ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ನೇ ತರಗತಿಗೆ 6 ವರ್ಷ; ಮಕ್ಕಳ ವಯಸ್ಸನ್ನು ಲೆಕ್ಕ ಹಾಕುವುದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಶಾಲೆಗೆ ದಾಖಲಾತಿ ವಯಸ್ಸನ್ನು ಶಿಕ್ಷಣ ಇಲಾಖೆ ಹೆಚ್ಚಳವನ್ನು ಮಾಡಿ ಆದೇಶವನ್ನು ಮಾಡಿದೆ. 1 ನೇ ತರಗತಿ ಮಕ್ಕಳನ್ನು ಸೇರಿಸಲು 6ವರ್ಷ ಪೂರೈಸಿರಬೇಕು ಎಂದು ಆದೇಶಿಸಿದೆ. ಶಿಕ್ಷಣ ಇಲಾಖೆ ಈ ಆದೇಶವನ್ನು ಮಾಡಲು ಕಾರಣವೇನು? ಮಕ್ಕಳ ವಯಸ್ಸನ್ನು ಲೆಕ್ಕ ಹಾಕುವ ಕ್ರಮ ಹೇಗೆ? ಈ ಆದೇಶ ಯಾವ ವರ್ಷಕ್ಕೆ ಅನ್ವಯವಾಗುತ್ತದೆ ಅನ್ನೋದ ಮಹತ್ವದ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 5ವರ್ಷ 5 ತಿಂಗಳು ಪೂರೈಸಿದ್ದರೆ 1ನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳವು ಅವಕಾಶವನ್ನು ಮಾಡಿಕೊಡಲಾಗಿತ್ತು. ಅಂದರೆ 3.5 ವರ್ಷಕ್ಕೆ ಎಲ್‌ಕೆಜಿ, 4.5 ವರ್ಷಕ್ಕೆ ಯುಕೆಜಿ, 5.5 ವರ್ಷಕ್ಕೆ 1ನೇ ತರಗತಿಗೆ ದಾಖಲೆಯನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದೀಗ 1ನೇ ತರಗತಿಯ ದಾಖಲಾತಿಯ ವಯಸ್ಸನ್ನು 6 ವರ್ಷಕ್ಕೆ ಹೆಚ್ಚಿಸಲಾಗಿದೆ.

ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳು ಕಳೆಯುತ್ತಿವೆ. ಸರ್ಕಾರಿ , ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದೆ. ಇಂಥ ಸಮಯದಲ್ಲಿ ಈ ರೀತಿಯ ನಿರ್ಧಾರ ಏಕೆ ಎಂಬ ಗೊಂದಲ ನಿರ್ಮಾಣವಾಗಿತ್ತು. ಇದಕ್ಕಾಗಿ ಶಿಕ್ಷಣ ಇಲಾಖೆ ಸ್ಪಷ್ಟನೆಯನ್ನು ನೀಡಿದ್ದು. ಶೈಕ್ಷಣಿಕ ವರ್ಷ 2023-24ರಿಂದ ಹೊಸ ಆದೇಶ ಜಾರಿಗೆ ಬರಲಿದೆ.

 ಮಕ್ಕಳ ವಯಸ್ಸನ್ನು ಲೆಕ್ಕ ಹಾಕುವುದು ಹೇಗೆ?

ಮಕ್ಕಳ ವಯಸ್ಸನ್ನು ಲೆಕ್ಕ ಹಾಕುವುದು ಹೇಗೆ?

