ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್‌ಡಿಎ

|
Google Oneindia Kannada News

ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆಗಳು, ಗಡಿಯಲ್ಲಿ ಚೀನಾ ಸೈನಿಕರ ಹಾವಳಿ ವಿವಾದ, ಕೊರೊನಾ ವೈರಸ್ ಸಂಕಷ್ಟ ಮತ್ತು ಆರ್ಥಿಕತೆ ಕುಸಿತದಂತಹ ಅನೇಕ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಇದು ಸರ್ಕಾರದ ಕುರಿತಾದ ಜನರ ಅಭಿಪ್ರಾಯವನ್ನು ತಕ್ಕಮಟ್ಟಿಗೆ ಬದಲಿಸಿವೆ.

ದೇಶದ ಮುಂದೆ ಇರುವ ಸವಾಲುಗಳು ಹಾಗೂ ಸರ್ಕಾರದ ಕ್ರಮಗಳಿಂದ ಅದರ ಜನಪ್ರಿಯತೆ ಸಾಕಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಯಾ ಟುಡೆ-ಕಾರ್ವಿ ಸಂಸ್ಥೆಗಳು ಜತೆಗೂಡಿ ಜನರ ಮನಸ್ಥಿತಿ ಅರಿಯಲು ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಜನರು ಮೋದಿ ಸರ್ಕಾರದ ಬಗ್ಗೆ ಈಗಲೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.

Mood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನMood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನ

ಈ ಸಂದರ್ಭದಲ್ಲಿ ದೇಶದಾದ್ಯಂತ ಸಂಸತ್ ಚುನಾವಣೆ ನಡೆದರೂ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ 321 ಸೀಟುಗಳೊಂದಿಗೆ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.

2020ರ ಆಗಸ್ಟ್‌ ತಿಂಗಳಲ್ಲಿ ಕೂಡ ಇದೇ ರೀತಿಯ ಸಮೀಕ್ಷೆ ನಡೆಸಲಾಗಿತ್ತು. ಆಗ 316 ಸೀಟುಗಳು ಎನ್‌ಡಿಎಗೆ ಸಿಗಲಿದೆ ಎಂದು ಹೇಳಲಾಗಿತ್ತು. ಅಂದರೆ ಜನವರಿ ತಿಂಗಳ ವೇಳೆಗೆ ಎನ್‌ಡಿಎದ ಕುರಿತಾದ ಜನರ ಒಲವು ಸುಧಾರಣೆಯಾಗಿದೆ. ಮುಂದೆ ಓದಿ.

ಅಲ್ಪ ಪ್ರಮಾಣದ ಇಳಿಕೆ

ಅಲ್ಪ ಪ್ರಮಾಣದ ಇಳಿಕೆ

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 357 ಸೀಟುಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಅದರಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದ್ದೂ, ಸರ್ಕಾರದ ವಿರುದ್ಧ ದೊಡ್ಡಮಟ್ಟದ ಆಕ್ರೋಶ ಕಂಡುಬಂದಿಲ್ಲ. ಇನ್ನೊಂದೆಡೆ ಯುಪಿಎ ಒಕ್ಕೂಟದೆಡೆಗಿನ ಜನರ ಅಭಿಪ್ರಾಯ ಬದಲಾಗಿಲ್ಲ. ಕಳೆದ ಸಮೀಕ್ಷೆಯಲ್ಲಿ ಯುಪಿಎಗೆ 93 ಸೀಟು ಸಿಗಲಿವೆ ಎನ್ನಲಾಗಿತ್ತು. ಈ ಬಾರಿ ಕೂಡ ಅದರಲ್ಲಿ ವ್ಯತ್ಯಾಸವಾಗಿಲ್ಲ. ಇತರರು 129 ಸೀಟುಗಳಲ್ಲಿ ಗೆಲ್ಲಬಹುದು.

