• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಣ್ಣಿಗೆ ಕಂಡವರನ್ನೆಲ್ಲಾ ಕೊಲೆ ಮಾಡಿ’: ಹೇಗಿತ್ತು ರೊಹಿಂಗ್ಯಾ ಹತ್ಯಾಕಾಂಡ..?

|

ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಕಗ್ಗೊಲೆ ಕುರಿತಾದ ವಿಡಿಯೋ ಸಂಚಲನ ಸೃಷ್ಟಿಸಿದೆ. ಮ್ಯಾನ್ಮಾರ್ ಸೈನಿಕರು ಮಾತನಾಡಿರುವ ವಿಡಿಯೋದಲ್ಲಿ ರೊಹಿಂಗ್ಯಾಗಳನ್ನು ಕೊಂದಿದ್ದು ಹೇಗೆ ಎಂಬುದನ್ನ ವಿವರಿಸಿದ್ದಾರೆ. ಕಣ್ಣಿಗೆ ಕಂಡವರನ್ನೆಲ್ಲಾ ಸಾಯಿಸುವಂತೆ ಹಿರಿಯ ಅಧಿಕಾರಿಗಳಿಂದ ಆದೇಶವಿತ್ತು. ಈ ಕಾರಣಕ್ಕೆ ನಾವು ಕಂಡ ಕಂಡವರನ್ನು ಕೊಲೆ ಮಾಡಿದೆವು ಅಂತಾ ಸೈನಿಕರು ತಪ್ಪೊಪ್ಪಿಕೊಂಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಸೈನಿಕರನ್ನು ಮೈಯೋ ವಿನ್ ತುನ್ ಹಾಗೂ ಜಾವ್ ನಾಯಿಂಗ್ ತುನ್ ಅಂತಾ ಗುರುತಿಸಲಾಗಿದೆ. ಈ ಹಿಂದೆ ರೊಹಿಂಗ್ಯಾ ಮುಸ್ಲೀಮರ ಹತ್ಯಾಕಾಂಡದಲ್ಲಿ ಮ್ಯಾನ್ಮಾರ್‌ ಸೇನೆಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಹಾಗೇ ಪ್ರಧಾನಿ ಆಂಗ್ ಸಾನ್ ಸೂ ಕಿ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ಮೊಳಗಿತ್ತು. 2017ರಲ್ಲಿ ನಡೆದಿದ್ದ ಈ ಹತ್ಯಾಕಾಂಡದಲ್ಲಿ ಸಾವಿರಾರು ರೊಹಿಂಗ್ಯಾಗಳು ಕೊಲೆಯಾಗಿದ್ದರೆ, ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ತಮ್ಮದ್ದನ್ನೆಲ್ಲಾ ಕಳೆದುಕೊಂಡು ನೆರೆ ದೇಶಗಳಿಗೆ ವಲಸೆ ಹೋಗಿದ್ದರು.

ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ

ಈ ಪೈಕಿ ಬಹುಪಾಲು ರೊಹಿಂಗ್ಯಾಗಳು ಬಾಂಗ್ಲಾದೇಶದಲ್ಲಿ ಜಾಗ ಪಡೆದಿದ್ದಾರೆ. ಹತ್ಯಾಕಾಂಡ ಎಷ್ಟು ಭೀಕರ ಹಾಗೂ ಅಮಾನವೀಯವಾಗಿತ್ತು ಎಂದರೆ, ಹೆಣಗಳ ರಾಶಿಯನ್ನು ಒಂದೇ ಗುಂಡಿಯಲ್ಲಿ ಹೂಳುತ್ತಿದ್ದರಂತೆ. ಮ್ಯಾನ್ಮಾರ್‌ ಸೇನೆ ವಿರುದ್ಧ ಹೋರಾಡುತ್ತಿರುವ ಸ್ಥಳೀಯ ಗುಂಪೊಂದು ಮ್ಯಾನ್ಮಾರ್‌ ಸೈನಿಕರ ವಿಡಿಯೋ ರಿಲೀಸ್ ಮಾಡಿದ್ದು, ಹತ್ಯಾಕಾಂಡದ ಭಯಾನಕತೆ ಹೊರಗೆಡವಿದೆ. ಆಂಗ್ ಸಾನ್ ಸೂ ಕಿ ವಿರುದ್ಧದ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಮೊದಲ ತಿಂಗಳಲ್ಲೇ 6700 ಜನರ ಹತ್ಯೆ

