್ಮಿದ್ದು, ನದಿಯ ನೀರು ನಿಗೂಢವಾಗಿ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಇದಾದ ನಂತರ ಅದರೊಳಗಿದ್ದ ಜೀವಿಗಳೂ ಸಾಯತೊಡಗಿವೆ. ಇದರೊಂದಿಗೆ ಈ ನದಿಯನ್ನು ಅವಲಂಬಿಸಿರುವ ಸಾವಿರಾರು ಜನರಿಗೆ ಮುಂದೆ ದೊಡ್ಡ ಬಿಕ್ಕಟ್ಟು ಉದ್ಭವಿಸಿದೆ. ಸುದ್ದಿ ತಿಳಿದ ಸ್ಥಳೀಯ ಆಡಳಿತ ತಕ್ಷಣ ತನಿಖೆಗೆ ಆದೇಶ ನೀಡಿದ್ದರೂ ಅಷ್ಟೊತ್ತಿಗಾಗಲೇ ತಡವಾಗಿತ್ತು.

ಹವಾಮಾನ ಬದಲಾವಣೆ: ಮೇ 21ರ ನಂತರ 'ರಕ್ತ ಮಳೆ' ಎಚ್ಚರಿಕೆಹವಾಮಾನ ಬದಲಾವಣೆ: ಮೇ 21ರ ನಂತರ 'ರಕ್ತ ಮಳೆ' ಎಚ್ಚರಿಕೆ

ಈ ನದಿಯ ನೀರು ಯಾಕೆ ಕಿತ್ತಳೆ ಬಣ್ಣಕ್ಕೆ ತಿರುಗಿತು ಎಂಬ ವಾಸ್ತವ ವಿಚಾರ ತಿಳಿದರೆ ಮನುಷ್ಯ ನಿರ್ಮಿತ ಸಮಸ್ಯೆಗಳ ಕರಾಳ ಮುಖ ಏನು ಎಂಬುದು ಅನಾವರಣಗೊಳ್ಳುತ್ತದೆ, ದಿಗಿಲುಗೊಳಿಸುತ್ತದೆ.

 ಎಲ್ಲಿ? ಯಾಕೆ?

ಎಲ್ಲಿ? ಯಾಕೆ?

ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೂರ್ವ ಸ್ಲೋವಾಕಿಯಾದ ಸ್ಲಾನಾ ನದಿಯ ನೀರು ಸಂಪೂರ್ಣವಾಗಿ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಇದನ್ನು ಮಾನವ ನಿರ್ಮಿತ ದುರಂತ ಎಂದು ನಂಬಲಾಗುತ್ತಿದೆ. ತನಿಖೆಯಲ್ಲಿ ನೀರು ವಿಷಕಾರಿಯಲ್ಲ ಎಂದು ಕಂಡುಬಂದಿದೆ. ಆದರೆ ಅದನ್ನು ಕುದಿಸದೆ ಕುಡಿಯಲು ಸಹ ಯೋಗ್ಯವಾಗಿಲ್ಲ. ನದಿಯ ಬಣ್ಣ ನೋಡಿ ಸಮೀಪದ ಗ್ರಾಮಸ್ಥರು ದೂರ ಸರಿದಿದ್ದಾರೆ. ಈ ನೀಋಉ ಕುಡಿಯಲು ಯೋಗವಲ್ಲ ಎಂದು ನಿರ್ಧರಿಸಿದ್ದಾರೆ. ಸ್ಥಳೀಯರು ಹೀಗಂದುಕೊಳ್ಳಲೂ ಕೇವಲ ನದಿ ನೀರಿನ ಬಣ್ದ ಮಾತ್ರ ಕಾರಣವಲ್ಲ. ಇದರಲ್ಲಿರುವ ಜಲಚರಗಳು ಸಾಯುತ್ತಿವೆ. ಇದು ಜನರನ್ನ ಈ ನೀರಿನಿಂದ ದೂರವಿಟ್ಟಿದೆ.

