ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್ ನಿರ್ಲಕ್ಷ್ಯ ಬೇಡ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ಹುಷಾರ್ ಎಂದ ಡಬ್ಲ್ಯೂಎಚ್‌ಒ

|
Google Oneindia Kannada News

ಬೆಂಗಳೂರು: ಆಫ್ರಿಕಾದ ಕೆಲ ದೇಶಗಳಲ್ಲಿ ಪಿಡುಗಾಗಿರುವ ಮಂಕಿಪಾಕ್ಸ್ ಕಾಯಿಲೆ ಇದೀಗ ಬೇರೆ 20ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದೆ. 300ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ರೋಗದ ಬಗ್ಗೆ ಎಚ್ಚರಿಕೆ ಹೊರಡಿಸಿದ್ದು, ಪ್ರಕರಣಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೊರೋನಾ ವೈರಸ್ ಸೋಂಕು ವಾಯುವೇಗದಲ್ಲಿ ಹಬ್ಬುವುದನ್ನು ಕಂಡು ಮಂಕಿಪಾಕ್ಸ್ ಸೋಂಕು ಹರಡುವಿಕೆಯ ವೇಗ ಇಷ್ಟು ಕಡಿಮೆಯಾ ಎಂದು ಉದ್ಗರಿಸುವವರಿಗೆ ಡಬ್ಲ್ಯೂಎಚ್‌ಒ ಚಾಟಿ ಬೀಸಿದೆ. ಈಗ ಬೆಳಕಿಗೆ ಬಂದಿರುವ ಪ್ರಕರಣಗಳು ಟಿಪ್ ಆಫ್ ದ ಐಸ್‌ಬರ್ಗ್ ಅಷ್ಟೇ. ಈಗಲೇ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸೋಂಕು ಹರಡುವಿಕೆ ತೀರಾ ಹೆಚ್ಚಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಕೊರೊನಾ ಹೋಯ್ತು, ಮಂಕಿಫಾಕ್ಸ್ ಬಂತು; ಎರಡು ರೋಗಗಳ ಮಧ್ಯೆ ಏನಿದು ನಂಟು!?ಕೊರೊನಾ ಹೋಯ್ತು, ಮಂಕಿಫಾಕ್ಸ್ ಬಂತು; ಎರಡು ರೋಗಗಳ ಮಧ್ಯೆ ಏನಿದು ನಂಟು!?

 ಮಂಗನಿಂದ ಮಾನವನಿಗೆ

ಮಂಗನಿಂದ ಮಾನವನಿಗೆ

ಸಂಶೋಧನೆ ಮತ್ತು ಅಧ್ಯಯನಕ್ಕೆಂದು ಕೂಡಿಡಲಾಗಿದ್ದ ಮಂಗಗಳಲ್ಲಿ ಮೊದಲು ಇದರ ವೈರಸ್ ಕಾಣಿಸಿಕೊಂಡಿದೆ. ಅದು 1958ರ ವರ್ಷ. ಆದರೆ, ಮಾನವನಲ್ಲಿ ಈ ವೈರಸ್ ಇರುವುದು ಮೊದಲು ಗೊತ್ತಾಗಿದ್ದು 1970ರಲ್ಲಿ. ಆಫ್ರಿಕಾದ ಮಧ್ಯ ಮತ್ತು ಪಶ್ಚಿಮ ಭಾಗದ 11 ದೇಶಗಳಲ್ಲಿ ಇದು ಸಾಕಷ್ಟು ಹಬ್ಬಿದ್ದು, ಅಲ್ಲೆಲ್ಲಾ ಈಗ ಎಂಡೆಮಿಕ್ ಕಾಯಿಲೆಯಾಗಿ ಮುಂದುವರಿದಿದೆ. ಎಂಡೆಮಿಕ್ ಎಂದರೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆಗಾಗ್ಗೆ ಬಂದು ಹೋಗುವ ಕಾಯಿಲೆ.

 ಮಂಕಿಪಾಕ್ಸ್ ಮತ್ತು ಸಿಡುಬು

ಮಂಕಿಪಾಕ್ಸ್ ಮತ್ತು ಸಿಡುಬು

ಸ್ಮಾಲ್ ಪಾಕ್ಸ್ ಅಥವಾ ಸಿಡುಬಿಗೆ ಕಾರಣವಾಗುವ ವೈರಸ್‌ಗೆ ಹೋಲಿಸಿದರೆ ಮಂಕಿಪಾಕ್ಸ್ ವೈರಸ್ ತೀರಾ ಅಪಾಯಕಾರಿ ಅಲ್ಲ ಎಂಬುದು ಸದ್ಯದ ಮಾಹಿತಿ. ಆದರೆ ಇದು ವೇಗವಾಗಿ ಹರಡಬಲ್ಲುದು. ಎಚ್ಚರದಿಂದ ಇರಬೇಕಾದ ವಿಷಯ ಎಂದರೆ ಕೊರೋನಾವೈರಸ್‌ನಂತೆ ಮಂಕಿಪಾಕ್ಸ್‌ಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇಲ್ಲಿ ಸೋಂಕು ಬಂದ ನೂರು ಮಂದಿಯ ಪೈಕಿ 3ರಿಂದ 6 ಮಂದಿ ಸಾವನ್ನಪ್ಪುವುದು ತಿಳಿದುಬಂದಿದೆ. ಇದು ಬಿಟ್ಟರೆ ಸಾಮಾನ್ಯವಾಗಿ ಸೋಂಕಿತರು ಮೂರರಿಂದ ನಾಲ್ಕು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ.

