ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹಣ ದೋಚಲು ಇವೆ 600 ನಕಲಿ ಬ್ಯಾಂಕ್‌ ಲೋನ್‌ ಅಪ್ಲಿಕೇಶನ್‌ಗಳು; ಅಸಲಿ-ನಕಲಿಯೇ ತಿಳಿಯಿರಿ

|
Google Oneindia Kannada News

ಇಂದು ಪ್ರತಿಯೊಬ್ಬರಿಗೂ ಸಾಲದ ಅಗತ್ಯವಿದೆ ಹಾಗೂ ಸರಳ ಸಾಲ ತೆಗೆದುಕೊಳ್ಳುತ್ತಿರುವ ಭರದಲ್ಲಿ ನಕಲಿ ಆಪ್‌ಗಳ ಮೂಲಕ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಆ್ಯಪ್ ಮೂಲಕ ಹೆಚ್ಚಿನ ಸಂಖ್ಯೆಯ ಸಾಲಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವು ನಕಲಿ ಆ್ಯಪ್‌ಗಳು ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ. ಆ್ಯಪ್‌ನಿಂದ ಸಾಲ ತೆಗೆದುಕೊಳ್ಳುವ ಮೊದಲು ಅದು ನಿಜವೇ ಅಥವಾ ನಕಲಿಯೇ ಎಂದು ಪರಿಶೀಲಿಸಬೇಕು.

ಇಂದಿನ ಯುಗ ತ್ವರಿತ ಸಾಲಗಳ ಯುಗ. ಇಂದು ಎಲ್ಲರಿಗೂ ತ್ವರಿತ ಸಾಲದ ಅಗತ್ಯವಿದೆ. ಪ್ರತಿದಿನ ನಾವು ಫೋನ್ ಮತ್ತು ಇಮೇಲ್ ಮೂಲಕ ಸುಲಭ ಮತ್ತು ಅಗ್ಗದ ವೈಯಕ್ತಿಕ ಸಾಲಗಳ ಕುರಿತು ಮಾಹಿತಿಯನ್ನು ಪಡೆಯುತ್ತೇವೆ. ಕೆಲವೊಮ್ಮೆ ನಿಮ್ಮ ಬ್ಯಾಂಕ್‌ನಿಂದಲೇ ಇಂತಹ ಇಮೇಲ್ ಅಥವಾ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಹೆಚ್ಚುವರಿ ಹಣವನ್ನು ಸಂಗ್ರಹಿಸಲು ವೈಯಕ್ತಿಕ ಸಾಲಗಳು ಉತ್ತಮ ಆಯ್ಕೆಯಾಗಿದೆ.

ಕರ್ನಾಟಕದಲ್ಲಿ ಲೋನ್‌ಆಪ್ ಅಕ್ರಮ: 22 ಆಪ್ ಮುಖ್ಯಸ್ಥರಿಗೆ ಬಂಧನದ ಬೀತಿಕರ್ನಾಟಕದಲ್ಲಿ ಲೋನ್‌ಆಪ್ ಅಕ್ರಮ: 22 ಆಪ್ ಮುಖ್ಯಸ್ಥರಿಗೆ ಬಂಧನದ ಬೀತಿ

ಇಂದು ಅಗ್ಗದ ಸಾಲವನ್ನು ನೀಡುವ ಭರವಸೆ ನೀಡುವ ಅನೇಕ ಅಪ್ಲಿಕೇಶನ್‌ಗಳು ಅಂತರ್ಜಾಲದಲ್ಲಿ ಗಮನ ಸೆಳೆಯುತ್ತಿವೆ ಇವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಲ ಪಡೆಯುತ್ತಾರೆ. ಈ ಅಪ್ಲಿಕೇಶನ್‌ಗಳಲ್ಲಿ ಕೆಲವು ನಿಜ ಮತ್ತು ಕೆಲವು ನಕಲಿಯಾಗಿರುತ್ತವೆ. ಕಳೆದ ಕೆಲವು ದಿನಗಳಿಂದ ಆ್ಯಪ್‌ಗಳನ್ನು ದರೋಡೆ ಮಾಡುವ ಹಲವು ಘಟನೆಗಳು ಮುನ್ನೆಲೆಗೆ ಬಂದಿವೆ. ಅನೇಕ ಜನರು ಅವರಿಗೆ ಬಲಿಯಾಗಿದ್ದಾರೆ. ಇಂದು ನಾವು ನಿಮಗೆ ನಿಜವಾದ ಸಾಲದ ಅಪ್ಲಿಕೇಶನ್ ಮತ್ತು ನಕಲಿ ಅಪ್ಲಿಕೇಶನ್ ನಡುವಿನ ವ್ಯತ್ಯಾಸವನ್ನು ಹೇಳುತ್ತೇವೆ.

