ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಮಕರ ಜ್ಯೋತಿ ದರ್ಶನ ಪಡೆಯುವುದು ಹೇಗೆ?

|
Google Oneindia Kannada News

ಶಬರಿಮಲೆ, ಜನವರಿ 14: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಕರವಿಳಕ್ಕು ಎಂಬುದು ಒಂದು ಬಹುಮುಖ್ಯ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನದ ಸ್ಮರಣಾರ್ಥವಾಗಿ, ಪ್ರತಿವರ್ಷ ಜನವರಿ 14ರಂದು ಮಕರವಿಳಕ್ಕು ಅನ್ನು ಆಚರಿಸಲಾಗುತ್ತದೆ.

Recommended Video

Devotees urged to avoid Sabarimala temple over coronavirus fears

ಮಕರವಿಳಕ್ಕು ಹಬ್ಬದ ಆಚರಣೆ ದಿನವೇ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತರು ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಕರವಿಳಕ್ಕು ಆಚರಣೆಯ ದಿನ ದೇವಾಲಯದಿಂದ 4 ಕಿಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಜ್ಯೋತಿಯೊಂದು ಗೋಚರಿಸುತ್ತದೆ. ಈ ದೀಪದ ಬೆಳಕನ್ನು ಮಕರ ಜ್ಯೋತಿ ಎಂದು ಕರೆಯಲಾಗುತ್ತದೆ.

ಶಬರಿಮಲೆ ಭಂಡಾರಕ್ಕೆ ಎರಡೆರಡು ಬಾರಿ ಕನ್ನ: 'ದಕ್ಷ ಅಧಿಕಾರಿಯನ್ನು ನಿಯೋಜಿಸುವ ಯೋಗ್ಯತೆಯಿಲ್ಲವೇ?'ಶಬರಿಮಲೆ ಭಂಡಾರಕ್ಕೆ ಎರಡೆರಡು ಬಾರಿ ಕನ್ನ: 'ದಕ್ಷ ಅಧಿಕಾರಿಯನ್ನು ನಿಯೋಜಿಸುವ ಯೋಗ್ಯತೆಯಿಲ್ಲವೇ?'

ಶಬರಿಮಲೆಗೆ ನೇರವಾಗಿ ಭೇಟಿ ನೀಡಿ ಈ ಸಾಂಪ್ರದಾಯಿಕ ಮಕರ ಜ್ಯೋತಿ ದರ್ಶನ ಮಾಡಲು ಸಾಧ್ಯವಾಗದಿದ್ದವರು, ತಾವಿದ್ದ ಪ್ರದೇಶದಿಂದಲೇ ಈ ಜ್ಯೋತಿಯ ದರ್ಶನವನ್ನು ಪಡೆದುಕೊಳ್ಳಬಹುದು. ಶಬರಿಮಲೆ ದೇವಸ್ಥಾನದಿಂದ 4 ಕಿಲೋ ಮೀಟರ್ ದೂರದ ಬೆಟ್ಟದ ಮೇಲೆ ಕಾಣಿಸಿಕೊಳ್ಳುವ ಮಕರ ಜ್ಯೋತಿಯನ್ನು ಲೈವ್ ಸ್ಟ್ರೀಮ್ ಆಗಿ ನೋಡುವುದು ಹೇಗೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

Makaravilakku 2022: When and Where to Watch Makara Jyothi From Sabarimala Temple in Kerala

ಮನೆಯಲ್ಲಿದ್ದುಕೊಂಡು ಮಕರ ಜ್ಯೋತಿ ದರ್ಶನ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಹಿನ್ನೆಲೆ ಪ್ರತಿವರ್ಷಕ್ಕಿಂತ 2022ರ ಮಕರವಿಳಕ್ಕು ಆಚರಣೆಯು ಕೊಂಚ ವಿಭಿನ್ನವಾಗಿರಲಿದೆ. ಈ ಬಾರಿ ಬಹುತೇಕ ಜನರು ಕೊವಿಡ್-19 ಸೋಂಕಿನಿಂದ ಆತಂಕಗೊಂಡಿದ್ದು, ಮನೆಯಲ್ಲಿ ಸುರಕ್ಷಿತಾಗಿ ಇದ್ದುಕೊಂಡು ಮಕರ ಜ್ಯೋತಿ ದರ್ಶನಕ್ಕಾಗಿ ಕಾತರರಾಗಿದ್ದಾರೆ.

