ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನ

|
Google Oneindia Kannada News

ದೇಶದಲ್ಲಿ ಸೆಪ್ಟೆಂಬರ್ ತಿಂಗಳವರೆಗೂ ತೀವ್ರ ಮಟ್ಟದಲ್ಲಿದ್ದ ಕೊರೊನಾ ವೈರಸ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 2020ರ ಜನವರಿ 30ರಂದು ದೇಶದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಪ್ರಸ್ತುತ ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಗಳ ಬಳಕೆ ಕಾರ್ಯ ಕೂಡ ಆರಂಭವಾಗಿದೆ. ದೇಶದಲ್ಲಿ ಇದುವರೆಗೂ ಒಂದು ಕೋಟಿಗೂ ಅಧಿಕ ಮಂದಿ ಕೋವಿಡ್‌ಗೆ ಒಳಗಾಗಿದ್ದು, ಅವರಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಮೃತಪಟ್ಟಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಪರ ವಿರೋಧದ ಸಾಕಷ್ಟು ಅಭಿಪ್ರಾಯಗಳಿವೆ. ಜನರ ಮನಸಿನಲ್ಲಿ ಕೇಂದ್ರ ಸರ್ಕಾರದ ಕ್ರಮಗಳ ಕುರಿತಾಗಿ ಯಾವ ಭಾವನೆ ಇದೆ ಎಂಬ ಬಗ್ಗೆ ಇಂಡಿಯಾ ಟುಡೆ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಸಮೀಕ್ಷೆ ಪ್ರಕಾರ ಮೋದಿ ಸರ್ಕಾರದ ಕ್ರಮಗಳ ಬಗ್ಗೆ ಜನರು ಸಮಾಧಾನ ವ್ಯಕ್ತಪಡಿಸಿದ್ದಾರೆ.

ABP-C Voter Opinion Poll: ಪುದುಚೆರಿಯಲ್ಲಿ ಬದಲಾದ ಜನಾಭಿಪ್ರಾಯABP-C Voter Opinion Poll: ಪುದುಚೆರಿಯಲ್ಲಿ ಬದಲಾದ ಜನಾಭಿಪ್ರಾಯ

194 ವಿಧಾನಸಭೆ ಕ್ಷೇತ್ರಗಳಲ್ಲಿ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ನಡೆಸಲಾಗಿದೆ. ಇದರಲ್ಲಿ ಶೇ 23ರಷ್ಟು ಜನರು ಮೋದಿ ಸರ್ಕಾರವು ಕೋವಿಡ್ ಪಿಡುಗನ್ನು ಅತ್ಯದ್ಭುತವಾಗಿ ನಿಭಾಯಿಸಿದೆ ಎಂದಿದ್ದರೆ, ಶೇ 50ರಷ್ಟು ಜನರಿಗೆ ಸರ್ಕಾರದ ಕ್ರಮಗಳು ಉತ್ತಮವಾಗಿವೆ ಎನಿಸಿದೆ. ಶೇ 8ರಷ್ಟು ಜನರಿಗೆ ಮಾತ್ರ ಕಳಪೆ ಅಥವಾ ತೀರಾ ಕಳಪೆ ಎನಿಸಿದೆ. ಮುಂದೆ ಓದಿ.

ಶೇ ಏಳು ಜನರಿಗೆ ವೈರಸ್

ಶೇ ಏಳು ಜನರಿಗೆ ವೈರಸ್

ವೈರಸ್ ಹರಡುವಿಕೆ ವ್ಯಾಪಕವಾಗಿದ್ದರೂ, ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರ ಪೈಕಿ ಶೇ 7ರಷ್ಟು ಜನರು ಮಾತ್ರ ತಾವು ಅಥವಾ ತಮ್ಮ ಕುಟುಂಬದ ಸದಸ್ಯರು ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

ಆಗಸ್ಟ್ ತಿಂಗಳ ಸಮೀಕ್ಷೆ

ಆಗಸ್ಟ್ ತಿಂಗಳ ಸಮೀಕ್ಷೆ

ಆಗಸ್ಟ್ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ ಸರ್ಕಾರ ಕೋವಿಡ್‌ಅನ್ನು ನಿಭಾಯಿಸಿದ ಬಗೆ ಅತ್ಯದ್ಭುತವಾಗಿತ್ತು ಎಂದು ಶೇ 29ರಷ್ಟು ಜನರು ಹೇಳಿದ್ದರು. ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂದು ಶೇ 48ರಷ್ಟು ಜನರಿಗೆ ಅನಿಸಿತ್ತು. ಇನ್ನು ಸಾಧಾರಣ ಎಂದು ಶೇ 18 ಹಾಗೂ ಕಳಪೆ ಎಂದು ಶೇ 5ರಷ್ಟು ಮಂದಿ ತಿಳಿಸಿದ್ದರು.

ABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವುABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವು

ಕುಟುಂಬದ ಸದಸ್ಯರಿಗೆ ಕೋವಿಡ್

ಕುಟುಂಬದ ಸದಸ್ಯರಿಗೆ ಕೋವಿಡ್

ಭಾರತದ 1.32 ಬಿಲಿಯನ್ ಜನಸಂಖ್ಯೆಯಲ್ಲಿ ಇದುವರೆಗೂ ಕೇವಲ ಶೇ 0.7ರಷ್ಟು ಜನತೆ ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿರುವುದು ದೃಢಪಟ್ಟಿದೆ. ಇದು ಸಾವಿನ ಸಂಖ್ಯೆಗೂ ಅನ್ವಯಿಸುತ್ತದೆ. ಶೇ 73ರಷ್ಟು ಜನರು ತಮ್ಮ ಕುಟುಂಬದ ಯಾವ ಸದಸ್ಯರೂ ಕೋವಿಡ್‌ಗೆ ತುತ್ತಾಗಿಲ್ಲ, ಅದರಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಶೇ 25ರಷ್ಟು ಜನರು ಮಾತ್ರ ತಮ್ಮ ಸಮೀಪದವರನ್ನು ಕೋವಿಡ್‌ನಿಂದ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಕೋವಿಡ್ ರೋಗಿಗಳ ಆಸ್ಪತ್ರೆ ಆಯ್ಕೆ

ಕೋವಿಡ್ ರೋಗಿಗಳ ಆಸ್ಪತ್ರೆ ಆಯ್ಕೆ

ಆಸಕ್ತಿಕರ ಸಂಗತಿಯೆಂದರೆ ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗಳನ್ನು ಆಯ್ದುಕೊಂಡಿದ್ದಾರೆ. ಸೋಂಕಿಗೆ ಒಳಗಾದವರ ಪೈಕಿ ಶೇ 61ರಷ್ಟು ಮೂಡ್ ಆಫ್ ದಿ ನೇಷನ್ ಪ್ರತಿಕ್ರಿಯೆದಾರರು ಸರ್ಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶೇ 24ರಷ್ಟು ಮಂದಿ ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದರೆ, ಶೇ 12ರಷ್ಟು ಜನರು ಆಸ್ಪತ್ರೆಗೇ ಭೇಟಿ ನೀಡಿಲ್ಲ. ಶೇ 76ರಷ್ಟು ಜನರು ಆಸ್ಪತ್ರೆ ಚಿಕಿತ್ಸೆಯಿಂದ ತೃಪ್ತಿ ಹೊಂದಿದ್ದಾರೆ.

ಲಾಕ್‌ಡೌನ್ ಒಳ್ಳೆಯದು, ಆದರೆ...

ಲಾಕ್‌ಡೌನ್ ಒಳ್ಳೆಯದು, ಆದರೆ...

ರಾಷ್ಟ್ರವ್ಯಾಪಿ ಕಳೆದ ವರ್ಷ ಜಾರಿಗೆ ತಂದಿದ್ದ ಲಾಕ್‌ಡೌನ್, ಕೋವಿಡ್-19ರ ಹರಡುವಿಕೆಯನ್ನು ತಗ್ಗಿಸಲು ನೆರವಾಗಿದೆ ಎಂದು ಶೇ 39ರಷ್ಟು ಜನರಿಗೆ ಅನಿಸಿದೆ. ಶೇ 28ರಷ್ಟು ಜನರಿಗೆ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಕಾರಣವಾಗಿದೆ ಎನಿಸಿದ್ದರೂ, ಅದರಿಂದ ತೀವ್ರ ಸಂಕಷ್ಟಗಳು ಎದುರಾದವು ಎಂದಿದ್ದಾರೆ. ಶೇ 10ರಷ್ಟು ಜನರಿಗೆ ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದೆನಿಸಿದೆ.

English summary
Mood Of The Nation Survey: 23% people said Modi government's handling of the pandemic to be outstanding, 50% people said it was good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X