ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ಉಪ ಚುನಾವಣೆ ಸಮೀಕ್ಷೆ: ಬಿಜೆಪಿಗೆ ಭರ್ಜರಿ ಜಯ

|
Google Oneindia Kannada News

ಭೋಪಾಲ್, ನ. 7: ಕೊರೊನಾವೈರಸ್ ಕಾಟದ ನಡುವೆ ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಸಲಾಯಿತು. ನವೆಂಬರ್ 10ರಂದು ಫಲಿತಾಂಶ ಹೊರಬರಲಿದೆ. ಚುನಾವಣಾ ಆಯೋಗದ ನಿಯಮದಂತೆ ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬರಲಾರಂಭಿಸಿವೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...

ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ ವೆಬ್ ತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

229 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 107 ಸ್ಥಾನ ಹೊಂದಿದ್ದು, ಉಪ ಚುನಾವಣೆಯಲ್ಲಿ 28 ಸ್ಥಾನದ ಪೈಕಿ ಕನಿಷ್ಠ 8 ಸ್ಥಾನ ಗೆಲ್ಲಬೇಕಿದೆ. ಕಾಂಗ್ರೆಸ್ 87 ಸ್ಥಾನ ಹೊಂದಿದ್ದು, ಎಲ್ಲಾ 28 ಸ್ಥಾನವನ್ನು ಗೆಲ್ಲಬೇಕಿದೆ.

MP Bypoll Exit Poll Results 2020: India Today-Axis My India

Recommended Video

Bihar ಚುನಾವಣೆಯಲ್ಲಿ ಮದ್ಯಾಹ್ನ 1 ಗಂಟೆಗೆ 35%ರಷ್ಟು ಮತದಾನ | Oneindia kannada

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ
28 ಸ್ಥಾನಗಳ ಪೈಕಿ:
ಬಿಜೆಪಿ: 16 ರಿಂದ 18 ಸ್ಥಾನ
ಕಾಂಗ್ರೆಸ್: 10 ರಿಂದ 12
ಬಿಎಸ್ಪಿ: 1
ಅಂತಿಮ ಫಲಿತಾಂಶ: ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಉಳಿಯಲಿದ್ದು, ಬಹುಮತ ಗಳಿಸಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿ ಶೇ 46ರಷ್ಟು ಮತ ಗಳಿಸಲಿದೆ.

English summary
Madhya Pradesh Election Exit Poll Results 2020 in Kannada: India Today-Axis My India prediction is out. Madhya Pradesh by poll being held amid the Covid-19 pandemic, which poses new challenges for the exit pollsters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X