ಜನವರಿ 14ರ ಸಂಜೆ ಸೂರ್ಯಾಸ್ತದ ಸಮಯದ ಹೊತ್ತಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ 4 ಕಿಲೋ ಮೀಟರ್ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಈ ಜ್ಯೋತಿ ಕಾಣಿಸಿಕೊಳ್ಳುತ್ತದೆ. ಈ ದೀಪವು ಸ್ವರ್ಗೀಯ ಮೂಲವನ್ನು ಹೊಂದಿದೆ ಎಂಬ ನಂಬಿಕೆಯಿದೆ. ಶಬರಿಮಲೆಯ ತಳದಲ್ಲಿರುವ ಪಂಬಾ ದೇವಾಲಯದಲ್ಲಿ ಮುಖ್ಯ ಅರ್ಚಕರು ಇದನ್ನು ತೋರಿಸುತ್ತಾರೆ.

ಮಕರವಿಳಕ್ಕು 2022: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ಬಗ್ಗೆ ಮಾಹಿತಿ
ಮಕರ ಜ್ಯೋತಿಯನ್ನು ಲೈವ್ ಆಗಿ ವೀಕ್ಷಿಸುವುದು ಹೇಗೆ?

ಪ್ರತಿ ವರ್ಷ ಶಬರಿಮಲೆಯ ಮಕರ ಜ್ಯೋತಿ ದರ್ಶನದ ಆಚರಣೆಗೆ ಸಂಬಂಧಿಸಿದ ಸುದ್ದಿಯನ್ನು ಹಲವು ನ್ಯೂಸ್ ಚಾನೆಲ್‌ಗಳು ನೇರ ಪ್ರಸಾರದಲ್ಲಿ ತೋರಿಸುತ್ತವೆ. ಕೇರಳದಲ್ಲಿ ಈ ಮಕರ ಜ್ಯೋತಿ ದರ್ಶನದ ಪ್ರಸಾರಕ್ಕಾಗಿ ವಿಶೇಷವಾಗಿ ಅಧಿಕೃತ ವಾಹಿನಿಗಳಿಲ್ಲ. ರಾಜ್ಯದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಈ ಆಚರಣೆಯ ಸುದ್ದಿ ಪ್ರಸಾರವಾಗುತ್ತದೆ. ಜನವರಿ 14ರ ಸಂಜೆ 5 ಗಂಟೆಯಿಂದಲೇ ಮಕರ ಜ್ಯೋತಿ ಆಚರಣೆಗೆ ಸಂಬಂಧಿಸಿದ ನೇರ ಪ್ರಸಾರ ಆರಂಭವಾಗುತ್ತದೆ.

ಸೂರ್ಯಾಸ್ತದ ವೇಳೆ ಮಕರ ಜ್ಯೋತಿ ದರ್ಶನ:

ಮಂಗಳಕರವಾದ ಆಕಾಶ ಜ್ವಾಲೆ, ಬೆಳಕು ಅಥವಾ ಮಕರ ಜ್ಯೋತಿಯು ಸೂರ್ಯಾಸ್ತದ ನಂತರ ಕಾಣಿಸುತ್ತದೆ. ಜನವರಿ 14ರ ಸಂಜೆ 5 ಗಂಟೆ ನಂತರದಲ್ಲಿ ಅಯ್ಯಪ್ಪ ದೇವರ ಮೂರ್ತಿಯನ್ನು ಚಿನ್ನದ ಆಭರಣಗಳಿಂದ ಅಲಂಕರಿಸಿದ ನಂತರ ಮಕರವಿಳಕ್ಕು ಕಾರ್ಯಕ್ರಮ ನಡೆಯಲಿದೆ.

ಮಕರವಿಳಕ್ಕು ಹಬ್ಬದ ಶುಭಾಶಯ:

ಸಿರಿಯಸ್ ನಕ್ಷತ್ರವು ಆಕಾಶದಲ್ಲಿ ಕಾಣಿಸಿಕೊಂಡ ನಂತರ ಮಕರವಿಳಕ್ಕು ಜ್ಯೋತಿಯನ್ನು ಬೆಳಗಲಾಗುತ್ತದೆ. 2022ರಲ್ಲಿ ನಡೆಯುವ ಮಕರವಿಳಕ್ಕು ಆಚರಣೆಯು ಭವಿಷ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತದೆ ಎಂಬುದು ಭಕ್ತಾದಿಗಳ ನಂಬಿಕೆಯಾಗಿದೆ. ಈ ಮಕರ ಜ್ಯೋತಿ ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಬೆಳಕನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ. ಮಕರಾವಳಿ 2022 ರ ಶುಭಾಶಯಗಳು.

English summary
Makaravilakku 2022: when and where to watch Makara Jyothi from Sabarimala Temple in Kerala. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X