• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶ ಲಾಕ್‌ಡೌನ್; ಯುವಕರ ಗೋಳು ಟಿಕ್‌ಟಾಕ್‌ನಲ್ಲಿ ಜೋರು

|

ಬೆಂಗಳೂರು, ಮಾರ್ಚ್ 27: ಕೊರೊನಾ ಮಹಾಮಾರಿ ಜಗತ್ತಿನಲ್ಲಿ ದೊಡ್ಡ ಹಾವಳಿಯನ್ನೇ ಸೃಷ್ಟಿಸಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಅತಿದೊಡ್ಡ ದೇಶವಾಗಿರುವ ಭಾರತಕ್ಕೂ ಕೊರೊನಾ ಕಾಟ ಕೊಡುತ್ತಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು, 21 ದಿನ ಅಂದರೆ ಏಪ್ರೀಲ್ 15 ರವೆರೆಗೆ ಲಾಕ್‌ಡೌನ್ ಘೋಷಿಸಿದ್ದಾರೆ.

ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ

ಸಂಪೂರ್ಣ ಲಾಕ್‌ಡೌನ್‌ನಿಂದ ಜನ ಮನೆಯಿಂದ ಹೊರಗೆ ಬಾರದಂತೆ ಮಾಡಲಾಗಿದೆ. ಇದರಿಂದ ಕಂಗಾಲಾಗಿರುವ ಭಾರತದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಬಗ್ಗೆ ತಮ್ಮ ನೋವನ್ನು ಚಿತ್ರ ವಿಚಿತ್ರವಾಗಿ ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಾರೀ ಜನಪ್ರಿಯವಾಗುತ್ತಿರುವ ಟಿಕ್‌ಟಾಕ್‌ನಲ್ಲಂತೂ ಲಾಕ್‌ಡೌನ್‌ ಬಗ್ಗೆ ಯುವಕರು ಸಕತ್ ಕಾಮಿಡಿ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಲಾಕ್‌ಡೌನ್‌ಗೆ ಸಕತ್ ಟ್ರೋಲ್ ಮಾಡುತ್ತಿದ್ದಾರೆ. ಅಂತಹ ವಿಡಿಯೋಗಳು ಒಂದಕ್ಕಿಂತ ಒಂದು ನಗೆ ಉಕ್ಕಿಸುತ್ತಿವೆ. ಲಾಕ್‌ಡೌನ್‌ ಬಗ್ಗೆ ಬೇಸರಗೊಂಡವರು ಟಿಕ್‌ಟಾಕ್‌ನಲ್ಲಿ ಒಂದು ರೌಂಡ್‌ ಹೊಡೆದುಕೊಂಡು ಬರಲು ಅಡ್ಡಿಯಿಲ್ಲ.

ಹೇಗಪ್ಪಾ ಮನೆಯಲ್ಲಿ ಇರೋದು?

ಹೇಗಪ್ಪಾ ಮನೆಯಲ್ಲಿ ಇರೋದು?

ಸದಾ ಹೊರಗೆ ಓಡಾಡಿಕೊಂಡು ಇರುವವರಿಗೆ ಲಾಕ್‌ಡೌನ್‌ ಎಂಬುದು ಸಹಿಸಲಸಾಧ್ಯವಾದ ಸಂಗತಿಯಾಗಿದೆ. ಇದರಿಂದ ಶಾಕ್‌ ಗೆ ಒಳಗಾಗಿದ್ದಾರೆ ಅನೇಕರು. ಅದರಲ್ಲೂ ಅನೇಕ ಯುವಕ ಯುವತಿಯರು ಮನೆಯಲ್ಲಿ ಇನ್ನೂ 18 ದಿನ ಸಮಯ ಕಳೆಯುವುದು ಹೇಗೆ? ಎಂಬುದನ್ನು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಎಂದೂ ಮಾಡದ ಕೆಲಸಗಳು!

ಎಂದೂ ಮಾಡದ ಕೆಲಸಗಳು!

