ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಚುನಾವಣೆ ಗೆಲುವು ಯಾರಿಗೆ?: ನ್ಯೂಸ್‌ ಎಕ್ಸ್‌ ಸಮೀಕ್ಷೆ

|
Google Oneindia Kannada News

ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆಯು ಎರಡನೇಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳುತ್ತಿದ್ದು, 44-50 ಸ್ಥಾನದಲ್ಲಿ ಶೀವಸೇನೆ ಗೆಲುವು ಸಾಧಿಸಲಿದೆ.

ಬೆಂಗಳೂರು, ಅಕ್ಟೋಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2019 ಗೆ ಇದೀಗಷ್ಟೆ ಮತದಾನ ಮುಕ್ತಾಯವಾಗಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ.

Live Update: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆLive Update: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆ

ಬಹುತೇಕ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್-ಎನ್‌ಸಿಪಿಗೆ ನಿರಾಸೆ ಆಗಲಿದೆ. ಆದರೆ ಗೆಲುವಿನ ಅಂತರ ಹಾಗೂ ಅಂಕಿ-ಅಂಶಗಳು ಕುತೂಹಲ ಮೂಡಿಸಿವೆ.

Maharashtra Assembly Elections 2019: NewsX CNX Exit Poll Results

ನ್ಯೂಸ್‌ ಎಕ್ಸ್‌ ಮತ್ತು ಪೋಲ್‌ಸ್ಟಾರ್ ಜಂಟಿಯಾಗಿ ಮಾಡಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಯು 144 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಹರಿಯಾಣ ಚುನಾವಣೆ: ಸಮೀಕ್ಷೆ ಹೇಳುತ್ತಿದೆ ಗೆಲುವು ಯಾರಿಗೆಂದುಹರಿಯಾಣ ಚುನಾವಣೆ: ಸಮೀಕ್ಷೆ ಹೇಳುತ್ತಿದೆ ಗೆಲುವು ಯಾರಿಗೆಂದು

ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆಯು ಎರಡನೇಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳುತ್ತಿದ್ದು, 44-50 ಸ್ಥಾನದಲ್ಲಿ ಶೀವಸೇನೆ ಗೆಲುವು ಸಾಧಿಸಲಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಮುಖಭಂಗವಾಗಲಿದ್ದು, 40-50 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ. ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷವು 34-39 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ. ಪಕ್ಷೇತರರು ಮತ್ತು ಇತರೆ ಪಕ್ಷಗಳು ಒಟ್ಟಾಗಿ 6-10 ಸ್ಥಾನಗಳಲ್ಲಷ್ಟೆ ಗೆಲುವು ಸಾಧಿಸಲಿದೆ.

ಅಲ್ಲಿಗೆ ಶಿವಸೇನೆ-ಬಿಜೆಪಿ ಮೈತ್ರಿಯು, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯನ್ನು ಭಾರಿ ಅಂತರದಿಂದ ಮಣಿಸಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ.

English summary
Maharashtra assembly elections 2019 came out. As per NewsX and CNX exit poll survey BJP and Shivsene winning in big margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X