ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ಮೇಲೆ ಸಾವಿರಾರು ಕೆರೆಗಳು..? ವಿಜ್ಞಾನಿಗಳು ಹೇಳೋದು ಏನು..?

|
Google Oneindia Kannada News

ನೀರು ಜೀವಿಗಳ ಪಾಲಿಗೆ ಅತ್ಯಗತ್ಯ ವಸ್ತು, ಇದೇ ಕಾರಣಕ್ಕೆ ನೀರನ್ನು ಜೀವಜಲ ಎಂದು ಕರೆಯುತ್ತಾರೆ. ಆದ್ರೆ ಇದೇ ಜೀವಜಲ ಅಥವಾ ನೀರು ಭೂಮಿ ಬಿಟ್ಟು ನಾಪತ್ತೆಯಾದರೆ? ಅರೆರೆ ಇದನ್ನ ಊಹೆ ಮಾಡಿಕೊಳ್ಳೋಕು ಕಷ್ಟವಾಗುತ್ತೆ. ಆದರೆ ನಮ್ಮ ನೆರೆಯ ಗ್ರಹ ಮಂಗಳನ ಮೇಲೆ ಇಂತಹದ್ದೇ ಪ್ರಕ್ರಿಯೆ ನಡೆದಿತ್ತು ಎಂಬ ವಿಚಾರ ವಿಜ್ಞಾನಿಗಳ ಸಂಶೋಧನೆಯಲ್ಲಿ ಬಯಲಾಗಿತ್ತು. ಆದರೂ ಮಂಗಳ ಗ್ರಹದ ಒಳಭಾಗದಲ್ಲಿ ನೀರು ಸಿಕ್ಕಾಪಟ್ಟೆ ಇದೆ ಎಂದಿದ್ದರು ವಿಜ್ಞಾನಿಗಳು.

ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ವಿಜ್ಞಾನಿಗಳು, ಸ್ಫೋಟಕ ಸತ್ಯವನ್ನ ಬಯಲು ಮಾಡಿದ್ದಾರೆ. ಅದೇನೆಂದರೆ ನಾವು ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಭಾರಿ ಪ್ರಮಾಣದಲ್ಲಿ ಮಂಗಳ ಗ್ರಹದ ಒಳಗೆ ನೀರು ಅಡಗಿದೆ ಎಂಬುದನ್ನ ಖಚಿತಪಡಿಸಿದ್ದಾರೆ. ಮಂಗಳ ಗ್ರಹದಲ್ಲಿ ರಾಡಾರ್‌ ಸಹಾಯದಿಂದ ಸಂಶೋಧನೆ ನಡೆಸಲಾಗಿತ್ತು. ರಾಡಾರ್ ಸಿಗ್ನಲ್‌ನ್ನ ಪರಿಶೀಲಿಸಿದ ಬಳಿಕ ವರದಿ ಸಿದ್ಧಪಡಿಸಿದ್ದಾರೆ ವಿಜ್ಞಾನಿಗಳು. ಈ ವರದಿ ಪ್ರಕಾರ ಮಂಗಳ ಗ್ರಹದ ದಕ್ಷಿಣ ಧ್ರುವ ಪ್ರದೇಶದಲ್ಲಿ 'ಜೀವಜಲ' ಭಾರಿ ಪ್ರಮಾಣದಲ್ಲಿ ಅಡಗಿದೆ. ಆದರೆ ಈ ನೀರು ಅಂತರ್ಜಲ ರೂಪದಲ್ಲಿದ್ದು, ಸಾವಿರಾರು ಕೆರೆಗಳೇ ಅಲ್ಲಿ ಇರಬಹುದು ಎನ್ನಲಾಗಿದೆ.

ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!

ಮಂಗಳ ಗ್ರಹದಲ್ಲಿ ಅಂತರ್ಜಲ..!

ಮಂಗಳ ಗ್ರಹದಲ್ಲಿ ಅಂತರ್ಜಲ..!

ಭೂಮಿ ಮೇಲೆ ಬೋರ್ ತೋಡಿದಂತೆ ಮಂಗಳ ಗ್ರಹದಲ್ಲೂ ಬೋರ್‌ವೆಲ್ ತೋಡುವ ದಿನಗಳು ದೂರವಿಲ್ಲ. ಏಕೆಂದರೆ ವಿಜ್ಞಾನಿಗಳು ಇದೀಗ ನೀಡಿರುವ ವರದಿಯ ಪ್ರಕಾರ ಮಂಗಳನ ಮೇಲೆ ನಾಪತ್ತೆಯಾಗಿರುವ ನೀರು, ಮಂಗಳ ಗ್ರಹದ ನೆಲದ ಒಳಗೆ ಸೇರಿದೆ ಎನ್ನಲಾಗುತ್ತಿದೆ. ವಿಜ್ಞಾನಿಗಳು ಹೇಳಿದಂತೆ ನೀರು ಮಂಗಳನ ನೆಲದಲ್ಲಿ ಹುದುಗಿದ್ದರೆ, ಅಂತರ್ಜಲ ಹೊರತೆಗೆಯಲು ಬೋರ್‌ವೆಲ್ ತೋಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆಗ ಮಂಗಳ ಗ್ರಹದ ಮೇಲೂ ಬೋರ್‌ವೆಲ್ ತೋಡುವ ಕಂಪನಿಗಳು ಶುರುವಾದರೂ ಅಚ್ಚರಿ ಏನಿಲ್ಲ. ಇದು ಬಾಹ್ಯಾಕಾಶ ಪ್ರೇಮಿಗಳು ಹಾಗೂ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ನೀರು ಮಾಯವಾಗಿತ್ತು ಎಂದಿದ್ದರು..!

