ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿನಾಮಿಕ್ಸ್: 'ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ'

By ಪುರುಷೋತ್ತಮ ಬಿಳಿಮಲೆ
|
Google Oneindia Kannada News

ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ಪುರುಷೋತ್ತಮ ಬಿಳಿಮಲೆ ಅವರು ಬುಧವಾರ ಫೇಸ್ ಬುಕ್ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ. ಅದನ್ನು ಯಥಾವತ್ ಆಗಿ ಪ್ರಕಟಿಸುತ್ತಿದ್ದೇವೆ. -ಸಂಪಾದಕ

***

ಫೇಸ್ ಬುಕ್ ನಲ್ಲಿರುವ ನನ್ನ ಅನೇಕ ಗೆಳೆಯರು ಆರ್ಥಿಕವಾಗಿ ದುರ್ಬಲರೆಂಬುದನ್ನು ನಾನು ಬಲ್ಲೆ. ಇಂಥ ಗೆಳೆಯರ/ಗೆಳತಿಯರ ಸಾಮಾಜಿಕ ಕಳಕಳಿ ಮಾತ್ರ ಅತ್ಯುನ್ನತ ಮಟ್ಟದ್ದು. ಮಾನವನ ಘನತೆಗೆ ಕುಂದು ತರುವ ಯಾವುದೇ ವಿಷಯಗಳ ಮೇಲೆ ಅವರೆಲ್ಲ ತುಂಬ ದಿಟ್ಟವಾಗಿ, ಎಷ್ಟೋ ಬಾರಿ ಮುಗ್ಧವಾಗಿ ಬರೆಯುತ್ತಿದ್ದಾರೆ. ಅಂಥ ಗೆಳೆಯರನ್ನು ಗಮನದಲ್ಲಿರಿಸಿಕೊಂಡು ಕೆಳಗಿನ ಟಿಪ್ಪಣಿ-

2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ

ಮುಂದಿನ ಕನಿಷ್ಠ ಒಂದು ವರುಷಗಳ ಕಾಲ ಬಡ ಭಾರತೀಯರು ತುಂಬ ಕಷ್ಟಗಳನ್ನು ಇದಿರಿಸಬೇಕಾಗಿದೆ. ಮಧ್ಯಮ ವರ್ಗದವರು ಕೂಡಾ ಈ ಆರ್ಥಿಕ ಸಂಕಷ್ಟಗಳಿಗೆ ಬಲಿಯಾಗಬೇಕಾದ ಎಲ್ಲ ಲಕ್ಷಣಗಳಿವೆ. ಹಾಗಾಗಿ ನಾವು ಅನೇಕ ವಿಷಯಗಳಲ್ಲಿ ಮುಖ್ಯವಾಗಿ ನಮ್ಮ ಹಣಕಾಸಿನ ವಿಷಯಗಳಲ್ಲಿ ತುಂಬ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

Modinomics: We Should Be Alert Economically In Next One Year

1. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು, ಅದು ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕು. ಕೇಂದ್ರ ಸರಕಾರಕ್ಕೆ ಈ ಕುರಿತು ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಆರ್ಥಿಕ ತಜ್ಞರಾರೂ ಇದ್ದಂತಿಲ್ಲ. ಇದ್ದವರು ಬಿಟ್ಟು ಹೋಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಹಣ ಹರಿದು ಬರುತ್ತಿಲ್ಲ, ಸಾಲ ತೆಗೆದುಕೊಂಡವರು ಹಣ ಹಿಂದಿರುಗಿಸುತ್ತಿಲ್ಲ (ಈ ಒತ್ತಡ ತಾಳಲಾರದೆ, ಬ್ಯಾಂಕುಗಳಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ). ಹೀಗಾಗಿ ಬ್ಯಾಂಕುಗಳನ್ನು ಹೆಚ್ಚು ನಾವು ನೆಚ್ಚಿಕೊಳ್ಳುವಂತಿಲ್ಲ.

