• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕರೆ ಮಾಡಬೇಡಿ": ವಧು ಕೊಟ್ಟ ವೈವಾಹಿಕ ಜಾಹೀರಾತು ವೈರಲ್

|
Google Oneindia Kannada News

ಇತ್ತೀಚೆಗೆ ಬಾಳ ಸಂಗಾತಿ ಆಯ್ಕೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು ವೈವಾಹಿಕ ಜಾಹಿರಾತುವೊಂದು ವೈರಲ್ ಆಗಿದೆ. ವೈರಲ್ ಜಾಹೀರಾತಿನ ಪ್ರಕಾರ, ವರನು ಐಎಎಸ್/ಐಪಿಎಸ್ (IAS/IPS) ಆಗಿರಬೇಕು. ವೈದ್ಯನಾಗಿರಬೇಕು (ಪಿಜಿ) ಅಥವಾ ಕೈಗಾರಿಕೋದ್ಯಮಿ/ಉದ್ಯಮಿಯೋ ಆಗಿರಬೇಕು. ಆದರೆ ಈ ಜಾಹೀರಾತು ಕೊನೆಯಲ್ಲಿ "ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯೆಮಾಡಿ ಕರೆ ಮಾಡಬೇಡಿ" ಎಂದಿದೆ. ಅಲ್ಲಿಗೆ ಸಾಫ್ಟ್‌ವೇರ್ ಇಂಜಿನೀಯರ್‌ಗಳನ್ನು ನೋಡಲು ಈ ಜಾಹೀರಾತುದಾರರು ಇಷ್ಟಪಡುವುದಿಲ್ಲ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಹುಬ್ಬೇರಿಸುವಂತೆ ಮಾಡಿದೆ. ಎಂಜಿನಿಯರ್‌ಗಳು ಈ ಜಾಹೀರಾತನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಸಾಲದಕ್ಕೆ ಈ ಜಾಹೀರಾತಿಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.

ಈ ಜಾಹೀರಾತಿನ ಚಿತ್ರವನ್ನು ಹಂಚಿಕೊಂಡ ವ್ಯಕ್ತಿ, "ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ" ಎಂದು ತಮಾಷೆ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಫೋಟೋ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಮಾತ್ರವಲ್ಲದೆ ನೋಡುಗರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. ಈ ಜಾಹೀರಾತಿಗೆ ಬಂದ ಕಾಮೆಂಟ್‌ಗಳು ಹೀಗಿವೆ-

"ಚಿಂತೆ ಮಾಡಬೇಡಿ. ಎಂಜಿನಿಯರ್‌ಗಳು ಕೆಲವು ಪತ್ರಿಕೆಗಳ ಜಾಹೀರಾತನ್ನು ಅವಲಂಬಿಸುವುದಿಲ್ಲ. ಅವರು ಎಲ್ಲವನ್ನೂ ತಮ್ಮದೇ ಆದ ರೀತಿಯಲ್ಲಿ ಕಂಡುಕೊಳ್ಳುತ್ತಾರೆ, "ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದರು.

ಇದೇ ರೀತಿಯ ಭಾವನೆಯನ್ನು ಪ್ರತಿಧ್ವನಿಸುತ್ತಾ, ಇನ್ನೊಬ್ಬರು ಬರೆದಿದ್ದಾರೆ, "ಈ ದಿನಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಆನ್‌ಲೈನ್‌ನಲ್ಲಿ ಎಲ್ಲವನ್ನೂ ಹುಡುಕುತ್ತಾರೆ (ವಧು ಸೇರಿದಂತೆ). ಆದ್ದರಿಂದ ಈ ಜಾಹೀರಾತು ಪೋಸ್ಟರ್ ಬಗ್ಗೆ ಚಿಂತಿಸಬೇಕಾಗಿಲ್ಲ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹೇಗಿದ್ದರೂ ಪತ್ರಿಕೆ ಜಾಹೀರಾತು ನೋಡುವುದಿಲ್ಲ'' ಎಂದಿದ್ದಾರೆ.

ಇನ್ನೂ ಕೆಲವರು ಐಟಿ ಕ್ಷೇತ್ರವು ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದರು.

ಈ ಮಧ್ಯೆ ವ್ಯಕ್ತಿಯೊಬ್ಬ ಒಂದು ಉಲ್ಲಾಸದ ಪ್ರಶ್ನೆಯನ್ನು ಮುಂದಿಟ್ಟಿದ್ದಾನೆ. ಅವರ ಪ್ರಶ್ನೆ ಹೀಗಿದೆ- "ಕ್ಯಾ ಮೆಕ್ಯಾನಿಕಲ್ ವಾಲೆ ಕಾಲ್ ಕರ್ ಸಕ್ತೇ ಹೈ? [ಮೆಕ್ಯಾನಿಕಲ್ ಎಂಜಿನಿಯರ್‌ಗಳು ಕರೆ ಮಾಡಬಹುದೇ?]" ಎಂದು ಕೇಳಿದ್ದಾರೆ.

ಈ ನಡುವೆ F.R.I.E.N.D.S ಅಭಿಮಾನಿಯೊಬ್ಬರು ಮೀಮ್‌ನೊಂದಿಗೆ ಪ್ರತಿಕ್ರಿಯಿಸಿದ್ದಾರೆ.

English summary
Doctor, IAS/IPS, Industrialist ok, but only software engineers don't call matrimonial ad goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X