ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನದಲ್ಲಿ ಉನ್ನತ ಹುದ್ದೆ ಪಡೆದ ಮಹಿಳೆಗೆ ಕುಂದಾಪುರದ ನಂಟು

|
Google Oneindia Kannada News

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಕಂಡ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್, 2021ರ ಮೊದಲ ತಿಂಗಳಿನಲ್ಲಿ ಶ್ವೇತಭವನ ಪ್ರವೇಶಿಸಲಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಒಳಗೊಂಡಂತೆ ಒಂದಿಲ್ಲೊಂದು ರೀತಿ ಭಾರತದ ನಂಟು ಹೊಂದಿರುವ ಅನೇಕ ಮುಖಗಳು ಜೋ ಬೈಡನ್ ಅವರ ಆಡಳಿತ ತಂಡಗಳಲ್ಲಿ ಸ್ಥಾನ ಪಡೆದಿವೆ.

ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಇತಿಹಾಸದಲ್ಲಿಯೇ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಏಷ್ಯನ್-ಆಫ್ರಿಕನ್-ಅಮೆರಿಕನ್ ಮಹಿಳೆ ಎನಿಸಿಕೊಂಡಿದ್ದಾರೆ. ಜೋ ಬೈಡನ್ ಅವರ ಆಡಳಿತ ತಂಡ, ಅವರ ಪತ್ನಿ ಜಿಲ್ ಬೈಡನ್ ಅವರ ಸಲಹಾ ತಂಡಗಳಲ್ಲಿಯೂ ಭಾರತ ಮೂಲದ ಅಮೆರಿಕನ್ನರು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಭಾರತ ಮೂಲದ ಮಾಲಾ ಅಡಿಗ ಒಬ್ಬರು. ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ನೀತಿ ನಿರ್ದೇಶಕರಾಗಿ ಮಾಲಾ ಅಡಿ ಆಯ್ಕೆಯಾಗಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆಯ ಜೋ ಬೈಡನ್ ಅವರ ಪ್ರಚಾರ ತಂಡದಲ್ಲಿ ಹಿರಿಯ ನೀತಿ ಸಲಹೆಗಾರರಾಗಿ ಕೆಲಸ ಮಾಡಿದ್ದವರು ಮಾಲಾ ಅಡಿಗ. ಅವರು ಈ ಹಿಂದೆ ಬೈಡನ್ ಪ್ರತಿಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ನಿರ್ದೇಶಕಿಯಾಗಿ ಕೆಲಸ ಮಾಡಿದ್ದವರು. ಮುಂದೆ ಓದಿ.

ಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕ

ಒಬಾಮ ಆಡಳಿತದಲ್ಲಿ ಕರ್ತವ್ಯ

ಒಬಾಮ ಆಡಳಿತದಲ್ಲಿ ಕರ್ತವ್ಯ

ಬೈಡನ್ ಅವರ ಪರ ಕೆಲಸಕ್ಕೂ ಮುನ್ನ ಮಾಲಾ ಅಡಿಗ, ಬರಾಕ್ ಒಬಾಮ ಆಡಳಿತದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಮಂಡಳಿಯ ಶೈಕ್ಷಣಿಕ ಕಾರ್ಯಕ್ರಮಗಳ ರಾಜ್ಯ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು. ಜತೆಗೆ ಜಾಗತಿಕ ಮಹಿಳಾ ವಿಚಾರದ ರಾಜ್ಯ ಇಲಾಖೆಯ ಸಿಬ್ಬಂದಿ ಮುಖ್ಯಸ್ಥರಾಗಿ ಮತ್ತು ರಾಯಭಾರಿಯ ಹಿರಿಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಬೈಡನ್-ಹ್ಯಾರಿಸ್ ಪ್ರಚಾರದಲ್ಲಿ ಹಿರಿಯ ನೀತಿ ಸಲಹೆಗಾರ್ತಿ ಮತ್ತು ಜಿಲ್ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದ್ದರು.

ಮಾನವಹಕ್ಕುಗಳ ನಿರ್ದೇಶಕಿ

ಮಾನವಹಕ್ಕುಗಳ ನಿರ್ದೇಶಕಿ

ಮಾಲಾ ಅಡಿಗ ಅವರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ಎಸ್ಎಸ್) ಬಹುರಾಷ್ಟ್ರೀಯ ಮತ್ತು ಮಾನವಹಕ್ಕುಗಳ ನಿರ್ದೇಶನಾಲಯದ ಮಾನವಹಕ್ಕುಗಳ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದರು. ಎನ್ಎಸ್ಎಸ್ ಸೇರಿಕೊಳ್ಳುವ ಮುನ್ನ ನ್ಯಾಯಾಂಗ ಇಲಾಖೆಯ ಅಟಾರ್ನಿಯಾಗಿದ್ದರು. ಸಹ ಅಟಾರ್ನಿ ಜನರಲ್ ಅವರ ಕೌನ್ಸೆಲ್ ಆಗಿ ಕೆಲಸ ಮಾಡಿದ್ದರು.