ನೀರು ಮಾಯವಾಗಿತ್ತು ಎಂದಿದ್ದರು..!

ಮಂಗಳ ಗ್ರಹದಲ್ಲಿ 4 ಬಿಲಿಯನ್ ವರ್ಷ (400 ಕೋಟಿ ವರ್ಷ)ಗಳ ಹಿಂದೆ ಅಪಾರ ಪ್ರಮಾಣದಲ್ಲಿ ನೀರು ಇತ್ತು, ಆದರೆ ಮಂಗಳ ಗ್ರಹದ ಉಷ್ಣಾಂಶದ ಕಾರಣ ಆವಿಯಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಹಲವು ವರ್ಷಗಳ ಹಿಂದೆಯೇ ಮಂಗಳನಲ್ಲಿ ನೀರು ಹುದುಗಿದೆ ಎಂಬ ವಿಚಾರವನ್ನ ವಿಜ್ಞಾನಿಗಳು ತಿಳಿಸಿದ್ದರು. ಇದಕ್ಕೆ ಹಲವು ಪುರಾವೆಗಳನ್ನೂ ವಿಜ್ಞಾನಿಗಳು ಒದಗಿಸಿದ್ದರು. ಆದರೆ ಈ ನೀರು ಮಾಯವಾಗಿದ್ದು ಹೇಗೆ..? ಎಂಬ ವಿಚಾರ ಸ್ಪಷ್ಟವಾಗಿರಲಿಲ್ಲ. ಇದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆದಾಗ ಮಂಗಳ ಗ್ರಹದಲ್ಲಿ ನೀರಿನ ಅಂಶ ಇದೆ, ಆದರೆ ಮಂಗಳ ಗ್ರಹದ ಒಳಭಾಗದಲ್ಲಿ ನೀರು ಸಂಗ್ರಹವಾಗಿದೆ ಎಂಬ ವಿಚಾರ ಸ್ಪಷ್ಟವಾಗಿತ್ತು.

2 ಕಿ.ಮೀ. ದಪ್ಪವಾಗಿತ್ತು ಹಿಮ..!

2 ಕಿ.ಮೀ. ದಪ್ಪವಾಗಿತ್ತು ಹಿಮ..!

ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ ಬರೋಬ್ಬರಿ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನ ಅಂದಾಜು ಮಾಡುವುದಾದರೆ ಮಾರ್ಕೆಟ್‌ನಿಂದ ಮೆಜೆಸ್ಟಿಕ್‌ವರೆಗೂ ಇರುವ ದೂರದಷ್ಟು ದಪ್ಪನಾಗಿತ್ತು ಮಂಗಳನಲ್ಲಿದ್ದ ಹಿಮದ ಪ್ರಮಾಣ. ಹೀಗೆ ಇಡೀ ಗ್ರಹದ ಬಹುಭಾಗದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಾ ಸಾಗಿದೆ.

ಈ ನೀರು ಒಂದಷ್ಟು ಆವಿಯಾದರೆ

ಈ ನೀರು ಒಂದಷ್ಟು ಆವಿಯಾದರೆ

ಮಂಗಳ ಗ್ರಹದ ಒಳ ಭಾಗದಲ್ಲಿ ಬಿಸಿ ಹೆಚ್ಚಾದಂತೆಲ್ಲಾ ನೆಲವೂ ಕಾದ ಕಬ್ಬಿಣವಾಗಿದೆ. ಹೀಗೆ ನೆಲ ಕಾಯುತ್ತಿದ್ದಂತೆ ಸಹಜವಾಗಿಯೇ ಹಿಮವೂ ಕರಗುತ್ತಾ ಸಾಗಿತ್ತು. ಆದ್ರೆ ಈ ನೀರು ಒಂದಷ್ಟು ಆವಿಯಾದರೆ, ಇನ್ನುಳಿದ ಭಾರಿ ಪ್ರಮಾಣದ ನೀರು ಅಂತರ್ಜಲವಾಗಿ ಉಳಿದುಕೊಂಡಿದೆ.

English summary
New study says Mars have more ground water than previews we thought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X