ಮೊದಲ ತಿಂಗಳಲ್ಲೇ 6700 ಜನರ ಹತ್ಯೆ

2017ರಲ್ಲಿ ಮ್ಯಾನ್ಮಾರ್‌ ಥೇಟ್ ನರಕವಾಗಿ ಬದಲಾಗಿ ಹೋಗಿತ್ತು. ಕಂಡ ಕಂಡಲ್ಲಿ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗುತ್ತಿತ್ತು. ಖುದ್ದು ಮ್ಯಾನ್ಮಾರ್‌ ಮಿಲಿಟರಿ ಸುಪಾರಿ ಪಡೆದಿತ್ತು. ಈ ರೀತಿ ಹತ್ಯಾಕಾಂಡ ಆರಂಭವಾದ ಮೊದಲ ತಿಂಗಳಲ್ಲೇ ಸುಮಾರು 6700 ಜನರನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದವರ ಪೈಕಿ 700ಕ್ಕೂ ಮಕ್ಕಳು ಕೂಡ ಜೀವ ಕಳೆದುಕೊಂಡಿದ್ದರು. ಮ್ಯಾನ್ಮಾರ್‌ ಸೇನೆಯ ಬೆಟಾಲಿಯನ್‌ಗಳನ್ನು ಡಿವೈಡ್ ಮಾಡಿ, ರೊಹಿಂಗ್ಯಾ ಮುಸ್ಲೀಮರನ್ನು ಕೊಲೆ ಮಾಡಲು ಕಳುಹಿಸಲಾಗಿತ್ತು ಎಂದು ಸೈನಿಕರು ತಪ್ಪೊಪ್ಪಿಕೊಂಡಿದ್ದಾರೆ.

ನಿರ್ಜೀವ ಕಂದನಿಗೆ ಲಾಲಿ ಹಾಡುತ್ತಿರುವ ರೊಹಿಂಗ್ಯಾ ತಾಯಿ ಈಕೆ!

ಮಹಿಳೆಯರು, ಮಕ್ಕಳ ರೇಪ್ & ಮರ್ಡರ್

ಮಹಿಳೆಯರು, ಮಕ್ಕಳ ರೇಪ್ & ಮರ್ಡರ್

ಅಲ್ಲಿ ಮಾನವೀಯತೆಗೆ ಬೆಲೆಯೇ ಇರಲಿಲ್ಲ. ಯೋಧರಾಗಿ ದೇಶವನ್ನು ಕಾಯಬೇಕಿದ್ದ ಮ್ಯಾನ್ಮಾರ್‌ ಸೈನಿಕರು ತಮ್ಮದೇ ದೇಶದ ಜನರನ್ನು ಹತ್ಯೆ ಮಾಡಿದ್ದರು, ಸುಲಿಗೆ ಮಾಡಿದ್ದರು. ಅಮಾನವೀಯವಾಗಿ ಮಹಿಳೆಯರು, ಮಕ್ಕಳನ್ನು ರೇಪ್ & ಮರ್ಡರ್ ಮಾಡಿದ್ದರು. ಆದರೆ ಈ ಆರೋಪವನ್ನು ಮ್ಯಾನ್ಮಾರ್‌ನ ಆಂಗ್ ಸಾನ್ ಸೂ ಕಿ ಸರ್ಕಾರ ನಿರಾಕರಿಸುತ್ತಲೇ ಬಂದಿತ್ತು. ಈಗ ಖುದ್ದು ಸೈನಿಕರೇ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ

