ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ!

|
Google Oneindia Kannada News

ನವದೆಹಲಿ, ಮೇ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ ಫ್ಲೆಮೇಟರಿ ಸಿಂಡ್ರೋಮ್(Multisystem Inflammatory Syndrome) ಕಾಯಿಲೆಯ ಲಕ್ಷಣಗಳು ಗೋಚರಿಸುತ್ತಿವೆ.

ವೈದ್ಯಕೀಯ ಭಾಷೆಯಲ್ಲಿ ಈ ಮಲ್ಟಿಸಿಸ್ಟಮ್ ಇನ್ ಫ್ಲೆಮೇಟರಿ ಸಿಂಡ್ರೋಮ್ ಅನ್ನು MIS-C ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಲಕ್ಷಣ ಸಹ ಬಹುಪಾಲು ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಂತೆ ಗೋಚರಿಸುತ್ತವೆ. ಆದರೆ ಕೊವಿಡ್-19 ಸೋಂಕಿಗಿಂತಲೂ ಮಕ್ಕಳ ಪಾಲಿಗೆ ಈ ರೋಗ ಅಪಾಯಕಾರಿ ಎನಿಸಿದೆ.

ಕಂದಮ್ಮಗಳಿಗೂ ಕೊರೊನಾ: ಕರ್ನಾಟಕದಲ್ಲಿ 40 ಸಾವಿರ ಮಕ್ಕಳಿಗೆ ಕೊವಿಡ್ ಪಾಸಿಟಿವ್!ಕಂದಮ್ಮಗಳಿಗೂ ಕೊರೊನಾ: ಕರ್ನಾಟಕದಲ್ಲಿ 40 ಸಾವಿರ ಮಕ್ಕಳಿಗೆ ಕೊವಿಡ್ ಪಾಸಿಟಿವ್!

ಮಕ್ಕಳಲ್ಲಿ MIS-C ಅಪಾಯ ಎದುರಿಸುತ್ತಿರುವ ಮಕ್ಕಳ ನರಕೋಶ ಮತ್ತು ಅಂಗಾಂಗಗಳಾದ ಹೃದಯ, ಶ್ವಾಸಕೋಶ, ರಕ್ತನಾಡಿ, ಕಿಡ್ನಿ, ಮೆದುಳು, ಚರ್ಮ ಹಾಗೂ ಕಣ್ಣುಗಳು ಊದುಕೊಳ್ಳುತ್ತವೆ. ಕೊರೊನಾವೈರಸ್ ಸೋಂಕಿನ ಜೊತೆಗೆ ಮಕ್ಕಳನ್ನು ಈ MIS-C ಅಪಾಯದಿಂದಲೂ ರಕ್ಷಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಈ MIS-C ಹೇಗಿರುತ್ತದೆ. MIS-C ಲಕ್ಷಣಗಳು ಹೇಗಿರುತ್ತವೆ. MIS-C ಕುರಿತು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

MIS-C ಒಂದು ಕಾಯಿಲೆಯ ಹೆಸರು ಅಲ್ಲವೇ ಅಲ್ಲ

MIS-C ಒಂದು ಕಾಯಿಲೆಯ ಹೆಸರು ಅಲ್ಲವೇ ಅಲ್ಲ

ಕೊರೊನಾವೈರಸ್ ಸೋಂಕಿನಂತೆ MIS-C ಕೂಡ ಒಂದು ರೋಗದ ಹೆಸರು ಎಂದುಕೊಳ್ಳುವಂತಿಲ್ಲ. ಏಕೆಂದರೆ MIS-C ಎನ್ನುವುದು ಹಲವು ರೋಗಗಳನ್ನು ಒಳಗೊಂಡಿರುವ ಒಂದು ದೊಡ್ಡ ಗುಂಪು ಆಗಿದೆ. ಈ ಅಪಾಯವನ್ನು ಪತ್ತೆ ಮಾಡುವುದಕ್ಕಾಗಿ ಹಲವು ರೋಗದ ಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷಾ ವರದಿ ಅಂತಿಮಗೊಂಡ ಬಳಿಕವಷ್ಟೇ MIS-C ಕುರಿತು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಕ್ಕಳಿಗೆ MIS-C ಅಂಟಿಕೊಂಡಲ್ಲಿ ಕಾಣಿಸುವ ಲಕ್ಷಣಗಳು

