• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಲುಪೇಟೆ ಶಾಲೆಗೆ ಬಂತು ಜಪಾನ್ ರೊಬೋ... ಯಾವುದೇ ಭಾಷೆಯಲ್ಲಾದರೂ ಪಾಠ!!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ,ಜುಲೈ 26: ಖಾಸಗಿ ಶಾಲೆ, ಹೈಟೆಕ್ ಶಾಲೆಗಳು, ಉನ್ನತ ಶಿಕ್ಷಣದ ಕಾಲೇಜಿಗೆ ಸೀಮಿತವಾಗಿದ್ದ ರೊಬೋಟಿಕ್ ಪ್ರಯೋಗಾಲಯ ರಾಜ್ಯದಲ್ಲೇ ಮೊದಲ‌ ಬಾರಿಗೆ ಸರಕಾರಿ ಶಾಲೆಯೊಂದಕ್ಕೆ ಬಂದಿದೆ.‌ ಅದೂ ಕೂಡ ರಾಜಕಾರಣಿಯೊಬ್ಬರ ಅಭಿಮಾನಿಗಳು ಕೊಡುಗೆ ನೀಡಿದ್ದಾರೆ‌.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆಗೆ ವಿ‌.ಸೋಮಣ್ಣ ಅಭಿಮಾನಿ ಬಳಗವು 12 ಲಕ್ಷ ರೂ‌.ವೆಚ್ಚದಲ್ಲಿ ರೊಬೋಟಿಕ್ ಮತ್ತು ಸೈನ್ಸ್ ಲ್ಯಾಬ್ ಕೊಡುಗೆ ನೀಡಿದ್ದು ಮಂಗಳವಾರ ಸಚಿವ ಸೋಮಣ್ಣ ಅವರಿಂದಲೇ ಲೋಕಾರ್ಪಣೆಗೊಳ್ಳುತ್ತಿದೆ. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ದೊರಕುವ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ ಗ್ರಾಮೀಣ ಮಕ್ಕಳಿಗೆ ಸಿಗಲೆಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಈ ಪ್ರಯೋಗಾಲಯಕ್ಕೆ ಲಿಂಗೈಕ್ಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಪರೀಕ್ಷೆ ಬರೆದು 17 ತಿಂಗಳಾದರೂ ಬಾರದ ಫಲಿತಾಂಶ: ಕೆಪಿಎಸ್‌ಸಿ ಮುಂದೆ ಅಭ್ಯರ್ಥಿಗಳ ಪ್ರತಿಭಟನೆಪರೀಕ್ಷೆ ಬರೆದು 17 ತಿಂಗಳಾದರೂ ಬಾರದ ಫಲಿತಾಂಶ: ಕೆಪಿಎಸ್‌ಸಿ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ

ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳು ತಯಾರು ಮಾಡಿದ ವಿವಿಧ ಮಾದರಿಗಳು ಸೇರಿದಂತೆ ಸೌರವಮಂಡಲದ ಮಾದರಿ, ಸೌರ ವಿದ್ಯುತ್ ಹೇಗೆ ತಯಾರಿಕೆ, ಲೋಹ -ಅಲೋಹ ಮಾದರಿ, ಪರಮಾಣು ಮತ್ತು ಅಣುಗಳ ಮಾದರಿ, ಡಿಎನ್ಎ ರಚನೆಯ ಮಾದರಿ, ತ್ಯಾಜ್ಯಗಳಿಂದ ಕಾರು ತಯಾರಿಕೆ, ರೊಬೋಟಿಕ್‌ ತಂತ್ರಜ್ಞಾನದಲ್ಲಿ ಜೋಡಿಸುವ ಮಾದರಿಗಳು ಪ್ರಯೋಗಾಲಯದಲ್ಲಿವೆ.