ಶಿಕ್ಷಣ ಇಲಾಖೆ ಮಾಡಿರುವ ಆದೇಶ ಶೈಕ್ಷಣಿಕ ವರ್ಷ 2023-24ರಿಂದ ಜಾರಿಯಾಗಲಿದೆ. ಈ ವರ್ಷ ಜೂನ್ ತಿಂಗಳು ಮುಗಿದಿರುವ ಕಾರಣ ಮತ್ತು ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿದಿರುವ ಕಾರಣದಿಂದಾಗಿ ಹೊಸ ಆದೇಶ ಈ ವರ್ಷಕ್ಕೆ ಅನ್ವಯ ಆಗುವುದಿಲ್ಲ. ಮಕ್ಕಳ ವಯಸ್ಸನ್ನು ಲೆಕ್ಕ ಹಾಕಿ ವರ್ಷವಾಗಿದ್ದರೆ 1ನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಬಹುದಾಗಿದೆ. ಮಕ್ಕಳ ವಯಸ್ಸನ್ನು ಲೆಕ್ಕ ಹಾಕುವುದು ಸುಲಭದ ಪ್ರಕ್ರಿಯೆಯಾಗಿದೆ. ಮೊದಲು ಶೈಕ್ಷಣಿಕ ವರ್ಷವನ್ನು ಬರೆದುಕೊಳ್ಳಬೇಕು ಉದಾ: 01-06-2023 ಇದರಿಂದ ಮಗುವಿನ ಜನ್ಮದಿನಾಂಕ ತಿಂಗಳು ವರ್ಷ ಬರೆದುಕೊಳ್ಳಬೇಕು ಉದಾ: 05-05-2017 ಬರೆದುಕೊಳ್ಳಬೇಕು. ಶೈಕ್ಷಣಿಕ ವರ್ಷ ಮತ್ತು ಜನ್ಮದಿನಾಂಕ ಕ್ರಮವಾಗಿ ಬರೆದುಕೊಂಡು ಕಳೆಯಬೇಕು. ಈ ಮೊದಲು ದಿನಾಂಕವನ್ನು ಕಳೆಯ ಬೇಕು 01 ರಿಂದ 05 ಹೋಗುವುದಲ್ಲ ವಾದ್ದರಿಂದ ಒಂದು ತಿಂಗಳ ದಿನವನ್ನು ತೆಗೆದುಕೊಂಡು ಸೇರಿಸಬೇಕು. ಅಂದರೆ 01+30=31 ದಿನವಾಗಿತ್ತದೆ. ಇದರಿಂದ 05 ದಿನ ಕಳೆದರೆ 26ದಿನವಾಗುತ್ತದೆ. 06 ತಿಂಗಳಲ್ಲಿ ಒಂದು ತಿಂಗಳನ್ನು ತೆಗೆದಿರುವ ಕಾರಣ 05 ಉಳಿದಿರುತ್ತದೆ. 05 ತಿಂಗಳಿಂದ ಮಗುವಿನ ಜನ್ಮ ತಿಂಗಳು 05 ಕಳೆದರೆ 00 ತಿಂಗಳುಗಳಾಗುತ್ತದೆ. ಅದೇ ರೀತಿ 2023 ರಿಂದ 2017 ಕಳೆದರೆ 6 ವರ್ಷವಾಗುತ್ತದೆ. ಅದರೆ ಮಗುವಿನ ವಯಸ್ಸು 2023ರ ಶೈಕ್ಷಣಿಕ ವರ್ಷಕ್ಕೆ 25ದಿನ,00, ತಿಂಗಳು, 6 ವರ್ಷವಾಗುವುದರಿಂದ ಮಗುವನ್ನು 1ನೇ ತರಗತಿಗೆ ಸೇರಿಸಬಹುದಾಗಿದೆ.

 ರಾಷ್ಟ್ರೀಯ ಶಿಕ್ಷಣ ನೀತಿ ವಯಸ್ಸಿನ ಬಗ್ಗೆ ಹೇಳುವುದೇನು

ರಾಷ್ಟ್ರೀಯ ಶಿಕ್ಷಣ ನೀತಿ ವಯಸ್ಸಿನ ಬಗ್ಗೆ ಹೇಳುವುದೇನು

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಪಿಎ) ಮಗುವಿನ ವಯಸ್ಸನ್ನು 3 ವರ್ಷದಿಂದ ಪ್ರಾರಂಭಿಸುತ್ತದೆ. ಅಂದರೆ ಎನ್‌ಇಪಿ 3+3+3+4 ಎಂಜು ವಿಭಾಗಿಸಿದೆ.

