ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

|
Google Oneindia Kannada News

ಡ್ರಗ್ ಮಾಫಿಯಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದೇ ಹೊತ್ತಲ್ಲಿ ಸಿಂಥೆಟಿಕ್ ಡ್ರಗ್ಸ್ ಜೊತೆ ಗಾಂಜಾ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಆದರೆ ನಿಜವಾಗಿಯೂ ಗಾಂಜಾ ಡ್ರಗ್ಸ್ ಪಟ್ಟಿಗೆ ಸೇರುತ್ತಾ..? ಗಾಂಜಾ ಅಥವಾ ಮರಿಜುನಾ ಬಗ್ಗೆ ತಜ್ಞರು ಹೇಳೋದಾದರೂ ಏನು..? ಇಂತಹ ಹತ್ತು ಹಲವು ಪ್ರಶ್ನೆಗಳು ಬಹುತೇಕರನ್ನು ಕಾಡುತ್ತಿವೆ. ಇದೇ ಸಂದರ್ಭದಲ್ಲಿ ಗಾಂಜಾ ಬಳಕೆಗೆ ಅನುಮತಿ ಸಿಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Recommended Video

Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Oneindia Kannada

ಅಷ್ಟಕ್ಕೂ 1985ಕ್ಕೂ ಹಿಂದೆ ಸಾವಿರಾರು ವರ್ಷಗಳ ಕಾಲ ಭಾರತದಲ್ಲಿ ಗಾಂಜಾ ಸಸ್ಯ ಬಳಕೆಯಲ್ಲಿತ್ತು. ಆಯುರ್ವೇದದಲ್ಲಿ ಗಾಂಜಾ ಅಥವಾ ಮರಿಜುನಾ ಸಸ್ಯಕ್ಕೆ ಉನ್ನತ ಸ್ಥಾನವಿದೆ. ಆದರೆ 1985ರಲ್ಲಿ ರಾಜೀವ್ ಗಾಂಧಿ ಸರ್ಕಾರ ಗಾಂಜಾ ಬಳಕೆಯನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದಿತ್ತು.

ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'

ಈ ನಿರ್ಧಾರದ ಹಿಂದೆ ಅಮೆರಿಕದ ಲಾಬಿ ಇತ್ತು ಎಂಬ ಆರೋಪವಿದೆ. ಹೀಗೆ ಭಾರತೀಯ ವೈದ್ಯಕೀಯ ಪದ್ಧತಿಯಿಂದ ಅಮೂಲ್ಯವಾದ ಸಸ್ಯವೊಂದು ಜಾರಿ ಹೋಗಿತ್ತು. ಇದೀಗ ಮತ್ತೆ ಗಾಂಜಾ ಸಸ್ಯದ ಬಳಕೆಗೆ ಹಾಗೂ ಬೆಳೆಯಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

 ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

ಹಿಮಾಚಲದಲ್ಲಿ 60 ಸಾವಿರ ಕೆ.ಜಿ ಗಾಂಜಾ ಬೆಳೆ

1985ರಲ್ಲಿ ಗಾಂಜಾ ಅಥವಾ ಮರಿಜುವಾನಾ ಭಾರತದಲ್ಲಿ ಬ್ಯಾನ್ ಆಗಿತ್ತು. ಭಾರತದ ಪುರಾತನ ವೈದ್ಯಕೀಯ ಪದ್ಧತಿ ಆಯುರ್ವೇದದಲ್ಲಿ ಗಾಂಜಾ ಸೊಪ್ಪಿಗೆ ವಿಶೇಷ ಮನ್ನಣೆ ಇದೆ. ಇದನ್ನು -ನೋವು ನಿವಾರಕದಂತೆ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ನೋವು ನಿವಾರಕವಾಗಿ ಮಾತ್ರವಲ್ಲ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಗಾಂಜಾ ರಾಮಬಾಣ ಎನ್ನಲಾಗುತ್ತೆ. ಹೀಗೆ ಸಾವಿರಾರು ವರ್ಷಗಳಿಂದಲೂ ಗಾಂಜಾ ಗಿಡ ಆಯುರ್ವೇದದಲ್ಲಿ ಬೆರೆತು ಹೋಗಿತ್ತು. ಆದರೆ 1985ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರ ಅಮೆರಿಕದ ಫಾರ್ಮಾ ಕಂಪನಿಗಳ ಒತ್ತಡಕ್ಕೆ ಮಣಿದು ಗಾಂಜಾ ಬ್ಯಾನ್ ಮಾಡಿತ್ತು ಎಂಬ ಆರೋಪವಿದೆ. ಆದರೂ ಭಾರತದಲ್ಲಿ ಕಳ್ಳದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಉದಾಹರಣೆಗೆ ಹಿಮಾಚಲ ಪ್ರದೇಶ ಒಂದರಲ್ಲೇ ಬರೋಬ್ಬರಿ 60 ಸಾವಿರ ಕೆ.ಜಿ ಗಾಂಜಾ ಬೆಳೆಯಲಾಗುತ್ತಿದೆ.

 ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ 40 ದೇಶಗಳಲ್ಲಿ ಲೀಗಲ್

ಜಗತ್ತಿನ ಬಹುಪಾಲು ದೇಶಗಳಲ್ಲಿ ಮರಿಜುನಾ ಈಗಲೂ ನಿಷೇಧಿತ ವಸ್ತು. ಆದರೆ 40ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಜಾ ಬೆಳೆಯುವುದಕ್ಕೆ ಹಾಗೂ ಬಳಸುವುದಕ್ಕೆ ಅನುಮತಿ ಇದೆ. ಕೆನಡಾ ಸೇರಿದಂತೆ ಹಲವು ದೈತ್ಯ ದೇಶಗಳಲ್ಲಿ ಗಾಂಜಾ ಗಿಡಕ್ಕೆ ಲೀಗಲ್ ಪಟ್ಟವಿದೆ. ಹಾಗೇ ಅಮೆರಿಕದ 27ಕ್ಕೂ ಹೆಚ್ಚು ರಾಜ್ಯಗಳಲ್ಲಿ ಔಷಧ ತಯಾರಿಕೆಗೆ ಗಾಂಜಾ ಬಳಸಲು ಅನುಮತಿ ಇದೆ. ಆದರೆ ಭಾರತದಲ್ಲಿ ಮಾತ್ರ ಗಾಂಜಾ ಈಗಲೂ ಬ್ಯಾನ್ ಆಗಿದೆ. ಹೀಗಾಗಿ ಆಯುರ್ವೇದ ತಜ್ಞರು ಕಾನೂನಾತ್ಮಕವಾಗಿ ಗಾಂಜಾ ಬಳಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.

ಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆಬೆಂಗಳೂರು: ಹೈಟೆಕ್ ಗಾಂಜಾ 'ಕೃಷಿಕ' ಪೊಲೀಸರ ಬಲೆಗೆ

 ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಸಿಗರೇಟ್, ಆಲ್ಕೋಹಾಲ್‌ಗಿಂತ ಅಪಾಯ ಕಮ್ಮಿ

ಮರಿಜುನಾ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿನ ಕೆಲವು ರಾಸಾಯನಿಕ ವಸ್ತುಗಳು ದೇಹದಲ್ಲಿ ಒತ್ತಡ ಹಾಗೂ ನೋವು ಕಡಿಮೆ ಮಾಡುವ ಶಕ್ತಿ ಹೊಂದಿವೆ ಎಂಬುದು ಆಯುರ್ವೇದ ತಜ್ಞರ ಮಾತು. ಸಿಗರೇಟ್ ಹಾಗೂ ಆಲ್ಕೋಹಾಲ್‌ಗೆ ಹೋಲಿಕೆ ಮಾಡಿದರೆ ಗಾಂಜಾ ಗಿಡದಿಂದ ಆಗುವ ಅಪಾಯವೂ ತೀರಾ ಕಡಿಮೆ ಎಂಬುದು ಕೆಲ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೂ ಇದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಏಕೆಂದರೆ ಗಾಂಜಾ ಬ್ಯಾನ್ ಆಗಿರೋದರಿಂದ ಹಲವು ಸಂಶೋಧನೆಗಳಿಗೂ ಅಡ್ಡಿಯಾಗಿದೆ.

 ಲಿಕ್ಕರ್, ಔಷಧ ಕಂಪನಿಗಳ ಲಾಬಿ..?

ಲಿಕ್ಕರ್, ಔಷಧ ಕಂಪನಿಗಳ ಲಾಬಿ..?

ಮರಿಜುನಾ ಅಥವಾ ಗಾಂಜಾ ಬಹುತೇಕ ದೇಶಗಳಲ್ಲಿ ಬ್ಯಾನ್ ಆಗುವುದರ ಹಿಂದೆ ಲಿಕ್ಕರ್ ಹಾಗೂ ನೋವು ನಿವಾರಕ ಔಷಧ ಕಂಪನಿಗಳ ಲಾಬಿ ಇದೆ ಎಂಬ ಆರೋಪವಿದೆ. ಆರೋಪಕ್ಕೆ ಪುಷ್ಟಿ ನೀಡುವಂತೆ 1961ರಿಂದಲೂ ಗಾಂಜಾ ಔಷಧ ಕಂಪನಿಗಳ ಟಾರ್ಗೆಟ್ ಆಗಿದೆ ಎಂಬುದು ಆಯುರ್ವೇದ ತಜ್ಞರ ಆರೋಪ. ಇನ್ನೊಂದ್ಕಡೆ ಅಮೆರಿಕದಲ್ಲಿ ಗಾಂಜಾ ಲೀಗಲ್ ಆಗಿರುವ ರಾಜ್ಯಗಳಲ್ಲಿ ನೋವು ನಿವಾರಕ ಔಷಧ ಹಾಗೂ ಆಲ್ಕೋಹಾಲ್ ಬಳಸುವವರ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆಯಂತೆ.

 ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಭಾರತದಲ್ಲೂ ಸಿಗಲಿದೆಯಾ ಅನುಮತಿ..?

ಔಷಧೀಯ ಉಪಯೋಗಕ್ಕಾಗಿ ಗಾಂಜಾ ಬಳಕೆಗೆ ಹಾಗೂ ಬೆಳೆಸಲು ಅನುಮತಿ ನೀಡಬೇಕು ಎಂಬ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಔಷಧೀಯ ಸಂಶೋಧನೆಗೆ ಗಾಂಜಾ ಬಳಕೆಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಇದ್ಯಾವುದೂ ಇನ್ನೂ ಫೈನಲ್ ಆಗಿಲ್ಲ. ಇಷ್ಟೆಲ್ಲದರ ನಡುವೆ ಗಾಂಜಾ ಕೆಟ್ಟದ್ದೋ, ಅಥವಾ ಒಳ್ಳೆಯದೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಯುವ ಸಮೂಹ ಮಾತ್ರ ಇದೇ ಗ್ಯಾಪ್‌ ಅಲ್ಲಿ ಗಾಂಜಾ ನಶೆಯಲ್ಲಿ ತೇಲುತ್ತಿರೋದು ಕೂಡ ಅಷ್ಟೇ ಸತ್ಯ.

English summary
Marijuana production is consistently increasing in India after 1985 ban. In Himachal Pradesh alone there is more than 60 thousand kg of illegal Marijuana production being done. Which leads to debate of legalization of marijuana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X