2. ಕಟ್ಟಿರುವ ಮನೆಗಳು ಮಾರಾಟವಾಗದೆ ಹಾಗೇ ಉಳಿಯುತ್ತಿವೆ ( ನೋಯ್ಡಾ, ಫರಿದಾಬಾದ್ ಮತ್ತು ಗುರುಗ್ರಾಮದಲ್ಲಿ ಪರಿಸ್ಥಿತಿ ವಿಷಮಿಸಿದೆ). ಅರ್ಧ ಕಟ್ಟಿ ಉಳಿದ ಮನೆಗಳನ್ನು ಸರಕಾರವೇ ಪೂರ್ಣಗೊಳಿಸಲು ಸುಪ್ರೀಂ ಕೋರ್ಟು ಆದೇಶ ನೀಡಿದೆ. (ಸರಕಾರ ಹೇಗೆ ಈ ಕೆಲಸವನ್ನು ಪೂರ್ಣಗೊಳಿಸುವುದೋ ಯಾರಿಗೂ ತಿಳಿಯದು)

ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲುಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲು

3. ಹೊಸ ಮನೆಗಳು/ಕಟ್ಟಡಗಳು ನಿರೀಕ್ಷಿತ ವೇಗದಲ್ಲಿ ಮೇಲೇಳದೇ ಇರುವುದರಿಂದ ಸ್ಟೀಲ್, ಸಿಮೆಂಟ್ ಮತ್ತಿತರ ಸಾಮಗ್ರಿಗಳಿಗೆ ಬೇಡಿಕೆ ಇಲ್ಲವಾಗಿದೆ.

4. ಅಟೋಮೊಬೈಲ್ ಸೆಕ್ಟರ್ ಈಗಾಗಲೇ 3,50,000 ಉದ್ಯೋಗಿಗಳನ್ನು ಕಳಕೊಂಡಿದೆ. ಮಾರುತಿ 16% ನಷ್ಟವನ್ನು ತೋರಿಸಿದೆಯಲ್ಲದೆ, ಶೇಕಡಾ 50 ಉತ್ಪಾದನೆಯನ್ನು ಕಡಿತಗೊಳಿಸಿದೆ. ಟಾಟಾ ಮೋಟಾರ್ಸ ನವರು ಪೂನಾ ಮತ್ತು ಜಮಶೆಡ್ ಪುರ್ ನ ತನ್ನ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದ್ದು, 8000 ಕೋಟಿ ರೂಪಾಯಿಗಳ ನಷ್ಟವನ್ನು ಡಿಕ್ಲೇರ್ ಮಾಡಿದೆ. ಮೊದಲ ಬಾರಿಗೆ ದ್ವಿಚಕ್ರ ವಾಹನಗಳ ಮಾರಾಟ ಕುಸಿದಿದೆ. ಪತಂಜಲಿ ಕೂಡಾ ತನ್ನ ಜಾಹೀರಾತುಗಳಿಗೆ ಕಡಿವಾಣ ಹಾಕಿದೆ. 2018ರಲ್ಲಿ ಅದು ತನ್ನ ಆದಾಯದಲ್ಲಿ 10% ಕಡಿತ ತೋರಿಸಿದೆ.

5. ಖಾಸಗಿಯವರು ಉತ್ಪಾದನೆ ಸ್ಥಗಿತಗೊಳಿಸಿದಾಗ, ಸಹಜವಾಗಿ ಸರಕಾರದ ಆದಾಯ ಇನ್ನಷ್ಟು ಕಡಿಮೆಯಾಗುತ್ತದೆ. ಲಾರಿಗಳನ್ನು ಬಾಡಿಗೆಗೆ ಕೊಳ್ಳುವವರಲ್ಲಿ ಈಗಾಗಲೇ ಶೇಕಡಾ 15 ಕಡಿತವುಂಟಾಗಿ, ಲಾರಿ ಚಾಲಕರು ಉದ್ಯೋಗವಿಲ್ಲದೆ ಅಳುತ್ತಿದ್ದಾರೆ. ಓಡಾಡುವವರಿಲ್ಲದೆ ವಿಮಾನಗಳು ನಿರಂತರ ನಷ್ಟ ಅನುಭವಿಸುತ್ತಿದ್ದು, ಪ್ರಯಾಣಿಕರಲ್ಲಿ 25% ಕಡಿತ ಉಂಟಾಗಿದೆ. ಈ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ಸರಕಾರ ಇನ್ನಷ್ಟು ತೆರಿಗೆಗಳನ್ನು ನಮ್ಮ ಮೇಲೆ ಹೇರುತ್ತದೆ.

