ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಕ್ರೂಸ್ ಡ್ರಗ್ಸ್ ಕೇಸ್: ಜಾಮೀನು ಪಡೆಯಲು ಆರ್ಯನ್ ಖಾನ್ ಮುಂದಿಟ್ಟ 10 ಕಾರಣಗಳು

|
Google Oneindia Kannada News

ಮುಂಬೈ, ಅಕ್ಟೋಬರ್ 13: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 3 ರಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್‌ರನ್ನು ಬಂಧಿಸಲಾಗಿದೆ. ಆರ್ಯನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಂಬೈನ ಎನ್‌ಡಿಪಿಎಸ್ ನ್ಯಾಯಾಲಯ, ಬುಧವಾರದೊಳಗೆ ಕೆಲ ಅಗತ್ಯ ಮಾಹಿತಿಗಳನ್ನು ನೀಡುವಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (ಎನ್‌ಸಿಬಿ) ಸೂಚನೆ ನೀಡಿದೆ. ಆರ್ಯನ್ ಖಾನ್ ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.45 ಕ್ಕೆ ನಿಗದಿಪಡಿಸಲಾಗಿದೆ. ಅಲ್ಲಿಯವರೆಗೆ ಆರ್ಯನ್ ಜೈಲಿನಲ್ಲಿಯೇ ಇರಬೇಕಾಗಿದೆ. ಈ ಮಧ್ಯೆ ಜಾಮೀನಿಗಾಗಿ ಆರ್ಯನ್ ಖಾನ್ ಪ್ರಯತ್ನಿಸುತ್ತಲೇ ಇದ್ದು ಈವರೆಗೆ ಅವರಿಗೆ ಜಾಮೀನು ಸಿಕ್ಕಿಲ್ಲ. ಆರ್ಯನ್ ಖಾನ್ ಜಾಮೀನು ಅರ್ಜಿ ಏನು ಹೇಳುತ್ತದೆ? ಈ ಪ್ರಕರಣದಲ್ಲಿ 23 ವರ್ಷದ ಆರ್ಯನ್ ಖಾನ್ ಜಾಮೀನು ಕೋರಲು ನೀಡಿದ ಹತ್ತು ಕಾರಣಗಳು ಇಲ್ಲಿವೆ.

1. ತಪ್ಪಾಗಿ ನನ್ನ ಹೆಸರು ಸೇರಿಸಲಾಗಿದೆ

ಆರ್ಯನ್ ಖಾನ್ ಜಾಮೀನು ಅರ್ಜಿಯಲ್ಲಿ ತಾನು ನಿರಪರಾಧಿ ಮತ್ತು ಯಾವುದೇ ಅಪರಾಧ ಮಾಡಿಲ್ಲ. ನನ್ನ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.

2.'ಮಾದಕ ವಸ್ತು ಸಿಕ್ಕಿಲ್ಲ'

ಆರ್ಯನ್ ಖಾನ್‌ನಿಂದ ಯಾವುದೇ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಇದನ್ನು ಸ್ವತ: ಎನ್‌ಸಿಬಿ ಆರ್ಯನ್ ಬಳಿ ಯಾವುದೇ ಅಪರಾಧಿ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಈ ವಿಚಾರವನ್ನು ಆರ್ಯನ್ ಜಾಮೀನು ಅರ್ಜಿಯಲ್ಲಿ ನಮೂದಿಸಿದ್ದಾರೆ. ಹೀಗಾಗಿ ತಾನು ತಪ್ಪು ಮಾಡಿದ್ದೇನೆ ಎಂದು ತೋರಲು ಯಾವುದೇ ಆಧಾರಗಳಿಲ್ಲ ಎಂದು ಆರ್ಯನ್ ಅರ್ಜಿಯಲ್ಲಿ ತಿಳಿಸಿದ್ದಾರೆ.

