ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿಗರ ನಿದ್ದೆಕೆಡಿಸಿದ ಮಂಗನ ಕಾಯಿಲೆ: ಲಕ್ಷಣ ಮತ್ತು ಪರಿಹಾರಗಳು

|
Google Oneindia Kannada News

ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಒಬ್ಬರನ್ನೊಬ್ಬರು ಭೇಟಿಯಾದರೆ 'ಹೀಗಿದ್ದೀರಿ? ಅಡಿಕೆ ಕೊಯ್ಲು ಆಯ್ತಾ? ಕೊಳೆ ರೋಗ ಬಂದಿತ್ತಾ? ಚಳಿ ಹೇಗಿದೆ? ಭತ್ತದ ಕೊಯ್ಲು ಆಯ್ತಾ' ಎಂಬಿತ್ಯಾದಿ ಮಾತುಗಳು ಮಾಮೂಲಾಗಿತ್ತು.

ಆದರೆ ಈಗ ಹಾಗಿಲ್ಲ. ಯಾರೇ ಭೇಟಿಯಾದರೂ ಮೊದಲು ಕೇಳೋ ಪ್ರಶ್ನೆ. 'ನಿಮ್ಮ ಕಡೆ ಮಂಗನ ಕಾಯಿಲೆ ಇದ್ಯಾ?' ಅನ್ನೋದು!

ಹೌದು, ಮಲೆನಾಡಿಗರನ್ನು ಈ ಪರಿ ನಿದ್ದೆಗೆಡುವಂತೆ ಮಾಡಿದೆ ಮಂಗನ ಕಾಯಿಲೆ. ಕ್ಯಾಸನೂರ್ ಡಿಸೀಸ್ ಎಂದೂ ಕರೆಯಲ್ಪಡುವ ಮಂಗನ ಕಾಯಿಲೆಗೆ ಈಗಾಗಲೇ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಹಲವರಲ್ಲಿ ಈ ರೋಗದ ಸೋಂಕು ಕಾಣಿಸಿಕೊಂಡಿದ್ದು ಭೀತಿ ಆವರಿಸಿದೆ.

ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳುಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು

ಮಂಗಳ ಕಾಯಿಲೆ ಇರುವ ಪ್ರದೇಶಗಳನ್ನು ಬಿಟ್ಟು, ಮನೆಗೆ ಭೀಗ ಜಡಿದು, ಜಾನುವಾರುಗಳನ್ನು ಮೇಯಲು ಬಿಟ್ಟು ಕುಟುಂಬ ಸಮೇತ ಜನರು ಸಂಬಂಧಿಗಳ ಮೆನೆಗೆ ತೆರಳುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಅಷ್ಟಕ್ಕೂ ಏನಿದು ಮಂಗನ ಕಾಯಿಲೆ? ಲಕ್ಷಣಗಳೇನು? ಪರಿಹಾರವೇನಾದರೂ ಇದೆಯಾ?

ಏನಿದು ಮಂಗನ ಕಾಯಿಲೆ?

ಏನಿದು ಮಂಗನ ಕಾಯಿಲೆ?

ಮಂಗನ ಕಾಯಿಲೆ ಕೆ ಎಫ್ ಡಿವಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್) ಎಂಬ ವೈರಸ್ ನಿಂದ ಹರಡುವ ಕಾಯಿಲೆಯಾಗಿದೆ. 1957 ಮರಣ ಹೊಂದಿದ ಕೋತಿಯಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಮೊದಲು ಕಾಣಿಸಿಕೊಂಡ ಮಂಗನ ಜ್ವರಕ್ಕೆ ಕಾರಣವಾಗುವ ವೈರಸ್ ಗೆ 'ಕ್ಯಾಸನೂರು' ಎಂದೇ ನಾಮಕರಣ ಮಾಡಲಾಗಿದೆ! ರೋಗಗ್ರಸ್ತ ಕೋತಿಯ ದೇಹದಲ್ಲಿದ್ದ ಉಣ್ಣಿ ಅಥವಾ ಉಣುಗು(Tick) ಕೋತಿ ಮರಣ ಹೂಂದಿದ ನಂತರ ಉದುರಿ ಗಾಳಿಯ ಮೂಲಕ, ಅತವಾ ಜಾನುವಾರುಗಳ ಮೂಲಕ ಇಲ್ಲವೇ ನೇರವಾಗಿ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ. ಅದು ಕಚ್ಚುವುದರಿಂದ KFDV ವೈರಾಣು ಮನುಷ್ಯನ ದೇಹ ಪ್ರವೇಶಿಸಿ, ರೋಗ ಉಂಟು ಮಾಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಈ ರೋಗ ಹರಡುವುದಿಲ್ಲ ಎಂಬುದು ಕೊಂಚ ಸಮಾಧಾನದ ವಿಚಾರ.

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ

ಲಕ್ಷಣವೇನು?

ಲಕ್ಷಣವೇನು?