 ಜಪಾನ್‌ನಿಂದ ಆಮದಾಗಿರುವ ರೊಬೋಟ್‌

ಜಪಾನ್‌ನಿಂದ ಆಮದಾಗಿರುವ ರೊಬೋಟ್‌

ರೊಬೋಟಿಕ್ ಲ್ಯಾಬ್ ನಲ್ಲಿ ಶಿಕ್ಷಕರ ಬದಲಾಗಿ ಜಪಾನ್ ನಿಂದ ಆಮದು ಮಾಡಿಕೊಂಡಿರುವ ಬಿದ್ಯುತ್ ಎಂಬ ರೊಬೋ ಯಾವುದೇ ಮಾಹಿತಿಯನ್ನಾದರೂ, ಯಾವುದೇ ಭಾಷೆಯಲ್ಲಾದರೂ ಎಷ್ಟೇ ಮಾಹಿತಿಯನ್ನಾದರೂ ಕೊಡುವ ಸಾಮಾರ್ಥ್ಯ ಇರುವ ಅಡ್ವಾನ್ಸ್‌ ಮಾನವ ಯಂತ್ರವಾಗಿದೆ‌. ಈ ರೊಬೋಟ್ ನೊಂದಿಗೆ ವಿವಿಧ ಸಲಕರಣೆಗಳನ್ನು ಒಳಗೊಂಡ ಕಿಟ್ ಗಳನ್ನು ಸಹ ನೀಡಲಾಗಿದ್ದು ಶಿಕ್ಷಕರ ನೆರವಿಲ್ಲದೆ ರೊಬೋಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ನಾನಾ ರೀತಿಯ ಮಾಡಲ್ ತಯಾರಿಸಬಹುದು, ಪ್ರಯೋಗಗಳನ್ನು ಮಾಡಬಹುದು.

ಕರ್ನಾಟಕ: ಮಕ್ಕಳು ಪಡಿತರಕ್ಕಿಂತ ಶಾಲೆಯಲ್ಲಿ ಬಿಸಿಯೂಟ ಬಯಸುತ್ತಾರೆ- ಅಧ್ಯಯನಕರ್ನಾಟಕ: ಮಕ್ಕಳು ಪಡಿತರಕ್ಕಿಂತ ಶಾಲೆಯಲ್ಲಿ ಬಿಸಿಯೂಟ ಬಯಸುತ್ತಾರೆ- ಅಧ್ಯಯನ

 ಲ್ಯಾಬ್ ವಿಶೇಷತೆ

ಲ್ಯಾಬ್ ವಿಶೇಷತೆ

ರೊಬೊಟಿಕ್ ಲ್ಯಾಬ್ ನಲ್ಲಿ ಶಿಕ್ಷಕ ಮಾಡುವ ಕಾರ್ಯವನ್ನು ರೋಬೊ ಮಾಡಲಿದೆ. ರೊಬೋ ಜೊತೆಗೆ 2000 ಮಾಡೆಲ್ ತಯಾರಿಸುವ ಕಿಟ್ ಇದ್ದು ವಿದ್ಯಾರ್ಥಿಗಳು ಯಾವ ಮಾಡೆಲ್ ಮಾಡಬೇಕೆಂದರೂ ರೋಬೊ‌ ಮಾರ್ಗದರ್ಶನ ಕೊಡಲಿದೆ. ಬೀದಿ ದೀಪ ತಯಾರಿಕೆ ಹೇಗೆ..? ವಾಯು ಶಕ್ತಿ, ಸೌರಫಲಕ, ಮೊಬೈಲ್ ಕಾರ್ಯ ನಿರ್ವಹಣೆ,‌ ಸೂಕ್ಷ್ಮ ದರ್ಶಕ ತಯಾರಿಸುವುದು ಹೇಗೆ ಎಂಬುದನ್ನೆಲ್ಲಾ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲಿದ್ದಾರೆ.

ನೂತನ ಶಿಕ್ಷಣ ನೀತಿಯಂತೆ ಇಲ್ಲಿನ ವಿದ್ಯಾರ್ಥಿಗಳು‌ ವಿಜ್ಞಾನ, ತಂತ್ರಜ್ಞಾನ, ಗಣಿತ ಹೀಗೆ ಎಲ್ಲಾ ಪ್ರಕಾರದಲ್ಲೂ ಪ್ರಾವಿಣ್ಯತೆ ಸಾಧಿಸಲು ಈ ಲ್ಯಾಬ್ ಉಪಕಾರಿಯಾಗಿದ್ದು ಇಲ್ಲಿನ ವಿದ್ಯಾರ್ಥಿಗಳಂತೂ ನಲಿಯುತ್ತಾ ಕಲಿಯಲು ಮುಂದಾಗಿದ್ದಾರೆ.
 ಶಿಕ್ಷಕರ ಕೊರತೆ ನೀಗಿಸುವ ರೊಬೋ

