ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಳಿಕ ಮತ್ತೆ ಆತಂಕ ಸೃಷ್ಟಿಸುತ್ತಿರುವ ಮಂಕಿಪಾಕ್ಸ್: ದೇಶದಲ್ಲಿ 8 ಪ್ರಕರಣಗಳು..

|
Google Oneindia Kannada News

ಮಂಕಿಪಾಕ್ಸ್ ಈ ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಈ ಕಾಯಿಲೆಯ ಪ್ರಕರಣಗಳು ಈಗ ಭಾರತಕ್ಕೆ ಆತಂಕದ ಗೆರೆಗಳನ್ನು ಎಳೆಯುತ್ತಿವೆ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ರೋಗವು ಖಂಡಿತವಾಗಿಯೂ ಹರಡುತ್ತಿದೆ ಎಂಬುವುದನ್ನು ಇಂದಿನ ಪ್ರಕರಣಗಳಿಂದ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಮಂಕಿಪಾಕ್ಸ್ ಕಾಯಿಲೆಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.

ಇಂದು ಅಂದರೆ ಆಗಸ್ಟ್ 2ರಂದು ದೇಶದಲ್ಲಿ ಮೊದಲ ಬಾರಿಗೆ ಎರಡು ಹೊಸ ಮಂಕಿಪಾಕ್ಸ್ ಸೋಂಕು ದೃಢಪಟ್ಟಿವೆ. ಈ ಹಿಂದೆ ಕೆಲವು ದಿನಗಳ ಅಂತರದಲ್ಲಿ ಹೊಸ ರೋಗಿಗಳು ಬರುತ್ತಿದ್ದರು. ಆದರೆ ಇಂದು ಒಂದೇ ದಿನ ದೇಶದ ಎರಡು ಬೇರೆ-ಬೇರೆ ರಾಜ್ಯಗಳಲ್ಲಿ ಇಬ್ಬರು ಮಂಕಿಪಾಕ್ಸ್ ಹೊಸ ರೋಗಿಗಳು ಪತ್ತೆಯಾಗಿದ್ದಾರೆ.

ದೇಶದಲ್ಲಿ ಇದುವರೆಗೆ ಎಂಟು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ಈ ಎಂಟು ಜನರಲ್ಲಿ ಐದು ರೋಗಿಗಳು ಕೇರಳದವರಾಗಿದ್ದರೆ, ಮೂವರು ರೋಗಿಗಳು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂದು ಕೇರಳದ ಜೊತೆಗೆ ದೆಹಲಿಯಲ್ಲಿ ತಲಾ ಒಬ್ಬ ಹೊಸ ರೋಗಿ ದೃಢಪಟ್ಟಿದೆ. ಇದರೊಂದಿಗೆ ಕೇರಳದಲ್ಲಿ ಒಟ್ಟು ರೋಗಿಗಳ ಸಂಖ್ಯೆ ಐದು ಮತ್ತು ದೆಹಲಿಯಲ್ಲಿ ಮೂರಕ್ಕೆ ಏರಿದೆ. ಇಲ್ಲಿ ಹೊಸ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಆರೋಗ್ಯ ಸೌಲಭ್ಯಗಳನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಿವೆ.

 ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುವಲ್ಲಿ ನಿರತ

ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುವಲ್ಲಿ ನಿರತ

ಆರೋಗ್ಯ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಇಂದು ದೆಹಲಿಯಲ್ಲಿ ವಾಸಿಸುತ್ತಿರುವ 35 ವರ್ಷದ ನೈಜೀರಿಯನ್ ವ್ಯಕ್ತಿಯ ವರದಿಯು ಪಾಸಿಟಿವ್‌ ಬಂದಿದೆ. ಇದಕ್ಕೂ ಮುಂಚೆಯೇ ದೆಹಲಿಯಲ್ಲಿ ವಾಸಿಸುತ್ತಿರುವ ಇನ್ನೊಬ್ಬ ನೈಜೀರಿಯನ್ ವರದಿಯು ಪಾಸಿಟಿವ್‌ ಆಗಿದ್ದಾನೆ. ಇಂದು ಸೋಂಕಿಗೆ ಒಳಗಾದ ನೈಜೀರಿಯನ್ ವ್ಯಕ್ತಿ ಇತ್ತೀಚೆಗೆ ಪ್ರಯಾಣಿಸದಿರುವುದು ಕಳವಳಕಾರಿ ಸಂಗತಿಯಾಗಿದೆ. ಅವನಿಂದ ಯಾವುದೇ ಟ್ರಾವೆಲ್‌ ಹಿಸ್ಟರಿ ತಿಳಿದು ಬಂದಿಲ್ಲ ಹೀಗಿರುವಾಗ ಮಂಕಿಪಾಕ್ಸ್ ವೈರಸ್ ಎಲ್ಲಿಂದ ಬಂತು ಎಂಬ ನಿಖರ ಮಾಹಿತಿಗಳು ಸಿಕ್ಕಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆಹಾಕುವಲ್ಲಿ ನಿರತವಾಗಿದೆ.