*ಫೌಂಡೇಷನ್ (3 ವರ್ಷಕ್ಕೆ ಅಂಗನವಾಡಿ ಅಥವಾ ಪ್ರೀಸ್ಕೂಲ್, 4 ವರ್ಷಕ್ಕೆ ಎಲ್‌ಕೆಜಿ, 5ವರ್ಷಕ್ಕೆ ಯುಕೆಜಿ)ಯನ್ನು ಒಳಗೊಂಡಿರುತ್ತದೆ. ಮತ್ತು ಇದರೊಂದಿದೆ 1ನೇ ತರಗತಿಗೆ 6 ವರ್ಷ , ಎರಡನೇ ತರಗತಿಗೆ 8ವರ್ಷ ಎಂದು ನಿಗಧಿಯನ್ನು ಮಾಡಿದೆ.*ಪ್ರಿಪರೇಟರಿ ಗ್ರೂಪ್ ಎಂದು ಮಾಡಿ 8 ರಿಂದ 11ರ ವಯೋಮಾನದ 3ನೇ ತರಗತಿಯಿಂದ 5ನೇ ತರಗತಿಯನ್ನು ನಿಗದಿ ಮಾಡಿದೆ. *ಮಾಧ್ಯಮಿಕ ಗ್ರೂಪ್ ಮಾಡಿ 11 ರಿಂದ 14ರ ವಯೋಮಾನದ 6ನೇ ತರಗತಿಯಿಂದ 8ನೇ ತರಗತಿಗೆ ಸೇರಿಸಲಾಗಿದೆ.*ಸೆಂಕೆಂಡರಿ ಗ್ರೂಪ್ ಮಾಡಿ 14ರಿಂದ 18ರ ವಯೋಮಾನದ 9ನೇ ತರಗತಿಯಿಂದ 12ನೇ ತರಗತಿ ಎಂದು ಸೇರಿಸಲಾಗಿದೆ.
ಹೀಗೆ ವಯಸ್ಸನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ತಿಳಿಸಿರುವುದರಿಂದ 1ನೇ ತರಗತಿಯ ವಯಸ್ಸು 6 ವರ್ಷಕ್ಕೆ ನಿಗದಿ ಮಾಡಿ ಶಿಕ್ಷಣ ಇಲಾಖೆ ಆದೇಶವನ್ನು ಮಾಡಿದೆ.
 ಹೊಸ ಆದೇಶದಂತೆ ದಾಖಲಾತಿಗೆ ಸೂಚನೆ

ಹೊಸ ಆದೇಶದಂತೆ ದಾಖಲಾತಿಗೆ ಸೂಚನೆ

ಶಿಕ್ಷಣ ಇಲಾಖೆ 23.05.2018ರಂದು ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಮಯೋಮಾನವನ್ನು ತಿದ್ದುಪಡಿ ಮಾಡಿ ಆದೇಶವನ್ನು ಮಾಡಿತ್ತು. ಇದಕ್ಕೆ ಮುನ್ನ 1 ನೇ ತರಗತಿಗೆ 5.10ವರ್ಷ ವಯಸ್ಸಿಗೆ ದಾಖಲಾತಿಯಿತ್ತು. ಅದನ್ನು 5.5 ವರ್ಷಕ್ಕೆ ಇಳಿಸಿ ಆದೇಶವನ್ನು ಮಾಡಿತ್ತು. ಇದೀಗ ಈ ಹಳೇಯ ಆದೇಶವನ್ನು ರದ್ದು ಮಾಡಿ ಅದರಂತೆ ಹೊಸ ಆದೇಶದಂತೆ 6ವರ್ಷ ಪೂರೈಸಿರುವ ಮಕ್ಕಳಿಗೆ ಒಂದನೇ ತರಗತಿದೆ ದಾಖಲೆ ಮಾಡಿಕೊಳ್ಳುವಂತೆ ಹೊಸ ಆದೇಶವನ್ನು ಮಾಡಿ ಶಿಕ್ಷಣ ಇಲಾಖೆ ಆದೇಶಸಿದೆ.

 ಈ ಶೈಕ್ಷಣಿಕ ವರ್ಷಕ್ಕೆ ಯಾವುದೇ ಅಡ್ಡಿಯಿಲ್ಲ

ಈ ಶೈಕ್ಷಣಿಕ ವರ್ಷಕ್ಕೆ ಯಾವುದೇ ಅಡ್ಡಿಯಿಲ್ಲ

ಈಗಾಗಲೇ 2022-23ನೇ ಸಾಲಿನ ದಾಖಲಾತಿ ಬಹುತೇಕ ಮುಕ್ತಾಯವಾಗಿರುವುದರಿಂದಾಗಿ ಈ ಶೈಕ್ಷಣಿಕ ವರ್ಷಕ್ಕೆ ಯಾವುದೇ ರೀತಿಯಲ್ಲೂ ಮಕ್ಕಳಿಗೆ ತೊಂದರೆಯಾಗುವುದಿಲ್ಲ. ಮಕ್ಕಳನ್ನು 5.5 ವರ್ಷಕ್ಕೆ ಒಂದನೇ ತರಗತಿಗೆ ದಾಖಲಿಸಿದ್ದರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷ 2023-24ಕ್ಕೆ ಹೊಸ ಆದೇಶದಂತೆ 1ನೇ ತರಗತಿ ಮಗುವನ್ನು ದಾಖಲಿಸಲು 6 ವರ್ಷವಾಗಿರಲೇಬೇಕಿದೆ.

English summary
Minimum age for admission to Class 1 now 6 years in Karnataka; Know why govt increased the children age limit? how to calculate and which academic year it will be implemented? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X