6. ಜನರ ಕೊಳ್ಳುವ ಶಕ್ತಿಯು ಈಗಾಗಲೇ 20% ಕಡಿಮೆಯಾಗಿದೆ.

7. ಕೆಲವು ಆಯ್ದ ಜಾಗಗಳನ್ನು ಹೊರತು ಪಡಿಸಿದರೆ, ಉಳಿದೆಡೆಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಭಾರತದ ಅರ್ಥವ್ಯವಸ್ಥೆಗೆ ಮಾರಕ ಹೊಡೆತ ನೀಡಿದ ಡಿಮಾನಿಟೈಸೇಶನ್ ನಿಂದಾಗಿ ಸಣ್ಣ ಉದ್ಯಮಿಗಳೆಲ್ಲಾ ಬೀದಿ ಪಾಲಾಗಿದ್ದಾರೆ. ಇದು ಪರೋಕ್ಷವಾಗಿ ದೊಡ್ಡ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.

8. ಭಾರತ ಸರಕಾರವು 2020ರಲ್ಲಿ ಐದು ಟ್ರಿಲಿಯನ್ ಅರ್ಥ ವ್ಯವಸ್ಥೆಯನ್ನು ಹೊಂದುವುದಾಗಿ ಘೋಷಿಸಿದೆ. ಇದು ಸಾಧ್ಯವಾಗಬೇಕಾದರೆ, ಭಾರತವು 14- 15% ಅಭಿವೃದ್ಧಿಯನ್ನು ಸಾಧಿಸಬೇಕು. ಈಗ ಇರುವಂತೆ ಸರಕಾರ 7% ಅಭಿವೃದ್ಧಿಯನ್ನು ಘೋಷಿಸುತ್ತಿದ್ದರೂ ವಾಸ್ತವವಾಗಿ ಅದಿನ್ನೂ 4% ಆಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಹೀಗಾಗಿ 14-15 % ಅಭಿವೃದ್ಧಿ ಮರೀಚಿಕೆಯೇ ಸರಿ.

9. ಅಂಕಿ- ಅಂಶಗಳನ್ನು ಬೇಕಾದಂತೆ ತಿದ್ದುವ ಪರಿಪಾಠ ಬೆಳೆಯುತ್ತಿದ್ದು, ಸರಕಾರ ಹೇಳಿದ್ದನ್ನು ಯಾರೂ ನಂಬುತ್ತಿಲ್ಲವಾದ್ದರಿಂದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವ್ಯತ್ಯಯ ಕಾಣಲಾರಂಭಿಸಿದೆ.

10. ಮಳೆ ಇಲ್ಲದೆ/ ಹೆಚ್ಚು ಮಳೆಬಂದು, ರೈತರು ಆತ್ಮಹತ್ಯೆ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಆರ್ಥಿಕ ಕುಸಿತದ ಸಮಸ್ಯೆಯು ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಜಾಗತಿಕವಾಗಿದೆ. ಆಳುವವರು ಈ ಆರ್ಥಿಕ ವಿಫಲತೆಯನ್ನು ಜನರೆದುರು ತೆರೆದಿಡದೆ, ಅದನ್ನು ಮುಚ್ಚಿ ಹಾಕಲು ಬಗೆ ಬಗೆಯ ತಂತ್ರಗಳನ್ನು ಹೆಣೆಯುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಹಿಂದೂಗಳೆಲ್ಲರೂ ಒಂದಾದ ಆನಂತರವೂ ಮೇಲೆ ಹೇಳಿದ ಭಾರತದ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ.

ಹೀಗಾಗಿ ಕನಿಷ್ಠ ಮುಂದಿನ ಒಂದು ವರ್ಷಗಳವರೆಗೆ ದಯವಿಟ್ಟು ತಮ್ಮ ಹಣ ಕಾಸಿನ ವಿಚಾರದಲ್ಲಿ ಜಾಗ್ರತೆಯಾಗಿರಿ. ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುವವರೂ ಕಡಿಮೆ, ಮತ್ತು ಅವರೂ ಕಷ್ಟದಲ್ಲಿರುತ್ತಾರೆ ಎಂಬುದನ್ನು ಮರೆಯದಿರೋಣ.

English summary
We should be alert in next 1 year economically. Why we should alert? Here is an answer in this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X