 ಆಪ್ ಡೌನ್‌ಲೋಡ್ ಮಾಡುವ ಮೊದಲು

ಆಪ್ ಡೌನ್‌ಲೋಡ್ ಮಾಡುವ ಮೊದಲು

ಮೊದಲನೆಯದಾಗಿ ಈ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡುವ ಮೊದಲು ನೀವು ಇದು ಯಾವ ಬ್ಯಾಂಕ್‌ಗೆ ಸಂಬಂಧಿಸಿದೆ ಎಂಬುದನ್ನು ನೀವು ಪರಿಶೀಲಿಸಬೇಕು. ಇದರೊಂದಿಗೆ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಯಾವುದು? ಗೂಗಲ್‌ ನೀತಿಯ ಪ್ರಕಾರ, ಯಾವುದೇ ಸಾಲದ ಅಪ್ಲಿಕೇಶನ್‌ಗೆ ಕೆಲವು NBFCಯಿಂದ ಸಂಯೋಜಿತವಾಗಿರಬೇಕು. ಅಪ್ಲಿಕೇಶನ್‌ನೊಂದಿಗೆ ಯಾವುದೇ ಬ್ಯಾಂಕ್ ಸಂಪರ್ಕ ಹೊಂದಿಲ್ಲದಿದ್ದರೆ ನೀವು ಜಾಗರೂಕರಾಗಿರಬೇಕು.

 ಖಚಿತ ಮಾಹಿತಿಗಳನ್ನು ನೀವು ತಿಳಿದುಕೊಳ್ಳಿ..

ಖಚಿತ ಮಾಹಿತಿಗಳನ್ನು ನೀವು ತಿಳಿದುಕೊಳ್ಳಿ..

ಆ್ಯಪ್‌ನಿಂದ ಸಾಲ ಪಡೆಯುವ ಮೊದಲು ಅದು ಯಾವ ಕಂಪನಿಯಿಂದ ವ್ಯವಹಾರ ನಡೆಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಯಾವ ಕಂಪನಿ ಇದನ್ನು ಮಾಡಲಾಗಿದೆ, ಆ ಕಂಪನಿ ಯಾವುದು, ಇದರೊಂದಿಗೆ ಕಂಪನಿಯ ಟ್ರ್ಯಾಕ್ ರೆಕಾರ್ಡ್‌ನ್ನು ಸಹ ಪರಿಶೀಲಿಸಬೇಕು. ಕಂಪನಿಯ ವೆಬ್‌ಸೈಟ್, ಸಂಪರ್ಕ ವಿವರಗಳು, ಕಚೇರಿ ವಿಳಾಸವನ್ನು ಪರಿಶೀಲಿಸಬೇಕು. ಭಾರತದಲ್ಲಿ ಇದರ ಕಚೇರಿ ಎಲ್ಲಿದೆ? ಹೀಗೆ ಅನೇಕ ಖಚಿತ ಮಾಹಿತಿಗಳನ್ನು ನೀವು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ.

 ಪ್ಲೇ ಸ್ಟೋರ್ ವಿಮರ್ಶೆ ಓದಿ..

ಪ್ಲೇ ಸ್ಟೋರ್ ವಿಮರ್ಶೆ ಓದಿ..

ಸಾಲದ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡುವ ಮೊದಲು, ಒಬ್ಬರು ಅದರ ರೇಟಿಂಗ್ ಮತ್ತು ವಿಮರ್ಶೆಯನ್ನು ಓದಬೇಕು. ಆಪ್ ಸ್ಟೋರ್‌ನಲ್ಲಿ ಈ ಕುರಿತು ಎಲ್ಲಾ ವಿವರಗಳನ್ನು ನೀವು ಪಡೆಯುತ್ತೀರಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದರಲ್ಲಿ ಆಂಡ್ರಾಯ್ಡ್ ಬಳಕೆದಾರರಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಆಪ್ ಸ್ಟೋರ್‌ಗಳಲ್ಲಿ ಸುಮಾರು 600 ಅಕ್ರಮ ಸಾಲದ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.

 ಅಧಿಕೃತ ಅಪ್ಲಿಕೇಶನ್‌ಗಳಿಗೆ ಮಾತ್ರ ಮಾಹಿತಿ ನೀಡಿ

ಅಧಿಕೃತ ಅಪ್ಲಿಕೇಶನ್‌ಗಳಿಗೆ ಮಾತ್ರ ಮಾಹಿತಿ ನೀಡಿ

ಒಂದು ವಿಷಯವನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಕಲಿ ಅಪ್ಲಿಕೇಶನ್‌ಗಳು ಬಳಕೆದಾರರಿಂದ ಹಲವು ರೀತಿಯ ಮಾಹಿತಿಯನ್ನು ನಿಮಗೆ ಕೇಳುತ್ತವೆ. ಇದು ವೈಯಕ್ತಿಕ ಡೇಟಾ ಸೋರಿಕೆಯಾಗುವ ಅಪಾಯವನ್ನೂ ಹೆಚ್ಚಿಸುತ್ತದೆ. ಆದರೆ ಉತ್ತಮ ಅಪ್ಲಿಕೇಶನ್ ಹೆಚ್ಚಿನ ಮಾಹಿತಿಯನ್ನು ಕೇಳುವುದಿಲ್ಲ. ಏಕೆಂದರೆ ಅವರಿಗೆ ಅಗತ್ಯ ಮಾಹಿತಿ ಮಾತ್ರ ಬೇಕಾಗುತ್ತದೆ. ಮೊಬೈಲ್, ಬ್ಯಾಂಕ್ ಖಾತೆ, ಹುಟ್ಟಿದ ದಿನಾಂಕ ಮತ್ತು ಹೆಸರು ಇತ್ಯಾದಿ.

English summary
600 fake bank loan Apps out there to steal your money; Know whether apps are genuine or fake check here, The Reserve Bank of India in a report said that there are around 600 illegal loan apps running on various app stores among Android users,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X