ಮಕ್ಕಳಿಗೆ MIS-C ಅಂಟಿಕೊಂಡಲ್ಲಿ ಕಾಣಿಸುವ ಲಕ್ಷಣಗಳು

* 24 ಗಂಟೆ ಮತ್ತು ಅದಕ್ಕಿಂತ ಹೆಚ್ಚು ಅವಧಿಯ ನಿರಂತರ ಜ್ವರ

* ವಾಂತಿ

* ಬೇಧಿ

* ಹೊಟ್ಟೆಯಲ್ಲಿ ತೀವ್ರ ನೋವು

* ಚರ್ಮದ ಮೇಲೆ ಕಲೆ

* ಅನಗತ್ಯ ಸುಸ್ತು ಆಗುವುದು

* ಹೃದಯ ಬಡಿತದ ವೇಗ ಹೆಚ್ಚುವುದು

* ಉಸಿರಾಟದ ವೇಗ ಹೆಚ್ಚುವುದು

* ಕಣ್ಣು ಕೆಂಪಾಗುವುದು

* ತುಟಿ ಮತ್ತು ನಾಲಗೆ ಕೆಂಪಾಗುವುದು ಅಥವಾ ಊದಿಕೊಳ್ಳುವುದು

* ಕೈ-ಕಾಲು ಕೆಂಪಾಗುವುದು ಅಥವಾ ಊದಿಕೊಳ್ಳುವುದು

* ತಲೆನೋವು ಮತ್ತು ತಲೆ ತಿರುಗುವಿಕೆ

MIS-C ರೋಗಳ ಗುಂಪಿನ ತುರ್ತು ಲಕ್ಷಣ

MIS-C ರೋಗಳ ಗುಂಪಿನ ತುರ್ತು ಲಕ್ಷಣ

* ತೀವ್ರ ಹೊಟ್ಟೆ ನೋವು

* ಉಸಿರಾಟಕ್ಕೆ ತೀವ್ರ ತೊಂದರೆ

* ದೇಹದ ಚರ್ಮ ನೀಲಿ ಅಥವಾ ಬೂದಿ ಬಣ್ಣಕ್ಕೆ ತಿರುಗುವುದು

* ಚರ್ಮದ ಛಾಯೆ ಮೇಲೆ ತುಟಿ ಮತ್ತು ಉಗುರುಗಳಲ್ಲಿ ಬಣ್ಣ ಬದಲಾವಣೆ

* ಗೊಂದಲಗಳಿಂದ ಎಚ್ಚೆತ್ತುಕೊಳ್ಳಲು ಅಸಮರ್ಥರಾಗಿರುವುದು

ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

* ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವುದು

* ಅನಾರೋಗ್ಯಕ್ಕೆ ತುತ್ತಾದ ಜನರಿಂದ ಅಂತರ ಕಾಯ್ದುಕೊಳ್ಳುವುದು

* ಇತರರಿಂದ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು

* ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು

* ನಿಮ್ಮ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳುವುದನ್ನು ಬಿಡಿ

* ಕೆಮ್ಮುವಾದ ಅಥವಾ ಸೀನುವಾದ ನಿಮ್ಮ ಮುಖಕ್ಕೆ ಟಿಶ್ಯೂ ಅಥವಾ ಅಂಗವಸ್ತ್ರವನ್ನು ಅಡ್ಡಲಾಗಿ ಹಿಡಿದುಕೊಳ್ಳಿರಿ

* ಅಗತ್ಯವಾಗಿ ನಿಮ್ಮ ಬಟ್ಟೆ ಹಾಗೂ ವಸ್ತ್ರಗಳನ್ನು ತೊಳೆದುಕೊಳ್ಳಿರಿ

MIS-C ಕುರಿತು ನಾವು ತಿಳಿದುಕೊಳ್ಳಬೇಕಾಗಿರುವುದು?

MIS-C ಕುರಿತು ನಾವು ತಿಳಿದುಕೊಳ್ಳಬೇಕಾಗಿರುವುದು?

ನಿಖರವಾಗಿ MIS-C ಕುರಿತು ಇಂಥದ್ದೇ ರೋಗ ಎಂದು ಹೇಳುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಕೊರೊನಾವೈರಸ್ ಸೋಂಕಿಗೆ ಹೊಂದಿಕೊಳ್ಳುವಂತಾ ಲಕ್ಷಣಗಳಲ್ಲೇ MIS-C ಒಳಗೊಂಡಿರುತ್ತದೆ. ಕೆಲವು ಅನಾರೋಗ್ಯ ಲಕ್ಷಣಗಳನ್ನು ಹೊಂದಿರುವ ಮಕ್ಕಳಲ್ಲಿ MIS-C ಇದೆ ಎಂದು ನಿಶ್ಚಿತವಾಗಿ ಹೇಳುವುದಕ್ಕೂ ಸಾಧ್ಯವಿಲ್ಲ. MIS-C ನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ವಲಯಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಸಿಡಿಸಿ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.

Recommended Video

ಕೊರೊನ ಸಮಯದಲ್ಲೇ ಸಾರ್ವಜನಿಕರಿಗೆ ನೆರವಾದ D K ShivaKumar | Oneindia Kannada

English summary
Multisystem Inflammatory Syndrome in Children (MIS-C): Signs, Symptoms And Details In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X