ಒಂದೇ ರಾತ್ರಿಗೆ 20 ಹಳ್ಳಿಗಳು ಭಸ್ಮ

ಒಂದೇ ರಾತ್ರಿಗೆ 20 ಹಳ್ಳಿಗಳು ಭಸ್ಮ

ತಮ್ಮ ಕೃತ್ಯದ ಬಗ್ಗೆ ಯಾರಿಗೂ ತಿಳಿಯದಿರಲಿ ಎಂಬ ಕಾರಣಕ್ಕೆ ಮ್ಯಾನ್ಮಾರ್‌ ಸೈನಿಕರು ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರಂತೆ. ಜಾವ್ ನಾಯಿಂಗ್ ತುನ್ ತಪ್ಪೊಪ್ಪಿಕೊಂಡಿರುವ ಪ್ರಕಾರ, ಒಂದೇ ರಾತ್ರಿ ಇವರಿದ್ದ ಬೆಟಾಲಿಯನ್ 20 ಹಳ್ಳಿಗಳನ್ನು ಸ್ಮಶಾನ ಮಾಡಿತ್ತಂತೆ. ಹಳ್ಳಿಹಳ್ಳಿಗೂ ನುಗ್ಗಿ ಅಲ್ಲಿರುವ ರೊಹಿಂಗ್ಯಾ ಮುಸ್ಲೀಮರನ್ನು ವಿಕೃತವಾಗಿ ಹತ್ಯೆ ಮಾಡಿದ್ದಾರೆ. ಒಂದೇ ರಾತ್ರಿ ತಾನು ಕೂಡ 30 ಜನರ ದೇಹ ಹೂತಿದ್ದೆ ಎಂದು ಸ್ಮಶಾನ ಜಾವ್ ನಾಯಿಂಗ್ ತುನ್ ಕೃತ್ಯದ ಭಯಾನಕತೆ ಬಯಲಿಗೆಳೆದಿದ್ದಾನೆ.

  Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada
  ಚುನಾವಣೆ ಸಮಯದಲ್ಲೇ ‘ಸೂ ಕಿ’ಗೆ ಶಾಕ್..!

  ಚುನಾವಣೆ ಸಮಯದಲ್ಲೇ ‘ಸೂ ಕಿ’ಗೆ ಶಾಕ್..!

  ನವೆಂಬರ್‌ನಲ್ಲಿ ಮ್ಯಾನ್ಮಾರ್‌ನ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಆಂಗ್ ಸಾನ್ ಸೂ ಕಿ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಚುನಾವಣೆ ಸಮಯದಲ್ಲೇ ರೋಹಿಂಗ್ಯಾ ಹತ್ಯಾಕಾಂಡ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚುನಾವಣೆ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಮ್ಯಾನ್ಮಾರ್‌ ಸೇನೆ ಹತ್ಯಾಕಾಂಡದಲ್ಲಿ ಭಾಗವಹಿಸಿತ್ತು ಎಂಬ ಮಾಹಿತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳು ಸೂ ಕಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿವೆ. ಅದೇನೆ ಇರಲಿ ಧರ್ಮ, ಜನಾಂಗದ ಹೆಸರಲ್ಲಿ ಮ್ಯಾನ್ಮಾರ್‌ ಸೇನೆ ನಡೆಸಿದ ಹತ್ಯಾಕಾಂಡ ಮಾನವ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದ್ದು ವಿಪರ್ಯಾಸ.

  ರೊಹಿಂಗ್ಯಾ ನಿರಾಶ್ರಿತರ ಗಡಿಪಾರು: ಕೇಂದ್ರದ ನಿರ್ಧಾರಕ್ಕೆ ಅಡ್ಡಿ ಬರಲ್ಲ ಎಂದ ಸುಪ್ರೀಂ

  English summary
  Two Myanmar military deserters say they were ordered to take part in the indiscriminate mass killing and rape of Rohingya Muslims in 2017.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X