ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೃಭೂಮಿ-ಸಿ ವೋಟರ್ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ 'ವಿಜಯ'ನ್

|
Google Oneindia Kannada News

ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆಯಲಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿಕೂಟ ಮತ್ತು ಪ್ರಮುಖ ವಿರೋಧಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ (ಯುಡಿಎಫ್) ನಡುವೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಕೇರಳದಲ್ಲಿ ತನ್ನ ಬೇರೂರಲು ಪ್ರಯತ್ನಿಸುತ್ತಿರುವ ಬಿಜೆಪಿ ಒಂದಷ್ಟು ಮತಗಳನ್ನು ಪಡೆದುಕೊಳ್ಳುವ ಹೋರಾಟದಲ್ಲಿದೆ.

ಮಾತೃಭೂಮಿ ಸಿ-ವೋಟರ್ ಸಮೀಕ್ಷೆ ಶುಕ್ರವಾರ ಪ್ರಕಟಗೊಂಡಿದ್ದು, ಎಡಪಕ್ಷಗಳ ಮೈತ್ರಿಕೂಟ 75-83 ಸೀಟುಗಳನ್ನು ಪಡೆದು ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಹೇಳಿದೆ. ಹೀಗಾಗಿ ಪಿಣರಾಯಿ ವಿಜಯನ್ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದಿದೆ.

ಎಬಿಪಿ-ಸಿ ವೋಟರ್ ಸಮೀಕ್ಷೆ: ತಮಿಳುನಾಡಲ್ಲಿ ಸ್ಟಾಲಿನ್ ಸರ್ಕಾರ ಅಧಿಕಾರಕ್ಕೆಎಬಿಪಿ-ಸಿ ವೋಟರ್ ಸಮೀಕ್ಷೆ: ತಮಿಳುನಾಡಲ್ಲಿ ಸ್ಟಾಲಿನ್ ಸರ್ಕಾರ ಅಧಿಕಾರಕ್ಕೆ

ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ, ಎಲ್‌ಡಿಎಫ್ 75-83 ಸೀಟುಗಳನ್ನು ಪಡೆದುಕೊಳ್ಳಲಿದೆ. ಅದರ ಪ್ರಮುಖ ವಿರೋಧಪಕ್ಷದ ಯುಡಿಎಫ್ 56-64 ಸೀಟುಗಳಲ್ಲಿ ಗೆಲ್ಲಲಿದೆ. ಇನ್ನು ಎನ್‌ಡಿಎ 0-2 ಸೀಟುಗಳನ್ನು ಪಡೆಯಬಹುದು. ಸಮೀಕ್ಷೆ ಪ್ರಕಾರ ಯುಡಿಎಫ್ 60, ಎಲ್‌ಡಿಎಫ್ 79 ಮತ್ತು ಎನ್‌ಡಿಎ 1 ಸರಾಸರಿ ಸಂಖ್ಯೆಗಳನ್ನು ಪಡೆದುಕೊಳ್ಳಲಿವೆ. ಎಲ್‌ಡಿಎಫ್ ಶೇ 40.9ರಷ್ಟು ಮತಗಳನ್ನು ಪಡೆದರೆ, ಯುಡಿಎಫ್ ಶೇ 37.9 ಮತ್ತು ಎನ್‌ಡಿಎ ಶೇ 16.6ರಷ್ಟು ಮತಗಳನ್ನು ಪಡೆಯಲಿದೆ.

ಸರ್ಕಾರದ ಬಗ್ಗೆ ಜನರ ಅಭಿಪ್ರಾಯ

ಸರ್ಕಾರದ ಬಗ್ಗೆ ಜನರ ಅಭಿಪ್ರಾಯ

ಶೇ 40.5ರಷ್ಟು ಜನರು ಎಡ ಸರ್ಕಾರದ ವಿರುದ್ಧ ಅಭಿಪ್ರಾಯ ಮಂಡಿಸಿದ್ದು, ಬದಲಾವಣೆ ಬಯಸಿದ್ದಾರೆ. ಇನ್ನು ಶೇ 27.6ರಷ್ಟು ಜನರು ಎಲ್‌ಡಿಎಫ್ ವಿರುದ್ಧ ಅಸಮಾಧಾನ ಹೊಂದಿದ್ದರೂ, ಆ ಸರ್ಕಾರವೇ ಆಡಳಿತದಲ್ಲಿ ಇರುವುದು ಉತ್ತಮ ಎಂದಿದ್ದಾರೆ. ಇನ್ನು ಶೇ 31.9ರಷ್ಟು ಜನರು ಎಲ್‌ಡಿಎಫ್ ಪರ ಒಲವು ಹೊಂದಿದ್ದು, ಇದೇ ಸರ್ಕಾರವನ್ನು ಮತ್ತೆ ಅಧಿಕಾರದಲ್ಲಿ ನೋಡಲು ಬಯಸಿದ್ದಾರೆ.

ವಿರೋಧಪಕ್ಷದ ಕಾರ್ಯವೈಖರಿ

ವಿರೋಧಪಕ್ಷದ ಕಾರ್ಯವೈಖರಿ

ಶೇ 42.6ರಷ್ಟು ಜನರು ವಿರೋಧಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಶೇ 34.4ರಷ್ಟು ಜನರು ಯುಡಿಎಫ್ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದ್ದಾರೆ. ಇನ್ನು ಶೇ 20.1ರಷ್ಟು ಜನರಿಗೆ ವಿಪಕ್ಷ ಸಹಜವಾಗಿದೆ ಎಂಬ ಭಾವನೆ ಮೂಡಿದೆ. ಉಳಿದ ಶೇ 2.9 ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.

4 ವರ್ಷಗಳಲ್ಲಿ 170 ಕಾಂಗ್ರೆಸ್, 18 ಬಿಜೆಪಿ ಶಾಸಕರ ನಿಷ್ಠೆ ಬದಲಾಗಿದೆ: ಎಡಿಆರ್ ಸಮೀಕ್ಷೆ4 ವರ್ಷಗಳಲ್ಲಿ 170 ಕಾಂಗ್ರೆಸ್, 18 ಬಿಜೆಪಿ ಶಾಸಕರ ನಿಷ್ಠೆ ಬದಲಾಗಿದೆ: ಎಡಿಆರ್ ಸಮೀಕ್ಷೆ

ಪ್ರಮುಖ ಸಮಸ್ಯೆ ಯಾವುದು?

ಪ್ರಮುಖ ಸಮಸ್ಯೆ ಯಾವುದು?

ಶೇ 41.8- ನಿರುದ್ಯೋಗ

ಶೇ 10.4- ಭ್ರಷ್ಟಾಚಾರ

ಶೇ 4.8- ಕಾನೂನು ಮತ್ತು ಸುವ್ಯವಸ್ಥೆ

ಮತಗಳ ಮೇಲೆ ಪ್ರಭಾವ ಬೀರುವ ಅಂಶಗಳು

ಮತಗಳ ಮೇಲೆ ಪ್ರಭಾವ ಬೀರುವ ಅಂಶಗಳು

ಶೇ 25.2- ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣ

ಶೇ 20.2- ಶಬರಿಮಲೆ ದೇವಸ್ಥಾನ ವಿವಾದ

ಶೇ 13- ಕೋವಿಡ್ ನಿಯಂತ್ರಣ

ಶೇ 8- ಪ್ರವಾಹ ಪರಿಹಾರ ನಿಧಿ

English summary
Mathrubhumi- C Voter Survey: Survey predicts 75-83 seats for LDF in Kerala assembly election 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X