ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸು ಮತ್ತು ಕಾಯಿಲೆ: ಕೆನಡಾದಲ್ಲಿ 'ಮೆದುಳಿ'ಗೆ ಹೊಕ್ಕುತ್ತಿರುವ ಹೊಸ ರೋಗಾಣು!

|
Google Oneindia Kannada News

ನವದೆಹಲಿ, ಜೂನ್ 07: ಕೊರೊನಾವೈರಸ್. ಜಗತ್ತಿನ ಪ್ರತಿಯೊಬ್ಬರು ಈ ಒಂದು ಹೆಸರು ಕೇಳಿದರೆ ಒಂದು ಕ್ಷಣ ಶಾಕ್ ಆಗುತ್ತಾರೆ. ಪ್ರಪಂಚದಾದ್ಯಂತ ಮಹಾಮಾರಿ ಸೃಷ್ಟಿಸಿರುವ ಭಯ ಅಷ್ಟರ ಮಟ್ಟಿಗಿದೆ. ಒಂದು ಬಾರಿ ಕೊವಿಡ್-19 ಬಂತು ಹೋಯಿತು ಅನ್ನುವ ಹಾಗಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ಕೊರೊನಾವೈರಸ್ ಮೊದಲ ಅಲೆ ವೃದ್ಧರಿಗೆ, ಕೊರೊನಾವೈರಸ್ ಎರಡನೇ ಅಲೆ ಯುವಕರಿಗೆ ಹಾಗೂ ಕೊರೊನಾವೈರಸ್ ಮೂರನೇ ಅಲೆ ಮಕ್ಕಳಿಗೆ ಅನ್ನುವ ನಿಟ್ಟಿನಲ್ಲಿ ಮಹಾಮಾರಿ ರೂಪಾಂತರಗೊಂಡು ಹರಡುತ್ತಿದೆ. ಇದರ ಮಧ್ಯೆ ಮತ್ತೊಂದು ಆಘಾತಕಾರಿ ವಿಷಯವನ್ನು ಕೆನಡಾ ಹೊರ ಹಾಕಿದೆ.

ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?

ಕೆನಡಾದಲ್ಲಿ ಕೊರೊನಾವೈರಸ್ ಸೋಂಕಿನ ಭೀತಿ ನಡುವೆಯೇ ನಿಗೂಢ ಮೆದುಳಿನ ಕಾಯಿಲೆ ಕಾಣಿಸಿಕೊಂಡಿದೆ. ದೇಶದಲ್ಲಿ ಈಗಾಗಲೇ 48 ಮಂದಿಗೆ ಈ ಮೆದುಳಿನ ಕಾಯಿಲೆ ಅಂಟಿಕೊಂಡಿರುವುದು ಬಹಿರಂಗವಾಗಿದೆ. ಕೆನಡಾದಲ್ಲಿ ಪತ್ತೆ ಆಗಿರುವ ಮೆದುಳಿನ ಕಾಯಿಲೆ, ಈ ರೋಗದ ಲಕ್ಷಣಗಳು, ರೋಗದ ಪರಿಣಾಮ ಹೇಗಿರುತ್ತದೆ. ಕೊರೊನಾವೈರಸ್ ಹಾಗೂ ಈ ಮೆದುಳಿನ ಕಾಯಿಲೆಗೂ ಸಾಮ್ಯತೆ ಇದೆಯೇ ಎಂಬುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ನಿಮ್ಮ ಮುಂದಿದೆ.

ಮೆದುಳಿನ ಕಾಯಿಲೆ ಉಳ್ಳವರಲ್ಲಿ ವಿಚಿತ್ರ ಲಕ್ಷಣ!

ಮೆದುಳಿನ ಕಾಯಿಲೆ ಉಳ್ಳವರಲ್ಲಿ ವಿಚಿತ್ರ ಲಕ್ಷಣ!

ಸಾಮಾನ್ಯವಾಗಿ ರೋಗಗಳು ಅಂಟಿಕೊಂಡಿರುವುದನ್ನು ದೇಹದಲ್ಲಿ ಆಗುವ ಬದಲಾವಣೆ ಮತ್ತು ತೊಂದರೆಗಳಿಂದ ಗುರುತಿಸಲಾಗುತ್ತದೆ. ಕೆನಡಾದಲ್ಲಿ ಇದೀಗ ಪತ್ತೆ ಆಗಿರುವ ಮೆದುಳಿನ ಕಾಯಿಲೆಗೆ ವಿಚಿತ್ರ ಲಕ್ಷಣಗಳನ್ನು ಹೊಂದಿದೆ. ನಿದ್ರಾಹೀನತೆ, ಅಂಗಗಳ ಅಸಾಮಾನ್ಯ ಕ್ರಿಯೆ ಹಾಗೂ ಮೆದುಳಿನಲ್ಲಿನ ಭ್ರಮೆಯನ್ನೇ ರೋಗದ ಲಕ್ಷಣಗಳು ಎಂದು ಹೇಳಲಾಗುತ್ತಿದೆ.