 ನದಿ ನೀರಿನಿಂದ ದೂರವುಳಿದ ಜನ

ನದಿ ನೀರಿನಿಂದ ದೂರವುಳಿದ ಜನ

ಈ ವಿಷಯದಲ್ಲಿ ಸ್ಥಳೀಯ ಅಧಿಕಾರಿಯೊಬ್ಬರು, 'ನೀರಿನ ಬಣ್ಣ ಬದಲಾದ ತಕ್ಷಣ ಅವರ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ಹೇಳಿದ್ದಾರೆ. ತನಿಖೆಯಿಂದ ಇದೆಲ್ಲವೂ ಮಾಲಿನ್ಯದಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸ್ಲಾನಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸುವುದು ನಮ್ಮ ಪ್ರಯತ್ನ. ಇದರಿಂದ ನದಿಯೊಳಗೆ ವಾಸಿಸುವ ಜೀವಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಅದರ ದೇಹವನ್ನು ನದಿಯ ಬಳಿಯಿಂದ ತೆಗೆಯಲಾಗುತ್ತಿದೆ' ಎಂದಿದ್ದಾರೆ.

 ದುರ್ವಾಸನೆಯಿಂದ ಕೂಡಿದ ನೀರು

ದುರ್ವಾಸನೆಯಿಂದ ಕೂಡಿದ ನೀರು

ತನಿಖೆ ನಡೆಸಿದಾಗ, ನದಿಯ ಬಳಿ ಇರುವ ಕಬ್ಬಿಣದ ಗಣಿಯಿಂದಾಗಿ ಇದೆಲ್ಲವೂ ನಡೆಯುತ್ತಿದೆ ಎಂದು ಕಂಡುಬಂದಿದೆ. 2008 ರಲ್ಲಿ ಕಬ್ಬಿಣದ ಗಣಿಯಲ್ಲಿ ಗಣಿಗಾರಿಕೆ ನಡೆಯಿತು. ಈ ಹಿಂದೆ ಅದು ನದಿಯ ಕೆಳಗೆ ಇತ್ತು. ಆದರೆ ಪ್ರವಾಹದಿಂದಾಗಿ ಅದು ಮೇಲಕ್ಕೆ ಬಂದು ಇದೀಗ ಕಬ್ಬಿಣದ ತುಕ್ಕು ನದಿ ನೀರು ಸೇರುತ್ತಿದೆ. ಇದರಿಂದ ನದಿ ನೀರಿನ ಬಣ್ಣ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಸ್ಥಳೀಯ ಆಡಳಿತದ ಪ್ರಕಾರ, ನದಿ ನೀರಿನ ಬಣ್ಣ ಮಾತ್ರ ಬದಲಾಗಿದೆ, ಅದನ್ನು ವಿಷಕಾರಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇಲ್ಲಿನ ಜಲ ಜೀವಿಗಳ ಸಾವಿಗೆ ಕಾರಣ ಏನು ಎನ್ನುಬ ಬಗ್ಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಈ ನೀರು ಸಂಪೂರ್ಣ ವಿಷಕಾರಿಯಾಗಿದೆ. ಇದರಿಂದ ಜಲ ಜೀವಿಗಳು ಹೊರ ಬಂದು ಸಾಯುತ್ತಿವೆ. ಈ ನೀರು ಕುಡಿಯಲು ಯೋಗ್ಯವಲ್ಲ. ಜಲ ಜೀವಿಗಳು ಸತ್ತು ಈ ನೀರು ದುರ್ವಾಸನೆಯಿಂದ ಕೂಡಿದೆ ಎನ್ನುವ ಆರೋಪಗಳಿವೆ.

 ಮಳೆಗೆ ಬೇಸತ್ತ ಜನ

ಮಳೆಗೆ ಬೇಸತ್ತ ಜನ

ಪರಿಸರವಾದಿ ಟಿಬೋರ್ ವರ್ಗಾ ಫೆಬ್ರವರಿಯಿಂದ ನದಿಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಹೇಳಿದರು. ಮಾಲಿನ್ಯ ಪ್ರಾರಂಭವಾದಾಗ, ನದಿಯಲ್ಲಿ ಕಬ್ಬಿಣ ಮತ್ತು ಸತುವು ಗೋಚರಿಸಿತು. ಆ ಸಮಯದಲ್ಲಿ ಪ್ರಾಣಿಗಳು ನಿಧಾನವಾಗಿ ಸಾಯುತ್ತಿದ್ದವು, ಆದರೆ ಈಗ ಸಾವಿನ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದಿಂದ 200,000 ಯುರೋಗಳನ್ನು ($211,460.00) ಕೋರಲಾಗಿದೆ ಎಂದಿದ್ದಾರೆ. ಹೀಗಾಗಿ ಇಲ್ಲಿ ಮಳೆಯಾದಷ್ಟು ನದಿ ನೀರು ಕಲುಷಿತಗೊಳ್ಳುತ್ತದೆ ಎನ್ನಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
A serious case has emerged from Slovakia, the Sloana river water has mysteriously turned orange.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X