ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ 'ಇಡಿ' ಗೆ ಆಸ್ತ್ರ

|
Google Oneindia Kannada News

Recommended Video

DK Shivakumar case : ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ ಮುಳುವು | Oneindia Kannada

ಬೆಂಗಳೂರು, ಸೆ.30: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ದೆಹಲಿ ಹೈಕೋರ್ಟ್ ಸೋಮವಾರ(ಸೆ. 30) ದಂದು ಮುಂದೂಡಿದೆ. ಇನ್ನೊಂದೆಡೆ ಡಿಕೆಶಿ ಸೋದರ ಕಾಂಗ್ರೆಸ್ ಏಕೈಕ ಸಂಸದ ಡಿಕೆ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯವು ವಿಚಾರಣೆಗಾಗಿ ನೋಟಿಸ್ ಜಾರಿ ಮಾಡಿದೆ.

ಡಿಕೆ ಸುರೇಶ್ ಅವರನ್ನು ಇಷ್ಟು ದಿನ ಬಿಟ್ಟು ಈಗ ವಿಚಾರಣೆಗೆ ಕರೆಯಲು ಕಾರಣವೇನು? ಅಣ್ಣನ ಮಗಳು ಐಶ್ವರ್ಯಾಗೆ ಕೊಟ್ಟ ಸಾಲವೇ ಡಿಕೆ ಸುರೇಶ್ ಗೆ ಉರುಳಾಗುವುದೇ? ಡಿಕೆಶಿ ಹೊರ ಬಂದರೂ ಡಿಕೆ ಸುರೇಶ್ ಅಂದರ್ ಆಗುವ ಎಲ್ಲಾ ಲಕ್ಷಣಗಳು ಏಕೆ ಕಾಣಿಸಿಕೊಂಡಿವೆ? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

Breaking: ವಿಚಾರಣೆಗೆ ಹಾಜರಾಗುವಂತೆ ಡಿಕೆ ಸುರೇಶ್‌ಗೆ ಇಡಿ ನೋಟಿಸ್Breaking: ವಿಚಾರಣೆಗೆ ಹಾಜರಾಗುವಂತೆ ಡಿಕೆ ಸುರೇಶ್‌ಗೆ ಇಡಿ ನೋಟಿಸ್

ಅಣ್ಣ ಡಿಕೆ ಶಿವಕುಮಾರ್ ತಿಹಾರ್ ಜೈಲುವಾಸ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಅವರ ಸಹೋದರ ಡಿ.ಕೆ.ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 'ಇಡಿ ಅಧಿಕಾರಿಗಳು ಹೇಳಿದ್ದೆಲ್ಲವೂ ಸತ್ಯವಲ್ಲ' ಎಂದಿದ್ದರು. "ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆದಾಗ, ಬರೋಬ್ಬರಿ 77 ಮನೆಗಳ ಮೇಲೆ ದಾಳಿ ಮಾಡಲಾಗಿತ್ತು, ಅವರ ಎಲ್ಲ ಆಸ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದೆಲ್ಲವೂ ನಮ್ಮದೇ ಎಂದ್ರೆ ಹೇಗೆ?" ಎಂದು ಪ್ರಶ್ನಿಸಿದ್ದರು. ಇದಕ್ಕೆ ಪೂರಕವಾಗಿ ಕೋರ್ಟಿನಲ್ಲಿ ವಾದ -ಪ್ರತಿವಾದ ಸಂದರ್ಭದಲ್ಲಿ ಇಡಿ ಪರ ವಕೀಲರು, ಡಿಕೆಶಿ ಹೊಂದಿದ್ದಾರೆ ಎನ್ನಲಾದ 317 ಬ್ಯಾಂಕ್ ಖಾತೆ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ವಾದಿಸಿ, ಹೆಚ್ಚಿನ ವಿಚಾರಣೆಗಾಗಿ ಸಮಯ ಕೋರಿದ್ದರು.

ಆದಾಯ ತೆರಿಗೆ ಇಲಾಖೆ ಲೆಕ್ಕಕ್ಕೆ ಬೆಲೆ ಇಲ್ಲವೇ?