ಕನಸಿನಲ್ಲಿ ಬರುವ ಮೃತದೇಹಗಳು!

ಕನಸಿನಲ್ಲಿ ಬರುವ ಮೃತದೇಹಗಳು!

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, "ಕೆನಡಾದ ಅಟ್ಲಾಂಟಿಕ್ ಕರಾವಳಿ ಪ್ರದೇಶದ ನ್ಯೂ ಬ್ರುನ್ಸಿವಿಕ್ ಎಂಬಲ್ಲಿ ಈ ನಿಗೂಢ ಮೆದುಳಿನ ಕಾಯಿಲೆ ಮೊದಲು ಪತ್ತೆ ಆಗಿದೆ. ಈ ಸಮಸ್ಯೆ ಇರುವ ರೋಗಿಗಳಲ್ಲಿ ಮೃತದೇಹಗಳು ಮತ್ತು ಸಾವಿನ ಕುರಿತಾದ ಕನಸುಗಳೇ ಹೆಚ್ಚಾಗಿ ಬೀಳುತ್ತಿರುವುದು ಪತ್ತೆಯಾಗಿದೆ. ಸಾವಿನ ಕನಸು ಕಂಡ ಮರುದಿನದಿಂದ ಅಂಥ ವ್ಯಕ್ತಿಗಳ ಮೆದುಳಿನಲ್ಲಿ ಭಯ ಶುರುವಾಗುತ್ತದೆ. ಈ ಕಾಯಿಲೆ ಹಿಂದಿನ ಅಸಲಿ ಕಾರಣವೇನು, ಈ ರೋಗ ಕಾಣಿಸಿಕೊಂಡಿರುವುದು ಹೇಗೆ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ವಿಜ್ಞಾನಿಗಳು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ಮೆದುಳಿನ ಕಾಯಿಲೆಗೆ ಮೊಬೈಲ್ ಟವರ್ ಕಾರಣ?

ಮೆದುಳಿನ ಕಾಯಿಲೆಗೆ ಮೊಬೈಲ್ ಟವರ್ ಕಾರಣ?

ಮೊಬೈಲಿನ ವಿಕಿರಣಗಳಿಂದ ಈ ಮೆದುಳಿನ ಕಾಯಿಲೆ ಹರಡುತ್ತಿರುವ ಬಗ್ಗೆ ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೇ ಕೆಲವು ವಿಜ್ಞಾನಿಗಳು ಕೊರೊನಾವೈರಸ್ ಸೋಂಕಿಗೆ ನೀಡುತ್ತಿರುವ ಲಸಿಕೆ ಪರಿಣಾಮದಿಂದಾಗಿ ಈ ಮೆದುಳಿನ ಕಾಯಿಲೆ ಹರಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ವಿಜ್ಞಾನಿಗಳು ಮಾಡುತ್ತಿರುವ ಈ ಎರಡೂ ಆರೋಪಗಳಿಗೆ ಯಾವುದೇ ಸಾಕ್ಷ್ಯ-ಪುರಾವೆಗಳಿಲ್ಲ.

ನಿಗೂಢ ರೋಗದ ಹರಡುವಿಕೆ ಹಿಂದೆ 5 ವರ್ಷದ ಇತಿಹಾಸ

ನಿಗೂಢ ರೋಗದ ಹರಡುವಿಕೆ ಹಿಂದೆ 5 ವರ್ಷದ ಇತಿಹಾಸ

"ಕೆನಡಾದಲ್ಲಿ ಇದೇ ಮೆದುಳಿನ ಕಾಯಿಲೆಯು 6 ವರ್ಷಗಳ ಹಿಂದೆಯೇ ಮೊದಲು ಕಾಣಿಸಿಕೊಂಡಿತ್ತು. 12ಕ್ಕೂ ಹೆಚ್ಚು ಮಂದಿಯಲ್ಲಿ ರೋಗ ಕಾಣಿಸಿಕೊಂಡಿದ್ದು, 6 ಮಂದಿ ಇದೇ ರೋಗದಿಂದ ಪ್ರಾಣವನ್ನು ಬಿಟ್ಟಿದ್ದರು. ಆದರೆ 15 ತಿಂಗಳ ಹಿಂದೆ ಜಗತ್ತನ್ನು ವ್ಯಾಪಿಸಿದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿ ಕೆನಡಾದಲ್ಲೂ ಅಟ್ಟಹಾಸ ತೋರಿತು. ಕೊವಿಡ್-19 ರೋಗದ ನಿಯಂತ್ರಣ ಹಾಗೂ ನಿರ್ವಹಣೆ ನಡುವೆ ಈ ಮೆದುಳಿನ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ಮೆದುಳಿನ ಕಾಯಿಲೆಯಿಂದ ವಿಮುಖವಾದ ಆರೋಗ್ಯ ವ್ಯವಸ್ಥೆ ಕೊರೊನಾವೈರಸ್ ಬಗ್ಗೆ ಸಂಪೂರ್ಣ ಲಕ್ಷ್ಯವನ್ನು ವಹಿಸಿತು" ಎಂದು ವೈದ್ಯರು ತಿಳಿಸಿದ್ದಾರೆ.