3. ಡ್ರಗ್ ಬಳಕೆಯೊಂದಿಗೆ ಯಾವುದೇ ಸಂಪರ್ಕವಿಲ್ಲ

3. ಡ್ರಗ್ ಬಳಕೆಯೊಂದಿಗೆ ಯಾವುದೇ ಸಂಪರ್ಕವಿಲ್ಲ

ಜಾಮೀನು ಅರ್ಜಿಯಲ್ಲಿ ಆರ್ಯನ್ ಖಾನ್ ತಾವು ಯಾವುದೇ ರೀತಿಯ ಸೈಕೋಟ್ರೋಪಿಕ್ ವಸ್ತು ಹೊಂದಿಲ್ಲ. ಜೊತೆಗೆ ಇದಕ್ಕೆ ಸಂಬಂಧಿಸಿದ ಹಣ, ಉತ್ಪಾದನೆ, ಸ್ವಾಧೀನ, ಮಾರಾಟ, ಖರೀದಿ ಅಥವಾ ಮಾದಕ ವ್ಯಸನಿಗಳೊಂದಿಗೆ ಸಂಪರ್ಕ ಹೊದಿರುವುದಾಗಿ ಸೂಚಿಸಲು ಯಾವುದೇ ಆಧಾರಗಳಿಲ್ಲ. ಜೊತೆಗೆ ಮಾದಕ ದ್ರವ್ಯಗಳು ಅಥವಾ ಸೈಕೋಟ್ರೋಪಿಕ್ ಪದಾರ್ಥಗಳಿಗೆ ಸಂಬಂಧಿಸಿದ ಅಪರಾಧಿಗಳಿಗೆ ಆಶ್ರಯ ನೀಡಿಲ್ಲ ಎಂದು ತಿಳಿಸಿದ್ದಾರೆ.

4. ವಾಟ್ಸಾಪ್ ಚಾಟ್ಸ್

ಜೊತೆಗೆ ಆರ್ಯನ್ ಖಾನ್ ಮತ್ತು ಮಾದಕವಸ್ತು ಮಾರಾಟಗಾರರ ನಡುವಿನ ವಾಟ್ಸಾಪ್ ಚಾಟ್‌ಗಳಿಗೂ ತನಿಖೆ ನಡೆಸುತ್ತಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ತಮ್ಮ ವಾಟ್ಸಾಪ್ ಚಾಟ್ ನಲ್ಲಿ ಯಾವುದೇ ಮಾಧಕ ವಸ್ತುಗಳ ಬಗ್ಗೆ ಚಾಟಿ ಮಾಡಿರುವ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ತಮಗ ಜಾಮೀನು ನೀಡಬೇಕು ಎಂದು ಕೋರಿದ್ದಾರೆ.

5. ಇದು ಜಾಮೀನು ನೀಡಬೇಕಾದ ವಿಷಯ

5. ಇದು ಜಾಮೀನು ನೀಡಬೇಕಾದ ವಿಷಯ

ಇದಲ್ಲದೆ ಅರ್ಜಿಯಲ್ಲಿ ಆರ್ಯನ್ ಖಾನ್ ಮತ್ತು ಆರೋಪಗಳಿಂದ ಯಾವುದೇ ಮಾದಕ ದ್ರವ್ಯಗಳು ಅಥವಾ ಸೈಕೋಟ್ರೋಪಿಕ್ ವಸ್ತುಗಳನ್ನು ವಶಪಡಿಸಿಕೊಳ್ಳದ ಕಾರಣ ಯಾವುದನ್ನು ನಿಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಹೀಗಾಗಿ 1985 ರ ಸೆಕ್ಷನ್ 37 ಗಂಭೀರ ಅಪರಾಧಗಳಿಗೆ ದಾಖಲಾಗುವುದರಿಂದ ಇದು ಆರ್ಯನ್ ಗೆ ಅನ್ವಯಿಸುವುದಿಲ್ಲ. ಜಾಮೀನು ನೀಡಬಹುದು ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದ. ನ್ಯಾಯಾಲಯ ಎನ್‌ಡಿಪಿಎಸ್ ಕಾಯಿದೆಯ ಅಡಿಯಲ್ಲಿ ಅಪರಾಧಗಳು ಜಾಮೀನು ರಹಿತವೆಂದು ತೀರ್ಮಾನಕ್ಕೆ ಬಂದರೂ ಸಹ ಸದರಿ ಕಾಯಿದೆಯ ಅಡಿಯಲ್ಲಿ ಅಪರಾಧ ಹೋರಿಸಲು ಯಾವುದೇ ಪುರಾವೆಗಳಿಲ್ಲ. ಇದು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣ ಎಂದು ಜಾಮೀನು ಅರ್ಜಿ ಹೇಳುತ್ತದೆ.

6. ಒಂದು ವೇಳೆ ತಪ್ಪಾಗಿದ್ದರೆ

ಒಂದು ವೇಳೆಆರ್ಯನ್ ಖಾನ್ ಡ್ರಗ್ಸ ಸೇವನೆ ಸಾಬೀತಾದರೆ ಆಗ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ.

