ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ವರ್ಷಗಳಿಗೆ ಬುಕ್ಕಿಂಗ್, ಮಳೆಗಾಲದಲ್ಲೂ ಮಂದಾರ್ತಿ ಮೇಳದ ಯಕ್ಷಗಾನ

By ಉಡುಪಿ ಪ್ರತಿನಿಧಿ
|
Google Oneindia Kannada News

ಯಕ್ಷಗಾನ ಕಲೆಯನ್ನು ತುಂಬ ಪ್ರೀತಿಯಿಂದ ಕಾಣುವ ಕಲಾ ಮಾತೆ ಮಂದಾರ್ತಿ ದುರ್ಗಾಪರಮೇಶ್ವರಿ. 5 ಮೇಳಗಳು, 200 ಕಲಾವಿದರು, ವರ್ಷದ 6 ತಿಂಗಳು ನಿರಂತರ ಕಲಾ ಸೇವೆ ಸಲ್ಲಿಸುತ್ತಾರೆ. ಅಂದಹಾಗೆ ಇನ್ನು ಮುಂದಿನ 30 ವರ್ಷಗಳಿಗೆ 25000 ಹರಕೆ ಆಟ ಬುಕಿಂಗ್ ಆಗಿದೆ.

ಹೌದು, ಇಂತಹ ಪ್ರಸಿದ್ಧ ಕಾರಣಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ. ಕಲಾವಿದರಿಗೆ ಮಳೆಗಾಲದಲ್ಲಿ ಜೀವನಾಧಾರ ಮತ್ತು ಹರಕೆ ಆಟಗಳ ಸಂಖ್ಯೆ ಹೆಚ್ಚಳದ ಮೂಲಕ ಭಕ್ತರಿಗೆ ಅನುಕೂಲ. ಈ ಎರಡು ಉದ್ದೇಶಗಳನ್ನು ಪೂರೈಸಲು ಪ್ರತಿ ದಿನ 2 ಮೇಳಗಳು ಮಳೆಗಾಲದಲ್ಲೂ ಯಕ್ಷಗಾನ ಪ್ರದರ್ಶನ ನೀಡುತ್ತಿವೆ.

ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ

ಕರಾವಳಿ ಯಕ್ಷಗಾನ ಕಲೆಯ ಆಡುಂಬೊಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ಯಕ್ಷಗಾನ ಮೇಳಗಳಿವೆ. ಇವುಗಳಲ್ಲಿ 40ಕ್ಕೂ ಅಧಿಕ ವೃತ್ತಿಪರ ಮೇಳಗಳಿವೆ. ಯಕ್ಷಗಾನ ಮೇಳಗಳಲ್ಲಿ ಬಹುತೇಕ ಆರಾಧನಾ ಕಲಾ ರೂಪದ ಹರಕೆ ಪ್ರದರ್ಶನಗಳು ನಡೆಯುತ್ತವೆ.

Mandarthi Yakshagana show on rainy season also

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ 6 ಮೇಳಗಳನ್ನು ಹೊಂದಿದ್ದರೆ, ಉಡುಪಿ ಜಿಲ್ಲೆಯ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ 5 ಮೇಳಗಳನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಹರಕೆ ಆಟಗಳು ಹೆಚ್ಚಾಗುತ್ತಿರುವ ಕಾರಣ ಮಂದಾರ್ತಿ ಮೇಳಕ್ಕೆ ಮುಂದಿನ 30 ವರ್ಷಗಳಿಗೆ ಯಕ್ಷಗಾನ ಸೇವೆ ಬುಕ್ ಆಗಿದೆ.

ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು? ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿ ನಿತ್ಯ 5 ಸೇವೆ ಆಟಗಳು ತಿಂಗಳಿಗೆ 150 ಪ್ರದರ್ಶನಗಳು ನಡೆಯುತ್ತವೆ. ಒಂದು ವರ್ಷದಲ್ಲಿ ಸುಮಾರು 900 ಪ್ರದರ್ಶನಗಳು ನಡೆಯುತ್ತವೆ. ಈಗಾಗಲೇ ಬುಕ್ ಆಗಿರುವ 25000 ಹರಕೆ ಆಟಗಳಿಗೆ ಇನ್ನೂ 30 ವರ್ಷ ಬೇಕಾಗುತ್ತದೆ. ಭಕ್ತರು ಅಷ್ಟು ಸಮಯ ಕಾಯ ಬೇಕಾಗಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಮಳೆಗಾಲದ ಪ್ರದರ್ಶನ ಆರಂಭಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ.

Mandarthi Yakshagana show on rainy season also

ಸಾಮಾನ್ಯವಾಗಿ ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ಉದ್ಯೋಗ ಇರುವುದಿಲ್ಲ. ಅಪರೂಪಕ್ಕೆ ಕೆಲವೆಡೆ ಅವಕಾಶಗಳು ಸಿಗುತ್ತವೆ. ಆದರೆ ಜೀವನ ನಿರ್ವಹಣೆಗೆ ಕಷ್ಟವೇ ಸರಿ. ಮಳೆಗಾಲದ ಪ್ರದರ್ಶನ ಆರಂಭಿಸಿದ ಕಾರಣ ಕಲಾವಿದರಿಗೆ ಮಳೆಗಾಲದ ಜೀವನ ನಿರ್ವಹಣೆಗೆ ಅನುಕೂಲವಾಗಿದೆ.

Mandarthi Yakshagana show on rainy season also

ಭಕ್ತರಿಗೂ ಈ ಯೋಜನೆ ಸಹಕಾರಿಯಾಗಿದ್ದು, ಹರಕೆ ಆಟಕ್ಕಾಗಿ ಬಹಳ ವರ್ಷ ಕಾಯಬೇಕಾಗಿಲ್ಲ. ಸದ್ಯ ಮಂದಾರ್ತಿ ಕ್ಷೇತ್ರದಲ್ಲಿ ಪ್ರತಿ ದಿನ 2 ಸೇವೆ ಆಟಗಳು ನಡೆಯುತ್ತಿವೆ. ದೂರದ ಊರುಗಳಲ್ಲಿ ಇರುವ ಭಕ್ತರಿಗೆ ಕ್ಷೇತ್ರದಲ್ಲೇ ಹರಕೆ ಆಟ ನಡೆಯುವುದರಿಂದ ಬಹಳಷ್ಟು ಅನುಕೂಲವಾಗಿದೆ.

English summary
Mandrathi Yakshagana show booked for 30 years so, administration decided to run a show on rainy season also. Here is the interesting facts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X