ಶೇ 43ರಷ್ಟು ಮತಗಳು

ಶೇ 43ರಷ್ಟು ಮತಗಳು

ಈಗ ಚುನಾವಣೆ ನಡೆದರೆ ಎನ್‌ಡಿಎ ಒಕ್ಕೂಟವು ಶೇ 43ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇ 45ರಷ್ಟು ಮತಗಳು ಎನ್‌ಡಿಎಗೆ ಸಿಕ್ಕಿದ್ದವು. ಎನ್‌ಡಿಎ ಒಕ್ಕೂಟವು ತನ್ನ ಉತ್ತರ ಭಾರತದಲ್ಲಿನ ಪ್ರಬಲ ನೆಲೆಗಳಲ್ಲಿ ಹಿಂದಿ, ಹಿಂದು, ಹಿಂದುತ್ವ ರಾಜಕಾರಣ ಮತಗಳಿಕೆಗೆ ನೆರವಾಗಲಿದ್ದರೆ, ದಕ್ಷಿಣದಲ್ಲಿ ಸ್ಥಳೀಯ ಪಕ್ಷಗಳ ಸಹಕಾರ ಎನ್‌ಡಿಎ ಕೈಹಿಡಿಯಲಿದೆ.

ಬಿಜೆಪಿ ಮತಗಳಲ್ಲಿ ಏರಿಕೆ

ಬಿಜೆಪಿ ಮತಗಳಲ್ಲಿ ಏರಿಕೆ

ಆಗಸ್ಟ್‌ನಲ್ಲಿ ಬಿಜೆಪಿ ಶೇ 36ರಷ್ಟು ಮತಗಳನ್ನು ಪಡೆಯಲಿದೆ ಎನ್ನಲಾಗಿತ್ತು. ಈಗ ಅದರ ಪ್ರಮಾಣ ಶೇ 37ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮತ ಹಂಚಿಕೆಯಲ್ಲಿ ಅಷ್ಟೇನೂ ಬದಲಾವಣೆಯಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ನರೇಂದ್ರ ಮೋದಿ ಆಡಳಿತ

ನರೇಂದ್ರ ಮೋದಿ ಆಡಳಿತ

ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪ್ರದರ್ಶನ ಅತ್ಯುತ್ತಮ ಅಥವಾ ಉತ್ತಮವಾಗಿದೆ ಎಂದು ಶೇ 74ರಷ್ಟು ಮಂದಿ ಹೇಳಿದ್ದಾರೆ. 2020ರ ಆಗಸ್ಟ್ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 78ರಷ್ಟಿತ್ತು. ಶೇ 44ರಷ್ಟು ಜನರು ಉತ್ತಮ ಆಡಳಿತ ಎಂದಿದ್ದರೆ, ಶೇ 30ರಷ್ಟು ಮಂದಿ ಅದ್ಭುತ ಎಂದಿದ್ದಾರೆ. ಶೇ 17ರಷ್ಟು ಮಂದಿಗೆ ಸಾಧಾರಣ ಎಂಬ ಅನಿಸಿಕೆ ಉಂಟಾಗಿದೆ. ಇನ್ನು ಶೇ 6ರಷ್ಟು ಮಂದಿ ಕೆಟ್ಟ ಆಡಳಿತ ಎಂದಿದ್ದಾರೆ.

ಯಾವ ಪ್ರಧಾನಿ ಉತ್ತಮ?

ಯಾವ ಪ್ರಧಾನಿ ಉತ್ತಮ?

ಅತ್ಯುತ್ತಮ ಪ್ರಧಾನಿಗಳ ಪಟ್ಟಿಯಲ್ಲಿ ಕೂಡ ಮೋದಿ ಮುಂದಿದ್ದಾರೆ. ಮೋದಿ ಪರ ಶೇ 38ರಷ್ಟು ಮತಗಳು, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶೇ 18, ಇಂದಿರಾ ಗಾಂಧಿ ಅವರಿಗೆ ಶೇ 11, ಜವಹರಲಾಲ್ ನೆಹರೂ ಅವರಿಗೆ ಶೇ 8 ಮತ್ತು ಮನಮೋಹನ್ ಸಿಂಗ್ ಅವರಗೆ ಶೇ 7ರಷ್ಟು ಮತಗಳು ದೊರಕಿವೆ.

English summary
Mood Of The Nation Survey: NDA will regain its power with 321 seats if Lok Sabha elections were held today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X