ಲಾಕ್‌ಡೌನ್‌ನಿಂದ ಮನೆಯಲ್ಲಿ ಸಮಯ ಕಳೆಯದಾಗದವರು ಅಡುಗೆ ಮಾಡುವುದು, ಹೆಂಡತಿಗೆ ಸಹಾಯ ಮಾಡುವುದು, ಒಂದು ಕೆಜಿಯಲ್ಲಿ ಅಕ್ಕಿಕಾಳು ಎಷ್ಟಿವೆ, ಬಾಚಣಿಕೆಯ ಹಲ್ಲು ಎಷ್ಟಿವೆ? ಕಿಟಕಿಯಿಂದ ಹೊರಗೆ ನೋಡುತ್ತಾ ನಾವು ಯಾವಾಗ ಹೊರ ಹೋಗುತ್ತೇವೋ ಎಂದು ನೋಡುವುದು, ಮಕ್ಕಳೊಂದಿಗೆ ಆಟ ಆಡುವುದು, ಬಿದ್ದು ಉರುಳಾಡುವುದನ್ನು ಟಿಕ್‌ಟಾಕ್ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಬಗ್ಗೆ ಮಾಡಿರುವ ಈ ವಿಡಿಯೋಗಳು ಸಕತ್ ನಗು ತರಿಸುತ್ತಿವೆ.

ಪೊಲೀಸರ ಭಯ

ಪೊಲೀಸರ ಭಯ

ಲಾಕ್‌ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಪೊಲೀಸರ ಕಣ್ಣು ತಪ್ಪಿಸಿಯೂ ಕೆಲವರು ಹೊರಗೆ ಅಡ್ಡಾಡಲು ಹೋಗುತ್ತಿದ್ದಾರೆ. ಅಡ್ಡಾಡಲು ಹೋಗಿ ಪೊಲೀಸ್ ಲಾಠಿ ಏಟು ತಿಂದು ಬರುವವರ ಬಗ್ಗೆ ಟಿಕ್‌ಟಾಕ್‌ನಲ್ಲಿ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಪೊಲೀಸರ ಭಯ ಟಿಕ್‌ಟಾಕ್‌ನಲ್ಲಿ ಅನುರಣಿಸುತ್ತಿದೆ.

ಸಕತ್ ಕ್ರಿಯೇಟಿವ್ ವಿಡಿಯೋಗಳು

ಸಕತ್ ಕ್ರಿಯೇಟಿವ್ ವಿಡಿಯೋಗಳು

ಲಾಕ್‌ಡೌವ್‌ನಿಂದ ಜನ ಎಷ್ಟೊಂದು ಕ್ರಿಯೇಟಿವ್ ಆಗಿದ್ದಾರೆ ಎಂಬುದನ್ನು ನೋಡಬೇಕಾದರೆ ಟಿಕ್‌ಟಾಕ್ ನೋಡಬೇಕಿದೆ. ಹೊರಗೆ ಹೋಗದೇ ಪರಿತಪಿಸುತ್ತಿರುವವರು ಟಿಕ್‌ಟಾಕ್‌ನಲ್ಲಿ ತಮ್ಮ ಕೌಶಲ್ಯವನ್ನು ತೋರಿಸುವಲ್ಲಿ ಹಿಂದೆ ಬಿದ್ದಿಲ್ಲ. ಲಾಕ್‌ಡೌನ್ ನಿಂದ ನಮಗೆ ಸಮಯ ಕಳೆಯುವುದೇ ಆಗುತ್ತಿಲ್ಲ ಎಂದು ಟಿಕ್‌ಟಾಕಿಗಳು ಅಲವತ್ತುಕೊಳ್ಳುತ್ತಿರುವುದು ನೋಡುಗರಲ್ಲಿ ನಗೆ ಉಕ್ಕಿಸುತ್ತಿವೆ.

English summary
Many TikTok Videos Trolled LockDown. tiktok users most upset by lockdown. showing creativity in tiktok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X