ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಪ್ರಿಯವಾದ ಹಣ್ಣು ಯಾವುದು ಗೊತ್ತಾ?

|
Google Oneindia Kannada News

ಇಡೀ ದೇಶವನ್ನು ಲೋಕ ಸಭಾ ಚುನಾವಣೆಯ ಜ್ವರ ಕಾಡುತ್ತಿದ್ದರೆ ಮತ್ತೊಂದೆಡೆ ಹಣ್ಣುಗಳ ರಾಜನೆಂದೇ ಕರೆಯುವ ಮಾವಿನಹಣ್ಣಿನ ಕಾಲವೂ ಇದಾಗಿದೆ. ಚುನಾವಣೆಗೂ ಮಾವಿನಹಣ್ಣಿಗೂ ಎತ್ತಣದ ಸಂಬಂಧ ಎಂಬ ಅಚ್ಚರಿಯೂ ಆಗಬಹುದು. ಇಷ್ಟಕ್ಕೂ ಮಾವಿನಹಣ್ಣಿನ ವಿಚಾರ ಈಗ ಏಕೆ ಬಂತು ಪ್ರಶ್ನೆ ಕಾಡಲೂ ಬಹುದು.

ವಿಶೇಷ ಪುಟ

ಇದೆಕ್ಕೆಲ್ಲ ಕಾರಣ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರಮೋದಿ ಅವರನ್ನು ಸಂದರ್ಶನ ಮಾಡಿದ ವೇಳೆ ಮಾವಿನಹಣ್ಣಿನ ಕುರಿತಂತೆ ಪ್ರಧಾನಿ ಅವರು ಬಿಚ್ಚಿಟ್ಟ ರಹಸ್ಯಗಳು ಚುನಾವಣೆಯ ಕಾವಿನ ನಡುವೆಯೂ ಸುದ್ದಿಯಾಗಿದೆ.

ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?

ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿದ ಪ್ರಶ್ನೆ ಬಾಲಿಶ ಎನಿಸುವಂತಿತ್ತಾದರೂ ಅದಕ್ಕೆ ಮೋದಿ ಅವರು ನೀಡಿದ ಪ್ರತಿಕ್ರಿಯೆ ಎಲ್ಲರೂ ಅಚ್ಚರಿ ಮತ್ತು ಕುತೂಹಲದಿಂದ ನೋಡುವಂತಾಯಿತು.

Modi likes mango very much

"ನಮ್ಮ ಚಾಲಕರ ಮಗಳು ನಮ್ಮ ಪ್ರಧಾನಿ ಮಾವಿನ ಹಣ್ಣು ತಿಂತಾರಾ ಎಂಬ ಪ್ರಶ್ನೆ ಕೇಳುತ್ತಿದ್ದರು. ಒಂದು ವೇಳೆ ನೀವು ಮಾವಿನ ಹಣ್ಣನ್ನು ತಿನ್ನುವುದಾದರೆ ಅದನ್ನು ಕತ್ತರಿಸಿ ತಿನ್ನುತ್ತೀರೋ ಅಥವಾ ಹಾಗೆಯೇ ಕಚ್ಚಿ ತಿನ್ನುತ್ತೀರೋ"? ಎಂದು ಅಕ್ಷಯ್ ಕೇಳಿದ ಪ್ರಶ್ನೆಗೆ ನಕ್ಕು ಉತ್ತರಿಸಿದ ಪ್ರಧಾನಿ "ನನಗೆ ಮಾವಿನ ಹಣ್ಣು ಎಂದರೆ ಬಹಳ ಇಷ್ಟ ಹೀಗಾಗಿ ನಾನು ತಿನ್ನುತ್ತೇನೆ.

 ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ? ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?

Modi likes mango very much

ಗುಜರಾತಿನಲ್ಲಿ ಮಾವಿನ ರಸದ ಸಂಪ್ರದಾಯವಿದೆ. ನಾನು ಚಿಕ್ಕವನಾಗಿದ್ದಾಗ, ಮಾವಿನ ಹಣ್ಣನ್ನು ಖರೀದಿಸುವುದು ನಮಗೆ ಕೇವಲ ಸಾಮಾನ್ಯ ವಿಷಯವಲ್ಲ. ವಾಸ್ತವವಾಗಿ, ನಮ್ಮ ರೈತರು ಬಹಳ ಉದಾರರಾಗಿದ್ದಾರೆ. ನಾವು ಮಾವಿನ ತೋಟಕ್ಕೆ ಹೋದಾಗ ನಮ್ಮ ರೈತರು ನಮ್ಮನ್ನು ತಡೆಯುತ್ತಿರಲಿಲ್ಲ. ನಾನು ಮರದ ಮೇಲೆ ಹತ್ತಿ ಹೆಚ್ಚು ಮಾಗಿದ ಮಾವಿನಹಣ್ಣನ್ನು ಕಿತ್ತು ತಿನ್ನುತ್ತಿದ್ದೆ. ಈ ರೀತಿ ತಿನ್ನುವುದು ನನಗೆ ಹೆಚ್ಚು ಇಷ್ಟವಾಗುತ್ತಿತ್ತು" ಎಂದು ಹೇಳುವ ಮೂಲಕ ಬಾಲ್ಯದ ಆ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
English summary
Prime Minister Narendra Modi told to Bollywood actor Akshay Kumar in interview "I like mango very much".There is a tradition of mango juice in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X