ಕೆನಡಾದಲ್ಲಿ ಹೆಸರು ಇಲ್ಲದ ಮೆದುಳಿನ ಕಾಯಿಲೆ!

ಕೆನಡಾದಲ್ಲಿ ಹೆಸರು ಇಲ್ಲದ ಮೆದುಳಿನ ಕಾಯಿಲೆ!

ಮೆದುಳಿನ ಕಾಯಿಲೆ ಬಗ್ಗೆ ನಿರಂತರ ಅಧ್ಯಯನದ ಹೊರತಾಗಿಯೂ ವಿಜ್ಞಾನಿಗಳು ಈ ರೋಗಕ್ಕೆ ನಿರ್ದಿಷ್ಟ ಹೆಸರನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ. "ಈ ರೋಗವು ಪರಿಸರದ ಮೂಲಕ ಹರಡುತ್ತದೆಯೇ ಎಂದು ಸಾರ್ವಜನಿಕರು ಕೇಳುವ ಸಾಲು ಸಾಲು ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಈ ರೋಗವು ಅನುವಂಶಿಕವೇ?, ಮೀನು ಅಥವಾ ಜಿಂಕೆ ಮಾಂಸವನ್ನು ಸೇವಿಸುವುದರಿಂದ ಈ ರೋಗ ಹರಡುತ್ತದೆಯೇ?, ಇದ್ಯಾವುದೂ ಅಲ್ಲ ಎಂದ ಮೇಲೆ ರೋಗ ಹರಡುತ್ತಿರುವುದಾದರೂ ಹೇಗೆ" ಎಂಬ ಪ್ರಶ್ನೆಗಳಿಗೆ ವಿಜ್ಞಾನಿಗಳು ಇಂದಿಗೂ ಉತ್ತರ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮೂರು ತಿಂಗಳ ಹಿಂದೆಯೇ ಕಾಯಿಲೆ ಎಚ್ಚರಿಕೆ

ಮೂರು ತಿಂಗಳ ಹಿಂದೆಯೇ ಕಾಯಿಲೆ ಎಚ್ಚರಿಕೆ

ಕಳೆದ ಮಾರ್ಚ್ ತಿಂಗಳಿನಲ್ಲಿ ಮೆದುಳಿಗೆ ಸಂಬಂಧಿಸಿದ ಈ ನಿಗೂಢ ಕಾಯಿಲೆ ಬಗ್ಗೆ ನ್ಯೂ ಬ್ರುನ್ಸ್ ವಿಕ್ ಮುಖ್ಯ ವೈದ್ಯಾಧಿಕಾರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು. ಜಾಗತಿಕ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಈ ರೋಗದ ಬಗ್ಗೆ ಹಾಗೂ ನಿಧಾನಗತಿಯಲ್ಲಿ ಇದರ ವೈದ್ಯಕೀಯ ಸವಾಲುಗಳನ್ನು ಎದುರಿಸುವ ಬಗ್ಗೆ ವೈದ್ಯರು ಹೇಳಿದ್ದರು. "ಜಗತ್ತಿನಲ್ಲಿ ಅಸಾಧಾರಣ ವೈಜ್ಞಾನಿಕ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಹೊರತಾಗಿಯೂ ನಾವು ಮಾನಸಿಕ ಹಾಗೂ ನರ ಸಂಬಂಧಿತ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸಾ ವಿಧಾನದ ರೀತಿಯಲ್ಲಿ ನಾವಿನ್ನೂ ಹಿಂದಿದ್ದೀವಿ" ಎಂದು ವೈದ್ಯರು ಒತ್ತಿ ಹೇಳಿದ್ದಾರೆ.

English summary
Amid COVID-19 Pandemic, Mysterious Brain Disease Reported In Canada. So Far 48 Infected Patients Have Been Found In Which Symptoms Like Insomnia, Limb Dysfunction And Hallucinations Have Been Seen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X