ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗಪ್ಪಳಿಸಲು ಸಜ್ಜಾಗಿದೆ ಸೌರ ಚಂಡಮಾರುತ; ಏನು ಪರಿಣಾಮ ಕಾದಿದೆ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬಲಿಷ್ಠವಾದ ಸೌರ ಚಂಡಮಾರುತವು ಭೂಮಿಗೆ ಅತಿ ಶೀಘ್ರವೇ ಅಪ್ಪಳಿಸಲಿದೆ. ಚಂಡಮಾರುತವು 1.6 ದಶಲಕ್ಷ ಕಿಲೋ ಮೀಟರ್ ವೇಗದಲ್ಲಿ ಭೂಮಿ ಸಮೀಪಿಸುತ್ತಿದೆ ಎಂದು ನಾಸಾ ತಿಳಿಸಿದೆ.

ಸೂರ್ಯನಲ್ಲಿ ಸೃಷ್ಟಿಯಾಗುವ ಈ ಚಂಡಮಾರುತವು ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯವಿರುವ ಬಾಹ್ಯಾಕಾಶ ಪ್ರದೇಶದ ಮೇಲೆ ಪರಿಣಾಮ ಬೀರಲಿದೆ. ಇದು ಸೋಮವಾರ, ಅಂದರೆ ಜುಲೈ 12ಗೆ ಅಪ್ಪಳಿಸಬಹುದು ಎಂದು ಅಂದಾಜಿಸಿದೆ. ಈ ಸಮಯದಲ್ಲಿ ಸಂವಹನ ವ್ಯವಸ್ಥೆ, ಎಂದರೆ ಜಿಪಿಎಸ್‌ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ನಾಸಾ ಹೇಳಿದೆ. ಈ ಸೌರ ಬಿರುಗಾಳಿ ಉಪಗ್ರಹ ಸಂಕೇತಗಳನ್ನು ಅಡ್ಡಿಪಡಿಸಬಹುದು ಎಂದು ನಾಸಾ ಹೇಳಿದೆ. ಮುಂದೆ ಓದಿ...

ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!

 ಏನಿದು ಸೌರ ಚಂಡಮಾರುತ?

ಏನಿದು ಸೌರ ಚಂಡಮಾರುತ?

ಭೂಮಿಯ ಕಾಂತಕ್ಷೇತ್ರವು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳಿಂದ ಮಾನವನನ್ನು ರಕ್ಷಿಸುತ್ತದೆ. ಈ ಕಿರಣಗಳು ಹೆಚ್ಚಿನ ವೇಗದಲ್ಲಿ ಭೂಮಿಯೆಡೆ ಬಂದಾಗ ಕಾಂತೀಯ ಮೇಲ್ಮೈಗೆ ಡಿಕ್ಕಿ ಹೊಡೆಯುತ್ತವೆ. ನಂತರ ಈ ಸೌರ ಮಾರುತದ ಕಣಗಳು ಧ್ರುವಗಳಿಗೆ ಚಲಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಸೌರ ಚಂಡಮಾರುತ ಸಂಭವಿಸುತ್ತದೆ. ಇದರ ಪ್ರಭಾವ 12 ಗಂಟೆಗಳ ಕಾಲ ಉಳಿಯಬಹುದು. ಕೆಲ ದಿನಗಳ ನಂತರ ಈ ಮೇಲ್ಮೈ ಚೇತರಿಸಿಕೊಳ್ಳುತ್ತದೆ.

 ಸೌರ ಚಂಡಮಾರುತದ ಪ್ರಭಾವವೇನು?

ಸೌರ ಚಂಡಮಾರುತದ ಪ್ರಭಾವವೇನು?

ಸೌರ ಚಂಡಮಾರುತದ ಸಮಯದಲ್ಲಿ ಭೂಮಿಯ ಮೇಲ್ಮೈನಲ್ಲಿ ಶಾಖದಿಂದಾಗಿ ವಿದ್ಯುತ್ ಪ್ರವಾಹ ಹೆಚ್ಚಿರುತ್ತದೆ. ಹೀಗಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನೇವಿಗೇಶನ್, ಮೊಬೈಲ ಫೋನ್ ಸಿಗ್ನಲ್ ಹಾಗೂ ಸ್ಯಾಟಲೈಟ್ ಟಿವಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹ ಅಧಿಕವಾಗಿ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ'!ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ'!

 ಉತ್ತರ, ದಕ್ಷಿಣ ಧ್ರುವದಲ್ಲಿ ಸುಂದರ ನೋಟ

ಉತ್ತರ, ದಕ್ಷಿಣ ಧ್ರುವದಲ್ಲಿ ಸುಂದರ ನೋಟ

"ಈ ಸೌರ ಚಂಡಮಾರುತ ಸಂಭವಿಸುವ ಸಮಯದಲ್ಲಿ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ನೋಟ ಸಿಗಬಹುದಾಗಿದೆ. ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ರಾತ್ರಿ ಸಮಯದಲ್ಲಿ ಈ ಬೆಳಕನ್ನು ನೋಡಲು ಸಾಧ್ಯವಾಗಲಿದೆ" ಎಂದು ಸ್ಪೇಸ್ ವೆದರ್ ಉಲ್ಲೇಖಿಸಿದೆ.

 ಭೂಕಾಂತೀಯ ಚಂಡಮಾರುತ ಎನ್ನಬಹುದು

ಭೂಕಾಂತೀಯ ಚಂಡಮಾರುತ ಎನ್ನಬಹುದು

ಸೌರ ಜ್ವಾಲೆಯು ಸೂರ್ಯನ ವಾತಾವರಣದಲ್ಲಿ ಉಂಟಾಗುವ ಬೃಹತ್ ಸ್ಫೋಟವಾಗಿದ್ದು, ಇದು ಸೂರ್ಯನ ಕಾಂತಕ್ಷೇತ್ರದ ರೇಖೆಗಳ ಮರುಸಂಘಟನೆಯಿಂದ ಉಂಟಾಗುತ್ತದೆ. ಸೂರ್ಯನಲ್ಲಿ ಉಂಟಾಗುವ ಈ ಅಡಚಣೆ ಪರಿಣಾಮ ಭೂಮಿ ಮೇಲೆಯೂ ಗೋಚರಿಸುತ್ತದೆ. ಇದನ್ನು ಭೂಕಾಂತೀಯ ಚಂಡಮಾರುತ ಎಂದೂ ಕರೆಯಲಾಗುತ್ತದೆ.

English summary
Massive solar storm heading towards Earth at 1.6 million kmph may impact cell phone, GPS signals, predicted the Space Weather Prediction Centre at US,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X