ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 2.0 ಸರ್ಕಾರ ಹೆಚ್ಚು ಉದ್ಯೋಗ ಸೃಷ್ಟಿಸಬಹುದು: ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 24: ಭಾರತದ ಇಂದಿನ ಅತಿದೊಡ್ಡ ಸಮಸ್ಯೆಯೆಂದರೆ ನಿರುದ್ಯೋಗ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ. ಆದರೆ ಇದಕ್ಕೆ ಆಶಾದಾಯಕವಾಗಿ ಮೋದಿ 2.0 ಸರ್ಕಾರವು ಹೆಚ್ಚು ಉದ್ಯೋಗ ಸೃಷ್ಟಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿರುವ ಈ ಸಮೀಕ್ಷೆ ಡಿಸೆಂಬರ್ 2019ರಲ್ಲಿ ನಡೆಸಲಾಗಿದ್ದು, 19 ರಾಜ್ಯಗಳ 194 ವಿಧಾನಸಭಾ ಕ್ಷೇತ್ರಗಳಲ್ಲಿ 12 141 ಮಂದಿಯನ್ನು ಸಂದರ್ಶಿಸಿ ಪ್ರತಿಕ್ರಿಯೆ ಪಡೆದುಕೊಳ್ಳಲಾಗಿದೆ.

ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?

ಸಮೀಕ್ಷೆ ಪ್ರಕಾರ ಶೇ 32ರಷ್ಟು ಮಂದಿ ನಿರುದ್ಯೋಗ ಬಹುದೊಡ್ಡ ಸಮಸ್ಯೆ ಎಂದಿದ್ದಾರೆ. ಇದಾದ ಬಳಿಕ ರೈತರ ಬವಣೆ (ಶೇ 15), ಬೆಲೆ ಏರಿಕೆ (ಶೇ 14), ಭ್ರಷ್ಟಾಚಾರ (ಶೇ12) ಆರ್ಥಿಕ ಹಿಂಜರಿತ ಶೇ 10ರಷ್ಟು ಇದೆ.

Mood of the Nation survey: 47% believe that Modi 2.0 will create more jobs

2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ 6.1ರಷ್ಟಿತ್ತು ಎಂದು ಸರ್ಕಾರಿ ಅಂಕಿ ಅಂಶ ಹೇಳಿದೆ. 2018-19ರಲ್ಲಿ ಇದೇ ಪ್ರಮಾಣ ಗ್ರಾಮೀಣ ಭಾರತದಲ್ಲಿ ಶೇ 5.3ರಷ್ಟು ಹಾಗೂ ನಗರಗಳಲ್ಲಿ ಶೇ 7.8 ರಷ್ಟಾಗಿದೆ.

ಉದ್ಯೋಗ ಸೃಷ್ಟಿಯ ನಿರೀಕ್ಷೆ:
ಆದರೆ, ಮೋದಿ ನೇತೃತ್ವದ ಹಾಲಿ ಎನ್ಡಿಎ ಸರ್ಕಾರವು ಹೆಚ್ಚು ಉದ್ಯೋಗ ಸೃಷ್ಟಿಸಬಹುದೆ? ಎಂದು ಕೇಳಲಾದ ಪ್ರಶ್ನೆಗೆ ಬಂದ ಉತ್ತರ, ಫಲಿತಾಂಶ ಹೀಗಿದೆ:
ಹೌದು: ಶೇ47
ಇಲ್ಲ: ಶೇ 34
ಗೊತ್ತಿಲ್ಲ: 19

ಪ್ರದೇಶವಾರು ಅಂಕಿ ಅಂಶ:
ಉತ್ತರ: 47%
ಪೂರ್ವ: 46%
ದಕ್ಷಿಣ: 45%
ಪಶ್ಚಿಮ: 55%

ನಗರ: 45%
ಗ್ರಾಮೀಣ: 48%

ಆರ್ಥಿಕ ಹಿಂಜರಿತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಶಸ್ವಿಯಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಶೇ 39ರಷ್ಟು ಮಂದಿ ಹೌದು ಎಂದಿದ್ದಾರೆ. ಶೇ 30ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಪೂರಕವಾಗಿ ಉದ್ಯೋಗ ಸೃಷ್ಟಿ ಕುರಿತಂತೆ ತೆಗೆದುಕೊಂಡ ಕ್ರಮ ಸರಿಯಿದೆಯೇ? ಎಂಬ ಪ್ರಶ್ನೆಗೆ ಶೇ 37ರಷ್ಟು ಮಂದಿ ಉತ್ತಮವಾಗಿದೆ ಎಂದಿದ್ದರೆ, ಶೇ 30ರಷ್ಟು ಮಂದಿ ಸಂಪೂರ್ಣ ವೈಫಲ್ಯವಾಗಿದ್ದಾರೆ ಎಂದು ಅಭಿಮತ ನೀಡಿದ್ದಾರೆ.

English summary
Mood of the Nation survey: Total 47 per cent of the respondents in the Mood of the Nation survey believe that the BJP government will be able to create more employment in its second term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X