ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ಮೇಲೆ ನೀರಿತ್ತು, ಆದರೆ ಎಲ್ಲೋಯ್ತು? ಉತ್ತರ ನೀಡಿದ ವಿಜ್ಞಾನಿಗಳು!

|
Google Oneindia Kannada News

ಮನುಷ್ಯರು ಬದುಕಲು ಯೋಗ್ಯವಾದ ಜಾಗ ಎಂದರೆ ಭೂಮಿ ಮಾತ್ರ. ಆದರೆ ಭೂಮಿಗೆ ಪರ್ಯಾಯವಾಗಿ ಅಥವಾ ಭೂಮಿ ರೀತಿಯಲ್ಲೇ ಹಲವು ಗ್ರಹಗಳನ್ನ ವಿಜ್ಞಾನಿಗಳು ಹುಡುಕಿದ್ದಾರೆ. ಆದರೆ ಅಲ್ಲಿಗೆ ರೀಚ್ ಆಗಲು ನಮಗೆ ಕಮ್ಮಿ ಕಮ್ಮಿ ಅಂದರೂ ಲಕ್ಷ ಲಕ್ಷ ವರ್ಷ ಬೇಕು. ಹೀಗಾಗಿಯೇ ನಮ್ಮ ಅಕ್ಕಪಕ್ಕದ ಗ್ರಹಗಳ ಮೇಲೆ ಬಾಹ್ಯಾಕಾಶ ವಿಜ್ಞಾನಿಗಳು ಕಣ್ಣುಹಾಕಿ ಕೂತಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಮಂಗಳ ಗ್ರಹ.

ಅಷ್ಟಕ್ಕೂ ಮಂಗಳ ಗ್ರಹದ ಮೇಲೆ ನೂರಾರು ಕೋಟಿ ವರ್ಷಗಳ ಹಿಂದೆ ನೀರು ಇತ್ತು ಎಂಬ ಸತ್ಯವನ್ನ ಇತ್ತೀಚೆಗೆ ವಿಜ್ಞಾನಿಗಳು ಕಂಡುಕೊಂಡಿದ್ದರು. ಆದರೆ ಆ ನೀರು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಮಂಗಳ ಗ್ರಹದ ಮೇಲೆ ಇದ್ದ ನೀರು ದಿಢೀರ್ ನಾಪತ್ತೆ ಆಗಲು ಅದರ ಗುರುತ್ವ ಬಲದಲ್ಲಿನ ಬದಲಾವಣೆ ಪ್ರಮುಖ ಕಾರಣ ಎನ್ನಲಾಗಿದೆ. ನಾಸಾ ಸಂಶೋಧನೆ ಹೇಳುವಂತೆ, ಮಂಗಳ ಗ್ರಹದಿಂದ ನೀರು ಆಕಾಶಕ್ಕೆ ಹಾರಿ ಹೋಗಿಲ್ಲ, ಅದೇ ಗ್ರಹದಲ್ಲಿ ಇದೆ. ಆದರೆ ಅದು ಮಂಗಳನ ನೆಲದಲ್ಲಿ ಹುದುಗಿದೆಯಂತೆ.

ನೀರು ಆವಿಯಾಗಿತ್ತು ಎಂದಿದ್ದರು..!

ನೀರು ಆವಿಯಾಗಿತ್ತು ಎಂದಿದ್ದರು..!

ಕೆಲವು ತಿಂಗಳ ಹಿಂದೆ ವರದಿಯೊಂದು ಹೊರಬಿದ್ದಿತ್ತು. ಆ ವರದಿ ಪ್ರಕಾರ ಮಂಗಳ ಗ್ರಹದಲ್ಲಿ 4 ಬಿಲಿಯನ್ ವರ್ಷ ಅಂದರೆ 400 ಕೋಟಿ ವರ್ಷಗಳ ಹಿಂದೆ ಅಪಾರ ಪ್ರಮಾಣದಲ್ಲಿ ನೀರು ಇತ್ತು, ಆದರೆ ಮಂಗಳ ಗ್ರಹದ ಉಷ್ಣಾಂಶದ ಕಾರಣ ಆವಿಯಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಆದರೆ ಈ ಸಂಶೋಧನೆ ಎಲ್ಲಾ ಹೇಳಿಕೆಗಳನ್ನು ಉಲ್ಟಾ ಮಾಡಿದೆ. ಮಂಗಳ ಗ್ರಹದ ಗುರುತ್ವ ಬಲದಲ್ಲಿ ಉಂಟಾದ ಬದಲಾವಣೆ ನೀರನ್ನು ನಾಪತ್ತೆ ಮಾಡಿದೆ ಎಂಬುದು ಗೊತ್ತಾಗಿದೆ. ಹಾಗೆಂದು ಮಂಗಳ ಗ್ರಹದ ಮೇಲಿದ್ದ ನೀರು ಎಲ್ಲಿಗೂ ಹೋಗಿಲ್ಲ. ಆದರೆ ನಾಪತ್ತೆಯಾದ ನೀರು ಮಂಗಳ ಗ್ರಹದ ನೆಲದಲ್ಲೇ ಹುದುಗಿದೆ ಎನ್ನಲಾಗಿದೆ.