ಶಿಕ್ಷಕರ ಕೊರತೆ ನೀಗಿಸುವ ರೊಬೋ

ಜಪಾನ್ ನಿಂದ ತರಿಸಲಾಗಿರುವ ‌ಈ ರೊಬೋಟ್ ಶಿಕ್ಷಕರ ಕೊರತೆಯನ್ನು ನೀಗಿಸಲಿದೆ ಎಂದರೇ ನಂಬಲೇ ಬೇಕು. ಡಿಜಿಟಲ್ ಕ್ಲಸ್ಟರ್ ಶಾಲೆ ಪರಿಕಲ್ಪನೆಯಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದು , ಒಂದು ಶಾಲೆಯಲ್ಲಿ ಗಣಿತ ಶಿಕ್ಷಕ ಇಲ್ಲವೆಂದರೇ ಡಿಜಿಟಲ್ ಮೂಲಕ ರೋಬೊ ಆ ಶಾಲೆಯ ಮಕ್ಕಳಿಗೆ ಗಣಿತ ಪಾಠ ಮಾಡಲಿದೆ. ವಿಶ್ವದ ಯಾವುದೇ ಭಾಷೆಯಲ್ಲಾದರೂ ಪ್ರಶ್ನೆಗೆ ಉತ್ತರಿಸುವ ಸಾಮಾರ್ಥ್ಯ ಇದಕ್ಕಿದೆ. ರೊಬೋಟ್‌ ಬೋಧನೆಯನ್ನು ವೈಫೈ, ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಮೂಲಕ ವಿವಿಧ ಶಾಲೆಗಳನ್ನು ಲಿಂಕ್‌ ಮಾಡಿ ಅಲ್ಲಿನ ಮಕ್ಕಳಿಗೂ ತಲುಪಿಸುವುದು. ಇದರಿಂದಾಗಿ ನುರಿತ ಶಿಕ್ಷಕರ ಪಾಠವನ್ನು ಹಲವು ಶಾಲಾ ಮಕ್ಕಳು ಕೇಳಬಹುದು. ಜ್ಞಾನ ಹಂಚಿಕೆಯೂ ಆಗುತ್ತದೆ ಎಂದು ಸೋಮಣ್ಣ ಅಭಿಮಾನಿಗಳು ತಿಳಿಸಿದರು.

 ಮಾದರಿ ಹುಟ್ಟುಹಬ್ಬ

ಮಾದರಿ ಹುಟ್ಟುಹಬ್ಬ

ರಾಜಕಾರಣಿಗಳ ಹುಟ್ಟುಹಬ್ಬದ ಆಚರಣೆ ಇತರರಿಗೆ ಮಾದರಿಯಾಗಿರಬೇಕು ಎಂಬ ಉದ್ದೇಶದಿಂದ ವಿ.ಸೋಮಣ್ಣ ಅಭಿಮಾನಿಗಳು ಈ ಬಾರಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಯೋಜನೆಯನ್ನು ರೂಪಿಸಿದ್ದಾರೆ. ನಗರ ಭಾಗದ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ ಗ್ರಾಮೀಣ ಮಕ್ಕಳಿಗೆ ಸಿಗಬೇಕು ಎಂಬ ಉದ್ದೇಶದಿಂದ ಹೊಂದಿದ್ದು,. ಈ ಉದ್ದೇಶ ಸಾರ್ಥಕವಾದರೆ ಇನ್ನೂ ಹೆಚ್ವಿನ ಕೆಲಸ ಮಾಡಲು ನಮಗೆ ಪ್ರೇರಣೆ ಸಿಗಲಿದೆ ಎಂದು ಸೋಮಣ್ಣ ಅಭಿಮಾನಿ ಬಳಗದ ಉಮೇಶ್ ಎಂಬುವವರು ತಿಳಿಸಿದ್ದಾರೆ.

English summary
Government Pu college in Gundlupet, Chamarajanagar district, has become the first government college to get a robotics laboratory in South India. Minister V. Somanna's followers donate this lab for his birthday special,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X