ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಸ್ತಿ ಘೋಷಣೆ

|
Google Oneindia Kannada News

ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಸ್ತಿ ವಿವರಗಳನ್ನು ಘೋಷಿಸಲಾಗಿದೆ. ಒಟ್ಟು 16.72 ಲಕ್ಷ ರು ಆಸ್ತಿ ಹೊಂದಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿರುವ ಮಮತಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ನಂದಿಗ್ರಾಮದಲ್ಲಿ ಅವರ ಎದುರಾಳಿ ಮಾಜಿ ಸಚಿವ ಸುವೇಂದು ಅಧಿಕಾರಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಪೂರ್ವ ಮೇದಿನಿಪುರದ ನಂದಿಗ್ರಾಮ ಕ್ಷೇತ್ರದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿದ್ದು, ಈ ಬಾರಿ ಬಿರುಸಿನ ಹಣಾಹಣಿ ನಿರೀಕ್ಷಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ.

ಮಮತಾ ಘೋಷಿತ ಆಸ್ತಿ ವಿವರ:
* ತಮ್ಮ ಹೆಸರಿನಲ್ಲಿ ಯಾವುದೇ ಕಾರು, ನಿವೇಶನ ಹೊಂದಿಲ್ಲ. 66 ವರ್ಷ ವಯಸ್ಸಿನ ಮಮತಾ ಅವರು 2016ರಲ್ಲಿ 30.45 ಲಕ್ಷ ರು ಆಸ್ತಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Mamata Banerjee declares assets worth Rs 16.72 lakh

* 2019-20ನೇ ಸಾಲಿನಲ್ಲಿ ಆದಾಯ ಗಳಿಕೆ 10,34, 370 ರು ನಷ್ಟಿತ್ತು. 69, 255 ರು ನಗದು ಹೊಂದಿದ್ದಾರೆ.

* ಬ್ಯಾಂಕ್ ಬ್ಯಾಲೆನ್ಸ್: 13.53 ಲಕ್ಷ ರು ಇದ್ದು, ಅದರಲ್ಲಿ 1.51 ಲಕ್ಷ ರು ಚುನಾವಣಾ ಖರ್ಚು ವೆಚ್ಚಕ್ಕೆ ಬಳಕೆಯಾಗುತ್ತಿದೆ.

* ಉಳಿತಾಯ: ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ(NSC) ಖಾತೆಯಲ್ಲಿ 18, 940 ರು ಹೊಂದಿದ್ದಾರೆ. 2019-20 ನೇ ಸಾಲಿನಲ್ಲಿ 1.85 ಲಕ್ಷ ರು ಟಿಡಿಎಸ್ ಕಡಿತಗೊಂಡಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

* ಮಮತಾ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. 43,837 ರು ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

1997 ರಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವರಾದರು. ಎನ್ಡಿಎ ಹಾಗೂ ಯುಪಿಎ ಎರಡೂ ಮೈತ್ರಿಕೂಟಗಳ ಸರಕಾರಗಳಲ್ಲಿ ಸಚಿವೆಯಾಗಿದ್ದ ಇವರು ನಂದಿಗ್ರಾಮ ಹಾಗೂ ಸಿಂಗೂರ ಹೋರಾಟಗಳಿಂದ ದೇಶಾದ್ಯಂತ ಹೆಸರುವಾಸಿಯಾದರು. 2011 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ನಂತರ 2016 ರಲ್ಲಿ ಮತ್ತೂ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೇರಿದರು

English summary
Trinamool Congress supremo and West Bengal Chief Minister Mamata Banerjee has declared that her net worth is Rs 16.72 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X