ಮಂಕಿಪಾಕ್ಸ್ ರೋಗಿಗಳನ್ನು ಪ್ರತ್ಯೇಕವಾಗಿರಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆಮಂಕಿಪಾಕ್ಸ್ ರೋಗಿಗಳನ್ನು ಪ್ರತ್ಯೇಕವಾಗಿರಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆ

 ಪುರುಷರು ಮತ್ತು ಗೇ

ಪುರುಷರು ಮತ್ತು ಗೇ

ವಿವಿಧ ದೇಶಗಳ ಮಾಹಿತಿ ಪ್ರಕಾರ, ಈಗ ಬೆಳಕಿಗೆ ಬಂದಿರುವ ಮಂಕಿಪಾಕ್ಸ್ ಸೋಂಕು ಪ್ರಕರಣಗಳಲ್ಲಿ ಪುರುಷ ಸಲಿಂಗಿಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಹಾಗೆಯೇ, ಹೆಚ್ಚಿನ ಪ್ರಕರಣಗಳು 40 ವರ್ಷ ವಯಸ್ಸಿನ ಕೆಳಗಿನ ಪುರುಷರದ್ದೇ ಆಗಿರುವುದು ಮತ್ತೊಂದು ಕುತೂಹಲಕಾರಿ ಸಂಗತಿ.

 ಅನಿರೀಕ್ಷಿತ ವೇಗ

ಅನಿರೀಕ್ಷಿತ ವೇಗ

ಬ್ರಿಟನ್ ದೇಶದಲ್ಲಿ ಮೇ ತಿಂಗಳ ಆರಂಭದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಬೆಳಕಿಗೆ ಬಂದಿದ್ದು. ಮೂರ್ನಾಲ್ಕು ವಾರದಲ್ಲಿ ಅಲ್ಲಿ 90 ಮಂದಿಗೆ ಸೋಂಕು ವ್ಯಾಪಿಸಿದೆ. ಸ್ಪೇನ್ ದೇಶದಲ್ಲಿ 98, ಪೋರ್ಚುಗಲ್ ದೇಶದಲ್ಲಿ 74 ಪ್ರಕರಣಗಳು ಬಹಳ ಕ್ಷಿಪ್ರಗತಿಯಲ್ಲಿ ಆಗಿವೆ. ಬಹಳ ಅಸ್ವಾಭಾವಿಕ ರೀತಿಯಲ್ಲಿ ಮಂಕಿಪಾಕ್ಸ್ ವೇಗವಾಗಿ ಹಬ್ಬುತ್ತಿದೆ ಎಂಬುದು ತಜ್ಞರ ಅನಿಸಿಕೆ. ಡಬ್ಲ್ಯೂಎಚ್‌ಒ ಕೂಡ ಇದೇ ವಿಚಾರವನ್ನು ಒತ್ತಿಹೇಳುತ್ತಾ ಎಚ್ಚರಿಕೆಯ ಸಂದೇಶ ನೀಡಿದೆ.

 ರೋಗಲಕ್ಷಣಗಳೇನು?

ರೋಗಲಕ್ಷಣಗಳೇನು?

ಮನುಷ್ಯರಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕು ಇದ್ದರೆ ಜ್ವರ, ಮೈಕೈ ನೋವು, ಮಾಂಸಖಂಡ ನೋವು, ಚಳಿ ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈಗ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿಯೂ ಜ್ವರ ಮತ್ತು ಚಳಿ ಬರುತ್ತದೆ. ಹಾಗಂತ, ಈಗ ಜ್ವರ, ಚಳಿ ಆದರೆ ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಕೋವಿಡ್‌ನಂತೆ ಈ ಪ್ರಕರಣದಲ್ಲೂ ಸೋಂಕಿತರು ಪ್ರತ್ಯೇಕವಾಸ ಅಥವಾ ಐಸೊಲೇಶನ್‌ನಲ್ಲಿ ಇರುವುದು ಸರಿಯಾದ ಮುನ್ನೆಚ್ಚರಿಕೆ ಕ್ರಮ ಎನ್ನುತ್ತಾರೆ ತಜ್ಞರು.

 ಸ್ಮಾಲ್‌ಪಾಕ್ಸ್ ಲಸಿಕೆಗಳಿಗೆ ತಡಕಾಟ

ಸ್ಮಾಲ್‌ಪಾಕ್ಸ್ ಲಸಿಕೆಗಳಿಗೆ ತಡಕಾಟ

ಮಂಕಿಪಾಕ್ಸ್ ಸೋಂಕಿಗೆ ಯಾವುದೇ ಚಿಕಿತ್ಸೆ ಸದ್ಯಕ್ಕೆ ಇಲ್ಲ. ಸ್ಮಾಲ್‌ಪಾಕ್ಸ್ ಅಥವಾ ಸಿಡುಬು ರೋಗಕ್ಕೆ ಆರಂಭದಲ್ಲಿ ತಯಾರಿಸಲಾಗಿದ್ದ ಲಸಿಕೆಗಳು ಮಂಕಿಪಾಕ್ಸ್ ರೋಗಕ್ಕೆ ಪರಿಣಾಮಕಾರಿ ಆಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಅದರೆ, ಈ ಲಸಿಕೆಗಳು ಎಷ್ಟು ಪ್ರಮಾಣದಲ್ಲಿ ಸದ್ಯ ಲಭ್ಯ ಇವೆ ಎಂಬುದು ಗೊತ್ತಿಲ್ಲ. ಆಫ್ರಿಕಾದ ಕೆಲ ದೇಶಗಳಿಂದ ಕೆಲ ಲಸಿಕೆ ಡೋಸ್‌ಗಳನ್ನು ಪಡೆಯಬಹುದು.

English summary
Number of monkeypox cases has reached 300 outside of countries where the virus usually circulates. The World Health Organisation has warned of more cases in coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X