ಯುಎಸ್ಎ ಹೊಸ ಸಂಪುಟ: ಜೋ ಬಿಡೆನ್ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?ಯುಎಸ್ಎ ಹೊಸ ಸಂಪುಟ: ಜೋ ಬಿಡೆನ್ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?

ಕಾನೂನು ಪದವಿ

ಕಾನೂನು ಪದವಿ

ಸರ್ಕಾರಿ ಸೇವೆಗೆ ಸೇರ್ಪಡೆಯಾಗುವ ಮುನ್ನ ಮಾಲಾ ಅಡಿಗ ಅವರು ಎರಡು ವರ್ಷಗಳ ಕಾಲ ಒಬಾಮ ಅಧ್ಯಕ್ಷೀಯ ಪ್ರಚಾರತಂಡದಲ್ಲಿ ಕೆಲಸ ಮಾಡಿದ್ದರು ಎನ್ನುತ್ತದೆ ಅಮೆರಿಕ ವಿದೇಶಾಂಗ ಇಲಾಖೆ ವೆಬ್‌ಸೈಟ್ ಮಾಹಿತಿ. ಅವರು ಷಿಕಾಗೋ ಕಾನೂನು ಕಾಲೇಜಿನಲ್ಲಿ ಜೆ.ಡಿ ಪದವಿ ಪಡೆದಿದ್ದರು. ಮಿನ್ನೆಸೊಟಾ ವಿಶ್ವವಿದ್ಯಾಲಯದಿಂದ ಎಂಪಿಎಚ್ ಪಡೆದಿದ್ದರು. ಲೋವಾದ ಗ್ರಿನ್ನೆಲ್ ಕಾಲೇಜ್‌ನಲ್ಲಿ ಸ್ಪ್ಯಾನಿಶ್ ಬಿಎ ಪದವಿ ಪಡೆದಿದ್ದರು.

ಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆ

ಕುಂದಾಪುರದ ಕುಕ್ಕುಂಜೆ ಗ್ರಾಮ

ಕುಂದಾಪುರದ ಕುಕ್ಕುಂಜೆ ಗ್ರಾಮ

ಮಾಲಾ ಅಡಿಗ ಅವರ ಬೇರು ಬೇರಾವುದೂ ಅಲ್ಲ, ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು. ಮಾಲಾ ಅಡಿಗ ಅವರ ಪೂರ್ವಜರು ಕುಕ್ಕುಂಜೆ ಗ್ರಾಮದವರು. ಈಗ ಭಾರತದಾದ್ಯಂತ ವ್ಯಾಪಿಸಿರುವ ಕರ್ನಾಟಕದ ಹೆಮ್ಮೆಯ ಬ್ಯಾಂಕುಗಳಲ್ಲಿ ಒಂದಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾದ ಕರ್ಣಾಟಕ ಬ್ಯಾಂಕ್‌ನ ಸ್ಥಾಪಕ ಕೆ. ಸೂರ್ಯನಾರಾಯಣ ಅಡಿಗ ಮತ್ತು 2008ರಲ್ಲಿ ಮ್ಯಾನ್ ಬೂಕರ್ ಬಹುಮಾನ ಗೆದ್ದ ಅರವಿಂದ ಅಡಿಗ ಅವರ ಕುಟುಂಬಕ್ಕೆ ಸೇರಿದವರು.

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada
ಊರಿನ ನಂಟು ಮರೆಯದ ಮಾಲಾ ಅಡಿಗ

ಊರಿನ ನಂಟು ಮರೆಯದ ಮಾಲಾ ಅಡಿಗ

ಕುಕ್ಕುಂಜೆ ಡಾ. ಚಂದ್ರಶೇಖರ್ ಅಡಿಗ ಅವರ ಮಗ ಡಾ. ರಮೇಶ್ ಅಡಿಗರು 24ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ್ದರು. ಸುಮಾರು 50 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಅವರ ಹಿರಿಯ ಮಗಳು ಮಾಲಾ ಅಡಿಗ. ಅಮೆರಿಕದಲ್ಲಿ ಜನಿಸಿದ್ದರೂ ಮಾಲಾ ಅಡಿಗ ಊರಿನ ನಂಟು ಮರೆತಿಲ್ಲ. ಪತಿ ಚಾರ್ಲ್ಸ್ ಬೈರೋ ಜತೆಗೆ ಅವರು ಅನೇಕ ಬಾರಿ ಕುಂದಾಪುರದ ಸ್ವಗ್ರಾಮಕ್ಕೆ ಭೇಟಿ ನೀಡಿದ್ದರು. ಅವರಿಗೆ 15 ವರ್ಷದ ಆಶಾ ಎಂಬ ಮಗಳಿದ್ದಾಳೆ. ಮಾಲಾ ಅವರು ಕುಂದಾಪುರದ ಚೈತನ್ಯ ವಿಶೇಷ ಶಾಲೆಯ ಪೋಷಕಿ ಕೂಡ ಹೌದು.

English summary
Mala Adiga appointed as Jill Biden's policy director. Who is Mala Adiga? What is her connection with Kundapur? Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X