ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾನರ ಸೈನ್ಯಕ್ಕೂ ತಟ್ಟಿದ ಬೇಸಿಗೆ ಬಿಸಿ: ಸಿಂಟೆಕ್ಸ್‌ ವಾಟರ್ ಟ್ಯಾಂಕ್‌ನಲ್ಲಿ ಕೋತಿಗಳ ಆಟ

|
Google Oneindia Kannada News

ಬೇಸಿಗೆಯ ಬಿಸಿ ವಾನರ ಸೈನ್ಯಕ್ಕೂ ತಟ್ಟಿದೆ. ಬಿಸಿಲಿನ ಶಾಖವನ್ನು ತಣಿಸಲು ಕೋತಿಗಳು ಮಾಳಿಗೆ ಮೇಲಿರುವ ವಾಟರ್ ಟ್ಯಾಂಕ್‌ನಲ್ಲಿ ಮಿಂದೆದ್ದಿವೆ. ಸಿಂಟೆಕ್ಸ್‌ ವಾಟರ್ ಟ್ಯಾಂಕ್‌ನಲ್ಲಿ ಕೋತಿಗಳು ಆಟ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಳಿಗೆ ಮೇಲಿರುವ ವಾಟರ್ ಟ್ಯಾಂಕ್‌ನಲ್ಲಿ ಕೋತಿಗಳು ಈಜಾಡಿ ಸ್ನಾನ ಮಾಡಿದ ದೃಶ್ಯ ಸೆರೆಯಾಗಿದೆ. ಈ ದೃಶ್ಯವನ್ನು ಕಂಡು ಜನ ಮುಖಕಿವಿಚಿಕೊಂಡಿದ್ದಾರೆ. ಕೋತಿಗಳು ಒಂದಾದ ಮೇಲೆ ಒಂದು ವಾಟರ್ ಟ್ಯಾಂಕಿನಲ್ಲಿ ಮುಳುಗಿ ಮೈಉಜ್ಜಿಕೊಂಡು ಸ್ನಾನ ಮಾಡಿವೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ತಮ್ಮ ಮನೆ ಮೇಲಿರುವ ವಾಟರ್ ಟ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಇತ್ತೀಚೆಗೆ ಭಾರತದ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಹೀಗಾಗಿ ಜನ ಮನೆ ಬಿಟ್ಟು ಹೊರಬರಲಾಗುತ್ತಿಲ್ಲ. ತುರ್ತು ಸಂದರ್ಭವನ್ನು ಹೊರತುಪಡಿಸಿ ಮನೆ ಬಿಟ್ಟ ಹೊರ ಬರಲು ನೂರು ಬಾರಿ ಯೋಚಿಸುವಂತಾಗಿದೆ. ಮನೆಯಲ್ಲಿರುವ ಜನಗಳೇ ಹೀಗೆ ಯೋಚಿಸುತ್ತಿರುವಾಗ ಇನ್ನೂ ಪ್ರಾಣಿಗಳ ಗತಿ ಏನಾಗಬೇಡ. ಮರ ಅಥವಾ ಇನ್ಯಾವುದೋ ಗೋಡೆಯ ನೆರಳಿಗೆ ಜೀವನ ಮಾಡುವ ಪ್ರಾಣಿಗಳ ಸ್ಥಿತಿ ಹೇಳತೀರದ್ದಾಗಿದೆ. ಕುಡಿಯಲು ನೀರು ಸಿಗದೆ, ಬಾಯಾರಿಕೆಯಿಂದ ಪ್ರಾಣಿ ಪಕ್ಷಗಳು ನರಕಯಾತನೆ ಅನುಭವಿಸುತ್ತಿವೆ. ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಲು ಕೊಂಚ ನೀರು ಕಂಡರು ಪ್ರಾಣಿಗಳು ಅಮೃತ ಸಿಕ್ಕಷ್ಟೇ ಖುಷಿ ಪಡುತ್ತಿವೆ. ಹೀಗಾಗಿ ಮನೆ ಮೇಲಿರುವ ತೆರೆದ ವಾಟರ್ ಟ್ಯಾಂಕ್‌ನಲ್ಲಿ ಬೇಸಿಗೆ ಬಿಸಿ ತಣಿಸಿದ ಕೋತಿಗಳು ಮಿಂದೆದ್ದಿರುವ ದೃಶ್ಯ ಕಂಡುಬಂದಿದೆ. ಇದು ಬೇಸಿಗೆ ಬಿಸಿಯ ಪ್ರಾಣಿಗಳ ಮೇಲೆ ಬೀರಿರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

Monkeys Swim In Water Tank To Beat The Summer Heat; Video Goes Viral

ಭಾರತದ ಹೆಚ್ಚಿನ ಭಾಗಗಳಲ್ಲಿ ಈ ಬಾರಿ ಶಾಖದ ವಾತಾವರಣ ಹೆಚ್ಚಿರುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಭಾರತದ ಹವಾಮಾನ ಇಲಾಖೆಯು ಏಪ್ರಿಲ್ 27ರಿಂದ ಮೇ 2ರವರೆಗೆ ಕನಿಷ್ಠ ಮುಂದಿನ ಐದು ದಿನಗಳವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆ ಎಚ್ಚರಿಕೆ ನೀಡಿದೆ. ಮಾರ್ಚ್ ಆರಂಭದಿಂದಲೂ ತೀವ್ರ ಶಾಖದ ಅಲೆಯು ದೇಶವನ್ನು ಸುಡಲಾರಂಭಿಸಿದೆ. ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು ಇದನ್ನೂ ಮೀರುವ ಸಾಧ್ಯತೆ ಇದೆ. ವಾಯುವ್ಯ ಭಾರತವು ಕಳೆದ ವಾರದಿಂದ ಮಾರ್ಚ್‌ನಿಂದ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದೆ. ಹವಾಮಾನ ತಜ್ಞರು ಇದು ಲಘು ಮಳೆ ಮತ್ತು ಗುಡುಗು ಸಹಿತ ಮಳೆಯ ಅನುಪಸ್ಥಿತಿಗೆ ಕಾರಣವೆಂದು ಹೇಳುತ್ತಾರೆ.

English summary
Monkeys Swim In Water Tank To Beat The Summer Heat; Video Goes Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X