ಆದಾಯ ತೆರಿಗೆ ಇಲಾಖೆ ಲೆಕ್ಕಕ್ಕೆ ಬೆಲೆ ಇಲ್ಲವೇ?

'ಸಂವಿಧಾನಕ್ಕೆ, ಕಾನೂನಿಗೆ ಬದ್ಧವಾಗಿಯೇ ನಾವುಗಳು ನಮ್ಮ ವ್ಯಾಪಾರ ವ್ಯವಹಾರ ಮಾಡಿದ್ದೇವೆ, ನಾವು ಸಹ ಇತರ ವ್ಯಾಪಾರಿಗಳಂತೆ ಒಡಂಬಡಿಕೆ, ಸಾಲ ಇನ್ನಿತರ ಮೂಲಗಳಿಂದ ಹಣ ಪಡೆದು ವ್ಯಾಪಾರ ಮಾಡಿ ಲಾಭ ಗಳಿಸಿದ್ದೇವೆ, ಎಲ್ಲದರ ಬಗ್ಗೆ ಪ್ರತಿ ವರ್ಷ ಆದಾಯ ವಿವರ ಸಲ್ಲಿಸಿದ್ದೇವೆ, ಐಟಿ ರಿಟರ್ನ್ಸ್ ನಲ್ಲಿ ಏನಾದರೂ ತಪ್ಪಿದ್ದರೇ ನಮಗೆ ಏಕೆ ಇನ್ನೂ ಇಲಾಖೆಯಿಂದ ನೋಟಿಸ್ ಬಂದಿಲ್ಲ. ಆದಾಯ ತೆರಿಗೆ ಇಲಾಖೆ ಲೆಕ್ಕಕ್ಕೆ ಬೆಲೆ ಇಲ್ಲವೇ' ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

ಡಿಕೆಶಿಗೆ ಹಾಗೂ ಐಶ್ವರ್ಯಾಗೆ ಸುರೇಶ್ ಸಾಲ ಕೊಟ್ಟಿದ್ದಾರೆ

ಡಿಕೆಶಿಗೆ ಹಾಗೂ ಐಶ್ವರ್ಯಾಗೆ ಸುರೇಶ್ ಸಾಲ ಕೊಟ್ಟಿದ್ದಾರೆ

ಡಿ.ಕೆ.ಸುರೇಶ್ ಅವರು ಸಾಲವಾಗಿ ಹಾಗೂ ಮುಂಗಡವಾಗಿ 26.67 ಕೋಟಿ ಹಣವನ್ನು ನೀಡಿದ್ದಾರೆ. ಅಣ್ಣ ಡಿ.ಕೆ.ಶಿವಕುಮಾರ್ ಗೆ 1.03 ಕೋಟಿ ನೀಡಿದ್ದಾರೆ, ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಗೆ 6.87 ಕೋಟಿ ಸಾಲ ನೀಡಿದ್ದಾರೆ. ಇದರಲ್ಲಿ ದೆಹಲಿಯಲ್ಲಿ ಐಟಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿರುವ 26.20 ಲಕ್ಷ ಹಣವೂ ಸೇರಿದೆ. ಕ್ವಾರಿಗಳ ಲೀಸ್‌ಗೆ ನೀಡಿರುವ ಹಣ 20.93 ಲಕ್ಷ ಇದೆ. ಡಿಕೆ ಸುರೇಶ್ ಕೂಡಾ 51 ಕೋಟಿ ರು ಸಾಲ ಹೊಂದಿದ್ದಾರೆ.