 22 ವರ್ಷದ ಯುವಕ ಮಂಕಿಪಾಕ್ಸ್‌ನಿಂದ ಸಾವು

22 ವರ್ಷದ ಯುವಕ ಮಂಕಿಪಾಕ್ಸ್‌ನಿಂದ ಸಾವು

ಜುಲೈ 14ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಆದರೆ, ಈ ರೋಗಿಯು ಕಳೆದ ವಾರ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಮಾಡಲಾಗಿದೆ. ಇದರ ನಂತರ, ಜುಲೈ 18 ರಂದು ಕಣ್ಣೂರು ಜಿಲ್ಲೆಯಲ್ಲಿ ಎರಡನೇ ಪ್ರಕರಣ ಮತ್ತು ಜುಲೈ 22 ರಂದು ಮಲಪ್ಪುರಂನಲ್ಲಿ ಮೂರನೇ ಪ್ರಕರಣ ವರದಿಯಾಗಿದೆ. ಅವರೆಲ್ಲರೂ ಬೇರೆ ದೇಶದಿಂದ ಹಿಂತಿರುಗಿದ್ದರು. ಇದೇ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ಕೇರಳದಲ್ಲಿ ಮಂಗನ ಕಾಯಿಲೆಗೆ ತುತ್ತಾದ ಯುವಕ ಮೃತಪಟ್ಟಿದ್ದಾನೆ. ಹೇಳಲಾದ ರೋಗಿಯ ವಯಸ್ಸು ಕೇವಲ 22 ವರ್ಷಗಳು.

 ಪ್ರತ್ಯೇಕ ವಾರ್ಡ್‌ಗಳಿಗೆ ಸಿದ್ಧತೆ

ಪ್ರತ್ಯೇಕ ವಾರ್ಡ್‌ಗಳಿಗೆ ಸಿದ್ಧತೆ

ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆಯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಮಂಕಿಪಾಕ್ಸ್‌ನ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಸರ್ಕಾರವು ಕೇವಲ ಮೂರು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಪೂರ್ವ ದೆಹಲಿಯ ಕೈಲಾಶ್ ದೀಪಕ್ ಆಸ್ಪತ್ರೆ, ಉತ್ತರ ದೆಹಲಿಯ ಎಂಡಿ ಸಿಟಿ ಆಸ್ಪತ್ರೆ ಮತ್ತು ದಕ್ಷಿಣ ದೆಹಲಿಯ ಬಾತ್ರಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಮಂಕಿಪಾಕ್ಸ್‌ಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲು ಈಗಾಗಲೇ ಸೂಚಿಸಲಾಗಿದೆ.

 ಲಸಿಕೆ ತಯಾರಿಸಲು ಲ್ಯಾಬ್‌ನಲ್ಲಿ ಎಲ್ಲಾ ಸಿದ್ಧತೆ

ಲಸಿಕೆ ತಯಾರಿಸಲು ಲ್ಯಾಬ್‌ನಲ್ಲಿ ಎಲ್ಲಾ ಸಿದ್ಧತೆ

ಭಾರತದಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳ ಈ ನಡುವೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದರ್ ಪೂನವಾಲಾ ಮಂಗಳವಾರ ಈ ರೋಗದ ವಿರುದ್ಧ ಹೋರಾಡಲು, ಲಸಿಕೆ ತಯಾರಿಸಲು ಲ್ಯಾಬ್‌ನಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆದಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾದ ನಂತರ ಅವರ ಹೇಳಿಕೆ ಹೊರಬಿದ್ದಿದೆ. ವಿದೇಶ ಪ್ರವಾಸದ ಇತ್ತೀಚಿನ ಇತಿಹಾಸವಿಲ್ಲದ ಆಫ್ರಿಕನ್ ಮೂಲದ 35 ವರ್ಷದ ವ್ಯಕ್ತಿ ದೆಹಲಿಯಲ್ಲಿ ಮಂಕಿಪಾಕ್ಸ್‌ ಪರೀಕ್ಷೆ ನಡೆಸಿದ್ದಾರೆ. ಪ್ರಕರಣವು ಪಾಸಿಟಿವ್‌ ಬಂದ ನಂತರ ಮಂಗಳವಾರ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದು ದೆಹಲಿಯಲ್ಲಿ 3ನೇ ಪ್ರಕರಣವಾಗಿದ್ದು, ಮಂಕಿಪಾಕ್ಸ್‌ ದೇಶದಲ್ಲಿ ಎಂಟನೇ ಪ್ರಕರಣವಾಗಿದೆ ಎಂದು 8ನೇ ಪ್ರಕರಣವಾಗಿದೆ ಎಂದು ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.

English summary
8 monkeypox cases reported in India so far Read more The World Health Organization (WHO) has declared monkeypox a global health emergency. More cases of monkeypox have been reported in 75 countries and territories globally,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X