'ಕೊರೊನಾ' ನಡುವೆ ದಿನಕ್ಕೆ 25 ಗಂಟೆ ಕೆಲಸ..! ಭಾರತೀಯರು ಇಲ್ಲದೆ 'ನಾಸಾ'ಗೆ ಬಲವಿಲ್ಲ..!'ಕೊರೊನಾ' ನಡುವೆ ದಿನಕ್ಕೆ 25 ಗಂಟೆ ಕೆಲಸ..! ಭಾರತೀಯರು ಇಲ್ಲದೆ 'ನಾಸಾ'ಗೆ ಬಲವಿಲ್ಲ..!

 ಮಂಗಳ ಗ್ರಹದಲ್ಲಿ ಅಂತರ್ಜಲ..?

ಮಂಗಳ ಗ್ರಹದಲ್ಲಿ ಅಂತರ್ಜಲ..?

ಭೂಮಿ ಮೇಲೆ ಬೋರ್ ತೋಡಿದಂತೆ ಮಂಗಳ ಗ್ರಹದಲ್ಲೂ ಬೋರ್‌ವೆಲ್ ತೋಡುವ ದಿನಗಳು ದೂರವಿಲ್ಲ. ಏಕೆಂದರೆ ವಿಜ್ಞಾನಿಗಳು ಇದೀಗ ನೀಡಿರುವ ವರದಿಯ ಪ್ರಕಾರ ಮಂಗಳನ ಮೇಲೆ ನಾಪತ್ತೆಯಾಗಿರುವ ನೀರು, ಮಂಗಳ ಗ್ರಹದ ನೆಲದ ಒಳಗೆ ಸೇರಿದೆ ಎನ್ನಲಾಗುತ್ತಿದೆ. ವಿಜ್ಞಾನಿಗಳು ಹೇಳಿದಂತೆ ನೀರು ಮಂಗಳನ ನೆಲದಲ್ಲಿ ಹುದುಗಿದ್ದರೆ, ಅಂತರ್ಜಲ ಹೊರತೆಗೆಯಲು ಬೋರ್‌ವೆಲ್ ತೋಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆಗ ಮಂಗಳ ಗ್ರಹದ ಮೇಲೂ ಬೋರ್‌ವೆಲ್ ತೋಡುವ ಕಂಪನಿಗಳು ಶುರುವಾದರೂ ಅಚ್ಚರಿ ಏನಿಲ್ಲ. ಇದು ಬಾಹ್ಯಾಕಾಶ ಪ್ರೇಮಿಗಳು ಹಾಗೂ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

 ಆಂತರಿಕ ಕ್ರಿಯೆ ಮುಳುವಾಯ್ತಾ..?

ಆಂತರಿಕ ಕ್ರಿಯೆ ಮುಳುವಾಯ್ತಾ..?

ಭೂಮಿ ಒಳಗೆ ನಡೆಯುವ ಆಂತರಿಕ ಕ್ರಿಯೆಗಳಂತೆ ಮಂಗಳ ಗ್ರಹದಲ್ಲೂ ಆಂತರಿಕ ಕ್ರಿಯೆಗಳು ನಡೆಯುತ್ತವೆ. ಈ ಆಂತರಿಕ ಕ್ರಿಯೆ ಇಲ್ಲದ ಹೊರತಾಗಿ ಒಂದು ಗ್ರಹಕ್ಕೆ ಅಸ್ತಿತ್ವ ಇರುವುದಿಲ್ಲ. ಏಕೆಂದರೆ ಬಾಹ್ಯ ಒತ್ತಡಗಳಿಗೆ ಸರಿಸಮನಾಗಿ ಆಂತರಿಕ ಒತ್ತಡವೂ ಇರಬೇಕು. ಹೀಗೆ ಆಂತರಿಕ ಒತ್ತಡದ ಏರಿಳಿತ ಒಂದು ಗ್ರಹದ ಗುರುತ್ವದ ಮೇಲೂ ಪ್ರಭಾವ ಬೀರುತ್ತದೆ. ಇದೇ ರೀತಿ ಮಂಗಳ ಗ್ರಹದಲ್ಲೂ ಗುರುತ್ವಬಲದ ಏರಿಳಿತದಿಂದ ನೀರು ಇತರ ಸಂಯುಕ್ತಗಳ ಜೊತೆ ಸೇರಿ ಮಂಗಳ ಗ್ರಹದ ಅಂತರ್ಜಲ ಸೇರಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಶೋಧನೆಗಳು ಮುಂದುವರಿದಿದ್ದು, ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.

 2 ಕಿ.ಮೀ. ದಪ್ಪವಾಗಿತ್ತು ಹಿಮ..!

2 ಕಿ.ಮೀ. ದಪ್ಪವಾಗಿತ್ತು ಹಿಮ..!

ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ ಬರೋಬ್ಬರಿ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹೀಗೆ ಇಡೀ ಗ್ರಹದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಾ ಸಾಗಿದೆ. ಮಂಗಳ ಗ್ರಹದ ಗುರುತ್ವ ಬಲದ ಬದಲಾವಣೆ ಪರಿಣಾಮ ಹಿಮ ಕರಗಿ, ಆ ನೀರು ಕೂಡ ಇತರ ಸಂಯುಕ್ತದೊಂದಿಗೆ ಬೆರೆತು ನೆಲ ಸೇರಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮುಂದುವರಿಸಿದ್ದಾರೆ ವಿಜ್ಞಾನಿಗಳು.

English summary
NASA new studies say absconded Mars water may have settled settled under the crust of planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X