ಅತ್ಯಂತ ಶ್ರೀಮಂತ ಸಂಸದ ಡಿಕೆ ಸುರೇಶ್

ಅತ್ಯಂತ ಶ್ರೀಮಂತ ಸಂಸದ ಡಿಕೆ ಸುರೇಶ್

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಡಿ.ಕೆ.ಸುರೇಶ್ ಅವರು ಘೋಷಿಸಿದ ಆಸ್ತಿ ಲೆಕ್ಕಾಚಾರದಂತೆ ಚರಾಸ್ತಿ 33.06 ಕೋಟಿ ಮೌಲ್ಯದ್ದಾಗಿದೆ. ಅವರ ಸ್ಥಿರಾಸ್ತಿ ಬರೋಬ್ಬರಿ 305.59 ಕೋಟಿ ಇದೆ. ಅವರ ಮೇಲೆ ಇರುವ ಸಾಲ ಹಾಗೂ ಪಡೆದಿರುವ ಮುಂಗಡ 51.93 ಕೋಟಿ ಇದೆ. ಅವರ ಈ ವರ್ಷದ ಆದಾಯವನ್ನು ಸೇರಿಸಿ ಸುರೇಶ್ ಅವರ ಒಟ್ಟು ಆಸ್ತಿಯ ಮೌಲ್ಯ 338.65 ಕೋಟಿ ಆಗುತ್ತದೆ. ಭಾರತದ ಟಾಪ್ 10 ಶ್ರೀಮಂತ ಸಂಸದರ ಪಟ್ಟಿಯಲ್ಲಿ ಸುರೇಶ್ ಕೂಡಾ ಕಾಣಿಸಿಕೊಂಡಿದ್ದರು.

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆಯೇ?ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆಯೇ?

2014ರಲ್ಲಿ 85 ಕೋಟಿ ರು 2019ರಲ್ಲಿ338 ಕೋಟಿ ರು

2014ರಲ್ಲಿ 85 ಕೋಟಿ ರು 2019ರಲ್ಲಿ338 ಕೋಟಿ ರು

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಡಿಕೆ ಸುರೇಶ್ ಆಸ್ತಿ 85 ಕೋಟಿ ರು ನಷ್ಟಿತ್ತು. 2019ರಲ್ಲಿ 338 ಕೋಟಿ ರು ಆಗಿದೆ. ಈ ಪ್ರಮಾಣದಲ್ಲಿ ಆಸ್ತಿ ಏರಿಕೆ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಜಾರಿ ನಿರ್ದೇಶನಾಲಯದ ಅಧಿಕಾರ ಮುಂದೆ ವಿವರಿಸಬೇಕಾಗುತ್ತದೆ. ಅದರಲ್ಲೂ ಪಿತ್ರಾರ್ಜಿತವಾಗಿ ಬಂದಿರುವ ಸ್ಥಿರಾಸ್ತಿ ಮೌಲ್ಯ 107 ಕೋಟಿ ರು ದಾಟುತ್ತಿದೆ. ಸ್ವಯಾರ್ಜಿತ ಸ್ಥಿರಾಸ್ತಿ 198 ಕೋಟಿ ರು ಇದೆ. ಒಟ್ಟಾರೆ 305 ಕೋಟಿ ರು ಸ್ಥಿರಾಸ್ತಿ ಹೊಂದಿದ್ದಾರೆ. ಹೆಚ್ಚಿನ ಪ್ರಶ್ನೆಗಳು ಐಶ್ವರ್ಯಾ, ಡಿಕೆಶಿ ಸೇರಿದಂತೆ ಕುಟುಂಬ ವರ್ಗಕ್ಕೆ ಕೊಟ್ಟ ಸಾಲ ಹಾಗೂ ಸ್ಥಿರಾಸ್ತಿ ವಿವರಗಳ ಬಗ್ಗೆ ಇರಲಿದೆ. ಡಿಕೆಶಿ ಹಾಗೂ ಐಶ್ವರ್ಯಾ ನೀಡಿದ ಹೇಳಿಕೆಗೆ ಸುರೇಶ್ ಹೇಳಿಕೆ ತಾಳೆಯಾಗಬೇಕಾಗುತ್ತದೆ.

ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?

English summary
Money Laundering case: Know Why The Enforcement Directorate(ED) has sent notice to Bengaluru rural MP DK Suresh? his brother DK Shivakumar is seeking for bail in Delhi HC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X