* ವೈರಸ್ ದೇಹ ಸೇರಿದ ಒಂದು ವಾರದವರೆಗೂ ಯಾವುದೇ ಲಕ್ಷಣ ಕಂಡುಬರುವುದಿಲ್ಲ.
* ವಾರದ ನಂತರ ವಿಪರೀತ ಜ್ವರ, ತಲೆನೋವು, ಸುಸ್ತು, ನರದೌರ್ಬಲ್ಯ, ಮಾಂಸಖಂಡ ಸೆಳೆತ, ವಾಂತಿ ಕಂಡುಬರುತ್ತದೆ.
* ರೋಗ ಉಲ್ಬಣಕ್ಕೆ ತಲುಪಿದಾಗ ಬಾಯಿ, ವಸಡು, ಮೂಗು ಮತ್ತು ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ.
* ಕಡಿಮೆ ರಕ್ತದೊತ್ತಡ ಉಂಟಾಗುವುದಲ್ಲದೆ, ರಕ್ತದಲ್ಲಿ ಕೆಂಪು ಮತ್ತು ಬಿಳ ರಕ್ತಕಣಗಳು ಕಡಿಮೆಯಾಗುತ್ತದೆ.
* ಇದರಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.
* ರೋಗ ವಿಪರೀತಕ್ಕೆ ತಿರುಗಿದಾಗ ರೋಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.
* ಈ ರೋಗದಿಂದ ಮರಣ ಹೊಂದುವವರ ಸಂಖ್ಯೆ 3-5%

ಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿ

ಬೇಸಿಗೆಯಲ್ಲಿ ಹೆಚ್ಚು

ಬೇಸಿಗೆಯಲ್ಲಿ ಹೆಚ್ಚು

ಈ ರೋಗ ಬೇಸಿಗೆಯಲ್ಲಿ ಕಂಡುಬರುವುದು ಹೆಚ್ಚು. ಅಂದರೆ ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ. ಆದರೆ ಈ ವರ್ಷ ಚಳಿಗಾಲದಲ್ಲೇ ರೋಗ ಕಾಣಿಸಿಕೊಂಡಿದ್ದು ಮಲೆನಾಡಿನ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಕಾಯಿಲೆ ಹೆಚ್ಚಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಪರಿಹಾರವೇನು?

ಪರಿಹಾರವೇನು?

ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ. ಈ ಭಾಗದ ಜನರು ಜ್ವರ ಕಾಣಿಸಿಕೊಲ್ಳುತ್ತಿದದದಂತೆಯೇ ನಿರ್ಲಕ್ಷ್ಯಿಸದೆ ಒಮ್ಮೆ ವೈದ್ಯರನ್ನು ಕಾಣುವುದು ಒಳಿತು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ನಿರ್ಜಲೀಕರಣವಾದರೆ ರೋಗ ಉಲ್ಬಣಿಸುತ್ತದೆ. ಆದ್ದರಿಂದ ಶುದ್ಧವಾದ, ಕಾಯಿಸಿದ ನೀರನ್ನು ಹೆಚ್ಚು ಸೇವಿಸಿ.

ಮುನ್ನೆಚ್ಚರಿಕೆಯೇ ಪ್ರಮುಖ ಪರಿಹಾರ!

ಮುನ್ನೆಚ್ಚರಿಕೆಯೇ ಪ್ರಮುಖ ಪರಿಹಾರ!

* ರೋಗ ಹೆಚ್ಚುತ್ತಿರುವುದು ತಿಳಿಯುತ್ತಿದ್ದಂತೆಯೇ ದೇಹಕ್ಕೆ ಉಣುಗು(ಉಣ್ಣಿ) ಅಂಟಿಕೊಳ್ಳದಂತೆ, ದಪ್ಪ, ಮೈಮುಚ್ಚುವ ಬಟ್ಟೆ ಧರಿಸಿ, ಹೊರಗೆಲ್ಲೇ ತೆರಳಲುವಾಗ ಶೂ ಧರಿಸುವುದನ್ನು ಮರೆಯಬೇಡಿ.

* ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಅಮೃತಬಳ್ಳಿಯ ಕಷಾಯ, ಅರಿಶಿಣ, ನಿಂಬೆ ಹಣ್ಣಿನ ಪಾನಕ, ಜೇನುತುಪ್ಪ ಬೆರೆಸಿದ ನೀರು, ತುಳಸಿ ಕಷಾಯ ಇತ್ಯಾದಿ ಮನೆಮದ್ದುಗಳನ್ನು ಹೆಚ್ಚು ಹೆಚ್ಚು ಬಳಸಿ.

* ಒಮ್ಮೆ ರೋಗ ಪತ್ತೆಯಾದರೆ ವೈದ್ಯರು ನೀಡಿದ ಔಷದವನ್ನು ಚಾಚೂ ತಪ್ಪದೆ ತೆಗೆದುಕೊಂಡು, ಜೊತೆಯಲ್ಲೇ ಮನೆಮದ್ದುಗಳನ್ನೂ ಸೇವಿಸಿ.

English summary
Monkey fever caused sleepless nights to people of Malenadu region, especially in Sagar taluk in Shivamogga district. Here are causes, symptoms and remedies precautions to Monkey fever
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X