7. ಇತರರ ತಪ್ಪು ಆರ್ಯನ್ ಮೇಲಾಕಲು ಸಾಧ್ಯವೇ..?

7. ಇತರರ ತಪ್ಪು ಆರ್ಯನ್ ಮೇಲಾಕಲು ಸಾಧ್ಯವೇ..?

ಪ್ರಕರಣದ ಇತರ ಆರೋಪಿಗಳಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರೆ ಅದನ್ನು ಆರ್ಯನ್ ಖಾನ್ ವಿರುದ್ಧ ನಡೆಸಲಾಗುವುದಿಲ್ಲ. ಪ್ರಸ್ತುತ ಪ್ರಕರಣವನ್ನು ಸಂಪೂರ್ಣವಾಗಿ ಆತನ ವಿರುದ್ಧವೇ ನಡೆಸಲು ಆಗುವುದಿಲ್ಲ ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.

8. ಕ್ರಿಮಿನಲ್ ಉದ್ದೇಶವಿಲ್ಲ

ಆರ್ಯನ್ ಖಾನ್ ವಯಸ್ಸಿನಲ್ಲಿ ಚಿಕ್ಕವನು ಮತ್ತು ಯಾವುದೇ ರೀತಿಯ ಕ್ರಿಮಿನಲ್ ಪೂರ್ವಾಪರಗಳನ್ನು ಹೊಂದಿಲ್ಲ. ಈ ಹಿಂದೆ ಔಷಧಗಳು ಅಥವಾ ಸೈಕೋಟ್ರೋಪಿಕ್ ಪದಾರ್ಥಗಳ ಬಳಕೆ ಅಥವಾ ಬಳಕೆಯಲ್ಲಿ ತೊಡಗಿರುವ ಯಾವುದೇ ಪೂರ್ವಸಿದ್ಧತೆ ಮಾಡಿಲ್ಲ ಎಂದು ಮನವಿ ಹೇಳುತ್ತದೆ.

9. ಪಲಾಯನದ ಉದ್ದೇಶವಿಲ್ಲ

9. ಪಲಾಯನದ ಉದ್ದೇಶವಿಲ್ಲ

ಆರ್ಯನ್ ಖಾನ್ ಸಮಾಜದಲ್ಲಿ ಬಲವಾದ ಬೇರುಗಳನ್ನು ಹೊಂದಿದ್ದಾರೆ. ಅವರ ಕುಟುಂಬದೊಂದಿಗೆ ಮುಂಬೈನ ಖಾಯಂ ನಿವಾಸಿಯಾಗಿದ್ದಾರೆ. ಹೀಗಾಗಿ ಜಾಮೀನು ನೀಡುವುದರಿಂದ ಆತ ತಲೆಮರೆಸಿಕೊಳ್ಳುವ ಅಥವಾ ನ್ಯಾಯದಿಂದ ಪಲಾಯನ ಮಾಡುವ ಸಾಧ್ಯತೆಯಿಲ್ಲ ಎಂದು ಜಾಮೀನು ಅರ್ಜಿ ಹೇಳುತ್ತದೆ. ಆರ್ಯನ್ ಖಾನ್ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ ಎಂದು ಸೂಚಿಸಲು ಏನೂ ದಾಖಲೆಗಳಿಲ್ಲ. ಹೀಗಾಗಿ ಜಾಮೀನು ನೀಡದೇ ಇರುವುದು ಸರಿಯಾದ ನಿರ್ಧಾರವಲ್ಲ ಎಂದು ಹೇಳಲಾಗಿದೆ.

10. ಜವಾಬ್ದಾರಿಯುತ ನಾಗರಿಕ

ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯಲ್ಲಿ, ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಸಿನಿಮೀಯ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಪ್ರಮುಖ ಬಾಲಿವುಡ್ ಚಲನಚಿತ್ರ ನಟನ ಮಗ. ಆತ ಭಾರತದ ಒಬ್ಬ ಜವಾಬ್ದಾರಿಯುತ ನಾಗರೀಕ ಮತ್ತು ಇದುವರೆಗೆ ಖ್ಯಾತಿ ಮತ್ತು ದಾಖಲೆಯನ್ನು ಹೊಂದಿದ್ದಾನೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.

English summary
Shah Rukh Khan's son Aryan Khan arrested in Mumbai Drugs Case. He was given 10 resons too get bail. Here are the reasons given in the Aryan Khan bail application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X